CT Ravi: ನಮ್ಮನ್ನು ಕೋಮುವಾದಿ ಎನ್ನುವ ಸಿದ್ದರಾಮಯ್ಯ ದಾವೂದ್ ಇಬ್ರಾಹಿಂ ಬಗ್ಗೆ ಏನಂತಾರೆ?: ಸಿ.ಟಿ. ರವಿ ಪ್ರಶ್ನೆ!
Dec 03, 2022 02:16 PM IST
ಸಿ.ಟಿ. ರವಿ
- ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ನಾಯಕರು ನಮ್ಮನ್ನು ಕೋಮುವಾದಿಗಳೆಂದು ಕರೆಯುತ್ತಾರೆ. ಹಿಂದುತ್ವ ಮತ್ತು ರಾಷ್ಟ್ರೀಯವಾದಿ ನಾಯಕರು ಸಿದ್ದರಾಮಯ್ಯ ಅವರ ಕಣ್ಣಿಗೆ ಕೋಮುವಾದಿಗಳಾಗಿ ಕಾಣುತ್ತಾರೆ. ಆದರೆ ದೇಶದ್ರೋಹಿ ದಾವೂದ್ ಇಬ್ರಾಹಿಂನಂತಹ ಜನರು ಜಾತ್ಯಾತೀತವಾದಿಗಳಾಗಿ ಕಾಣುತ್ತಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧದ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಿದ್ದರಾಮಯ್ಯ ಅವರ ಜಾತ್ಯಾತೀತ ನಿಲುವನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿ.ಟಿ, ರವಿ, ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ನಾಯಕರು ನಮ್ಮನ್ನು ಕೋಮುವಾದಿಗಳೆಂದು ಕರೆಯುತ್ತಾರೆ. ಹಿಂದುತ್ವ ಮತ್ತು ರಾಷ್ಟ್ರೀಯವಾದಿ ನಾಯಕರು ಸಿದ್ದರಾಮಯ್ಯ ಅವರ ಕಣ್ಣಿಗೆ ಕೋಮುವಾದಿಗಳಾಗಿ ಕಾಣುತ್ತಾರೆ. ಆದರೆ ದೇಶದ್ರೋಹಿ ದಾವೂದ್ ಇಬ್ರಾಹಿಂನಂತಹ ಜನರು ಜಾತ್ಯಾತೀತವಾದಿಗಳಾಗಿ ಕಾಣುತ್ತಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಆರ್‌ಎಸ್‌ಎಸ್‌ನಂತಹ ದೇಶಭಕ್ತ ಸಂಘಟನೆಯನ್ನು ಕೋಮುವಾದಿ ಸಂಘಟನೆ ಎಂದು ಕರೆಯುವ ಸಿದ್ದರಾಮಯ್ಯ, ದೇಶಕ್ಕೆ ಯಾವ ಸಂದೇಶ ಕೊಡುತ್ತಿದ್ದಾರೆ ಎಂಬುದು ತಿಳಿಯದಾಗಿದೆ. ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಮತ್ತು ನಿರ್ದಿಷ್ಟ ಕೋಮಿನ ಜನರನ್ನು ಸಂತುಷ್ಟಗೊಳಿಸಲು, ಸಿದ್ದರಾಮಯ್ಯ ಅವರಂತಹ ನಾಯಕರು ದೇಶವನ್ನು ತಂಡರಿಸಲು ಹಿಂಜರಿಯುವುದಿಲ್ಲ ಎಂದು ಸಿ.ಟಿ. ರವಿ ಹರಿಹಾಯ್ದರು.
ಕಾಂಗ್ರೆಸ್ 'ದಾವೂದ್ ಇಬ್ರಾಹಿಂಗೆ ಜಾತ್ಯತೀತ ಎಂದು ಪ್ರಮಾಣಪತ್ರ ನೀಡಿದರೂ ಅಚ್ಚರಿಯಿಲ್ಲ' ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಿ.ಟಿ. ರವಿ, ಕಾಂಗ್ರೆಸ್ ರಾಜಕಾರಣವನ್ನು ಗಮನಿಸುವವರಿಗೆ ಈ ರೀತಿ ಅನ್ನಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿ ಅವರನ್ನು ಕಾಂಗ್ರೆಸ್ ಮಾಜಿ ಸಂಸದ ವಿ.ಎಸ್. ಉಗ್ರಪ್ಪ 'ಭಸ್ಮಾಸುರ' ಎಂದು ಕರೆದಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ಪ್ರಧಾನಿ ಮೋದಿಯವರು ಭ್ರಷ್ಟರು ಮತ್ತು ದೇಶವಿರೋಧಿಗಳ ವಿರುದ್ಧವಾಗಿದ್ದಾರೆ. ಹಾಗಾಗಿಯೇ ಕಾಂಗ್ರೆಸ್ ನಾಯಕರಿಗೆ ಅವರು ಭಸ್ಮಾಸುರವಾಗಿ ಕಾಣುತ್ತಾರೆ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿ ಕಾಂಗ್ರೆಸ್ ಪಾಲಿಗೆ ಭಸ್ಮಾಸುರವಾಗಿರಬಹುದು. ಆದರೆ ಆದರೆ ದೇಶವಾಸಿಗಳಿಗೆ ಪ್ರಧಾನಿ ಮೋದಿ ಭಗವಾನ್ ನಾರಾಯಣನಂತಿದ್ದಾರೆ. ಭ್ರಷ್ಟರನ್ನು 'ಭಸ್ಮ' ಮಾಡಲೆಂದೇ ಪ್ರಧಾನಿ ಮೋದಿ ಅಧಿಕಾರದಲ್ಲಿದ್ದಾರೆ ಎಂದು ಸಿ.ಟಿ. ರವಿ ಗುಡಗಿದರು. ಪ್ರಧಾನಿ ಮೋದಿ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡುವ ನೈತಿಕತೆ ದೇಶದ ಯಾವ ಕಾಂಗ್ರೆಸ್ ನಾಯಕರಿಗೂ ಇಲ್ಲ ಎಂದು ಸಿ.ಡಿ. ರವಿ ಕಿಡಿಕಾರಿದರು.
ಇದೇ ವೇಳೆ ಕರ್ನಾಟಕ-ಮಹಾರಾಷ್ಟ್ರ ಗಡಿ ಸಮಸ್ಯೆ ಬಗ್ಗೆ ಮಾತನಾಡಿದ ಸಿ.ಟಿ. ರವಿ, ಗಡಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ನಾವು ಬದ್ಧ ಎಂದು ಹೇಳಿದರು.
ಮಹಾರಾಷ್ಟ್ರ ಮತ್ತು ಕರ್ನಾಟಕದ ಜನರ ಸಂಸ್ಕೃತಿಗಳು ತುಂಬಾ ಭಿನ್ನವಾಗಿಲ್ಲ. ಮರಾಠರು ಮತ್ತು ಕನ್ನಡಿಗರ ನಡುವೆ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧವಿದೆ. ಸುಪ್ರೀಂಕೋರ್ಟ್ ನಿರ್ಧಾರ ಏನೇ ಇದ್ದರೂ, ನಾವು ಉಭಯ ರಾಜ್ಯಗಳ ನಡುವಿನ ಈ ಬಾಂಧವ್ಯವನ್ನು ಗಟ್ಟಿಗೊಳಿಸಬೇಕು ಎಂದು ಸಿ.ಟಿ. ರಚಿ ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂದೂಗಳ ಹತ್ಯೆಯಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಿ.ಟಿ. ರವಿ, ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಕೆರಳಿಸಿದ್ದರು. ಈ ಸಂಬಂಧ ಸಿ.ಟಿ. ರವಿ ವಿರುದ್ಧ ದೂರು ದಾಖಲಾಗಿದ್ದು, ಸಿದ್ದರಾಮಯ್ಯ ಕೂಡ ಸಿ.ಟಿ. ರವಿ ಅವರನ್ನು ಕೋಮುವಾದಿ ಎಂದು ಜರೆದಿದ್ದರು.
ಇಂದಿನ ಪ್ರಮುಖ ಸುದ್ದಿಗಳು
Leopard attack compensation: ಮೃತರ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಸಿಎಂ
ರಾಜ್ಯದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ಒದಗಿಸಲಾಗುತ್ತದೆ. ಕಾಡಾನೆ ದಾಳಿಗೆ ಒಳಗಾಗಿ ಮೃತಪಟ್ಟವರ ಕುಟುಂಬಕ್ಕೆ ಇದೇ ರೀತಿ ಪರಿಹಾರ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಹೇಳಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.
ವಿಭಾಗ