ಕಾಮೆಡ್-ಕೆ ಫಲಿತಾಂಶ; ಎಂಜಿನಿಯರಿಂಗ್ ಸೀಟ್ ಪಡೆಯಲು ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಏನೆಲ್ಲಾ ದಾಖಲೆ ಸಲ್ಲಿಸಬೇಕು
May 24, 2024 06:53 PM IST
ಕಾಮೆಡ್-ಕೆ ಫಲಿತಾಂಶ; ಎಂಜಿನಿಯರಿಂಗ್ ಸೀಟ್ ಪಡೆಯಲು ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಏನೆಲ್ಲಾ ದಾಖಲೆ ಸಲ್ಲಿಸಬೇಕು ಅನ್ನೋದರ ಮಾಹಿತಿ ಇಲ್ಲಿದೆ. (ಫೋಟೊ-ಫೈಲ್)
ಕಾಮೆಡ್-ಕೆ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದು ಎಂಜಿನಿಯರಿಂಗ್ ಸೇರಬಯಸುವ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಇಂಜಿನಿಯರಿಂಗ್ ಸೀಟ್‌ಗಾಗಿ ಏನೆಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ಅನ್ನೋದರ ವಿವರಗಳನ್ನು ಇಲ್ಲಿ ನೋಡೋಣ.
ಬೆಂಗಳೂರು: ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (COMED K) ನಡೆಸಿರುವ 2024ರ ಪ್ರವೇಶ ಪರೀಕ್ಷೆಯ (Entrance Exam 2024) ಫಲಿತಾಂಶ ಹೊರಬಿದ್ದಿದ್ದು, ಕರ್ನಾಟಕ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಅಗ್ರ 100 ರ‍್ಯಾಂಕ್ ಪಡೆದವರಲ್ಲಿ 58 ರ‍್ಯಾಂಕ್‌ಗಳನ್ನು ಕರ್ನಾಟಕದ ವಿದ್ಯಾರ್ಥಿಗಳು ಪಡೆದಿದ್ದಾರೆ. ಟಾಪ್ 10 ರ‍್ಯಾಂಕ್ ಪಡೆದವರಲ್ಲಿ ಬೆಂಗಳೂರಿನ 8 ವಿದ್ಯಾರ್ಥಿಗಳು ಇರುವುದು ಮತ್ತೊಂದು ವಿಷಯವಾಗಿದೆ. ಇಂದು (ಮೇ 24, ಶುಕ್ರವಾರ) ಮಧ್ಯಾಹ್ನ 3 ಗಂಟೆಗೆ ಕಾಮೆಡ್-ಕೆ ಫಲಿತಾಂಶ ಬಂದಿದ್ದು, ಕೌನ್ಸಿಲಿಂಗ್‌ಗಾಗಿ ದಾಖಲೆಗಳನ್ನು ಅಪ್ಲೋಡ್ ಮಾಡುವ ಪ್ರಕ್ರಿಯೆ ಸಂಜೆ 4 ರಿಂದಲೇ ಶುರುವಾಗಿದೆ.
ಉತ್ತಮ ರ‍್ಯಾಂಕ್ ಪಡೆದು ಎಂಜಿನಿಯರಿಂಗ್ ಸೇರಬಯಸುವ ಕಲ್ಯಾಣ ಕರ್ನಾಟಕ ಭಾಗದ (ಕೆಕೆಆರ್) ಅಭ್ಯರ್ಥಿಗಳು ಇಂಜಿನಿಯರಿಂಗ್ ಸೀಟ್‌ಗಾಗಿ ಏನೆಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ಅನ್ನೋದರ ವಿವರಗಳನ್ನು ಇಲ್ಲಿ ನೋಡೋಣ.
ಎಂಜಿನಿಯರಿಂಗ್ ಸೀಟ್‌ಗಾಗಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಅಪ್ಲೋಡ್ ಮಾಡಬೇಕಾದ ದಾಖಲೆಗಳು
ಅಭ್ಯರ್ಥಿಯ ಮೂಲ ಐಡಿ ಪುರಾವೆ: ಪ್ಯಾನ್/ಪಾಸ್‌ಪೋರ್ಟ್/ವೋಟರ್ ಐಡಿ/ ಡ್ರೈವಿಂಗ್ ಲೈಸೆನ್ಸ್/ ಯಾವುದೇ ಇತರ ಸರ್ಕಾರಿ ಐಡಿ ಪುರಾವೆ (ಅರ್ಜಿ ನಮೂನೆಯಲ್ಲಿ ಘೋಷಿಸಿದಂತೆ/ಪರೀಕ್ಷೆಯ ಸಮಯದಲ್ಲಿ ಬಳಸಿದ)ಗಳನ್ನು ಅಪ್ಲೋಡ್ ಮಾಡಬೇಕು
ಅಭ್ಯರ್ಥಿಯ ಜನ್ಮ ದಿನಾಂಕ ಪುರಾವೆ: ಪ್ಯಾನ್/ಪಾಸ್‌ಪೋರ್ಟ್/ವೋಟರ್ ಐಡಿ/ ಡ್ರೈವಿಂಗ್ ಲೈಸೆನ್ಸ್/ ಯಾವುದೇ ಇತರ ಸರ್ಕಾರಿ ಐಡಿ ಪುರಾವೆ/ 10ನೇ ಅಂಕಗಳ ಕಾರ್ಡ್/ /ಜನನ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.
ಪಿಯುಸಿ/12ನೇ ತರಗತಿ ಅಥವಾ ತತ್ಸಮಾನ ಅಂಕಗಳ ಕಾರ್ಡ್: ಅಪ್‌ಲೋಡ್ ಮಾಡುವಾಗ ಅಂಕಗಳ ಕಾರ್ಡ್‌ನ ಮೇಲ್ಭಾಗ ಮತ್ತು ಕೆಳಭಾಗವನ್ನು ಕ್ರಾಪ್ ಮಾಡಬೇಡಿ. ಕ್ಯೂಆರ್ ಕೋಡ್ ಸೇರಿದಂತೆ ಎಲ್ಲಾ ಮಾಹಿತಿಯು (ನಿಮ್ಮ ಮಾರ್ಕ್ಸ್ ಕಾರ್ಡ್‌ನಲ್ಲಿ ಲಭ್ಯವಿದ್ದರೆ) ಸ್ಪಷ್ಟವಾಗಿ ಗೋಚರಿಸಬೇಕು
ಪಿಯುಸಿ/12ನೇ ತರರಗತಿ/ತತ್ಸಮಾನ ಪರೀಕ್ಷೆಯ ಪ್ರವೇಶ ಕಾರ್ಡ್/ಹಾಲ್ ಟಿಕೆಟ್ ಮಾಹಿತಿಯನ್ನು (ಅನ್ವಯಿಸಿದರೆ) ಅಭ್ಯರ್ಥಿಗಳ ಅಂಕಗಳ ಕಾರ್ಡ್ ಅನ್ನು ಅವರ ಸಂಬಂಧಿತ ಬೋರ್ಡ್ ವೆಬ್‌ಸೈಟ್‌ನಲ್ಲಿ ಪರಿಶೀಲಿಸಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಅಪ್‌ಲೋಡ್ ಮಾಡಲು ವಿನಂತಿಸಲಾಗಿದೆ. ಆದರೂ ಪ್ರವೇಶ ಕಾರ್ಡ್ ಲಭ್ಯವಿಲ್ಲದಿದ್ದರೆ ನಿಮ್ಮ ಪ್ರವೇಶ ಕಾರ್ಡ್ ಮಾಹಿತಿಯನ್ನು ದೊಡ್ಡ ಅಕ್ಷರಗಳಲ್ಲಿ ಕಾಗದದ ಹಾಳೆಯಲ್ಲಿ ಸ್ಪಷ್ಟವಾಗಿ ಬರೆದು ಅದನ್ನು ಅಪ್‌ಲೋಡ್ ಮಾಡಿ.
ಕಲ್ಯಾಣ ಕರ್ನಾಟಕ ಪ್ರದೇಶ (ಕೆಕೆಆರ್/ಎಚ್‌ಕೆ) ಪ್ರಮಾಣಪತ್ರ: ಕಲ್ಯಾಣ ಕರ್ನಾಟಕ ಸೀಟನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಕೆಕೆಆರ್ (ಎಚ್‌ಕೆ ಪ್ರದೇಶ) ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಬೇಕು. ಕಂದಾಯ ಉಪವಿಭಾಗದ ಉಸ್ತುವಾರಿ ಆಯುಕ್ತರು ನೀಡಿರುವ ಪ್ರಮಾಣ ಪತ್ರದಲ್ಲಿ ಕಡ್ಡಾಯವಾಗಿ ಅಭ್ಯರ್ಥಿಯ ಹೆಸರಿನಲ್ಲಿರಬೇಕು.
ಎಸ್‌ಸಿ/ಎಸ್‌ಟಿ/ಒಬಿಸಿ ಪ್ರಮಾಣಪತ್ರ: ನೀವು ದ್ವಿತೀಯ ಪಿಯುಸಿ/12ನೇ ತರಗತಿಯಲ್ಲಿ ಶೇಕಡಾ 40 ರಿಂದ 45 ರಷ್ಟು ಅಂಕಗಳಿಸಿದ್ದರೆ ಮತ್ತು ಕರ್ನಾಟಕ ವಾಸಸ್ಥಳಾಗಿದ್ದರೆ ಮಾತ್ರ ಅನ್ವಯಿಸುತ್ತದೆ.
ಕರ್ನಾಟಕ ನಿವಾಸ ಪ್ರಮಾಣಪತ್ರ: ತಹಶೀಲ್ದಾರ್ ಶ್ರೇಣಿಗಿಂತ ಕಡಿಮೆಯಿಲ್ಲದ ಕಂದಾಯ ಪ್ರಾಧಿಕಾರದಿಂದ ಅಭ್ಯರ್ಥಿಯ ಹೆಸರಿನಲ್ಲಿ ಈ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಕೌನ್ಸಿಲಿಂಗ್‌ಗೆ ಕೇಳಲಾಗುವ ಎಲ್ಲಾ ದಾಖಲೆಗಳನ್ನು ಅಭ್ಯರ್ಥಿಗಳು ತಪ್ಪದೆ ಸಲ್ಲಿಸಬೇಕಾಗುತ್ತದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)