logo
ಕನ್ನಡ ಸುದ್ದಿ  /  ಕರ್ನಾಟಕ  /  Explained; ಕರ್ನಾಟಕ ಬೋರ್ಡ್ ಪರೀಕ್ಷೆ, ಹೈಕೋರ್ಟ್ ವಿಭಾಗೀಯ ಪೀಠ ನೀಡಿದ ತೀರ್ಪಿನಲ್ಲಿ ಏನಿತ್ತು, ಗಮನ ಸೆಳೆದ 3 ಪ್ರಶ್ನೆ ಮತ್ತು ಇತರೆ ವಿವರ

Explained; ಕರ್ನಾಟಕ ಬೋರ್ಡ್ ಪರೀಕ್ಷೆ, ಹೈಕೋರ್ಟ್ ವಿಭಾಗೀಯ ಪೀಠ ನೀಡಿದ ತೀರ್ಪಿನಲ್ಲಿ ಏನಿತ್ತು, ಗಮನ ಸೆಳೆದ 3 ಪ್ರಶ್ನೆ ಮತ್ತು ಇತರೆ ವಿವರ

Umesh Kumar S HT Kannada

Mar 23, 2024 06:11 PM IST

google News

ಕರ್ನಾಟಕ ಹೈಕೋರ್ಟ್‌

  • ಕರ್ನಾಟಕ ಬೋರ್ಡ್ ಪರೀಕ್ಷೆ ಗೊಂದಲ ಇನ್ನೂ ಮುಗಿದಿಲ್ಲ.  ಪರೀಕ್ಷೆ ಮುಂದುವರಿಸುವಂತೆ ಕೋರ್ಟ್ ತೀರ್ಪು ನೀಡಿದರೂ, ಖಾಸಗಿ ಶಿಕ್ಷಣ ಸಂಸ್ಥೆಯವರು ಸುಪ್ರೀಂ ಕೋರ್ಟ್‌ಗೆ ಹೋಗಲು ಸಿದ್ದತೆ ನಡೆಸಿದ್ದಾರೆ. ಹಾಗಾದರೆ, ಹೈಕೋರ್ಟ್ ವಿಭಾಗೀಯ ಪೀಠ ನೀಡಿದ ತೀರ್ಪಿನಲ್ಲಿ ಏನಿತ್ತು, ಗಮನ ಸೆಳೆದ 3 ಪ್ರಶ್ನೆ ಮತ್ತು ಇತರೆ ವಿವರ ಹೀಗಿದೆ.

ಕರ್ನಾಟಕ ಹೈಕೋರ್ಟ್‌
ಕರ್ನಾಟಕ ಹೈಕೋರ್ಟ್‌

ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5,8,9 ಮತ್ತು 11ನೇ ತರಗತಿಗೆ ಕರ್ನಾಟಕ ಬೋರ್ಡ್ ಪರೀಕ್ಷೆ (Karnataka Board Exam) ನಡೆಸುವುದಕ್ಕೆ ಕರ್ನಾಟಕ ಹೈಕೋರ್ಟ್‌ (Karntaka High Court) ವಿಭಾಗೀಯ ಪೀಠ ಶುಕ್ರವಾರ (ಮಾರ್ಚ್ 22) ಅವಕಾಶ ನೀಡಿ ತೀರ್ಪು ಪ್ರಕಟಿಸಿದೆ.

ಕರ್ನಾಟಕ ರಾಜ್ಯ ಶಿಕ್ಷಣ ಮೌಲ್ಯಮಾಪನ ಮಂಡಳಿ (KSEAB) ಅಧೀನದ ಶಾಲೆಗಳಿಗೆ ಈ ತೀರ್ಪು ಅನ್ವಯ. ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ರಾಜೇಶ್ ರೈ ಕೆ ಅವರನ್ನು ಒಳಗೊಂಡ ನ್ಯಾಯಪೀಠವು ಮಾರ್ಚ್ 6 ರ ಏಕಸದಸ್ಯ ತೀರ್ಪನ್ನು ತಳ್ಳಿಹಾಕಿತು. ಅದು ಕರ್ನಾಟಕ ಸರ್ಕಾರವು ಕಳೆದ ವರ್ಷ ಜಾರಿಗೊಳಿಸಿದ ಕೆಲವು ಅಧಿಸೂಚನೆಗಳ ಪ್ರಕಾರ ಈ ಪರೀಕ್ಷೆಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿತು.

"... ಸರ್ಕಾರ ಸಲ್ಲಿಸಿದ ಅಪೀಲನ್ನು ಪರಿಗಣಿಸಲಾಗಿದೆ. ಏಕಸದಸ್ಯ ಪೀಠ ಮಾರ್ಚ್ 6ರಂದು ನೀಡಿದ ತೀರ್ಪನ್ನು ಅನೂರ್ಜಿತಗೊಳಿಸಿದ್ದು, ಕರ್ನಾಟಕ ಸರ್ಕಾರವು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ 5,8,9 ಮತ್ತು 11ನೇ ತರಗತಿಗೆ ಬಾಕಿ ಉಳಿದಿರುವ ಪರೀಕ್ಷೆಗಳನ್ನು ನಡೆಸಿಕೊಳ್ಳಬಹುದು" ಎಂದು ತೀರ್ಪು ಪ್ರಕಟಿಸುವಾಗ ವಿಭಾಗೀಯ ಪೀಠ ಹೇಳಿತು.

ಆದಾಗ್ಯೂ, 5,8,9 ಮತ್ತು 11ನೇ ತರಗತಿಗಳ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ಈ ಪರೀಕ್ಷೆಗಳನ್ನು ಸಾಂಪ್ರದಾಯಿಕ ಅರ್ಥದಲ್ಲಿ "ಬೋರ್ಡ್ ಪರೀಕ್ಷೆಗಳು" (Board Exam) ಎಂದು ಪರಿಗಣಿಸಲಾಗದು ಎಂಬುದನ್ನು ನ್ಯಾಯಪೀಠ ಒತ್ತಿಹೇಳಿದೆ.

ಪ್ರಕರಣ ಇತ್ಯರ್ಥಗೊಳಿಸುವುದಕ್ಕಾಗಿ ಕೋರ್ಟ್‌ ಹಾಕಿಕೊಂಡ 3 ಪ್ರಶ್ನೆಗಳು

ಕರ್ನಾಟಕದಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ 5,8,9 ಮತ್ತು 11ನೇ ತರಗತಿಗಳ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ಬೋರ್ಡ್ ಪರೀಕ್ಷೆಗೆ ಸಂಬಂಧಿಸಿದ ವ್ಯಾಜ್ಯ ಇತ್ಯರ್ಥಗೊಳಿಸಲು ಹೈಕೋರ್ಟ್ ವಿಭಾಗೀಯ ಪೀಠವು 3 ಪ್ರಶ್ನೆಗಳನ್ನು ಚೌಕಟ್ಟಿನಂತೆ ಹಾಕಿಕೊಂಡಿತ್ತು.

1). ಕರ್ನಾಟಕ ರಾಜ್ಯ ಶಿಕ್ಷಣ ಮೌಲ್ಯಮಾಪನ ಮಂಡಳಿ ಪರೀಕ್ಷೆ (KSEAB exam) ಗಳನ್ನು ಬೋರ್ಡ್ ಪರೀಕ್ಷೆ (Borad Exam) ಎಂದು ಪರಿಗಣಿಸಬೇಕಾ?

2) 2023 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪ್ರಕಟಿಸಿರುವ ಅಧಿಸೂಚನೆಗಳು ಶಿಕ್ಷಣ ಹಕ್ಕು ಕಾಯಿದೆಯ (ಆರ್‌ಟಿಇ ಕಾಯಿದೆ) ಸೆಕ್ಷನ್ 16 ಮತ್ತು 32 ರ ವಿರುದ್ಧವಾಗಿದೆಯೇ?

3) ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್ 22 ರ ಅಡಿಯಲ್ಲಿ ಪರೀಕ್ಷೆಗಳನ್ನು ನಡೆಸಲು ಅಧಿಸೂಚನೆಗಳನ್ನು ಹೊರಡಿಸಲಾಗಿದೆಯೇ ಮತ್ತು ರಾಜ್ಯ ಕ್ರಮಗಳು ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್ 145 ಅನ್ನು ಉಲ್ಲಂಘಿಸಿದೆಯೇ?

ಪರೀಕ್ಷೆಗಳನ್ನು ನಡೆಸುವುದಕ್ಕೆ ರಾಜ್ಯ ಸರ್ಕಾರವು ಸೂಕ್ತ ಪ್ರಾಧಿಕಾರವಾಗಿರುವುದರಿಂದ, ಮಾರ್ಗಸೂಚಿಗಳನ್ನು ಮಾತ್ರ ಸೂಚಿಸಿದೆ. ಕಳೆದ ವರ್ಷ ಹೊರಡಿಸಲಾದ ಅಧಿಸೂಚನೆಗಳಲ್ಲಿ (ಈ ಹಿಂದೆ ಏಕ-ನ್ಯಾಯಾಧೀಶರು ಅದನ್ನು ರದ್ದುಗೊಳಿಸಿದ್ದರು) ಬೇರೆ ಯಾವುದನ್ನೂ ಸೂಚಿಸಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಆದ್ದರಿಂದ ಮೊದಲ ಎರಡು ಪ್ರಶ್ನೆಗಳಿಗೆ ಋಣಾತ್ಮಕ ಉತ್ತರ ಇಲ್ಲ ಎಂದು ಅಭಿಪ್ರಾಯ ಪಟ್ಟಿದ್ದು, ಈಗ ಆರಂಭಿಸಿರುವ ಪರೀಕ್ಷೆ ಮುಗಿಸುವುದಕ್ಕೆ ಸೂಚನೆ ನೀಡಿದೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.'

ಓದಬಹುದಾದ ಇನ್ನಷ್ಟು ಸ್ಟೋರಿಗಳು

1) ಕರ್ನಾಟಕ ಬೋರ್ಡ್ ಪರೀಕ್ಷೆ; 5,8,9, 11ನೇ ತರಗತಿ ಬೋರ್ಡ್ ಎಕ್ಸಾಂ ತೀರ್ಪಿಗಾಗಿ ಹೆಚ್ಚುತ್ತಿರುವ ನಿರೀಕ್ಷೆ, ಕಳೆದ ವರ್ಷ ತೀರ್ಪು ಹೀಗಿತ್ತು

2) ಕರ್ನಾಟಕ ಬೋರ್ಡ್ ಪರೀಕ್ಷೆ; 5,8,9 ನೇ ತರಗತಿ ಎಕ್ಸಾಂ ಗೊಂದಲ, ಇದುವರೆಗೆ ಏನೇನಾಯಿತು ಇಲ್ಲಿದೆ 10 ಅಂಶಗಳು

3) 5,8,9,11 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ಇರಲ್ಲ; ಕರ್ನಾಟಕ ಸರ್ಕಾರದ ಆದೇಶ ರದ್ದುಗೊಳಿಸಿದ ಹೈಕೋರ್ಟ್‌

4) ಕರ್ನಾಟಕದ 5,8,9,11ನೇ ತರಗತಿಗೆ ಬೋರ್ಡ್ ಪರೀಕ್ಷೆ ಗೊಂದಲ; ಮತ್ತೆ ಮುಂದೂಡಿಕೆ, ವಿಭಾಗೀಯ ಪೀಠದಲ್ಲಿ ವಿಚಾರಣೆ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ