Deadly Accident Near Mandya: ಸ್ವಿಫ್ಟ್ ಮೇಲೆರಗಿದ ಇನ್ನೋವಾ; ಭೀಕರ ಅಪಘಾತದಲ್ಲಿ ಐವರ ದುರ್ಮರಣ- ಅಪಘಾತ ಸ್ಥಳದ ಫೋಟೋಸ್ ಇಲ್ಲಿವೆ
Dec 12, 2022 03:30 PM IST
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಎ.ನಾಗತಿಹಳ್ಳಿ ಸಮೀಪ ಇನ್ನೋವಾ ಮತ್ತು ಸ್ವಿಫ್ಟ್ ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ದುರ್ಮರಣಕ್ಕೀಡಾಗಿದ್ದಾರೆ.
Deadly Accident Near Mandya: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಎ.ನಾಗತಿಹಳ್ಳಿ ಸಮೀಪ ಇನ್ನೋವಾ ಮತ್ತು ಸ್ವಿಫ್ಟ್ ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ದುರ್ಮರಣಕ್ಕೀಡಾಗಿದ್ದಾರೆ. ಐವರು ಗಂಭೀರ ಗಾಯಗೊಂಡಿದ್ದಾರೆ. ಈ ಅಪಘಾತದ ಫೋಟೋಸ್ ಮತ್ತು ವರದಿ ಇಲ್ಲಿದೆ.
ಮಂಡ್ಯ: ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಎ.ನಾಗತಿಹಳ್ಳಿ ಸಮೀಪ ಇನ್ನೋವಾ ಮತ್ತು ಮಾರುತಿ ಸ್ವಿಫ್ಟ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ದುರ್ಮರಣಕ್ಕೀಡಾಗಿದ್ದಾರೆ. ಇನ್ನೂ ಐವರು ಗಂಭೀರ ಗಾಯಗೊಂಡಿದ್ದಾರೆ.
ಈ ಅಪಘಾತ ಭಾನುವಾರ ರಾತ್ರಿ ಸಂಭವಿಸಿದ್ದು, ಮೃತಪಟ್ಟವರು ಹಾಸನ ಮತ್ತು ತಮಿಳುನಾಡು ಮೂಲದವರು. ಇನ್ನೋವಾ ಕಾರಿನಲ್ಲಿದ್ದವರು ಹಾಸನ ಮೂಲದವರಾದರೆ, ಸ್ವಿಫ್ಟ್‌ನಲ್ಲಿದ್ದವರು ತಮಿಳುನಾಡಿನವರು.
ಗಾಯಾಗಳನ್ನು ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಮೃತರನ್ನು ಹಾಸನ ಮೂಲದ ಶ್ರೀನಿವಾಸಮೂರ್ತಿ(74), ಜಯಂತಿ(60), ಪ್ರಭಾಕರ್ (75), ತಮಿಳುನಾಡಿನವರಾದ ಕಿಶೋರ್ ಮತ್ತು ಗಣೇಶ್ ಎಂದು ಗುರುತಿಸಲಾಗಿದೆ. ಹಾಸನ ಮೂಲದ ಅಚಲ್, ಲಕ್ಷ್ಮೀನಾರಾಯಣ್ ಹಾಗೂ ತಮಿಳುನಾಡು ಮೂಲದ ಗೌತಮ್, ಶಬರೀಶ್, ಕೆವಿನ್ ಗಂಭೀರ ಗಾಯಗೊಂಡವರು.
ಅಪಘಾತ ಸಂಭವಿಸಿದ್ದು ಹೇಗೆ?
ಇನ್ನೋವಾ ಕಾರು ಬೆಂಗಳೂರು ಕಡೆಯಿಂದ ಹಾಸನಕ್ಕೆ ಹೋಗುತ್ತಿತ್ತು. ಸ್ವಿಫ್ಟ್ ಕಾರು ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿತ್ತು. ರಾತ್ರಿ ಮಳೆಗೆ ರಸ್ತೆ ನೆನೆದಿತ್ತು. ಅತಿವೇಗದಲ್ಲಿದ್ದ ಇನ್ನೋವಾ ಕಾರು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್‌ಗೆ ಗುದ್ದಿ ವಿರುದ್ಧ ಭಾಗದ ರಸ್ತೆ ಮೇಲೆ ಸಂಚರಿಸುತ್ತಿದ್ದ ಸ್ವಿಫ್ಟ್ ಮೇಲೆ ಬಿದ್ದಿದೆ. ಈ ಭೀಕರ ಅಪಘಾತಕ್ಕೆ ಐವರು ಸ್ಥಳದಲ್ಲೇ ಮೃತಪಟ್ಟರು. ಗಾಯಗೊಂಡ ಐವರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇನ್ನೋವಾ ಕಾರಿನಲ್ಲಿದ್ದ ಹಾಸನ ಮೂಲದ ಐವರು, ಸಂಬಂಧಿಕರ ಮದುವೆಗೆ ಬೆಂಗಳೂರಿಗೆ ಹೋಗಿದ್ದರು. ವಿವಾಹ ಕಾರ್ಯದಲ್ಲಿ ಖುಷ್ ಖುಷಿಯಾಗಿ ಭಾಗವಹಿಸಿ ಊರಿಗೆ ವಾಪಸಾಗುತ್ತಿದ್ದರು.
ಸ್ವಿಫ್ಟ್ ಕಾರಿನಲ್ಲಿದ್ದ ತಮಿಳುನಾಡಿನ ಸ್ನೇಹಿತರು ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದರು. ಪ್ರವಾಸ ಮುಗಿಸಿ ತಮ್ಮೂರಿನತ್ತ ಹೋಗಲು ಬೆಂಗಳೂರು ಹೆದ್ದಾರಿ ಹಿಡಿದಿದ್ದರು.
ಇನ್ನೋವಾ ಕಾರಿನ ಚಾಲಕನ ಅಂದಾಜು ಮೀರಿ, ಮಳೆಯ ಕಾರಣ ತಿರುವಿನಲ್ಲಿ ನಿಯಂತ್ರಣ ತಪ್ಪಿದೆ. ಹೀಗಾಗಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.
ಈ ನಡುವೆ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಈ ಕುರಿತು ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ. ಬಿಂಡಿಗನವಿಲೆ ಠಾಣಾ ಸರಹದ್ದಿನ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಎ.ನಾಗತಿಹಳ್ಳಿ ಬಳಿ ಎರಡು ಕಾರುಗಳ ನಡುವೆ ಅಪಘಾತವಾಗಿ 05 ಜನ ಮೃತಪಟ್ಟಿದ್ದು, ಹಲವು ಮಂದಿಗೆ ಗಾಯವಾಗಿದೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಗಮನಿಸಬಹುದಾದ ಇತರೆ ವಿಚಾರಗಳು
Winter Special Tea: ಫುಲ್ ಚಳಿ ಅಲ್ವಾ? ಈ ಚಳಿಗೊಂದು ಚಹಾ ಸಿಕ್ಕರೆ!; ಈ ಚಳಿಗಾಲದಲ್ಲಿ ಈ 8 ಸ್ಪೆಷಲ್ ಟೀ ಟ್ರೈ ಮಾಡಿ!
Winter Special Tea: ಚಳಿಗಾಲ ಶುರುವಾಗಿದೆ. ಈಗ ಮುಂಜಾನೆ ಎದ್ದು ಹೊರಗೆ ಬಂದರೆ ಫುಲ್ ಚಳಿ ಅಲ್ವ? ಈ ಚಳಿಯಲ್ಲಿ ಒಂದು ಕಪ್ ಚಹಾ ಬೇಕು ಅಂತ ಅನ್ನಿಸೋದು ಸಹಜ. ಅಂದ ಹಾಗೆ ಈ ಸಲ ಚಳಿಗಾಲದಲ್ಲಿ ನೀವು ಈ 8 ಸ್ಪೆಷಲ್ ಚಹಾಗಳ ಸ್ವಾದ ಸ್ವವಿಯಲು ಪ್ರಯತ್ನಿಸಿ! ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ.
Re-KYC RBI rule and process: ಮರು ಕೆವೈಸಿ ಮಾಡಿಸಲು ಬ್ಯಾಂಕ್‌ಗೆ ಹೋಗಬೇಕಾಗಿಲ್ಲ; ಆರ್‌ಬಿಐ ನಿಯಮ ಏನು ಹೇಳುತ್ತೆ ಚೆಕ್ ಮಾಡಿ
Re-KYC RBI rule and process: ಮರು-ಕೆವೈಸಿ ಮಾಡಲು (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಮಾಡಲು ಬ್ಯಾಂಕ್‌ಗೆ ಭೇಟಿ ನೀಡುವ ಅಗತ್ಯವಿಲ್ಲ. ವಿಳಾಸ ಬದಲಾವಣೆಯ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಪ್ರಕ್ರಿಯೆಗಳನ್ನು ಆನ್‌ಲೈನ್‌ನಲ್ಲಿ ಇದನ್ನು ಮಾಡಬಹುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದರು. ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ.