logo
ಕನ್ನಡ ಸುದ್ದಿ  /  ಕರ್ನಾಟಕ  /  E-buses By 2030: ರಾಜ್ಯದಲ್ಲಿ 2030ರೊಳಗೆ ಸಾರಿಗೆಗೆ ಇ-ಬಸ್‌; ಸದನದಲ್ಲಿ ಸಚಿವ ಶ್ರೀರಾಮುಲು

E-Buses by 2030: ರಾಜ್ಯದಲ್ಲಿ 2030ರೊಳಗೆ ಸಾರಿಗೆಗೆ ಇ-ಬಸ್‌; ಸದನದಲ್ಲಿ ಸಚಿವ ಶ್ರೀರಾಮುಲು

HT Kannada Desk HT Kannada

Sep 14, 2022 07:43 PM IST

google News

ಸಾರಿಗೆ ಸಂಸ್ಥೆಯ ಎಲ್ಲ 35,000 ಬಸ್‌ಗಳನ್ನು ಇಲೆಕ್ಟ್ರಿಕ್‌ ಬಸ್‌ (E-Buses by 2030)ಗಳನ್ನಾಗಿ ಪರಿವರ್ತಿಸಲಾಗುವುದು ಎಂದು ವಿಧಾನಮಂಡಲ ಅಧಿವೇಶನದಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

  • Karnataka Transport Minister B Sriramulu: ವಿಧಾನಮಂಡಲ ಅಧಿವೇಶನದಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾತನಾಡುತ್ತ, ಸಾರಿಗೆ ಸಂಸ್ಥೆಯ ಎಲ್ಲ 35,000 ಬಸ್‌ಗಳನ್ನು ಇಲೆಕ್ಟ್ರಿಕ್‌ ಬಸ್‌ (E-Buses by 2030)ಗಳನ್ನಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು. 

ಸಾರಿಗೆ ಸಂಸ್ಥೆಯ ಎಲ್ಲ 35,000 ಬಸ್‌ಗಳನ್ನು ಇಲೆಕ್ಟ್ರಿಕ್‌ ಬಸ್‌ (E-Buses by 2030)ಗಳನ್ನಾಗಿ ಪರಿವರ್ತಿಸಲಾಗುವುದು ಎಂದು ವಿಧಾನಮಂಡಲ ಅಧಿವೇಶನದಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಸಾರಿಗೆ ಸಂಸ್ಥೆಯ ಎಲ್ಲ 35,000 ಬಸ್‌ಗಳನ್ನು ಇಲೆಕ್ಟ್ರಿಕ್‌ ಬಸ್‌ (E-Buses by 2030)ಗಳನ್ನಾಗಿ ಪರಿವರ್ತಿಸಲಾಗುವುದು ಎಂದು ವಿಧಾನಮಂಡಲ ಅಧಿವೇಶನದಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಬೆಂಗಳೂರು: ರಾಜ್ಯದ ಸಾರಿಗೆ ಸಂಸ್ಥೆಯ ಎಲ್ಲ 35,000 ಬಸ್‌ಗಳನ್ನು 2030ರ ಒಳಗೆ ಇ-ಬಸ್‌ಗಳನ್ನಾಗಿ ಪರಿವರ್ತಿಸಲಾಗುವುದು (E-Buses by 2030) ಎಂದು ರಾಜ್ಯ ಸಾರಿಗೆ ಸಚಿವ ಬಿ. ಶ್ರೀರಾಮುಲು (Karnataka Transport Minister B Sriramulu) ಬುಧವಾರ ಹೇಳಿದರು.

ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಶ್ರೀರಾಮುಲು, ಪ್ರಸ್ತುತ 35,000 ಬಸ್‍ಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ದಿನೇದಿನೆ ಡೀಸೆಲ್ ದರ ಹೆಚ್ಚಾಗುತ್ತಿದೆ. ಆದ್ದರಿಂದ ನಿರ್ವಹಣೆ ಮಾಡುವುದೇ ಸವಾಲು. ಸಾರಿಗೆ ಸಂಸ್ಥೆಗಳಿಗೆ ಬಹಳ ನಷ್ಟವಾಗುತ್ತಿದೆ. ಆದ್ದರಿಂದ ಎಲ್ಲ ಬಸ್‌ಗಳೂ ಇಲೆಕ್ಟ್ರಿಕ್‌ ಬಸಗಳಾದರೆ ನಾವು ಲಾಭ ಮಾಡಬಹುದು. ಈ ಸಂಬಂಧ ಮಾತುಕತೆ ಪ್ರಗತಿಯಲ್ಲಿದೆ ಎಂದರು.

ಡೀಸೆಲ್ ಬಸ್‌ಗಳಿಗೆ ಪ್ರತಿ ಕಿ.ಮೀಗೆ 68.53 ರೂ. ವೆಚ್ಚ ತಗಲುತ್ತಿದೆ ಎಂಬುದನ್ನು ವಿವರಿಸಿದ ಸಚಿವ ಶ್ರೀರಾಮುಲು, ನಮ್ಮ ಎಲ್ಲ ಬಸ್‌ಗಳು 2030 ರ ವೇಳೆಗೆ ಇಲೆಕ್ಟ್ರಿಕ್ ಆಗಬೇಕು ಎಂಬುದು ನಮ್ಮ ಪ್ರಯತ್ನ. 2030 ರ ವೇಳೆಗೆ ಎಲ್ಲ 35,000 ಬಸ್‌ಗಳನ್ನು ಎಲೆಕ್ಟ್ರಿಕ್‌ಗೆ ಪರಿವರ್ತಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಹೇಳಿದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಇಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸುವುದಿಲ್ಲ. ಆದರೆ ಸ್ಮಾರ್ಟ್ ಸಿಟಿ ಯೋಜನೆಯಡಿ ಬಿಎಂಟಿಸಿ ಡಿಸೆಂಬರ್ 2021 ರಿಂದ 'ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್' ಅಡಿಯಲ್ಲಿ 12 ವರ್ಷಗಳ ಕಾಲ ಗುತ್ತಿಗೆ ಆಧಾರದ ಮೇಲೆ 90 ಎಲೆಕ್ಟ್ರಿಕ್ ಬಸ್‌ಗಳನ್ನು ನಿರ್ವಹಿಸುತ್ತಿದೆ. ಈ ಬಸ್‌ಗಳ ವೆಚ್ಚ ಪ್ರತಿ ಕಿಲೋಮೀಟರ್ (ಕಿಮೀ) 64.67 ರೂ. ಆಗಿದೆ. ಇಂಧನ ವೆಚ್ಚದ ಉಳಿತಾಯಕ್ಕಾಗಿ ಇವುಗಳನ್ನು ಖರೀದಿ ಮಾಡಿದ್ದೇವೆ. ಕೇಂದ್ರ ಸರ್ಕಾರವು ಸೇಮ್2 ಯೋಜನೆಯಡಿ 300 ವಿದ್ಯುತ್ ಚಾಲಿತ ಬಸ್‍ಗಳನ್ನು ಖರೀದಿಸಲ ಅನುಮತಿ ನೀಡಿತ್ತೆಂದು ಸಚಿವರು ಹೇಳಿದರು.

ಈ ಪೈಕಿ 75 ಬಸ್‍ಗಳು ಈಗಾಗಲೇ ಕಾರ್ಯಾಚರಣೆ ನಡೆಸುತ್ತಿವೆ. ಪ್ರತಿ ಕಿ.ಮೀ ವೆಚ್ಚವೂ 61.90 ರೂ.ಆಗಿದೆ. ಉಳಿದಿರುವ 225 ಬಸ್‍ಗಳು ಶೀಘ್ರದಲ್ಲೇ ಲಭ್ಯವಾಗಲಿವೆ. ಸಿಇಎಸ್‍ಎಲ್ ಮುಖಾಂತರ ಕೇಂದ್ರ ಸರ್ಕಾರ ಸೇಮ್2 ಯೋಜನೆಯಲ್ಲಿ 921 ವಿದ್ಯುತ್ ಬಸ್‍ಗಳ ಕಾರ್ಯಾಚರಣೆ ನಡೆಸಲು ಆದೇಶ ಕೊಟ್ಟಿದೆ. ಪ್ರತಿಯೊಂದು ಕಿ.ಮೀಗೆ 54 ರೂ. ವೆಚ್ಚ ತಗಲಿದೆ. ಬಿಎಂಟಿಸಿಯಲ್ಲಿ ಖರೀದಿ ಮಾಡಿರುವ ಬಸ್‍ಗಳ ನಿರ್ವಹಣೆಯನ್ನು ಕಂಪನಿಯವರು ನಿರ್ವಹಿಸುತ್ತಾರೆ ಎಂದು ಅವರು ವಿವರ ನೀಡಿದರು.

ಮೇಲಿನ ಆದೇಶದ ಜತೆಗೆ, ಈ ವರ್ಷ ಆಗಸ್ಟ್ 17 ರಂದು ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ (CESL) ಮೂಲಕ 921 ಎಲೆಕ್ಟ್ರಿಕ್ ಬಸ್‌ಗಳನ್ನು ಚಲಾಯಿಸಲು FAME II ಯೋಜನೆಯಡಿ ಆದೇಶವನ್ನು ಹೊರಡಿಸಲಾಗಿದೆ. ಈ ಬಸ್‌ಗಳ ವೆಚ್ಚ ಪ್ರತಿ ಕಿ.ಮೀ 54 ರೂಪಾಯಿ ಎಂದು ಅವರು ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ