ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ವೃದ್ಧರೇ ಟಾರ್ಗೆಟ್; ಹೆಚ್ಚುತ್ತಿವೆ ಆನ್‌ಲೈನ್ ವಂಚನೆ ಪ್ರಕರಣಗಳು
Feb 11, 2024 02:15 PM IST
ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ವೃದ್ಧರನ್ನು ಗುರಿಯಾಗಿಸಿಕೊಂಡು ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ.
HSRP Number Plate: ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅವಳವಡಿಸಿಕೊಳ್ಳುವ ವೃದ್ಧರನ್ನು ಗುರಿಯಾಗಿಸಿಕೊಂಡು ಆನ್‌ಲೈನ್ ವಂಚನೆ ಪ್ರಕರಣಗಳು ಕರ್ನಾಟಕದಲ್ಲಿ ಹೆಚ್ಚಾಗುತ್ತಿವೆ.
ಬೆಂಗಳೂರು: ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್-ಹೆಚ್‌ಎಸ್‌ಆರ್‌ಪಿ (HSRP Number Plate Registration ) ಅವಳಡಿಸಿಕೊಳ್ಳು ಫೆಬ್ರವರಿ 17ರ ಶನಿವಾರ ಕಡೆಯ ದಿನವಾಗಿದೆ. ಆನಂತರ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡವನ್ನು ವಿಧಿಸಲಾಗುತ್ತಿದೆ. ಹೀಗಾಗಿ ವಾಹನ ಸವಾರರು ನಾ ಮುಂದೆ ತಾ ಮುಂದೆ ಅಂತ ಆನ್‌ಲೈನ್ ನೋಂದಣಿಗೆ ಮುಂದಾಗುತ್ತಿದ್ದಾರೆ.
ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ವಂಚಕರು, ಹಿರಿಯ ನಾಗಕರನ್ನು ಆನ್‌ಲೈನ್‌ನಲ್ಲಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅವಳಡಿಸಿಕೊಳ್ಳುವ ವಿಚಾರದಲ್ಲಿ ತಮ್ಮನ್ನು ಆನ್‌ಲೈನ್ ವಂಚಿಸಲಾಗಿದೆ ಎಂದು ಹಿರಿಯ ನಾಗರಿಕರು ಅಲವತ್ತುಕೊಂಡಿದ್ದಾರೆ ಎಂದು ವಾಹನ ಶೋರೂಂ ಮಾಲೀಕರು ಹೇಳಿರುತ್ತಿರುವುದಾಗಿ ವರದಿಯಾಗಿದೆ.
ಸರ್ಕಾರದ ಅಧಿಸೂಚನೆಯ ಪ್ರಕಾರ ಎಲ್ಲಾ ವಾಹನ ಸವಾರರು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನು ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ https://transport.karnataka.gov.in ಅಥವಾ www.siam.in ಮೂಲಕ ಮಾತ್ರ ನೋಂದಣಿ ಮಾಡಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚಿಸಿದೆ. ಆದರೂ ವಾಹನ ಸವಾರರು ಮಧ್ಯವರ್ತಿಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಹಲವರು ವಂಚನೆಗೆ ಒಳಗಾಗುತ್ತಿದ್ದಾರೆ.
ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಪಡೆಯುವಾಗ ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕು. ಆನ್‌ಲೈನ್ ನೋಂದಣಿ ವೇಳೆ ನಿಮ್ಮ ಮೊಬೈಲ್‌ಗೆ ಪಾಸ್‌ವರ್ಡ್ ಬಂದಿದೆ ಎಂದು ಹೇಳಿ ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ಇರುವ ಹಣವನ್ನು ಎಗರಿಸುವ ಸಾಧ್ಯತೆ ಇದೆ. ಅಧಿಕೃತ ವಾಹನ ವಿತರಕರನ್ನ ಸಂಪರ್ಕಿಸುವುದು ಒಳ್ಳೆಯದು. ದೇಶಾದ್ಯಂತ ಹೆಚ್‌ಎಸ್‌ಆರ್‌ಪಿ ಅವಳಡಿಸಿಕೊಳ್ಳುವ ಪ್ರಕ್ರಿಯೆ ವೇಗವನ್ನು ಪಡೆದುಕೊಂಡಿದೆ. ಸಾವಿರಾರು ಮಂದಿ ಇನ್ನೂ ಹೊಸ ನಂಬರ್ ಪ್ಲೇಟ್ ಪಡೆದಿಲ್ಲ. ಕೇವಲ ಆರು ದಿನ ಮಾತ್ರ ಬಾಕಿ ಇರುವುದರಿಂದ ಫೆಬ್ರವರಿ 17ರ ಕೊನೆಯ ದಿನಾಂಕವನ್ನು ವಿಸ್ತರಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. (This copy first appeared in Hindustan Times Kannada website. To read more like this please logon to kannada.hindustantime.com).
ವಿಭಾಗ