logo
ಕನ್ನಡ ಸುದ್ದಿ  /  ಕರ್ನಾಟಕ  /  Congress Guarantee: ಕಾಂಗ್ರೆಸ್‌ನ 5 ಗ್ಯಾರೆಂಟಿಗೆ ಈಗ ಷರತ್ತು ಅನ್ವಯ; ಅರ್ಹರಿಗಷ್ಟೆ ಗ್ಯಾರೆಂಟಿ ಎಂದ ಶಾಸಕ ಯು.ಟಿ.ಖಾದರ್

Congress Guarantee: ಕಾಂಗ್ರೆಸ್‌ನ 5 ಗ್ಯಾರೆಂಟಿಗೆ ಈಗ ಷರತ್ತು ಅನ್ವಯ; ಅರ್ಹರಿಗಷ್ಟೆ ಗ್ಯಾರೆಂಟಿ ಎಂದ ಶಾಸಕ ಯು.ಟಿ.ಖಾದರ್

HT Kannada Desk HT Kannada

May 18, 2023 07:00 AM IST

google News

ಬಂಟ್ವಾಳಕ್ಕೆ ಬುಧವಾರ ಸಂಜೆ ಆಗಮಿಸಿದ ಶಾಸಕ ಯು.ಟಿ.ಖಾದರ್, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

  • Congress Guarantee: ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್ ಎಲ್ಲರಿಗೂ ಸಿಗುತ್ತಾ, ಇಲ್ಲವಾ ಎಂಬುದೇ ಈಗ ಗೊಂದಲಮಯ. ಪರಮೇಶ್ವರ್ ಅವರ ಹೇಳಿಕೆ ಇದಕ್ಕೆ ಕಾರಣ. ಈ ಕುರಿತು ಮಾಜಿ ಸಚಿವ, ಪ್ರತಿಪಕ್ಷದ ಉಪನಾಯಕರಾಗಿದ್ದ ಶಾಸಕ ಯು.ಟಿ.ಖಾದರ್ ಹೇಳಿದ್ದು ಹೀಗೆ.

ಬಂಟ್ವಾಳಕ್ಕೆ ಬುಧವಾರ ಸಂಜೆ ಆಗಮಿಸಿದ  ಶಾಸಕ ಯು.ಟಿ.ಖಾದರ್, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಬಂಟ್ವಾಳಕ್ಕೆ ಬುಧವಾರ ಸಂಜೆ ಆಗಮಿಸಿದ ಶಾಸಕ ಯು.ಟಿ.ಖಾದರ್, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಮಂಗಳೂರು: ಕಾಂಗ್ರೆಸ್ ಪಕ್ಷ ಈ ಹಿಂದೆ ಘೋಷಿಸಿದ್ದ ಗ್ಯಾರಂಟಿಗಳನ್ನು ಅನುಷ್ಠಾನ ಮಾಡುವುದು ಖಚಿತ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಯಾರು ಅರ್ಹರಿದ್ದಾರೋ ಅವರಿಗೆ ಗ್ಯಾರಂಟಿ ಕಾರ್ಡ್ ಸೌಲಭ್ಯ ದೊರಕುವುದು ಗ್ಯಾರಂಟಿ ಎಂದು ಮಾಜಿ ಸಚಿವ ಹಾಗೂ ಮಂಗಳೂರು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

ಬಂಟ್ವಾಳಕ್ಕೆ ಬುಧವಾರ ಸಂಜೆ ಆಗಮಿಸಿದ ಅವರು, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ನಾಮಪತ್ರ ಸಲ್ಲಿಕೆ ಸಂದರ್ಭವೂ ಅವರ ರಾಜಕೀಯ ಗುರು 86ರ ಹರೆಯದ ಪೂಜಾರಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಬೆಂಬಲಿಗರೊಂದಿಗೆ ಆಗಮಿಸಿದ ಖಾದರ್, ಪೂಜಾರಿಯವರ ಜೊತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, ಸರಕಾರ ಇನ್ನೂ ಅಸ್ತಿತ್ವಕ್ಕೆ ಬರಬೇಕಿದ್ದು, ಗ್ಯಾರಂಟಿ ವಿತರಣೆ ಖಚಿತವಾಗಿದೆ ಯಾರು ಅರ್ಹರಿದ್ದಾರೋ ಅವರಿಗೆ ಗ್ಯಾರಂಟಿ ವಿತರಣೆ ಗ್ಯಾರಂಟಿ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಸರಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ನಿಯಮಾನುಸಾರ ಜಾರಿ ಮಾಡುತ್ತೇವೆ ಎಂದರು. ಬಿಜೆಪಿ ಸರಕಾರ ಮತ್ತು ಕಾಂಗ್ರೆಸ್ ಗಿರುವ ವ್ಯತ್ಯಾಸವನ್ನು ನಾವು ತೋರಿಸಿಕೊಡುತ್ತೇವೆ ಎಂದರು.

ಉಪಮುಖ್ಯಮಂತ್ರಿಯಾಗುವಿರಾ?

ತಮಗೆ ಡಿಸಿಎಂ ಹುದ್ದೆ ಈ ಬಾರಿ ಸಿಗಬಹುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಖಾದರ್, ನಾನು ಇಂಥದ್ದೇ ಆಗಬೇಕು ಎಂಬ ಬೇಡಿಕೆ ಇಟ್ಟಿಲ್ಲ ಎಂದರು. ಅಂಬೇಡ್ಕರ್ ಅವರ ಸಂವಿಧಾನದ ಪರ ಕಾಂಗ್ರೆಸ್ ಸರಕಾರ ಬಂದಿದೆ. ನನಗೆ ಹಿಂದೆ ಯಾವುದೆಲ್ಲಾ ಅವಕಾಶ ಕೊಟ್ಟಿದ್ದಾರೆ ಅವುಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಪಕ್ಷ ಯಾವ ಜವಾಬ್ದಾರಿ ಕೊಡುತ್ತದೆಯೋ ಅದಕ್ಕೆ ನಾನು ಬದ್ಧ. ಇಂಥದ್ದೇ ಆಗಬೇಕು ಎಂದೇನಿಲ್ಲ ಎಂದರು.

ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರನ್ನು ನಾಮಪತ್ರ ಸಲ್ಲಿಕೆ ಸಂದರ್ಭವೂ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೆ. ಅವರು ನನ್ನ ಅತ್ಯಂತ ಪ್ರೀತಿಯ ನಾಯಕರು. ನಾನು ಎನ್.ಎಸ್.ಯು.ಐ. ಅಧ್ಯಕ್ಷನಾಗಲು ಅವರ ಮಾರ್ಗದರ್ಶನವೇ ಕಾರಣ. ಅವರ ಪ್ರಾಮಾಣಿಕತೆ, ಪರಿಶ್ರಮ, ಸಾಮಾಜಿಕ ಬದ್ಧತೆ ನನ್ನ ರಾಜಕೀಯ ಜೀವನದಲ್ಲೂ ಪರಿಣಾಮ ಬೀರಿದೆ. ಗೆಲುವು ಸಾಧಿಸಿದ ಬಳಿಕ ಅವರ ಆಶೀರ್ವಾದ ಪಡೆದುಕೊಂಡಿದ್ದೇನೆ. ಎಲ್ಲ ಕಾಂಗ್ರೆಸಿಗರನ್ನೂ ಕುಟುಂಬದ ರೀತಿಯಲ್ಲಿ ಕೊಂಡೊಯ್ಯಬೇಕು ಎಂಬ ಅವರ ಸಲಹೆ ಸ್ವೀಕರಿಸಿದ್ದೇನೆ ಎಂದರು.

ಈ ಸಂದರ್ಭ ಜಿಪಂ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ತಾಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪ್ರಮುಖರಾದ ಸಂತೋಷ್ ಶೆಟ್ಟಿ, ಈಶ್ವರ ಉಳ್ಳಾಲ್, ಹಾಸಿರ್ ಪೇರಿಮಾರ್, ಹುಸೈನ್ ಕುಂಞಮೋನ್, ಮಲ್ಲಿಕಾ ಪಕ್ಕಳ, ಅರುಣ್ ಡಿಸೋಜಾ,ದೇವದಾಸ್ ಭಂಡಾರಿ, ದೀಪಕ್ ಪಿಲಾರ್, ಸುರೇಶ್ ಭಟ್ನಾಗರ್, ಮುಸ್ಪಾಫ ಹರೇಕಳ, ಮರಳೀಧರ ಶೆಟ್ಟಿ, ಫಾರೂಕ್ ದೇರಳ ಕಟ್ಟೆ, ನವಾಝ್ ನರಿಂಗಾಣ್, ಶಮೀರ್ ಫಜೀರ್, ದಿನೇಶ್ ಪೂಜಾರಿ, ರಝಾಕ್ ಕುಕ್ಕಾಜೆ, ಮಹಮ್ಮದ್ ಮುಕ್ಕಚ್ಚೇರಿ ಮತ್ತಿತರರು ಉಪಸ್ಥಿತರಿದ್ದರು.

(ವರದಿ: ಹರೀಶ ಮಾಂಬಾಡಿ, ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ