ED Raids in Bengaluru: ಚೀನಾ ಮೂಲದ ಲೋನ್ ಕಂಪನಿಗಳ ಮೇಲೆ ಇಡಿ ದಾಳಿ, ಐದು ಕಡೆ ಶೋಧ, 78 ಕೋಟಿ ರೂ. ವಶ
Oct 22, 2022 12:46 PM IST
ಜಾರಿ ನಿರ್ದೇಶನಾಲಯ (Enforcement Directorate)
- ED Raids in Bengaluru: ಬೆಂಗಳೂರಿನಲ್ಲಿ ಇಂದು ಚೀನಾ ಮೂಲದ ಲೋನ್ ಕಂಪನಿಗಳ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಐದು ಕಡೆ ಶೋಧ ಕಾರ್ಯ ನಡೆಸಿ, 78 ಕೋಟಿ ರೂಪಾಯಿ ವಶಪಡಿಸಿರುವುದಾಗಿ ಇಡಿ ಹೇಳಿದೆ.
ಬೆಂಗಳೂರು: ಚೀನಾ ಮೂಲದ ಲೋನ್ ಕಂಪನಿಗಳು ಭಾರತೀಯ ಗ್ರಾಹಕರನ್ನು ವಂಚಿಸಿ, ಶೋಷಣೆ ಮಾಡುತ್ತಿರುವ ವಿಚಾರ ಈಗಾಗಲೇ ಬಹಿರಂಗವಾಗಿರುವಂಥದ್ದು. ಈಗಾಗಲೇ ಚೀನಾ ಮೂಲದ ಲೋನ್ ಆಪ್‌ಗಳಿಗೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ.
ಇದರ ಮುಂದುವರಿದ ಭಾಗವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಬೆಂಗಳೂರು ಮಹಾನಗರದ ಐದು ಕಡೆ ಅಕ್ಟೋಬರ್ 19ರಂದು ದಾಳಿ ನಡೆಸಿತ್ತು. ದಾಳಿ ವೇಳೆ ಸಿಕ್ಕಿದ 78 ಕೋಟಿ ರೂಪಾಯಿ ವಶಪಡಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಕ್ಷಿಪ್ರ ಸಾಲ ನೀಡಿಕೆ ಆಪ್ ಮೂಲಕ ಭಾರತೀಯರಿಗೆ ಸಾಲ ನೀಡಿ ಬಳಿಕ, ಅಧಿಕ ಬಡ್ಡಿ ವಸೂಲಿ ಮಾಡುವ ದಂಧೆ ಇದಾಗಿದ್ದು, ಸಾಕಷ್ಟು ದೂರುಗಳು ದಾಖಲಾಗಿದ್ದವು. ಈ ರೀತಿ ದೋಚಿದ ಹಣವನ್ನು ಈ ಕಂಪನಿಗಳು ಚೀನಾಕ್ಕೆ ವರ್ಗಾವಣೆ ಮಾಡುತ್ತಿದ್ದವು ಎಂಬ ಮಾಹಿತಿ ಬಹಿರಂಗವಾಗಿತ್ತು.
ಸಿಐಡಿ ಸೈಬರ್ ಕ್ರೈಂ ವಿಭಾಗದಲ್ಲಿ ಈ ದಂಧೆಗೆ ಸಂಬಂಧಿಸಿ 18 FIR ದಾಖಲಾಗಿದ್ದವು. ಕೇಸ್ ಆಧಾರದ ಮೇಲೆ ತನಿಖೆ ನಡೆಸಿದಾಗ ಎಲ್ಲಾ ಲೋನ್ ಆ್ಯಪ್ ಗಳ ಮೂಲ ಚೀನಾವೆಂದು ಪತ್ತೆಯಾಗಿತ್ತು. ಭಾರತೀಯ ಮೂಲದ ಉದ್ಯೋಗಿಗಳನ್ನೇ ಕಂಪನಿ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಕ್ಷಿಪ್ರವಾಗಿ ಯಾವುದೇ ಹೆಚ್ಚಿನ ದಾಖಲೆಗಳು ಇಲ್ಲದೆ, ಕಡಿಮೆ ಸಾಲ ನೀಡಿ ಅಧಿಕ ಬಡ್ಡಿ ವಸೂಲಿ ಮಾಡುವ ದಂಧೆ ಇದು. ವಸೂಲಿಯಾದ ಹಣವನ್ನ ಅಕ್ರಮವಾಗಿ ವಿದೇಶಿ ಖಾತೆಗಳಿಗೆ ವಿಶೇಷವಾಗಿ ಚೀನಾಕ್ಕೆ ವರ್ಗಾಯಿಸಲಾಗುತ್ತಿತ್ತು ಎಂಬ ಅಂಶ ಬಂಧಿತರಿಂದ ಬಹಿರಂಗವಾಗಿದೆ.
ಈಗ್ಗೆ ಒಂದು ವಾರದ ಹಿಂದೆ ಭಾರತ, ಚೀನಾ, ತೈವಾನ್, ಕಾಂಬೋಡಿಯಾ ಮತ್ತು ಯುಎಇಯಲ್ಲಿ 903 ಕೋಟಿ ರೂಪಾಯಿ ಮೊತ್ತದ ಚೀನಾ ಹೂಡಿಕೆ ವಂಚನೆಯನ್ನು ಹೈದರಾಬಾದ್ ಪೊಲೀಸರು ಭೇದಿಸಿದ್ದರು. ಒಬ್ಬ ಚೈನೀಸ್ ಮತ್ತು ತೈವಾನ್ ಪ್ರಜೆ ಸೇರಿ ಹತ್ತು ಜನರನ್ನು ಬಂಧಿಸಲಾಗಿತ್ತು.
ಗಮನಸೆಳೆಯುವ ವಿಚಾರಗಳಿವು
ಚಿನ್ನದ ದರ 10 ಗ್ರಾಮಿಗೆ 193 ರೂಪಾಯಿ ಇತ್ತಾ!
ಹಾಗೆ ಒಂದು ಲೆಕ್ಕಚಾರ. ಮೊನ್ನೆ ಅಕ್ಟೋಬರ್ 19 ರಂದು, ಭಾರತದಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 50,300 ರೂ. ಇತ್ತು. 1971ರಲ್ಲಿ ಈ ಹಣಕ್ಕೆ ಇನ್ನೂ 2590 ಗ್ರಾಂ ಚಿನ್ನ ಬರ್ತಿತ್ತು ! ವರ್ಷದಿಂದ ವರ್ಷಕ್ಕೆ ಚಿನ್ನದ ದರ ಏರಿದ ಪರಿ ಇದು! ಭಾರತದಲ್ಲಿ ಕಳೆದ 5 ದಶಕದ ಚಿನ್ನದ ಬೆಲೆಯ ಟ್ರೆಂಡ್ ಹೇಗಿತ್ತು ಗಮನಿಸೋಣ. Historical Gold rate trend in India: 71ರ ʻದರʼದಲ್ಲಿ ಇಂದು ಚಿನ್ನ ಖರೀದಿ ಸಾಧ್ಯವಾಗಿದ್ದರೆ!- ಚಿನ್ನದ ದರದ ಟ್ರೆಂಡ್ ಹೀಗಿತ್ತು ನೋಡಿ!
ಚಿನ್ನಾಭರಣ ದುಬೈನಲ್ಲಿ ಖರೀದಿಸಿ ಭಾರತಕ್ಕೆ ಯಾಕೆ ತರಬಾರದು?
Gold Price in Dubai Vs India: ಚಿನ್ನ ಖರೀದಿಸೋದಾದರೆ ದುಬೈಗೇ ಹೋಗಬೇಕು. ಅಲ್ಲೇ ಚೀಪ್ ಆಂಡ್ ಬೆಸ್ಟ್ ಅನ್ನೋ ಕಲ್ಪನೆ ಹಲವರಲ್ಲಿ ಬಹುಕಾಲದಿಂದ ಇದೆ. ಯಾವಾತ್ತಾದರೂ ವಾಸ್ತವಿಕ ನೆಲೆಗಟ್ಟಿನಲ್ಲಿ ಚಿನ್ನದ ದರ ಎಲ್ಲಿ ಅಗ್ಗ ಅಂತ ಪರಿಶೀಲಿಸಿದ್ದೀರಾ? ಇಲ್ಲ ಅನ್ನೋದಾದರೆ ಈ ವರದಿ ಗಮನಿಸಿ. Gold Price in Dubai Vs India: ಚಿನ್ನ ಎಲ್ಲಿ ಅಗ್ಗ ಭಾರತದಲ್ಲಾಅಥವಾ ದುಬೈನಲ್ಲಾ? ಗೆಸ್ ಮಾಡಿ ನೋಡೋಣ. ಲೆಕ್ಕಾಚಾರದ ವಿವರ ಇಲ್ಲಿದೆ ನೋಡಿ