logo
ಕನ್ನಡ ಸುದ್ದಿ  /  ಕರ್ನಾಟಕ  /  Davanagere News: ಜಾಂಡೀಸ್‌ಗೆ ಹೆದರಿ ಐದು ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ

Davanagere News: ಜಾಂಡೀಸ್‌ಗೆ ಹೆದರಿ ಐದು ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ

HT Kannada Desk HT Kannada

Oct 18, 2023 11:20 AM IST

google News

ಜಾಂಡೀಸ್‌ಗೆ ಹೆದರಿ ಐದು ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ

    • ಚನ್ನಗಿರಿ ತಾಲೂಕು ಹೊನ್ನೆಬಾಗಿ ಗ್ರಾಮದ ಕವಿತಾ(27 ವರ್ಷ) ಹಾಗೂ ಪುತ್ರಿ ನಿಹಾರಿಕ(5) ಮೃತ ದುರ್ದೈವಿಗಳು. ಮೃತ ತಾಯಿ-ಮಗಳು ಕಳೆದ ಶುಕ್ರವಾರದಿಂದ ಕಾಣೆಯಾಗಿದ್ದ ಬಗ್ಗೆ ದೂರು ದಾಖಲಾಗಿತ್ತು.
 ಜಾಂಡೀಸ್‌ಗೆ ಹೆದರಿ ಐದು ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ
ಜಾಂಡೀಸ್‌ಗೆ ಹೆದರಿ ಐದು ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ

ದಾವಣಗೆರೆ: ಜಾಂಡೀಸ್ ಖಾಯಿಲೆಗೆ ಹೆದರಿ ತನ್ನ ಐದು ವರ್ಷದ ಕರುಳಕುಡಿಯ ಜೊತೆಗೆ ತಾಯಿ ಚನ್ನಗಿರಿ ತಾಲೂಕಿನ ಶಾಂತಿಸಾಗರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ವರದಿಯಾಗಿದೆ.

ಚನ್ನಗಿರಿ ತಾಲೂಕು ಹೊನ್ನೆಬಾಗಿ ಗ್ರಾಮದ ಕವಿತಾ(27 ವರ್ಷ) ಹಾಗೂ ಪುತ್ರಿ ನಿಹಾರಿಕ(5) ಮೃತ ದುರ್ದೈವಿಗಳು. ಮೃತ ತಾಯಿ-ಮಗಳು ಕಳೆದ ಶುಕ್ರವಾರದಿಂದ ಕಾಣೆಯಾಗಿದ್ದ ಬಗ್ಗೆ ದೂರು ದಾಖಲಾಗಿತ್ತು. ನಂತರ ಕೆರೆಯಲ್ಲಿ ಸಿಕ್ಕ ಶವಗಳಿಂದ ಇಬ್ಬರ ಗುರುತು ಪತ್ತೆಯಾಗಿದ್ದು, ಗಂಡನಮನೆಯವರು ವರದಕ್ಷಿಣೆ ಕಿರುಕುಳ ನೀಡಿದ್ದರಿಂದಲೇ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕವಿತಾ ಪೋಷಕರು ಆರೋಪ ಮಾಡುತ್ತಿದ್ದಾರೆ.

ಕಳೆದ 6 ವರ್ಷಗಳ ಹಿಂದೆ ಮಂಜುನಾಥ್ ಎಂಬುವರಿಗೆ ಕವಿತಾಳನ್ನು ಕೊಟ್ಟು ವಿವಾಹ ಮಾಡಲಾಗಿತ್ತು. ಆದರೆ, ಪತಿಯ ಕುಟುಂಬದವರು ನಿರಂತರ ವರದಕ್ಷಿಣೆ ಕಿರುಕುಳ ನೀಡುತ್ತಿದ್ದುದರಿಂದ ಸಾಕಷ್ಟು ಬಾರಿ ರಾಜೀ ಪಂಚಾಯಿತಿಗಳು ಸಹ ನಡೆದಿದ್ದವು. ಈಗಲೂ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಕವಿತಾ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.

ಆದರೆ, ಕಳೆದ ಎರಡ್ಮೂರು ದಿನಗಳಿಂದ ಕವಿತಾ ಜಾಂಡೀಸ್ ಖಾಯಿಲೆಗೆ ತುತ್ತಾಗಿದ್ದಳು. ಅವಳು ಜಾಂಡೀಸ್‌ಗೆ ಹೆದರಿ ಮಗುವಿನೊಂದಿಗೆ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಪತಿಯ ಮನೆಯವರು ತಮ್ಮ ಮೇಲೆ ಬಂದಿರುವ ಆರೋಪವನ್ನು ತಳ್ಳಿಹಾಕುತ್ತಿದ್ದು, ನಾವಿಬ್ಬರು ಅನ್ಯೋನ್ಯವಾಗಿದ್ದೆವು. ನಮ್ಮ ನಡುವೆ ಯಾವುದೇ ಮನಸ್ಥಾಪ ಇರಲಿಲ್ಲ ಎಂದು ಮಂಜುನಾಥ್ ಕಡೆಯವರು ಸ್ಪಷ್ಟಪಡಿಸುತ್ತಿದ್ದಾರೆ.

ಕವಿತಾ ಮನೆಯಲ್ಲಿ ಡೆತ್‌ನೋಟ್ ಬರೆದಿಟ್ಟಿದ್ದು, ಸತ್ಯಾಸತ್ಯೆತೆ ಹೊರಬರಬೇಕಿದೆ. ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಾರೆ ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಈಗ ಏನೂ ತಿಳಿಯದ ಪುಟ್ಟಕಂದ ಇಹಲೋಕ ತ್ಯಜಿಸಿದ್ದು, ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ