logo
ಕನ್ನಡ ಸುದ್ದಿ  /  ಕರ್ನಾಟಕ  /  Davanagere Crime: ಸಿಸಿ ಟಿವಿ ಕ್ಯಾಮೆರಾಕ್ಕೆ ಬಟ್ಟೆ ಮುಚ್ಚಿ ಬೈಕ್ ಕಳ್ಳತನ; ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಕಳ್ಳರ ಯತ್ನ

Davanagere Crime: ಸಿಸಿ ಟಿವಿ ಕ್ಯಾಮೆರಾಕ್ಕೆ ಬಟ್ಟೆ ಮುಚ್ಚಿ ಬೈಕ್ ಕಳ್ಳತನ; ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಕಳ್ಳರ ಯತ್ನ

HT Kannada Desk HT Kannada

Jul 25, 2023 10:58 AM IST

google News

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ಸಮೀಪ ಬೈಕ್‌ ಕಳ್ಳತನ.

    • ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ಸಮೀಪದ ಎಸ್ ಬಿಐ ಬ್ಯಾಂಕ್‌ನ ಮೇಲಿನ ಮನೆಯಲ್ಲಿ ವಾಸವಿರುವ ಕೆ.ಬಿ.ಶಿವಲಿಂಗಪ್ಪ ಎಂಬುವರ ಬೈಕ್‌ನ್ನು ಕಳ್ಳರು ಕಳುವು ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ಸಮೀಪ ಬೈಕ್‌ ಕಳ್ಳತನ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ಸಮೀಪ ಬೈಕ್‌ ಕಳ್ಳತನ.

ದಾವಣಗೆರೆ: ಸಿಸಿ ಟಿವಿ ಕ್ಯಾಮರಾಕ್ಕೆ ಬಟ್ಟೆ ಮುಚ್ಚಿ ಬೈಕ್ ಕಳ್ಳತನ ಮಾಡಿರುವ ಘಟನೆ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ಬಳಿಯೇ ನಡೆದಿದ್ದು, ಪೊಲೀಸ್ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸುವ ಐನಾತಿ ಕಳ್ಳರಿದ್ದಾರೆ ಎಂಬ ಆರೋಪಕ್ಕೆ ಈ ಘಟನೆ ಸಾಕ್ಷೀಕರಿಸಿದೆ.

ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ಸಮೀಪದ ಎಸ್ ಬಿಐ ಬ್ಯಾಂಕ್‌ನ ಮೇಲಿನ ಮನೆಯಲ್ಲಿ ವಾಸವಿರುವ ಕೆ.ಬಿ.ಶಿವಲಿಂಗಪ್ಪ ಎಂಬುವರ ಬೈಕ್‌ನ್ನು ಕಳ್ಳರು ಕಳುವು ಮಾಡಿದ್ದಾರೆ.

ಪ್ರತಿನಿತ್ಯದಂತೆ ಬ್ಯಾಂಕ್ ಮುಂದೆ ಶಿವಲಿಂಗಪ್ಪ ಅವರು ಬೈಕ್ ನಿಲ್ಲಿಸಿದ್ದರು. ಬ್ಯಾಂಕಿನ ಹೊರಗಡೆ ಹಾಕಿರುವ ಸಿಸಿ ಕ್ಯಾಮರಾವನ್ನು ಮುಂಚೆಯೇ ಗಮನಿಸಿದ್ದರಿಂದ ತಾವು ಕದಿಯುವ ಬೈಕ್ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಬಾರದು, ತಾವು ಕದ್ದಿರುವ ಸುಳಿವೂ ಸಿಗಬಾರದೆಂದು ರಾತ್ರಿ ಸಿಸಿ ಕ್ಯಾಮೆರಾಕ್ಕೆ ಕಳ್ಳರು ಬಟ್ಟೆ ಮುಚ್ಚಿ ಕಳ್ಳತನ ಮಾಡಿದ್ದಾರೆ.

ಬಸವಾಪಟ್ಟಣ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಘಟನೆ ನಡೆದಿರುವುದರಿಂದ ಪೊಲೀಸರ ನಿರ್ಲಕ್ಷ್ಯ ಎಂದು ಸ್ಥಳೀಯರು ಆರೋಪ ಮಾಡುತಿದ್ದಾರೆ. ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರು ಸಿಸಿ ಟಿವಿ ಕ್ಯಾಮರಾಕ್ಕೆ ಬಟ್ಟೆ ಮುಚ್ಚುವ ದೃಶ್ಯ ಸೆರೆಯಾಗಿರುವುದರಿಂದ ಪೊಲೀಸರು ಕಳ್ಳರಿಗೆ ಜಾಲ ಬೀಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ