logo
ಕನ್ನಡ ಸುದ್ದಿ  /  ಕರ್ನಾಟಕ  /  Swamiji Released: 14 ತಿಂಗಳ ನಂತರ ಜೈಲಿನಿಂದ ಚಿತ್ರದುರ್ಗ ಮುರುಘಾ ಶರಣರ ಬಿಡುಗಡೆ

Swamiji Released: 14 ತಿಂಗಳ ನಂತರ ಜೈಲಿನಿಂದ ಚಿತ್ರದುರ್ಗ ಮುರುಘಾ ಶರಣರ ಬಿಡುಗಡೆ

HT Kannada Desk HT Kannada

Nov 16, 2023 02:17 PM IST

google News

ಚಿತ್ರದುರ್ಗ ಜೈಲಿನಿಂದ ಗುರುವಾರ ಬಿಡುಗಡೆಯಾದ ಮುರುಘರಾಜೇಂದ್ರ ಶರಣರು ಭಕ್ತರತ್ತ ಕೈ ಮುಗಿದರು.

    • chitradurga swamiji released ಪೋಕ್ಸೋ( pocso) ಪ್ರಕರಣದಲ್ಲಿ ಸಿಲುಕಿ ಜೈಲು ಪಾಲಾಗಿದ್ದ ಚಿತ್ರದುರ್ಗದ ಮುರುಘರಾಜೇಂದ್ರ ಶರಣರು ಜಾಮೀನಿನ ಮೇಲೆ ಗುರುವಾರ ಬಿಡುಗಡೆಯಾಗಿದ್ದಾರೆ.
ಚಿತ್ರದುರ್ಗ ಜೈಲಿನಿಂದ ಗುರುವಾರ ಬಿಡುಗಡೆಯಾದ ಮುರುಘರಾಜೇಂದ್ರ ಶರಣರು ಭಕ್ತರತ್ತ ಕೈ ಮುಗಿದರು.
ಚಿತ್ರದುರ್ಗ ಜೈಲಿನಿಂದ ಗುರುವಾರ ಬಿಡುಗಡೆಯಾದ ಮುರುಘರಾಜೇಂದ್ರ ಶರಣರು ಭಕ್ತರತ್ತ ಕೈ ಮುಗಿದರು.

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ 14 ತಿಂಗಳ ಹಿಂದೆ ಬಂಧನಕ್ಕೆ ಒಳಗಾಗಿದ್ದ ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಸ್ವಾಮೀಜಿ ಅವರಿಗೆ ಕಳೆದ ವಾರವೇ ಹೈಕೋರ್ಟ್‌ ಜಾಮೀನು ನೀಡಿತ್ತು. ಮತ್ತೊಂದು ಪ್ರಕರಣದಲ್ಲಿ ಚಿತ್ರದುರ್ಗದಲ್ಲಿ ಗುರುವಾರ ವಿಚಾರಣೆ ನಡೆಯುತ್ತಿದೆ. ಅಲ್ಲಿಯೂ ಜಾಮೀನು ದೊರೆಯುವ ನಿರೀಕ್ಷೆಯಿತ್ತು.

ಇದರ ನಡುವೆ ಹೈಕೋರ್ಟ್ ನೀಡಿದ್ದ ಷರತ್ತು ಬದ್ದ ಜಾಮೀನಿನ ಆದೇಶ ಪ್ರತಿಗಳು ಚಿತ್ರದುರ್ಗ ಜೈಲಿನ ಅಧಿಕಾರಿಗಳಿಗೆ ತಲುಪಿರಲಿಲ್ಲ. ಗುರುವಾರ ಬೆಳಿಗ್ಗೆ ಮುರುಘರಾಜೇಂದ್ರ ಶರಣರ ಪರವಾದ ವಕೀಲರು ಹಸ್ತಾಂತರಿಸಿದ್ದರಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.

1ನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಷರತ್ತುಬದ್ದ ಜಾಮೀನು ನೀಡಿದ್ದು, ಈ ಪ್ರಕಾರ ಮುರುಘಾಶ್ರೀ ಚಿತ್ರದುರ್ಗ ಪ್ರವೇಶಿಸುವಂತಿಲ್ಲ. ಇಬ್ಬರು ಶ್ಯೂರಿಟಿ ಒದಗಿಸಬೇಕು. ಮತ್ತೆ ಅಪರಾಧ ಕೃತ್ಯವೆಸಗುವಂತಿಲ್ಲ. ಪಾಸ್ ಪೋರ್ಟ್ ಅನ್ನು ವಶಕ್ಕೆ ನೀಡುವುದೂ ಸೇರಿದಂತೆ ಹಲವಾರು ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ಇವುಗಳನ್ನೆಲ್ಲಾ ಪಾಲಿಸುವುದಾಗಿ ಮುರುಘಾ ಶರಣರ ಪರ ವಕೀಲರು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.

ಕಳೆದ ವರ್ಷದ ಆಗಸ್ಟ್‌ 26ರಂದು ಶರಣರು ಹಾಗೂ ಐದು ಮಂದಿ ವಿರುದ್ದ ಮಠದ ವಿದ್ಯಾರ್ಥಿನಿಯರಿಬ್ಬರು ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಮೈಸೂರಿನ ನಜರ್‌ಬಾದ್‌ ಠಾಣೆಯಲ್ಲಿ ದಾಖಲಿಸಿದ್ದರು. ಇದನ್ನು ಚಿತ್ರದುರ್ಗಕ್ಕೆ ವರ್ಗಾಯಿಸಲಾಗಿತ್ತು. ಆನಂತರ ಶರಣರನ್ನು ಬಂಧಿಸಲಾಗಿತ್ತು. ಇದಾದ ನಂತರ 2022ರ ಅಕ್ಟೋಬರ್‌ 19ರಂದು ಮತ್ತೊಂದು ಪ್ರಕರಣ ದಾಖಲಾಗಿತ್ತು.

ಧಾರವಾಡ ಜೈಲಿಗೆ ವರ್ಗಾಯಿಸಿ ಕೆಲ ದಿನ ಶಿವಮೊಗ್ಗ ಜೈಲಿನಲ್ಲಿ ಇರಿಸಲಾಗಿತ್ತು. ನಂತರ ಚಿತ್ರದುರ್ಗದಲ್ಲಿಯೇ ಇರಿಸಲಾಗಿತ್ತು. ಇದಾದ ಬಳಿಕ ಮಠಕ್ಕೆ ಆಡಳಿತಾಧಿಕಾರಿಯನ್ನೂ ನೇಮಿಸಿತ್ತು. ಈಗಾಗಲೇ ಇತರರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಶರಣರು ಮಾತ್ರ ಬಿಡುಗಡೆಯಾಗಿರಲಿಲ್ಲ. ನವೆಂಬರ್‌ 8ರಂದು ಹೈಕೋರ್ಟ್‌ ಷರತ್ತು ಬದ್ದ ಜಾಮೀನು ನೀಡಿದ ನಂತರ ಶರಣರ ಬಿಡುಗಡೆ ಕುರಿತು ಚರ್ಚೆಗಳು ನಡೆದಿದ್ದವು. ಈಗ ಮತ್ತೊಂದು ಪ್ರಕರಣದ ಜಾಮೀನು ದೊರೆಯುವ ಮುನ್ನವೇ ಬಿಡುಗಡೆ ಸುಲಭವಾಗಿದೆ.

ಬಿಡುಗಡೆಯಾದ ಸ್ವಾಮೀಜಿ ಮಾಧ್ಯಮದವರೊಂದಿಗೆ ಮಾತನಾಡದೇ ದಾವಣಗೆರೆಗೆ ತೆರಳಿದರು. ಅಲ್ಲಿ ಭಕ್ತರ ಮನೆಯಲ್ಲಿರಲಿದ್ದು, ಅಲ್ಲಿಂದಲೇ ನ್ಯಾಯಾಲಯದ ವಿಚಾರಣೆಯನ್ನು ವಿಡಿಯೋ ಕಾನ್ಪರೆನ್ಸ್‌ ಮುಖಾಂತರ ಎದುರಿಸಲಿದ್ಧಾರೆ ಎನ್ನಲಾಗಿದೆ.

ಎರಡನೇ ಪ್ರಕರಣದ ವಿಚಾರಣೆ

ಈ ನಡುವೆ ಚಿತ್ರದುರ್ಗದ ಎರಡನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಶರಣರ ವಿರುದ್ದ ಎರಡನೇ ಪ್ರಕರಣದ ವಿಚಾರಣೆ ನಡೆದಿದೆ. ಸ್ವಾಮೀಜಿ ಅವರಿಗೆ ನೀಡಿರುವ ಬಾಡಿ ವಾರೆಂಟ್‌ ಅನ್ನೇ ಬಂಧನ ವಾರೆಂಟ್‌ ಆಗಿ ಬದಲಾಯಿಸಲು ಆಗುವುದಿಲ್ಲ. ಎರಡನೇ ಪ್ರಕರಣದಲ್ಲಿ ಶರಣರು ಬಂಧನಕ್ಕೆ ಒಳಗಾಗಿಲ್ಲ. ಇದರಿಂದ ಅವರಿಗೆ ಜಾಮೀನಿನ ಅಗತ್ಯವಿಲ್ಲ ಎನ್ನುವ ಕುರಿತು ಸಾಕಷ್ಟು ಚರ್ಚೆಗಳು ನಡೆದವು. ಶರಣರ ಪರ ವಕೀಲ ಸಂದೀಪ್‌ ಪಾಟೀಲ್‌ ಮತ್ತಿತರರು ವಾದಿಸಿ ಶರಣರ ಬಿಡುಗಡೆಗೆ ಅಡ್ಡಿಯಿಲ್ಲ ಎಂದರು. ಆದರೆ ಸರ್ಕಾರದ ಪರ ವಕೀಲ ಜಗದೀಶ್‌ ಇದಕ್ಕೆ ವಿರೋಧ ವ್ಯಕ್ತಪಡಿಸಿ, ಎರಡನೇ ಪ್ರಕರಣದಲ್ಲಿ ಶರಣರ ವಿಚಾರಣೆ ನಡೆದಿರುವುದರಿಂದ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬಾರದು ಎಂದು ವಾದಿಸಿದರು.

ಇದೇ ಪ್ರಕರಣದ ಕುರಿತು ಗುರುವಾರವೂ ವಿಚಾರಣೆ ನಡೆದಿದ್ದರ ನಡುವೆಯೇ ಶರಣರನ್ನು ಮೊದಲ ಪ್ರಕರಣದಲ್ಲಿ ಬಿಡುಗಡೆ ಮಾಡಲಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ