logo
ಕನ್ನಡ ಸುದ್ದಿ  /  ಕರ್ನಾಟಕ  /  ಮುಡಾ ಕೇಸ್​​ನಿಂದ ಹೆದರಿದರೇ ಮಲ್ಲಿಕಾರ್ಜುನ್ ಖರ್ಗೆ? ಕೆಐಎಡಿಬಿಗೆ ಐದು ಎಕರೆ ಸಿಎ ನಿವೇಶನ ಮರಳಿಸಿದ ಖರ್ಗೆ ಕುಟುಂಬ

ಮುಡಾ ಕೇಸ್​​ನಿಂದ ಹೆದರಿದರೇ ಮಲ್ಲಿಕಾರ್ಜುನ್ ಖರ್ಗೆ? ಕೆಐಎಡಿಬಿಗೆ ಐದು ಎಕರೆ ಸಿಎ ನಿವೇಶನ ಮರಳಿಸಿದ ಖರ್ಗೆ ಕುಟುಂಬ

Prasanna Kumar P N HT Kannada

Oct 14, 2024 11:34 AM IST

google News

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ.

  •  Mallikarjun Kharge: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ಸೈಟ್ ಹಂಚಿಕೆ ಪ್ರಕರಣ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿದ್ದ ಬೆನ್ನಲ್ಲೇ ಮಲ್ಲಿಕಾರ್ಜುನ್ ಖರ್ಗೆ ಕುಟುಂಬ ಕೂಡ ವಿವಾದದ ಸೈಟ್‌ ಹಿಂತಿರುಗಿಸಲು ನಿರ್ಧರಿಸಿದೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಪಡೆದಿದ್ದ 14 ಸೈಟ್​ಗಳನ್ನು ​ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಿಂದಿರುಗಿಸಿದ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಪಡೆದಿದ್ದ 5 ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ 5 ಎಕರೆ ಜಮೀನನ್ನು ವಾಪಸ್ ನೀಡಲು ನಿರ್ಧರಿಸಿದೆ. ಮಲ್ಲಿಕಾರ್ಜುನ ಖರ್ಗೆ ಪುತ್ರ ರಾಹುಲ್ ಖರ್ಗೆ ಅವರು ಸಿದ್ಧಾರ್ಥ ವಿಹಾರ್ ಟ್ರಸ್ಟ್ ಅಧ್ಯಕ್ಷ. ಈ ಟ್ರಸ್ಟ್​​ಗೆ ಕೆಐಎಡಿಬಿಯಿಂದ 5 ಎಕರೆ ಜಮೀನನ್ನ ನಿಯಮ ಉಲ್ಲಂಘಿಸಿ ನೀಡಲಾಗಿದೆ.

ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ, ತರಬೇತಿ ಸಂಸ್ಥೆಗಳು ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಲು ಬೆಂಗಳೂರಿನಲ್ಲಿ 5 ಎಕರೆ ನಾಗರಿಕ ಸೌಲಭ್ಯ ನಿವೇಶನವನ್ನು ಮಂಜೂರು ಮಾಡಲಾದ ಜಮೀನನ್ನು ಹಿಂದಿರುಗಿಸುವುದಾಗಿ ಸಿದ್ಧಾರ್ಥ ವಿಹಾರ್ ಟ್ರಸ್ಟ್ ಅಧ್ಯಕ್ಷ ರಾಹುಲ್ ಎಂ ಖರ್ಗೆ ತಿಳಿಸಿದ್ದರು. ಈ ಕುರಿತು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (KIADB) ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ರಾಹುಲ್ ಖರ್ಗೆ ಅವರು ಸೆಪ್ಟೆಂಬರ್​ 20ರಂದೇ ಪತ್ರ ಬರೆದಿದ್ದರು.

ಜಮೀನು ಮಂಜೂರು ವೇಳೆ ನಾಗರಿಕ ಸೌಲಭ್ಯ (ಸಿಎ) ನಿವೇಶನ ಹಂಚಲಾಗಿದೆ ಎಂದು ವಿಧಾನ ಪರಿಷತ್‌ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿ ರಾಜ್ಯಪಾಲರಿಗೆ ದೂರು ಕೊಟ್ಟಿದ್ದರು. ಈ ಬಗ್ಗೆ ಮಾತಾಡಿದ ನಂತರ ರಾಹುಲ್ ಖರ್ಗೆ, ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿ ಯುವಕರಿಗೆ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕೌಶಲ್ಯ ಅಭಿವೃದ್ಧಿಯ ಮೂಲಕ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವುದು ಈ ಟ್ರಸ್ಟ್​​​ನ​ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಈ ಬಗ್ಗೆ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಯಾವುದೇ ಕಾನೂನು ನಿಯಮ ಉಲ್ಲಂಘಿಸಿ ಜಮೀನು ಪಡೆದಿಲ್ಲ. ಶಿಕ್ಷಣ ಸಂಸ್ಥೆಗೆ ಸಿಎ ನಿವೇಶನ ಹಂಚಿಕೆಗೆ ಅರ್ಜಿ ಸಲ್ಲಿಸಲು ಮತ್ತು ಸ್ವೀಕರಿಸಲು ಟ್ರಸ್ಟ್ ಸಂಪೂರ್ಣ ಅರ್ಹವಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಲಾಭ ಮಾಡುವ ಉದ್ದೇಶ ಟ್ರಸ್ಟ್​ನದ್ದಾಗಿರಲಿಲ್ಲ. ಜಾಗ ಪರಿಶಿಷ್ಟ ಜಾತಿಗೆ ಸೇರಿದ್ದರೂ ರಿಯಾಯಿತಿ ದರದಲ್ಲಿ ಜಮೀನು ಪಡೆದಿಲ್ಲ. ಆದರೂ, ರಾಜಕೀಯ ಆರೋಪಗಳಿಂದ ಬೇಸತ್ತು ಮರಳಿಸುವ ತೀರ್ಮಾನ ಕೈಗೊಂಡಿದ್ದೇವೆ ಎಂದಿದ್ದಾರೆ.

ಜಮೀನನ್ನು ಟ್ರಸ್ಟ್​ಗೆ ಪಡೆದಿದ್ದನ್ನು ಬಿಜೆಪಿ ದೊಡ್ಡ ಹಗರಣವೆಂದು ಬಿಂಬಿಸುತ್ತಿದೆ. ಟ್ರಸ್ಟ್ ಮಾಡಿರೋದು ಲಾಭ ಮಾಡುವ ಉದ್ದೇಶಕ್ಕಲ್ಲ. ಶಿಕ್ಷಣ ನೀಡುವ ಉದ್ದೇಶಕ್ಕೆ ಜಮೀನು ಮಂಜೂರಾಗಿದ್ದರೂ ಜಮೀನಿನ ಸ್ವಾಧೀನಕ್ಕೆ ಇನ್ನೂ ಪಡೆದಿಲ್ಲ. ಈ ಕಲುಷಿತ ವಾತಾವರಣದಲ್ಲಿ ಜಮೀನನ್ನು ಇಟ್ಟುಕೊಂಡರೆ ಟ್ರಸ್ಟ್‌ನ ಉದ್ದೇಶವೇ ವಿಷಯಾಂತರ ಆಗುತ್ತದೆ. ಅನಗತ್ಯ ಆರೋಪ, ವಿವಾದಗಳು ಬೇಡ ಎಂಬ ಕಾರಣಕ್ಕೆ ಜಮೀನು ವಾಪಸ್ ಮಾಡುವ ತೀರ್ಮಾನಿಸಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಹಿನ್ನೆಲೆ ಟ್ರಸ್ಟ್ ಕೆಐಎಡಿಬಿಗೆ ಪತ್ರ ಬರೆದು ಪ್ರಸ್ತಾವನೆ ಹಿಂಪಡೆಯುವಂತೆ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಸಿಎ ನಿವೇಶನಕ್ಕಾಗಿ ನಮ್ಮ ಮನವಿಯನ್ನು ಹಿಂತೆಗೆದುಕೊಳ್ಳುವಂತೆ ಕೋರಿದೆ ಎಂದು ಸಚಿವರು ಹೇಳಿದರು. ಟ್ರಸ್ಟ್ ತನ್ನ ಪ್ರಸ್ತಾವನೆಯನ್ನು ಫೆಬ್ರವರಿ 12, 2024 ರಂದು ಕೆಐಎಡಿಬಿಗೆ ಸಲ್ಲಿಸಿತ್ತು. ಒಂದು ತಿಂಗಳ ನಂತರ ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ