logo
ಕನ್ನಡ ಸುದ್ದಿ  /  ಕರ್ನಾಟಕ  /  ಅಶ್ಲೀಲ ವಿಡಿಯೋ ನೋಡುವುದು ಅಪರಾಧವಲ್ಲ, ಚಿತ್ರೀಕರಣ, ಪ್ರಸರಣ ಅಪರಾಧ; ಕಾಯ್ದೆಯ ಅಂಶ ವಿವರಿಸಿದ ಕರ್ನಾಟಕ ಹೈಕೋರ್ಟ್

ಅಶ್ಲೀಲ ವಿಡಿಯೋ ನೋಡುವುದು ಅಪರಾಧವಲ್ಲ, ಚಿತ್ರೀಕರಣ, ಪ್ರಸರಣ ಅಪರಾಧ; ಕಾಯ್ದೆಯ ಅಂಶ ವಿವರಿಸಿದ ಕರ್ನಾಟಕ ಹೈಕೋರ್ಟ್

Umesh Kumar S HT Kannada

Jul 19, 2024 03:09 PM IST

google News

ಅಶ್ಲೀಲ ವಿಡಿಯೋ ನೋಡುವುದು ಅಪರಾಧವಲ್ಲ, ಚಿತ್ರೀಕರಣ, ಪ್ರಸರಣ ಅಪರಾಧ; ಕಾಯ್ದೆಯ ಅಂಶ ವಿವರಿಸಿದ ಕರ್ನಾಟಕ ಹೈಕೋರ್ಟ್.

  • ಅಶ್ಲೀಲ ವಿಡಿಯೋ ನೋಡುವುದು ಅಥವಾ ವೀಕ್ಷಿಸುವುದು ಅಪರಾಧವಲ್ಲ. ಆದರೆ ಅಂಥವುಗಳ ಚಿತ್ರೀಕರಣ ಮತ್ತು ಪ್ರಸರಣ ಅಪರಾಧ ಎಂದು ಕರ್ನಾಟಕ ಹೈಕೋರ್ಟ್‌ ತನ್ನ ಇತ್ತೀಚಿನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ವಿಚಾರಣೆ ಬಳಿಕ ಹೈಕೋರ್ಟ್‌, ಐಟಿ ಕಾಯ್ದೆ ಸೆಕ್ಷನ್ 67ಬಿ ಅನ್ವಯ ದಾಖಲಾಗಿದ್ದ ಕೇಸ್ ಅನ್ನು ರದ್ದುಗೊಳಿಸಿತು.

ಅಶ್ಲೀಲ ವಿಡಿಯೋ ನೋಡುವುದು ಅಪರಾಧವಲ್ಲ, ಚಿತ್ರೀಕರಣ, ಪ್ರಸರಣ ಅಪರಾಧ; ಕಾಯ್ದೆಯ ಅಂಶ ವಿವರಿಸಿದ ಕರ್ನಾಟಕ ಹೈಕೋರ್ಟ್.
ಅಶ್ಲೀಲ ವಿಡಿಯೋ ನೋಡುವುದು ಅಪರಾಧವಲ್ಲ, ಚಿತ್ರೀಕರಣ, ಪ್ರಸರಣ ಅಪರಾಧ; ಕಾಯ್ದೆಯ ಅಂಶ ವಿವರಿಸಿದ ಕರ್ನಾಟಕ ಹೈಕೋರ್ಟ್.

ಬೆಂಗಳೂರು: ಆನ್‌ಲೈನ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ ಎಂಬ ಒಂದೇ ಕಾರಣಕ್ಕೆ ಅದನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ. ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 67 ಬಿಯಲ್ಲಿ ಅಂತಹ ವಿವರಣೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಐಟಿ ಕಾಯ್ದೆ ಪ್ರಕಾರ ವ್ಯಕ್ತಿಯ ವಿರುದ್ಧದ ದಾಖಲಾಗಿರುವ ಕೇಸ್‌ನ ವಿಚಾರಣೆಯನ್ನು ರದ್ದುಗೊಳಿಸುವಾಗ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಹೈಕೋರ್ಟ್ ತೀರ್ಪು ಮಕ್ಕಳ ಅಶ್ಲೀಲ ಚಿತ್ರ ಇರುವ ವೆಬ್‌ಸೈಟ್ ಅನ್ನು 50 ನಿಮಿಷ ವೀಕ್ಷಿಸಿದ ಆರೋಪ ಎದುರಿಸಿದ್ದ ವ್ಯಕ್ತಿಯನ್ನು ನಿರಾಳವಾಗಿಸಿದೆ.

“ಅರ್ಜಿದಾರರು ಅಶ್ಲೀಲ ವೆಬ್‌ಸೈಟ್ ವೀಕ್ಷಿಸಿದ್ದಾರೆ ಎಂಬುದು ಅವರ ವಿರುದ್ಧದ ಆರೋಪ. ಇದು, ನ್ಯಾಯಾಲಯದ ಪರಿಗಣಿತ ದೃಷ್ಟಿಯಲ್ಲಿ, ಐಟಿ ಕಾಯಿದೆಯ ಸೆಕ್ಷನ್ 67B ಪ್ರಕಾರ ಅಗತ್ಯವಿದ್ದಂತೆ, ಅಶ್ಲೀಲ ವಿಡಿಯೋ, ಫೋಟೋ ಪ್ರಕಟಿಸುವುದು ಅಥವಾ ರವಾನಿಸಿದ ಪ್ರಕರಣವಲ್ಲ. ಅರ್ಜಿದಾರರ ವಿರುದ್ಧ ಈ ಪ್ರಕಾರದ ಆರೋಪ ಮಾಡಲಾಗಿಲ್ಲ. ಐಟಿ ಕಾಯಿದೆಯ ಸೆಕ್ಷನ್ 67 ಬಿ ಅನ್ವಯಿಸಬೇಕಾದರೆ ಅದಕ್ಕೆ ಅಗತ್ಯ ಅಂಶಗಳ ವಿರುದ್ಧ ಸತ್ಯಗಳನ್ನು ಬಿಂಬಿಸಿದರೆ, ನಿಸ್ಸಂದಿಗ್ಧವಾಗಿ ಹೊರಹೊಮ್ಮುವ ಸಂಗತಿಯೆಂದರೆ, ಮುಂದಿನ ಪ್ರಕ್ರಿಯೆಗಳನ್ನು ಮುಂದುವರಿಸಲು ಅವಕಾಶ ಇಲ್ಲ ಎಂಬುದಾಗಿದೆ”ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರ ನ್ಯಾಯಪೀಠವು ಜುಲೈ 10 ರಂದು ನೀಡಿದ ಆದೇಶದಲ್ಲಿ ವಿವರಿಸಿದೆ.

ಅಶ್ಲೀಲ ವೆಬ್‌ಸೈಟ್ ವೀಕ್ಷಿಸಿದ ಪ್ರಕರಣ; ಏನಿದು ಕೇಸ್‌

ಸೈಬರ್, ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ (ಸಿಇಎನ್) ಪೊಲೀಸ್ ಠಾಣೆಯವರು ಲಭ್ಯ ದೂರಿನ ಆಧಾರದ ಮೇಲೆ ವ್ಯಕ್ತಿಯ ವಿರುದ್ಧ ಅಶ್ಲೀಲ ವೆಬ್‌ಸೈಟ್ ವೀಕ್ಷಿಸಿದಕ್ಕಾಗಿ ಕೇಸ್ ದಾಖಲಿಸಿಕೊಂಡಿದ್ದರು. ಆರೋಪಿ ವ್ಯಕ್ತಿಯು 2022ರ ಮಾರ್ಚ್ 23 ರಂದು ಮಧ್ಯಾಹ್ನ 3:50 ರಿಂದ 4:40 ರವರೆಗೆ ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಇದನ್ನು ಐಟಿ ಕಾಯ್ದೆಯ ಸೆಕ್ಷನ್ 67 ಬಿ ಪ್ರಕಾರ, ಶಿಕ್ಷಾರ್ಹ ಅಪರಾಧ ಎಂದು ಉಲ್ಲೇಖಿಸಿ ಕೇಸ್ ದಾಖಲಿಸಲಾಗಿತ್ತು. ಈ ಘಟನೆ ನಡೆದು ಎರಡು ತಿಂಗಳ ನಂತರ, ಮೇ 3 ರಂದು ದೂರು ದಾಖಲಾಗಿತ್ತು.

ಅರ್ಜಿದಾರರು ಅಶ್ಲೀಲ ಚಿತ್ರ ನೋಡುವ ವ್ಯಸನವನ್ನು ಒಪ್ಪಿಕೊಂಡಿದ್ದು, ಸ್ವತಃ ಸಮರ್ಥಿಸಿಕೊಂಡರು. ಆದರೆ, ಅವರು ಎಂದಿಗೂ ಅಶ್ಲೀಲ ದೃಶ್ಯದ ಫೋಟೋ, ವಿಡಿಯೋ ಶೇರ್ ಮಾಡಿಲ್ಲ ಅಥವಾ ಮಾಡಲು ಉದ್ದೇಶಿಸಿಲ್ಲ ಎಂಬುದನ್ನು ಪ್ರತಿಪಾದಿಸಿದರು. ಇದಕ್ಕೆ ಪ್ರತಿಯಾಗಿ ಪ್ರಾಸಿಕ್ಯೂಷನ್, ಕೇವಲ ಮಕ್ಕಳ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದು ಗಂಭೀರ ಅಪರಾಧ ಎಂದು ವಾದಿಸಿತು.

ಐಟಿ ಕಾಯಿದೆಯ ಸೆಕ್ಷನ್ 67B ನಿರ್ದಿಷ್ಟವಾಗಿ ಎಲೆಕ್ಟ್ರಾನಿಕ್ ರೂಪದಲ್ಲಿ ಮಕ್ಕಳನ್ನು ಅಶ್ಲೀಲವಾಗಿ ಚಿತ್ರಿಸುವ ವಸ್ತುಗಳನ್ನು ಪ್ರಕಟಿಸುವ ಅಥವಾ ರವಾನಿಸುವ ವ್ಯಕ್ತಿಗಳನ್ನು ಗುರಿಯಾಗಿಸುತ್ತದೆ. ಅವರನ್ನು ಆರೋಪಿಗಳನ್ನಾಗಿ ಮಾಡುತ್ತದೆ. ಆರೋಪ ದೃಢಪಡುವ ಸಾಕ್ಷ್ಯಗಳು ಇದ್ದರಷ್ಟೆ ಅಪರಾಧ ಸಾಬೀತಾಗುತ್ತದೆ.

ನ್ಯಾಯಾಲಯದ ತೀರ್ಪು ಮತ್ತು ಗಮನಿಸಿದ ಅಂಶ

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, "ಮಕ್ಕಳನ್ನು ಲೈಂಗಿಕವಾಗಿ ಅಶ್ಲೀಲ ಕೃತ್ಯಗಳಲ್ಲಿ ಚಿತ್ರಿಸುವ ವಸ್ತುಗಳನ್ನು ಪ್ರಕಟಿಸುವುದು ಅಥವಾ ರವಾನಿಸುವುದನ್ನು ತಡೆಯುವುದು ಈ ನಿಬಂಧನೆಯ ಸಾರವಾಗಿದೆ" ಎಂಬುದನ್ನು ಗಮನಿಸಿದರು.

"ವಾದಿಸಿದಂತೆ, ಅರ್ಜಿದಾರರು ಅಶ್ಲೀಲ ವಸ್ತುಗಳನ್ನು ವೀಕ್ಷಿಸಿದ ಅಶ್ಲೀಲ ವ್ಯಸನಿಯಾಗಿರಬಹುದು. ಇದನ್ನು ಮೀರಿದ ಯಾವುದೇ ಆರೋಪ ಅರ್ಜಿದಾರರ ವಿರುದ್ಧ ಇಲ್ಲ. ಐಟಿ ಕಾಯಿದೆಯ ಸೆಕ್ಷನ್ 67 ಬಿ ಉಲ್ಲಂಘನೆಯನ್ನು ಸ್ಥಾಪಿಸಲು ಅಗತ್ಯವಾದ ಅಂಶಗಳ ವಿರುದ್ಧ ಸತ್ಯಗಳನ್ನು ಬಿಂಬಿಸಿದರೆ, ಕಾನೂನು ಪ್ರಕ್ರಿಯೆಯ ದುರುಪಯೋಗವಾಗುವುದು. ಹೀಗಾಗಿ ಮುಂದಿನ ಪ್ರಕ್ರಿಯೆಗಳನ್ನು ಅನುಮತಿಸಲಾಗುವುದಿಲ್ಲ ಎಂಬುದು ಸ್ಪಷ್ಟ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ಕೋರ್ಟ್‌ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ