Code of Conduct: ಜಗ್ಗೇಶ್ ಸಿನಿಮಾಕ್ಕೆ ತಟ್ಟಿದ ಚುನಾವಣಾ ನೀತಿ ಸಂಹಿತೆ; ರಾಘವೇಂದ್ರ ಸ್ಟೋರ್ಸ್ ಪೋಸ್ಟರ್‌ನಲ್ಲಿ ಕಾಣದ ನಟನ ಮುಖ!
May 03, 2023 01:23 PM IST
ಜಗ್ಗೇಶ್ ಸಿನಿಮಾಕ್ಕೂ ತಟ್ಟಿದ ಚುನಾವಣಾ ನೀತಿ ಸಂಹಿತೆ; ರಾಘವೇಂದ್ರ ಸ್ಟೋರ್ಸ್‌ನಲ್ಲಿ ಕಾಣದ ನಟನ ಮುಖ!
- Raghavendra Stores: ಬಿಜೆಪಿಯಲ್ಲಿ ಗುರುತಿಸಿಕೊಂಡ ನಟ ಜಗ್ಗೇಶ್‌ಗೆ ಇದೀಗ ನೀತಿ ಸಂಹಿತೆ ಅಡ್ಡಗಾಲಾಗಿದೆ. ಏ. 28ರಂದು ರಿಲೀಸ್ ಆಗಿದ್ದ ಅವರ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಪೋಸ್ಟರ್‌ಗಳಲ್ಲಿ ಜಗ್ಗೇಶ್ ಮುಖಕ್ಕೆ ಬಿಳಿ ಹಾಳೆ ಅಂಟಿಸಲಾಗಿದೆ.
ದಾವಣಗೆರೆ: ನವರಸ ನಾಯಕ ಜಗ್ಗೇಶ್ (Jaggesh) ಅಭಿನಯದ ರಾಘವೇಂದ್ರ ಸ್ಟೋರ್ಸ್ (Raghavendra Stores)ಸಿನಿಮಾ ಕಳೆದ ವಾರವಷ್ಟೇ (ಏ. 28) ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಈ ನಡುವೆಯೇ ಇದೀಗ ಈ ಸಿನಿಮಾಕ್ಕೆ ಚುನಾವಣಾ ನೀತಿ ಸಂಹಿತೆಯೂ ಅಡ್ಡಗಾಲಾಗಿ ಬಂದು ನಿಂತಿದೆ!
ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರದಲ್ಲಿ ಸಂತೋಷ್ ಆನಂದ್‌ರಾಮ್ ನಿರ್ದೇಶನದಲ್ಲಿ ಮೂಡಿ ಬಂದ ರಾಘವೇಂದ್ರ ಸ್ಟೋರ್ಸ್ ಚಿತ್ರ ಪ್ರದರ್ಶನ ಕಾಣುತ್ತಿದೆ. ಇದೆಲ್ಲದರ ಜತೆಗೆ ನಟ ಜಗ್ಗೇಶ್ ರಾಜ್ಯ ಸಭಾ ಸದಸ್ಯರಾಗಿದ್ದು, ಬಿಜೆಪಿಯ ಸ್ಟಾರ್ ಪ್ರಚಾರಕರಾಗಿಯೂ ರಾಜ್ಯ ಸುತ್ತುತ್ತಿದ್ದಾರೆ.
ಹೀಗೆ ಬಿಜೆಪಿ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ, ಚಿತ್ರಮಂದಿರಗಳಲ್ಲಿ ಜಗ್ಗೇಶ್ ಪೋಸ್ಟರ್‌ಗಳನ್ನು ತೆಗೆಯಬೇಕು ಎಂಬ ದೂರು ಬಂದ ಹಿನ್ನೆಲೆಯಲ್ಲಿ, ಚುನಾವಣೆ ಆಯೋಗದ ಅಧಿಕಾರಿಗಳು, ಚಿತ್ರದ ಪೋಸ್ಟರ್‌ಗಳಲ್ಲಿ ಜಗ್ಗೇಶ್ ಅವರ ಮುಖ ಮುಚ್ಚಿದ್ದಾರೆ. ಮುಖಕ್ಕೆ ಬಿಳಿ ಹಾಳೆ ಅಂಟಿಸಲಾಗಿದೆ.
ನೀತಿ ಸಂಹಿತೆ ಉಲ್ಲಂಘನೆ; 2346 ಎಫ್‌ಐಆರ್ ದಾಖಲು, 305 ಕೋಟಿ ಮೊತ್ತದ ನಗದು-ವಸ್ತು ಮುಟ್ಟುಗೋಲು
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಘೋಷಣೆಯಾದ ನಂತರ ಚುನಾವಣಾ ಆಯೋಗವು (Election Commission) ಈವರೆಗೆ 305 ಕೋಟಿ ರೂಪಾಯಿ ಮೊತ್ತದಷ್ಟು ನಗದು ಹಾಗೂ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದೆ. ರಾಜ್ಯದಲ್ಲಿ ಮಾರ್ಚ್ 29ರಂದು ಚುನಾವಣಾ ನೀತಿ ಸಂಹಿತೆ ಜಾರಿಯಾಗಿತ್ತು. ಕಳೆದ 2018ರ ಚುನಾವಣೆಯಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ನಗದು ಮತ್ತು ವಸ್ತುಗಳ ಮೊತ್ತ 83 ಕೋಟಿ ರೂಪಾಯಿ. ಈ ಲೆಕ್ಕದಂತೆ ಕಳೆದ ಬಾರಿಯ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನಕ್ಕೆ (ಮೇ 10) ಇನ್ನೂ ಒಂದು ವಾರ ಬಾಕಿರುವಾಗಲೇ ಅಂದರೆ ಮೇ 3ರವರೆಗೆ ವಶಪಡಿಸಿಕೊಂಡಿರುವ ನಗದು ಮತ್ತು ವಸ್ತುಗಳ ಮೊತ್ತವು 222 ಕೋಟಿ ರೂಪಾಯಿಯಷ್ಟು ಹೆಚ್ಚಾಗಿದೆ. ಹೆಚ್ಚಿನ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ