Dharwad News: ಆರೋಗ್ಯ ಕುಟುಂಬ ಕಲ್ಯಾಣದ ಪ್ರಗತಿ ಕಾರ್ಯ ಪರಿಶೀಲಿಸಿದ ಡಬ್ಲೂಎಚ್ಒ ತಂಡ; ಮಾನಸಿಕ ಆರೋಗ್ಯ ವಿಭಾಗದ ಪ್ರಗತಿ ಪರಿಶೀಲನೆ
Aug 14, 2023 02:04 PM IST
ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಭೇಟಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು.
- ವಿಶ್ವ ಸಂಸ್ಥೆಯ ಜಿನಿವಾದ ಮೆಂಟಲ್ ಹೆಲ್ತ್ ಏಮರ್ಜೇನ್ಸಿ ಘಟಕದ ಕ್ಲಿನಿಕಲ್ ಸೈಕಲಾಜಿಸ್ಟ ಡಾ. ಜೇಮ್ಸ್ ಅಂಡರಹಿಲ್, ಸೈಕಿಯಾಟ್ರಿಸ್ಟ ಡಾ. ಸುದಿಪ್ತೂಚಟರ್ಜಿ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬೇಟಿ ನೀಡಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕಾರ್ಯಚಟುವಟಿಕೆ ಹಾಗೂ ಟೆಲಿಮನಸ್ ಉಚಿತ ಸಹಾಯವಾಣಿ ಉಪಯುಕ್ತತೆಯ ಕುರಿತಾಗಿ ಮಾಹಿತಿ ಪಡೆದರು.
ಧಾರವಾಡ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ, ಮಾನಸಿಕ ಆರೋಗ್ಯ ಕಾರ್ಯಕ್ರಮದ ಪ್ರಗತಿ ಪರಿಶೀಲನೆಯನ್ನು ಶುಕ್ರವಾರ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಪರಿಶೀಲಿಸಿದರು.
ವಿಶ್ವ ಸಂಸ್ಥೆಯ ಜಿನಿವಾದ ಮೆಂಟಲ್ ಹೆಲ್ತ್ ಏಮರ್ಜೇನ್ಸಿ ಘಟಕದ ಕ್ಲಿನಿಕಲ್ ಸೈಕಲಾಜಿಸ್ಟ ಡಾ. ಜೇಮ್ಸ್ ಅಂಡರಹಿಲ್, ಸೈಕಿಯಾಟ್ರಿಸ್ಟ ಡಾ. ಸುದಿಪ್ತೂಚಟರ್ಜಿ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬೇಟಿ ನೀಡಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕಾರ್ಯಚಟುವಟಿಕೆ ಹಾಗೂ ಟೆಲಿಮನಸ್ ಉಚಿತ ಸಹಾಯವಾಣಿ ಉಪಯುಕ್ತತೆಯ ಕುರಿತಾಗಿ ಮಾಹಿತಿ ಪಡೆದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪಾಟೀಲ ಶಶಿ ಅವರು ಮಾನಸಿಕ ಆರೋಗ್ಯ ಕಾರ್ಯಕ್ರಮದ ಬಗ್ಗೆ ವಿವರಿಸಿ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಮನೋಚೈತನ್ಯ ಕಾರ್ಯಕ್ರಮದಲ್ಲಿ ಉಚಿತ ಚಿಕಿತ್ಸೆ ಶಿಬಿರವನ್ನು ಎಲ್ಲಾ ತಾಲ್ಲೂಕ ಆಸ್ಪತ್ರೆಗಳು ಹಾಗೂ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಸುತ್ತಿದ್ದು ಔಷಧಿಗಳ ಸೌಲಭ್ಯವೂ ಕೂಡ ಇದೆ ಎಂದರು.
ಟೆಲಿಮನಸ್ ಸೇವೆಯ ಸೌಲಭ್ಯವನ್ನು ಹಾಗೂ ಸಹಾಯವಾಣಿಯನ್ನು 1800-89-14416 ಈ ಟೋಲ್ ಪ್ರೀನಂಬರನ್ನು ಸಮುದಾಯದಲ್ಲಿ ಜಾಗ್ರತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಾನಸಿಕ ಆರೋಗ್ಯದ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿ ಡಾ. ಎಸ್. ಬಿಕಳಸೂರಮಠ ಅವರು ಈ ಎಲ್ಲಾ ಕಾರ್ಯಚಟುವಟಿಕೆಗಳನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಮನೋವೈಧ್ಯೆ ಡಾ. ವೈಶಾಲಿ.ಎನ್.ಹೆಗಡೆ ಅವರು ಮಾನಸಿಕ ಆರೋಗ್ಯ ಚಟುವಟಿಕೆಗಳ ಕುರಿತಾಗಿ ವರದಿ ನೀಡಿದರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ ಚಟುವಟಿಕೆಗಳ ಬಗ್ಗೆ, ಚಿಕಿತ್ಸೆ ಸೌಲಭ್ಯದ ಬಗ್ಗೆ ಹಾಗೂ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ತಂಡದವರೂಂದಿಗೆ ನಿಮ್ಹಾನ್ಸ ಡಾ. ಸುರೇಶ ಹಾಗೂ ಡಾ. ಮಂಜುನಾಥ ಮನೋವೈದ್ಯರು ಹಾಗೂ ಧಾರವಾಡ ಡಿಮ್ಹಾನ್ಸ್ಸ ಸಂಸ್ಥೆಯ ಡಾ. ಸುಧೀಂದ್ರ ಹುದ್ದಾರ ಮತ್ತು ಡಾ. ಶ್ರೀನಿವಾಸ ಮನೋವೈದ್ಯರು ಹಾಗೂ ಡಿ.ಎಮ್.ಎಚ್.ಪಿ ಎಲ್ಲ ಸಿಬ್ಬಂದಿ ಭಾಗಿಯಾಗಿದ್ದರು.