logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Congress: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕಮಿಷನ್‌ ಪ್ರಮಾಣ ಶೇ.80ಕ್ಕೇರಲಿದೆ: ಕಾಂಗ್ರೆಸ್‌ ಆರೋಪ!

Karnataka Congress: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕಮಿಷನ್‌ ಪ್ರಮಾಣ ಶೇ.80ಕ್ಕೇರಲಿದೆ: ಕಾಂಗ್ರೆಸ್‌ ಆರೋಪ!

HT Kannada Desk HT Kannada

Jan 17, 2023 10:17 PM IST

google News

ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

    • ರಾಜ್ಯದ ಆಡಳಿತಾರೂಢ ಬಿಜೆಪಿ ವಿರುದ್ಧ ತನ್ನ ವಾಗ್ದಾಳಿಯನ್ನು ಮುಂದುವರೆಸಿರುವ ಪ್ರತಿಪಕ್ಷ ಕಾಂಗ್ರೆಸ್‌, ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕಮಿಷನ್‌ ಪ್ರಮಾಣ ಶೇ.40ರಿಂದ ಶೇ. 80ಕ್ಕೆ ಏರಲಿದೆ ಎಂದು ಆರೋಪಿಸಿದೆ. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, ಬಿಜೆಪಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ) (HT_PRINT)

ಬೆಂಗಳೂರು: ರಾಜ್ಯದ ಆಡಳಿತಾರೂಢ ಬಿಜೆಪಿ ವಿರುದ್ಧ ತನ್ನ ವಾಗ್ದಾಳಿಯನ್ನು ಮುಂದುವರೆಸಿರುವ ಪ್ರತಿಪಕ್ಷ ಕಾಂಗ್ರೆಸ್‌, ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕಮಿಷನ್‌ ಪ್ರಮಾಣ ಶೇ.40ರಿಂದ ಶೇ. 80ಕ್ಕೆ ಏರಲಿದೆ ಎಂದು ಆರೋಪಿಸಿದೆ. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, ಬಿಜೆಪಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

''ನಮ್ಮ ಚಿಂತನೆ, ಭರವಸೆಗಳು ಜನಪರವಾಗಿದ್ದರೆ, ರಾಜ್ಯ ಬಿಜೆಪಿ ಘಟಕದ ಚಿಂತನೆಗಳು ಭ್ರಷ್ಟಾಚಾರದ್ದಾಗಿರುತ್ತದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ 40% ಇರುವ ಕಮಿಷನ್ 80% ಆಗಬಹುದು. ಭ್ರಷ್ಟಾಚಾರ ದುಪ್ಪಟ್ಟಾಗಲಿದೆ. ಒಟ್ಟಿನಲ್ಲಿ ಕಮಿಷನ್ ಕಡ್ಡಾಯಗೊಳಿಸುತ್ತೇವೆ. ರಾಜ್ಯದ ಜನತೆಗೆ ಬಿಜೆಪಿ ಕೊಡುವ ಆಶ್ವಾಸನೆಗಳು ಹೀಗಿರುತ್ತವೆ..''ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

''ನಾವು ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದಾಗಲೂ ಅಸಾಧ್ಯವೆಂದು ಟೀಕಿಸಿದರು. ಅನ್ನಭಾಗ್ಯ ಯೋಜನೆ ಘೋಷಿಸಿದಾಗಲೂ ಟೀಕಿಸಿದರು. ಆದರೆ ಕಾಂಗ್ರೆಸ್ ಯೋಜನೆಗಳು ಅಭೂತಪೂರ್ವ ಯಶಸ್ವಿಯಾಗಿ, ಜನರ ಬದುಕಿಗೆ ಆಸರೆಯಾದವು. ನಮ್ಮ ಗೃಹ ಲಕ್ಷ್ಮಿ ಯೋಜನೆಗಳು ಜನರ ಬದುಕಿಗೆ ಆಸರೆಯಾಗುವುದು ನಿಶ್ಚಿತ. ಟೀಕಿಸುವವರಿಗೆ ಜನರ ಕಷ್ಟದ ಅರಿವಿಲ್ಲ..'' ಎಂದು ಕಾಂಗ್ರೆಸ್‌ ಕಿಡಿಕಾರಿದೆ.

''ಗುತ್ತಿಗೆದಾರರು ಸಾಕ್ಷಿ, ದಾಖಲೆ ಇಲ್ಲದೆ ಆರೋಪ ಮಾಡ್ತಿದಾರೆ ಎನ್ನುತ್ತಿದ್ದ ಬಸವರಾಜ ಬೊಮ್ಮಾಯಿ ಅವರೇ, ಒಂದೊಂದೇ ಸಾಕ್ಷಿಗಳು ಹೊರಬರುತ್ತಿವೆಯಲ್ಲ, ಇನ್ನಾದರೂ ಕಮಿಷನ್ ಲೂಟಿಯನ್ನು ಉನ್ನತ ತನಿಖೆಗೆ ವಹಿಸುವಿರಾ? ಪ್ರಾಮಾಣಿಕ, ಪಾರದರ್ಶಕ ಎಂದು ಬಾಯಲ್ಲಿ ಹೇಳುವ ಮೊದಲು ಕೃತಿಯಲ್ಲಿ ಮಾಡಿ ತೋರಿಸುವುದು ಯಾವಾಗ?..'' ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

'' ರಾಜ್ಯ ಬಿಜೆಪಿ ಸರ್ಕಾರ ಕಮಿಷನ್ ಲೂಟಿ ಬಿಟ್ಟು ಬೇರೆ ಇನ್ಯಾವ ಸಾಧನೆ ಮಾಡಿಲ್ಲ. ನಾರಾಯಣಪುರ ಎಡದಂಡೆ ಕಾಲುವೆಯ ಆಧುನೀಕರಣ ಮಾಡಿದ್ದು ಕಾಂಗ್ರೆಸ್ ಸರ್ಕಾರ, ಟೇಪ್ ಕಟ್ ಮಾಡುವುದನ್ನೇ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿಯುವುದು ಬಿಜೆಪಿ ನಮ್ಮ ಕೆಲಸಗಳಿಗೆ ಕ್ರೆಡಿಟ್ ಪಡೆಯುವುದನ್ನು ಬಿಟ್ಟು ತಮ್ಮ ಸಾಧನೆ ಏನೆಂದು ಹೇಳಲಿ..'' ಎಂದು ಕಾಂಗ್ರೆಸ್‌ ಸವಾಲು ಹಾಕಿದೆ.

''ಬಿಜೆಪಿ ಆಡಳಿತ ಹೇಗಿದೆ ಎಂದು ನೋಡಿರುವಾಗ ಮುಂದೆ ಅವರ ಆಶ್ವಾಸನೆಗಳು ಹೇಗಿರಲಿವೆ ಎಂಬುದನ್ನು ಊಹಿಸಬಹುದು. ಕನ್ನಡಿಗರ ಮೇಲೆ ಹಿಂದಿ ಹೇರಿಕೆಯ ನಾಗಪುರದ ಗುಪ್ತ ಅಜೆಂಡಾ ಜಾರಿಗೊಳಿಸುತ್ತಿರುವ ಬಿಜೆಪಿ, ಮುಂದೆ ಹಿಂದಿಯನ್ನೇ ಕರ್ನಾಟಕದ ಅಧಿಕೃತ ಭಾಷೆ ಎಂದು ಘೋಷಿಸುತ್ತದೆ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ..'' ಎಂದು ಕಾಂಗ್ರೆಸ್‌ ಇದೇ ವೇಳೆ ಎಚ್ಚರಿಸಿದೆ.

''ಬಿಜೆಪಿ ಭರವಸೆಗಳಲ್ಲಿ ಪ್ರಮುಖವಾದುದು ಸರ್ಕಾರಿ ಹುದ್ದೆಗಳ ಮಾರಾಟ, ಈಗಾಗಲೇ ಪ್ರತಿ ಇಲಾಖೆಯಲ್ಲಿ ಹಲವು ಹುದ್ದೆಗಳನ್ನು ಮಾರಾಟ ಮಾಡಿರುವ ಬಿಜೆಪಿ ಮುಂದೆ ಅಧಿಕಾರಕ್ಕೆ ಬಂದರೆ ಬಾಕಿ ಉಳಿದ 2.5 ಲಕ್ಷ ಹುದ್ದೆಗಳನ್ನು ಉತ್ತಮ ದರದಲ್ಲಿ ಮಾರಾಟ ಮಾಡುವುದು ಬಿಜೆಪಿ ಯೋಜನೆಯಾಗಿರುತ್ತದೆ. ಹೆಚ್ಚಿನ ಬಿಡ್‌ಗೆ ಹರಾಜು ಕೂಡ ನಡೆಸಬಹುದು..'' ಎಂದೂ ಕಾಂಗ್ರೆಸ್‌ ಕುಹುಕವಾಡಿದೆ.

ಒಟ್ಟಿನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಸಮೀಪಸುತ್ತಿದ್ದಂತೇ, ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್‌ ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿದೆ. ಕಾಂಗ್ರೆಸ್‌ನ ಈ ಆರೋಪಗಳಿಗೆ ಬಿಜೆಪಿ ಹೇಗೆ ತಿರುಗೇಟು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇಂದಿನ ಪ್ರಮುಖ ಸುದ್ದಿ

PM Modi: 400 ದಿನಗಳಲ್ಲಿ ದೇಶದ ಪ್ರತಿ ಮತದಾರನನ್ನೂ ತಲುಪಲು ಪ್ರಯತ್ನಿಸಿ: ಕಾರ್ಯಕಾರಣಿ ಸಭೆಯಲ್ಲಿ ಮೋದಿ ಕರೆ

2024ರ ಸಾರ್ವತ್ರಿಕ ಚುನಾವಣೆಗಳಿಗೆ ಇನ್ನೂ ಕೇವಲ 400 ದಿನಗಳು ಉಳಿದಿದ್ದು, ದೇಶದ ಪ್ರತಿ ಮತದಾರರನ್ನೂ ತಲುಪಲು ಕಾರ್ಯಕರ್ತರು ಪ್ರಯತ್ನಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜನರ ಸೇವೆಗಾಗಿ ನಾವು ಸಾಧ್ಯವಾದ ಎಲ್ಲವನ್ನೂ ಮಾಡಬೇಕಿದೆ ಎಂದು ಸಲಹೆ ನೀಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ