logo
ಕನ್ನಡ ಸುದ್ದಿ  /  ಕರ್ನಾಟಕ  /  ಹಿರಿಯೂರು: ಡ್ರೋನ್ ಮಾದರಿಯ ಮಾನವ ರಹಿತ ವಿಮಾನ ಪತನ, ಸ್ಥಳಕ್ಕೆ ಡಿಆರ್‌ಡಿಒ ಅಧಿಕಾರಿಗಳ ಭೇಟಿ

ಹಿರಿಯೂರು: ಡ್ರೋನ್ ಮಾದರಿಯ ಮಾನವ ರಹಿತ ವಿಮಾನ ಪತನ, ಸ್ಥಳಕ್ಕೆ ಡಿಆರ್‌ಡಿಒ ಅಧಿಕಾರಿಗಳ ಭೇಟಿ

HT Kannada Desk HT Kannada

Aug 20, 2023 12:36 PM IST

google News

ಹಿರಿಯೂರು ತಾಲ್ಲೂಕಿನಲ್ಲಿ ಡ್ರೋಣ್ ಪತನಗೊಂಡಿದೆ.

    • Unmanned Aerial Vehicle ಮಾನವ ರಹಿತ ವಿಮಾನ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇಲಾಖೆ ಹಾಗೂ ಡಿಆರ್‌ಡಿಒ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಹಿರಿಯೂರು ತಾಲ್ಲೂಕಿನಲ್ಲಿ ಡ್ರೋಣ್ ಪತನಗೊಂಡಿದೆ.
ಹಿರಿಯೂರು ತಾಲ್ಲೂಕಿನಲ್ಲಿ ಡ್ರೋಣ್ ಪತನಗೊಂಡಿದೆ.

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದಲ್ಲಿ ಭಾನುವಾರ ಡ್ರೋನ್ ಮಾದರಿಯ ವಿಮಾನ ಒಂದು ನೆಲಕ್ಕೆ ಉರುಳಿದೆ. ಚಳ್ಳಕೆರೆಯ ಡಿಆರ್‌ಡಿಒ ಸಂಸ್ಥೆ ತಯಾರು ಮಾಡಿರುವ ಚಾಲಕ ರಹಿತ ಡ್ರೋನ್ ಪರಿಕ್ಷಾರ್ಥವಾಗಿ ಹಾರಾಟಕ್ಕೆ ಬಿಟ್ಟಿದ್ದು ನಿಯಂತ್ರಣ ತಪ್ಪಿ ವದ್ದಿಕೆರೆ ಗ್ರಾಮದ ಜಮೀನಿನಲ್ಲಿ ಬಿದ್ದಿದೆ. ಮಾನವ ರಹಿತ ವಿಮಾನ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇಲಾಖೆ ಹಾಗೂ ಡಿಆರ್‌ಡಿಒ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯಿರುವ ಡಿಆರ್​ಡಿಒ ಸಿದ್ಧಪಡಿಸಿದ್ದ ಪೈಲಟ್ ರಹಿತ ವಿಮಾನ ಪತನಗೊಂಡಿದೆ. ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಮಾನವ ರಹಿತ ಡ್ರೋನ್‌ 'ತಪಸ್' ವಿಮಾನ ಹಿರಿಯೂರು ತಾಲ್ಲೂಕಿನ ವದ್ದಿಕೆರೆ ಗ್ರಾಮದ ಬಳಿ ಭಾನುವಾರ ಬೆಳಿಗ್ಗೆ ಧರೆಗುರುಳಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಸಿದ್ಧಪಡಿಸಿದ್ಧ ಯುದ್ಧ ವಿಮಾನ ನಾಯಕನಹಟ್ಟಿ ಸಮೀಪದ ಕುದಾಪುರ ವಾಯುನೆಲೆಯಿಂದ ಭಾನುವಾರ ಬೆಳಿಗ್ಗೆ ಹಾರಾಟ ಆರಂಭಿಸಿತ್ತು. ನಿಯಂತ್ರಣ ತಪ್ಪಿ ಜಮೀನಿನಲ್ಲಿ ಧರೆಗುರುಳಿದೆ.

ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯಿರುವ ಡಿಆರ್‌ಡಿಒ ವಾಯುನೆಲೆಯಿಂದ ಬೆಳಿಗ್ಗೆ ಹಾರಾಟ ಆರಂಭಿಸಿದ್ದ ಕಣ್ಗಾವಲು ಡ್ರೋನ್‌ 'ತಪಸ್' ನಿಯಂತ್ರಣ ತಪ್ಪಿ ಜಮೀನಿನಲ್ಲಿ ಬಿದ್ದಿದೆ. ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಮಾನದ ರೀತಿಯ ಪಳೆಯುಳಿಕೆಗಳನ್ನು ಕಂಡ ಗ್ರಾಮಸ್ಥರು ಕೆಲವು ಸಮಯ ಪೈಲಟ್‌ಗಾಗಿ ಹುಡುಕಾಟ ನಡೆಸಿದರು.

ಸುತ್ತಮುತ್ತಲಿನನ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿ ಡ್ರೋನ್‌ ಅವಶೇಷಗಳನ್ನು ಕುತೂಹಲದಿಂದ ವೀಕ್ಷಿಸಿದರು. ಎಂಜಿನ್‌ ಭಾಗ, ರೆಕ್ಕೆಗಳು, ಡ್ರೋನ್‌ನ ಹಿಂಬದಿಯ ಭಾಗವು ಬೇರೆ ಸ್ಥಳಗಳಲ್ಲಿ ಮುರಿದು ಬಿದ್ದಿದೆ. ಡಿಆರ್‌ಡಿಒ ಅಧಿಕಾರಿಗಳು ಸ್ಥಳಕ್ಕೆ ಬರುತ್ತಿದ್ದು, ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಹೊಲದಲ್ಲಿ ಪತನಗೊಂಡಿರುವ ಮಾನವ ರಹಿತ ವಿಮಾನ
ಪತನಗೊಂಡಿರುವ ಮಾನವ ರಹಿತ ವಿಮಾನ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ