logo
ಕನ್ನಡ ಸುದ್ದಿ  /  ಕರ್ನಾಟಕ  /  Puc Result: ದ್ವಿತೀಯ ಪಿಯುಸಿ ಜಿಲ್ಲಾವಾರು ಫಲಿತಾಂಶ ಪ್ರಕಟ; ಯಾವ ಜಿಲ್ಲೆಗೆ ಎಷ್ಟು ಪರ್ಸಂಟೇಜ್‌? ಇಲ್ಲಿದೆ 32 ಜಿಲ್ಲೆಗಳ ವಿವರ

PUC Result: ದ್ವಿತೀಯ ಪಿಯುಸಿ ಜಿಲ್ಲಾವಾರು ಫಲಿತಾಂಶ ಪ್ರಕಟ; ಯಾವ ಜಿಲ್ಲೆಗೆ ಎಷ್ಟು ಪರ್ಸಂಟೇಜ್‌? ಇಲ್ಲಿದೆ 32 ಜಿಲ್ಲೆಗಳ ವಿವರ

Praveen Chandra B HT Kannada

Apr 10, 2024 11:09 AM IST

google News

Bengaluru, Mar 01 (ANI): Students pray before taking their Karnataka 2nd PUC Board exams 2024, in Bengaluru on Friday. (ANI Photo)

    • PUC result district wise 2024 result: ಕರ್ನಾಟಕದ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ದ್ವಿತೀಯ ಪಿಯುಸಿ ಜಿಲ್ಲಾವಾರು ಫಲಿತಾಂಶ, ಶೇಕಡವಾರು ವಿವರ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಫಲಿತಾಂಶದಲ್ಲಿ ಬದಲಾವಣೆ ಏನು ಇತ್ಯಾದಿ ವಿವರ ಇಲ್ಲಿದೆ.
Bengaluru, Mar 01 (ANI): Students pray before taking their Karnataka 2nd PUC Board exams 2024, in Bengaluru on Friday. (ANI Photo)
Bengaluru, Mar 01 (ANI): Students pray before taking their Karnataka 2nd PUC Board exams 2024, in Bengaluru on Friday. (ANI Photo) (Savitha )

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (Karnataka 2nd PUC Results 2024 )ಪ್ರಕಟವಾಗಿದೆ. ಜಿಲ್ಲಾವಾರು ಫಲಿತಾಂಶ ಹೇಗಿದೆ ಎಂದು ಪರಿಶೀಲಿಸಲು ಬಯಸುವವರಿಗೆ ಯಾವ ಜಿಲ್ಲೆ ಎಷ್ಟು ಶೇಕಡವಾರು ಫಲಿತಾಂಶ ಪಡೆದಿದೆ ಎಂಬ ವಿವರ ಇಲ್ಲಿದೆ. ಈ ವರ್ಷ 5,52,690 ವಿದ್ಯಾರ್ಥಿಗಳು ಪಾಸ್‌ ಆದ ಖುಷಿಯಲ್ಲಿದ್ದಾರೆ. ಉತ್ತೀರ್ಣ ಪ್ರಮಾಣ ಶೇಕಡ 81.15 ರಷ್ಟಿದೆ. ನಗರ ಪ್ರದೇಶದ ವಿದ್ಯಾರ್ಥಿಗಳು ಶೇ 81.10ರಷ್ಟು ಸಾಧನೆ ಮಾಡಿದ್ದಾರೆ. ಗ್ರಾಮಾಂತರದ ವಿದ್ಯಾರ್ಥಿಗಳು ಶೇಕಡ ಶೇ 81.31 ಫಲಿತಾಂಶ ತಂದುಕೊಟ್ಟಿದ್ದಾರೆ. 32 ಜಿಲ್ಲೆಗಳ ದ್ವಿತೀಯ ಪಿಯುಸಿ ಶೇಕಡವಾರು ಫಲಿತಾಂಶ ಇಲ್ಲಿದೆ. (ಓದಿ: ದ್ವಿತೀಯ ಪಿಯುಸಿ ಫಲಿತಾಂಶ)

ದ್ವಿತೀಯ ಪಿಯುಸಿ ಜಿಲ್ಲಾವಾರು ಶೇಕಡವಾರು ಫಲಿತಾಂಶ

  1. ದಕ್ಷಿಣ ಕನ್ನಡ ಈ ಬಾರಿ ಶೇಕಡ 97.37ರಷ್ಟು ಫಲಿತಾಂಶ ದಾಖಲಿಸಿದೆ. 2023ರಲ್ಲಿ ಇದು ಶೇಕಡ 95.33 ಆಗಿತ್ತು.
  2. ಉಡುಪಿ ಜಿಲ್ಲೆಯು ಶೇಕಡ 96.80ರಷ್ಟು ಫಲಿತಾಂಶ ಪಡೆದಿದೆ. ಕಳೆದ ವರ್ಷ ಇದು ಶೇಕಡ 95.24 ಆಗಿತ್ತು.
  3. ವಿಜಯಪುರವು ಈ ಬಾರಿ ಶೇಕಡ 94.89ರಷ್ಟು ಫಲಿತಾಂಶ ತನ್ನದಾಗಿಸಿಕೊಂಡಿದೆ. ಕಳೆದ ವರ್ಷದ ಶೇಕಡ 84.69ಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಪ್ರಗತಿ ದಾಖಲಿಸಿದೆ.
  4. ಉತ್ತರ ಕನ್ನಡ ಜಿಲ್ಲೆಯು ಈ ಬಾರಿ ಶೇಕಡ 92.51ರಷ್ಟು ಫಲಿತಾಂಶ ತನ್ನದಾಗಿಸಿದೆ. ಕಳೆದ ವರ್ಷದ ಶೇಕಡ 89.74ಕ್ಕೆ ಹೋಲಿಸಿದರೆ ಈ ಬಾರಿ ತುಸು ಪ್ರಗತಿ ದಾಖಲಿಸಿದೆ.
  5. ಕೊಡಗು ಜಿಲ್ಲೆಯು ಈ ಬಾರಿ ಶೇಕಡ 92.13 ರಿಸಲ್ಟ್‌ ಪಡೆದಿದೆ. ಕಳೆದ ವರ್ಷ ಶೇಕಡ 90.55 ಫಲಿತಾಂಶ ಪಡೆದಿತ್ತು.
  6. ಬೆಂಗಳೂರು ದಕ್ಷಿಣ ಶೇಕಡ 89.57 ಫಲಿತಾಂಶ ಪಡೆದಿದೆ. ಕಳೆದ ವರ್ಷ ಶೇಕಡ 82.3 ಫಲಿತಾಂಶ ಪಡೆದಿತ್ತು.
  7. ಜಿಲ್ಲಾವಾರು ಫಲಿತಾಂಶದಲ್ಲಿ ಬೆಂಗಳೂರು ಉತ್ತರ ಶೇಕಡ 88.67ರಷ್ಟು ಫಲಿತಾಂಶ ಪಡೆದಿದೆ. ಇದಕ್ಕೂ ಹಿಂದಿನ ವರ್ಷ ಶೇಕಡ 82.25 ಫಲಿತಾಂಶ ದಾಖಲಿಸಿತ್ತು.
  8. ಶಿವಮೊಗ್ಗ ಜಿಲ್ಲೆ ಶೇಕಡ 88.58ರಷ್ಟು ಫಲಿತಾಂಶ ತನ್ನದಾಗಿಸಿದೆ. ಕಳೆದ ವರ್ಷ ಶೇಕಡ 83.13 ಫಲಿತಾಂಶ ಪಡೆದಿತ್ತು.
  9. ಚಿಕ್ಕಮಗಳೂರು ಜಿಲ್ಲೆಯು ಶೇಕಡ 88.20 ಫಲಿತಾಂಶ ಪಡೆದಿದೆ. ಕಳೆದ ವರ್ಷ ಶೇಕಡ 83.28 ಫಲಿತಾಂಶ ತನ್ನದಾಗಿಸಿಕೊಂಡಿತ್ತು.
  10. ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಈ ಬಾರಿ ಶೇಕಡ 87.55 ಫಲಿತಾಂಶ ಪಡೆದಿದೆ. ಕಳೆದ ವರ್ಷ ಶೇಕಡ 83.04 ಫಲಿತಾಂಶ ಪಡೆದಿದೆ.
  11. ಬಾಗಲಕೋಟೆ ಜಿಲ್ಲೆ ಈ ವರ್ಷ: ಶೇಕಡ 87.54, ಕಳೆದ ವರ್ಷ: 78.79
  12. ಕೋಲಾರ: ಈ ವರ್ಷ: 86.12, ಕಳೆದ ವರ್ಷ: 79.2
  13. ಹಾಸನ: ಈ ವರ್ಷ- ಶೇಕಡ 85.83, ಕಳೆದ ವರ್ಷ- 83.14
  14. ಚಾಮರಾಜನಗರ ಜಿಲ್ಲೆ: ಈ ವರ್ಷ ಶೇಕಡ 84.99 ಮತ್ತು ಕಳೆದ ವರ್ಷ ಶೇಕಡ 81.92
  15. ಚಿಕ್ಕೋಡಿ ಜಿಲ್ಲೆ ಈ ವರ್ಷ- ಶೇಕಡ 84.10 ಕಳೆದ ವರ್ಷ ಶೇಕಡ 78.76
  16. ರಾಮನಗರ ಜಿಲ್ಲೆ ಈ ವರ್ಷ- ಶೇಕಡ 83.58 ಮತ್ತು ಕಳೆದ ವರ್ಷ- ಶೇಕಡ 78.12
  17. ಮೈಸೂರು: ಈ ವರ್ಷ ಶೇಕಡ 83.13, ಕಳೆದ ವರ್ಷ- 79.89
  18. ಚಿಕ್ಕಬಳ್ಳಾಪುರ: ಈ ವರ್ಷ ಶೇಕಡ 82.84, ಕಳೆದ ವರ್ಷ ಶೇಕಡ 77.77
  19. ಬೀದರ್: ಈ ವರ್ಷ ಶೇಕಡ 81.69 ಕಳೆದ ವರ್ಷ- ಶೇಕಡ 78
  20. ತುಮಕೂರು: ಈ ವರ್ಷ- ಶೇಕಡ 81.03, ಕಳೆದ ವರ್ಷ- ಶೇಕಡ 74.5
  21. ದಾವಣಗೆರೆ: ಈ ವರ್ಷ ಶೇಕಡ 80.96, ಕಳೆದ ವರ್ಷ ಶೇಕಡ 75.72
  22. ಕೊಪ್ಪಳ: ಈ ವರ್ಷ ಶೇಕಡ 80.83, ಕಳೆದ ವರ್ಷ ಶೇ 74.8
  23. ಧಾರವಾಡ: ಈ ವರ್ಷ ಶೇ 80.70, ಕಳೆದ ವರ್ಷ ಶೇ 73.54
  24. ಮಂಡ್ಯ: ಈ ವರ್ಷ ಶೇ 80.56, ಕಳೆದ ವರ್ಷ ಶೇ 77.47
  25. ಹಾವೇರಿ: ಈ ವರ್ಷ ಶೇ 78.36, ಕಳೆದ ವರ್ಷ ಶೇ 74.13
  26. ಯಾದಗಿರಿ: ಈ ವರ್ಷ ಶೇ 77.29, ಕಳೆದ ವರ್ಷ ಶೇ 62.98
  27. ಬೆಳಗಾವಿ: ಈ ವರ್ಷ- ಶೇ 77.20, ಕಳೆದ ವರ್ಷ ಶೇ 73.98
  28. ಕಲಬುರಗಿ: ಈ ವರ್ಷ- ಶೇ 75.48, ಕಳೆದ ವರ್ಷ ಶೇ 69.37
  29. ಬಳ್ಳಾರಿ: ಈ ವರ್ಷ ಶೇ 74.70, ಕಳೆದ ವರ್ಷ ಶೇ 69.55
  30. ರಾಯಚೂರು: ಈ ವರ್ಷ ಶೇಕಡ 73.11, ಕಳೆದ ವರ್ಷ ಶೇ 66.21
  31. ಚಿತ್ರದುರ್ಗ: ಈ ವರ್ಷ ಶೇಕಡ 72.92, ಕಳೆದ ವರ್ಷ ಶೇಕಡ 69.5 ಫಲಿತಾಂಶ
  32. ಗದಗ: ಈ ವರ್ಷ ಶೇ 72.86 ಫಲಿತಾಂಶ ಪಡೆದಿದೆ, ಕಳೆದ ವರ್ಷ ಶೇಕಡ 66.91 ಪಡೆದಿತ್ತು.

ದ್ವಿತೀಯ ಪಿಯುಸಿ ಬಳಿಕ ಮುಂದೇನು?

ದ್ವಿತೀಯ ಪಿಯುಸಿ ಬಳಿಕ ಆರ್ಟ್ಸ್‌ ವಿದ್ಯಾರ್ಥಿಗಳು ಕಲಿಯಬಹುದಾದ 10 ಡಿಪ್ಲೊಮಾ ಕೋರ್ಸ್‌ಗಳು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ