logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಜಲಾಶಯ ನೀರಿನ ಮಟ್ಟ: ಕೆಆರ್‌ಎಸ್‌, ಹೇಮಾವತಿ, ಭದ್ರಾ, ತುಂಗಭದ್ರಾ, ಕಬಿನಿ, ಹಾರಂಗಿ, ಜಲಾಶಯ ಭರ್ತಿ; ಹೊರ ಹರಿವು ಹೆಚ್ಚಳ

ಕರ್ನಾಟಕ ಜಲಾಶಯ ನೀರಿನ ಮಟ್ಟ: ಕೆಆರ್‌ಎಸ್‌, ಹೇಮಾವತಿ, ಭದ್ರಾ, ತುಂಗಭದ್ರಾ, ಕಬಿನಿ, ಹಾರಂಗಿ, ಜಲಾಶಯ ಭರ್ತಿ; ಹೊರ ಹರಿವು ಹೆಚ್ಚಳ

D M Ghanashyam HT Kannada

Aug 02, 2024 08:12 AM IST

google News

ಕರ್ನಾಟಕ ಜಲಾಶಯಗಳ ನೀರಿನ ಮಟ್ಟ

  • Karnataka Dam Water Level Today August 2: ಕರ್ನಾಟಕದಲ್ಲಿ ಮಳೆ ಮುಂದುವರಿದಿದೆ. ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿಯೂ ಉತ್ತಮ ಮಳೆಯಾಗುತ್ತಿರುವ ಕಾರಣ ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಹೆಚ್ಚಳವಾಗಿದೆ. ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿ, ಭದ್ರಾ, ತುಂಗಭದ್ರಾ ಜಲಾಶಯ ಭರ್ತಿಯಾಗಿವೆ. ನದಿ ದಂಡೆಯ ಪ್ರದೇಶಗಳಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕ ಜಲಾಶಯಗಳ ನೀರಿನ ಮಟ್ಟ
ಕರ್ನಾಟಕ ಜಲಾಶಯಗಳ ನೀರಿನ ಮಟ್ಟ

ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಅವ್ಯಾಹತವಾಗಿ ಮುಂದುವರಿದಿದೆ. ಕರಾವಳಿ ಕರ್ನಾಟಕ, ಕರ್ನಾಟಕದ ದಕ್ಷಿಣ ಒಳನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ದಂಡೆ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅನೇಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ರಾಜ್ಯದ 14 ಪ್ರಮುಖ ಜಲಾಶಯಗಳ ಪೈಕಿ 7 ಭರ್ತಿಯಾಗಿದ್ದು, ನದಿಗೆ ನೀರು ಬಿಡಲಾಗಿದೆ.

ಕೇರಳದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಕಬಿನಿ ಜಲಾಶಯಕ್ಕೆ ನೀರು ಬೃಹತ್ ಪ್ರಮಾಣದಲ್ಲಿ ಹರಿದುಬರುತ್ತಿದೆ. ಈ ನದಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗಿರುವ ಕಾರಣ ಕೃಷ್ಣಾ ನದಿ ಮತ್ತು ಅದರ ಉಪನದಿಗಳು ಮೈದುಂಬಿಕೊಂಡಿವೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಕಾವೇರಿ ಮತ್ತು ಅದರ ಉಪನದಿಗಳು ತುಂಬಿ ಹರಿಯುತ್ತಿವೆ. ಕೆಆರ್‌ಎಸ್ ಬಹುತೇಕ ಭರ್ತಿಯಾಗಿದ್ದು, ಹೊರಹರಿವಿನ ಪ್ರಮಾಣ ಹೆಚ್ಚಿಸಲಾಗಿದೆ.

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 1-2, 2024

1) ಕೆಆರ್‌ಎಸ್ ಜಲಾಶಯ (ಕಾವೇರಿ)
ಗರಿಷ್ಠ ಮಟ್ಟ: 124.80 ಅಡಿ
ಇಂದಿನ ಮಟ್ಟ: 122.60 ಅಡಿ
ಒಳ ಹರಿವು: 1.12 ಲಕ್ಷ ಕ್ಯೂಸೆಕ್
ಹೊರ ಹರಿವು: 1 ಲಕ್ಷ ಕ್ಯೂಸೆಕ್

2) ಹಾರಂಗಿ ಜಲಾಶಯ
ಗರಿಷ್ಠ ಮಟ್ಟ: 2,859 ಅಡಿ
ಇಂದಿನ ಮಟ್ಟ: 2,854.83 ಅಡಿ
ಒಳ ಹರಿವು: 12,460 ಕ್ಯೂಸೆಕ್‌
ಹೊರ ಹರಿವು: 4,000 ಕ್ಯೂಸೆಕ್

3) ಕಬಿನಿ ಜಲಾಶಯ
ಗರಿಷ್ಠ ಮಟ್ಟ: 2,284 ಅಡಿ
ಇಂದಿನ ಮಟ್ಟ: 2,281.30
ಒಳ ಹರಿವು: 45,951 ಕ್ಯೂಸೆಕ್
ಹೊರ ಹರಿವು: 50,000

4) ಹೇಮಾವತಿ ಜಲಾಶಯ (ಗೊರೂರು)
ಗರಿಷ್ಠ ಮಟ್ಟ: 2,922
ಇಂದಿನ ಮಟ್ಟ: 2,919
ಒಳ ಹರಿವು: 43,106 ಕ್ಯೂಸೆಕ್
ಹೊರ ಹರಿವು: 45,210 ಕ್ಯೂಸೆಕ್

5) ಲಿಂಗನಮಕ್ಕಿ ಜಲಾಶಯ (ಶರಾವತಿ)
ಗರಿಷ್ಠ ಮಟ್ಟ: 1,819 ಅಡಿ
ಇಂದಿನ ಮಟ್ಟ: 1,814
ಒಳ ಹರಿವು: 53,061 ಕ್ಯೂಸೆಕ್
ಹೊರ ಹರಿವು: 15,236 ಕ್ಯೂಸೆಕ್

6) ಸೂಪಾ ಜಲಾಶಯ (ಕಾಳಿ)
ಗರಿಷ್ಠ ಮಟ್ಟ: 564 ಮೀಟರ್
ಇಂದಿನ ಮಟ್ಟ: 554.60
ಒಳ ಹರಿವು: 42,572 ಕ್ಯೂಸೆಕ್
ಹೊರ ಹರಿವು: 71.87 ಕ್ಯೂಸೆಕ್

7) ಮಾಣಿ ಜಲಾಶಯ (ವರಾಹಿ)
ಗರಿಷ್ಠ ಮಟ್ಟ: 595 ಅಡಿ
ಇಂದಿನ ಮಟ್ಟ: 586.90
ಒಳ ಹರಿವು: 5,949 ಕ್ಯೂಸೆಕ್
ಹೊರ ಹರಿವು: 0000

8) ತುಂಗಭದ್ರಾ ಡ್ಯಾಂ (ಹೊಸಪೇಟೆ)
ಗರಿಷ್ಠ ಮಟ್ಟ: 1,633 ಅಡಿ
ಇಂದಿನ ಮಟ್ಟ: 1,630.81
ಒಳ ಹರಿವು: 1.25 ಲಕ್ಷ ಕ್ಯೂಸೆಕ್
ಹೊರ ಹರಿವು: 1.54 ಲಕ್ಷ ಕ್ಯೂಸೆಕ್

9) ಮಲಪ್ರಭಾ
ಗರಿಷ್ಠ ಮಟ್ಟ: 2,079.5 ಅಡಿ
ಇಂದಿನ ಮಟ್ಟ: 2,075
ಒಳ ಹರಿವು: 14,968 ಕ್ಯೂಸೆಕ್
ಹೊರ ಹರಿವು: 13,394 ಕ್ಯೂಸೆಕ್

10) ಘಟಪ್ರಭಾ
ಗರಿಷ್ಠ ಮಟ್ಟ: 2,175 ಅಡಿ
ಇಂದಿನ ಮಟ್ಟ: 2,170.86
ಒಳ ಹರಿವು: 33,515 ಕ್ಯೂಸೆಕ್
ಹೊರ ಹರಿವು: 38,644 ಕ್ಯೂಸೆಕ್

11) ಭದ್ರಾ ಡ್ಯಾಂ
ಗರಿಷ್ಠ ಮಟ್ಟ: 2,175 ಅಡಿ
ಇಂದಿನ ಮಟ್ಟ: 2,155
ಒಳ ಹರಿವು: 56,152 ಕ್ಯೂಸೆಕ್
ಹೊರ ಹರಿವು: 65,724 ಕ್ಯೂಸೆಕ್

12) ಅಲಮಟ್ಟಿ (ಕೃಷ್ಣಾ)
ಗರಿಷ್ಠ ಮಟ್ಟ: 1,704.81 ಅಡಿ
ಇಂದಿನ ಮಟ್ಟ: 1,690
ಒಳ ಹರಿವು: 3.41 ಲಕ್ಷ ಕ್ಯೂಸೆಕ್
ಹೊರ ಹರಿವು: 3.52 ಲಕ್ಷ ಕ್ಯೂಸೆಕ್

13) ನಾರಾಯಣಪುರ (ಕೃಷ್ಣಾ)
ಗರಿಷ್ಠ ಮಟ್ಟ: 1,615 ಅಡಿ
ಇಂದಿನ ಮಟ್ಟ: 1,607
ಒಳ ಹರಿವು: 3.35 ಲಕ್ಷ ಕ್ಯೂಸೆಕ್
ಹೊರ ಹರಿವು: 3.25 ಲಕ್ಷ ಕ್ಯೂಸೆಕ್

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ