logo
ಕನ್ನಡ ಸುದ್ದಿ  /  ಕರ್ನಾಟಕ  /  ದೇಶದಲ್ಲಿ ನಾವೆಲ್ಲಾ ಅತ್ಯಂತ ಕಠಿಣ ಪರಿಸ್ಥಿತಿ ಅನುಭವಿಸುತ್ತಿದ್ದೇವೆ, ಎಲ್ಲರೂ ನಿದ್ರೆಯಿಂದ ಎದ್ದು ದೇಶ ರಕ್ಷಿಸಿ; ಖ್ಯಾತ ಲೇಖಕ

ದೇಶದಲ್ಲಿ ನಾವೆಲ್ಲಾ ಅತ್ಯಂತ ಕಠಿಣ ಪರಿಸ್ಥಿತಿ ಅನುಭವಿಸುತ್ತಿದ್ದೇವೆ, ಎಲ್ಲರೂ ನಿದ್ರೆಯಿಂದ ಎದ್ದು ದೇಶ ರಕ್ಷಿಸಿ; ಖ್ಯಾತ ಲೇಖಕ

Prasanna Kumar P N HT Kannada

Sep 01, 2024 11:16 PM IST

google News

ಚಂದ್ರಶೇಖರ ಆಜಾದ್ ಜೀವನ ಆಧಾರಿತ ಕಾದಂಬರಿ ಅಜೇಯದ ಸುವರ್ಣ ಸಂಭ್ರಮ ಹಾಗೂ ವಾಸುದೇವ ಬಲವಂತ ಫಡಕೆ ಜೀವನ ಆಧಾರಿತ ಕಾದಂಬರಿ ಅದಮ್ಯಕ್ಕೂ 40 ವರ್ಷಾಚರಣೆ ಕಾರ್ಯಕ್ರಮ.

    • Book Release: ಮನೆ ಮನೆಗಳಲ್ಲಿ ದೇಶದ್ರೋಹಿಗಳು ತುಂಬಿ ತುಳುಕುತ್ತಿದ್ದಾರೆ. ಆದರೂ ನಾವಿನ್ನು ನಿದ್ರಾ ಸ್ಥಿತಿಯಲ್ಲಿದ್ದೇವೆ ಎಂದು ಖ್ಯಾತ ಲೇಖಕ ಬಾಬು ಕೃಷ್ಣ ಮೂರ್ತಿ ಹೇಳಿದ್ದಾರೆ.
ಚಂದ್ರಶೇಖರ ಆಜಾದ್ ಜೀವನ ಆಧಾರಿತ ಕಾದಂಬರಿ ಅಜೇಯದ ಸುವರ್ಣ ಸಂಭ್ರಮ ಹಾಗೂ ವಾಸುದೇವ ಬಲವಂತ ಫಡಕೆ ಜೀವನ ಆಧಾರಿತ ಕಾದಂಬರಿ ಅದಮ್ಯಕ್ಕೂ 40 ವರ್ಷಾಚರಣೆ ಕಾರ್ಯಕ್ರಮ.
ಚಂದ್ರಶೇಖರ ಆಜಾದ್ ಜೀವನ ಆಧಾರಿತ ಕಾದಂಬರಿ ಅಜೇಯದ ಸುವರ್ಣ ಸಂಭ್ರಮ ಹಾಗೂ ವಾಸುದೇವ ಬಲವಂತ ಫಡಕೆ ಜೀವನ ಆಧಾರಿತ ಕಾದಂಬರಿ ಅದಮ್ಯಕ್ಕೂ 40 ವರ್ಷಾಚರಣೆ ಕಾರ್ಯಕ್ರಮ.

ಧಾರವಾಡ: ನಾವೆಲ್ಲಾ ದೇಶದ ಪ್ರಜೆಗಳು. ದೇಶದ ಚರಿತ್ರೆಯಲ್ಲಿ ನಾವು ಅತ್ಯಂತ ಕಠಿಣ ಸ್ಥಿತಿಯನ್ನು ಅನುಭವಿಸುತ್ತಿದ್ದೇವೆ. ದೇಶದ ತುಂಬೆಲ್ಲ ಶತ್ರುಗಳು ತುಂಬಿಕೊಂಡಿದ್ದಾರೆ. ಮನೆ ಮನೆಗಳಲ್ಲಿ ದೇಶದ್ರೋಹಿಗಳು ತುಂಬಿ ತುಳುಕುತ್ತಿದ್ದಾರೆ. ಆದರೂ ನಾವಿನ್ನು ನಿದ್ರಾ ಸ್ಥಿತಿಯಲ್ಲಿದ್ದೇವೆ. ನಿದ್ರೆಯಿಂದ ಎಚ್ಚೆತ್ತುಕೊಂಡು ದೇಶವನ್ನು ರಕ್ಷಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಖ್ಯಾತ ಲೇಖಕ ಡಾ ಬಾಬು ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಚಂದ್ರಶೇಖರ ಆಜಾದ್ ಜೀವನ ಆಧಾರಿತ ಕಾದಂಬರಿ 'ಅಜೇಯ'ದ ಸುವರ್ಣ ಸಂಭ್ರಮ ಹಾಗೂ ವಾಸುದೇವ ಬಲವಂತ ಫಡಕೆ ಜೀವನ ಆಧಾರಿತ ಕಾದಂಬರಿ 'ಅದಮ್ಯ'ಕ್ಕೂ 40 ವರ್ಷಾಚರಣೆ ಪ್ರಯುಕ್ತ ರಾಷ್ಟ್ರೋತ್ಥಾನ ಬಳಗ ಧಾರವಾಡ, ವೀರ ಸಾವರಕರ ಬಳಗ ಧಾರವಾಡ ಸಂಸ್ಕಾರ ಭಾರತಿ ಸಹಯೋಗದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದು ಅನೇಕ ಹುತಾತ್ಮರ ಬಲಿದಾನದ ಫಲದಿಂದ. ಆ ಬಲಿದಾನಕ್ಕೆ ಅರ್ಥ ಬರಬೇಕಾದರೆ ಜನ ಜಾಗೃತರಾಗಿ ಸ್ವಾತಂತ್ರ್ಯವನ್ನು ಉಳಿಸಲು ದೇಶದ ಜನತೆ ಕಟಿಬದ್ಧರಾಗಬೇಕಾದ ಸಂದರ್ಭ ಬಂದಿದೆ ಎಂದು ಹೇಳಿದರು.

ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?

ಖ್ಯಾತ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಅಜೇಯ ಮತ್ತು ಅದಮ್ಯ ಎರಡು ಕ್ರಾಂತಿಕಾರಿ ಪುಸ್ತಕಗಳು ಭಾರತ ಇತಿಹಾಸದ ಕ್ರಾಂತಿಯನ್ನು ಕುರಿತು ಹೇಳುವ ಪುಸ್ತಕಗಳಾಗಿವೆ. ಡಾ ಬಾಬು ಕೃಷ್ಣಮೂರ್ತಿ ಅವರು ಆ ಎರಡು ಪುಸ್ತಕಗಳನ್ನು ಬರೆಯದಿದ್ದರೆ ಕನ್ನಡಿಗರಿಗೆ ಚಂದ್ರಶೇಖರ ಆಜಾದ್ ಮತ್ತು ವಾಸುದೇವ ಬಲವಂತ ಫಡಕೆ ಅವರ ಪರಿಚಯ ಆಗುತ್ತಿರಲಿಲ್ಲ‌ ಎಂದು ಹೇಳಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಮಾತನಾಡಿ, ದೇಶವನ್ನು ಮುನ್ನಡೆಸುವ ಜವಾಬ್ದಾರಿ ಮುಂದಿನ ಪೀಳಿಗೆಯ ಮೇಲಿದೆ. ಆ ಮುಂದಿನ ಪೀಳಿಗೆಯಲ್ಲಿ ದೇಶಾಭಿಮಾನ ಮೂಡಿಸುವ ಮಹತ್ತರ ಕಾರ್ಯವನ್ನು ಸಾಹಿತ್ಯ ಕೃತಿಗಳು ಮಾಡುತ್ತಿವೆ ಎಂದರು. ರಾಷ್ಟ್ರೋತ್ಥಾನ ಸಾಹಿತ್ಯ ವಿಭಾಗದ ಸಂಪಾದಕ ವಿಘ್ನೇಶ್ವರ ಭಟ್ಟ,. ಹಿರಿಯ ಸಾಹಿತಿಗಳು, ರಾಷ್ಟ್ರೋತ್ಥಾನ ಶಾಲೆಗಳ ಪ್ರಾಚಾರ್ಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ