logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime News: ಬಾಲಕಿ ಮೇಲೆ ರೇಪ್‌, ಬೆಂಗಳೂರಿನಲ್ಲಿ ಟಿವಿ ಚಾನೆಲ್‌ನ ಕಾರು ಚಾಲಕನ ಬಂಧನ

Bangalore Crime News: ಬಾಲಕಿ ಮೇಲೆ ರೇಪ್‌, ಬೆಂಗಳೂರಿನಲ್ಲಿ ಟಿವಿ ಚಾನೆಲ್‌ನ ಕಾರು ಚಾಲಕನ ಬಂಧನ

HT Kannada Desk HT Kannada

Sep 02, 2022 10:00 AM IST

google News

Bangalore Crime News: ಬಾಲಕಿ ಮೇಲೆ ರೇಪ್‌, ಬೆಂಗಳೂರಿನಲ್ಲಿ ಟಿವಿ ಚಾನೆಲ್‌ನ ಕಾರು ಚಾಲಕನ ಬಂಧನ (PIC FOR REPRESENTATION)

    • ಉದ್ಯಾನನಗರಿಯಲ್ಲಿ ಹದಿನೈದು ವರ್ಷದ ಬಾಲಕಿಯೊಬ್ಬಳನ್ನು ಪುಸಲಾಯಿಸಿ ಸ್ನೇಹ ಬೆಳೆಸಿಕೊಂಡು ಅತ್ಯಾಚಾರ ಮಾಡಿದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಅತ್ಯಾಚಾರ ಮಾಡಿರುವ ಪ್ರಕರಣದಲ್ಲಿ ಮನೋಜ್‌ (29) ಮತ್ತು ಸುರೇಶ್‌ (25) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
Bangalore Crime News: ಬಾಲಕಿ ಮೇಲೆ ರೇಪ್‌, ಬೆಂಗಳೂರಿನಲ್ಲಿ ಟಿವಿ ಚಾನೆಲ್‌ನ ಕಾರು ಚಾಲಕನ ಬಂಧನ (PIC FOR REPRESENTATION)
Bangalore Crime News: ಬಾಲಕಿ ಮೇಲೆ ರೇಪ್‌, ಬೆಂಗಳೂರಿನಲ್ಲಿ ಟಿವಿ ಚಾನೆಲ್‌ನ ಕಾರು ಚಾಲಕನ ಬಂಧನ (PIC FOR REPRESENTATION) (HT_PRINT)

ಬೆಂಗಳೂರು: ಉದ್ಯಾನನಗರಿಯಲ್ಲಿ ಹದಿನೈದು ವರ್ಷದ ಬಾಲಕಿಯೊಬ್ಬಳನ್ನು ಪುಸಲಾಯಿಸಿ ಸ್ನೇಹ ಬೆಳೆಸಿಕೊಂಡು ಅತ್ಯಾಚಾರ ಮಾಡಿದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಅತ್ಯಾಚಾರ ಮಾಡಿರುವ ಪ್ರಕರಣದಲ್ಲಿ ಮನೋಜ್‌ (29) ಮತ್ತು ಸುರೇಶ್‌ (25) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

"ರಾಷ್ಟ್ರಮಟ್ಟದ ಟಿವಿ ವಾಹಿನಿಯಲ್ಲಿ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದ ಮನೋಜ್‌ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈತನ ಈ ಕೃತ್ಯಕ್ಕೆ ಸ್ನೇಹಿತ ಸುರೇಶ್‌ ಸಹಾಯ ಮಾಡಿದ್ದಾನೆ. ಇವರಿಬ್ಬರನ್ನು ಪೋಕ್ಸೊ ಪ್ರಕರಣದಡಿ ಬಂಧಿಸಲಾಗಿದೆʼʼ ಎಂದು ವರದಿಗಳು ಹೇಳಿವೆ.

ಮೊದಲೇ ಪರಿಚಯ: ಬಾಲಕಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಳು. ಮನೋಜ್‌ ಮತ್ತು ಆಕೆಗೆ ಮೊದಲೇ ಪರಿಚಯವಿತ್ತು. ಈ ರೀತಿ ಬಾಲಕಿಯನ್ನು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿದ್ದ ಆರೋಪಿ ಆಕೆಯೊಂದಿಗೆ ಸಲುಗೆಯಿಂದ ಇದ್ದ. ಇವಳನ್ನು ಆಗಾಗ ಭೇಟಿಯಾಗುತ್ತಿದ್ದನಂತೆ.

ಹದಿನೈದು ವರ್ಷದ ಈಕೆಯೂ ಈತನ ಸ್ನೇಹ, ಪ್ರೀತಿಯ ನಾಟಕವನ್ನು ನಂಬಿದ್ದಳು. ಅಂದೊಂದು ದಿನ, ಅಂದರೆ ಆಗಸ್ಟ್‌ 26ರಂದು ಈತ ಬಾಲಕಿಯನ್ನು ತನ್ನ ಬಳಿಗೆ ಕರೆಸಿಕೊಂಡಿದ್ದ. ಕಬ್ಬಾಳಮ್ಮ ದೇಗುಲಕ್ಕೆ ಹೋಗೋಣವೆಂದು ಆಕೆಯನ್ನು ಕರೆದಿದ್ದ. ಆಕೆಯೂ ಬಂದಿದ್ದಳು. ಆಕೆಯನ್ನು ದೇವಾಲಯದ ಬದಲು ಬನ್ನೇರುಘಟ್ಟದ ಹತ್ತಿರವಿರುವ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಹೇಳಲಾಗಿದೆ.

ಇತ್ತ ಮನೆಯವರು ಬಾಲಕಿಗಾಗಿ ಕಾಯುತ್ತಿದ್ದರು. ಸಂಜೆಯಾದರು ಬಾಲಕಿಯ ಪತ್ತೆಯಿಲ್ಲದೆ ಇದ್ದಾಗ ಗಾಬರಿಗೊಂಡ ಅವರು ಹುಡುಕಾಟ ನಡೆಸಿದ್ದಾರೆ. ಪರಿಚಿತರು, ಆಕೆಯ ಗೆಳತಿಯರನ್ನು ಪ್ರಶ್ನಿಸಿದ್ದಾರೆ. ಕೊನೆಗೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈಕೆಯನ್ನು ಪೊಲೀಸರು ಬಳಿಕ ಹುಡುಕಾಡಿದ್ದಾರೆ.

ಅಪಹರಣ ಪ್ರಕರಣ ದಾಖಲಿಸಿಕೊಂಡು ನಾಪತ್ತೆಯಾದ ಬಾಲಕಿಯನ್ನು ಹುಡುಕಲಾಯಿತು. ಆಕೆ ಪತ್ತೆಯಾದ ಬಳಿಕ ಅವಳನ್ನು ವಿಚಾರಣೆ ನಡೆಸಲಾಯಿತು. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ಪೊಲೀಸರ ಮುಂದೆ ತಿಳಿಸಿದ್ದಾಳೆ. ಮನೋಜ್‌ ಮತ್ತು ಸುರೇಶ್‌ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯಿದೆಯಡಿ ಕೇಸ್‌ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಉದ್ಯಾನನಗರಿಯಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಳ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ನೀಡಿರುವ ಅಂಕಿಅಂಶಗಳ ಪ್ರಕಾರ, ದೆಹಲಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಇತರೆ ಎಲ್ಲಾ 19 ಮಹಾನಗರಗಳ ಪೈಕಿ ಒಟ್ಟು ಅಪರಾಧಗಳ ಶೇ 32.20 ರಷ್ಟಿದೆ.

ದೆಹಲಿ ನಂತರ ವಾಣಿಜ್ಯ ನಗರಿ ಮುಂಬೈನಲ್ಲಿ 5,543 ಪ್ರಕರಣಗಳು ವರದಿಯಾಗಿವೆ. ನಂತರದ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ 3,127 ಪ್ರಕರಣಗಳು ದಾಖಲಾಗಿವೆ. ಮುಂಬೈ ಮತ್ತು ಬೆಂಗಳೂರು 19 ಮಹಾನಗರಗಳ ಪೈಕಿ ಒಟ್ಟು ಅಪರಾಧಗಳಲ್ಲಿ ಕ್ರಮವಾಗಿ ಶೇ 12.76 ಮತ್ತು ಶೇ 7.2 ಹೊಂದಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ