logo
ಕನ್ನಡ ಸುದ್ದಿ  /  ಕರ್ನಾಟಕ  /  Kea Recruitment 2023: ಕರ್ನಾಟಕದ ವಿವಿಧ ನಿಗಮಗಳಲ್ಲಿ ಉದ್ಯೋಗಾವಕಾಶ, 620 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜು 31 ಕೊನೆದಿನ, ಇಲ್ಲಿದೆ ವಿವರ

KEA Recruitment 2023: ಕರ್ನಾಟಕದ ವಿವಿಧ ನಿಗಮಗಳಲ್ಲಿ ಉದ್ಯೋಗಾವಕಾಶ, 620 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜು 31 ಕೊನೆದಿನ, ಇಲ್ಲಿದೆ ವಿವರ

Praveen Chandra B HT Kannada

Jul 20, 2023 11:50 AM IST

google News

KEA Recruitment 2023: ಕರ್ನಾಟಕದ ವಿವಿಧ ನಿಗಮಗಳಲ್ಲಿ ಉದ್ಯೋಗಾವಕಾಶ, 620 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜು 31 ಕೊನೆದಿನ, ಇಲ್ಲಿದೆ ವಿವರ

    • KEA Recruitment 2023: ರಾಜ್ಯ ಸರಕಾರದ ವಿವಿಧ ನಿಗಮಗಳಲ್ಲಿ ಹುದ್ದೆಗಳನ್ನು ಪಡೆಯಲು ಬಯಸುವವರಿಗೆ ಅನುಕೂಲವಾಗುವಂತೆ ಅರ್ಜಿ ಸಲ್ಲಿಸುವ ಅವಧಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಸ್ತರಿಸಿದೆ.
KEA Recruitment 2023: ಕರ್ನಾಟಕದ ವಿವಿಧ ನಿಗಮಗಳಲ್ಲಿ ಉದ್ಯೋಗಾವಕಾಶ, 620 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜು 31 ಕೊನೆದಿನ, ಇಲ್ಲಿದೆ ವಿವರ
KEA Recruitment 2023: ಕರ್ನಾಟಕದ ವಿವಿಧ ನಿಗಮಗಳಲ್ಲಿ ಉದ್ಯೋಗಾವಕಾಶ, 620 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜು 31 ಕೊನೆದಿನ, ಇಲ್ಲಿದೆ ವಿವರ

ಬೆಂಗಳೂರು: ಕರ್ನಾಟಕ ರಾಜ್ಯದ ವಿವಿಧ ನಿಗಮಗಳಲ್ಲಿ ಸುಮಾರು 620 ಹುದ್ದೆಗಳು ಖಾಲಿ ಇವೆ. ಇದೀಗ ಈ ನೇಮಕಾತಿ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊಸ ಅಪ್‌ಡೇಟ್‌ ನೀಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಸ್ತರಿಸಿದೆ. ಇಲ್ಲಿಯವರೆಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸದೆ ಇರುವ ಅಭ್ಯರ್ಥಿಗಳಿಗೆ ಇನ್ನೂ ಸುಮಾರು ಹತ್ತು ದಿನಗಳ ಕಾಲ ಅವಕಾಶವಿದೆ. ನಿಗದಿತ ವಿದ್ಯಾರ್ಹತೆ ಇರುವವರು ಈ ಸಮಯದಲ್ಲಿ ಅರ್ಜಿ ಸಲ್ಲಿಸಿ ಸರಕಾರಿ ಉದ್ಯೋಗ ಪಡೆಯಲು ಪ್ರಯತ್ನಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 31, 2023

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಹಿಂದೆ ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಲು ಜುಲೈ 22 ಕೊನೆಯ ದಿನಾಂಕವಾಗಿತ್ತು. ಆದರೆ, ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸುವಂತೆ ಸಾಕಷ್ಟು ಅಭ್ಯರ್ಥಿಗಳು ವಿನಂತಿಸಿದ್ದರು. ಹೀಗಾಗಿ, ಅರ್ಜಿ ಸಲ್ಲಿಸಲು ಜು.31ರ ಸಂಜೆ 5.30ರ ವರೆಗೆ ಮತ್ತು ಶುಲ್ಕ ಪಾವತಿಸಲು ಆ.3ರ ಸಂಜೆ 3.30ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ ತಿಳಿಸಿದ್ದಾರೆ. ಹೀಗಾಗಿ, ಜುಲೈ 31ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ದೊರಕಿದ್ದು, ಈ ಅವಕಾಶವನ್ನು ಅಭ್ಯರ್ಥಿಗಳು ಸದುಪಯೋಗಪಡಿಸಿಕೊಳ್ಳಬಹುದು.

ಯಾವ ನಿಗಮಗಳಲ್ಲಿ/ ಸಂಸ್ಥೆಗಳಲ್ಲಿ ಉದ್ಯೋಗಾವಕಾಶವಿದೆ?

ಕರ್ನಾಟಕದ ವಿವಿಧ ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಈ ನೇಮಕಾತಿ ನಡೆಸಲಾಗುತ್ತದೆ. ಅಂದರೆ, ರಾಜ್ಯದ ವಿದ್ಯುನ್ಮಾನ ಅಭಿವೃದ್ಧಿ ನಿಗಮ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಮೈಸೂರು ಸೇಲ್ಸ್‌ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌ಗಳಲ್ಲಿ ಹುದ್ದೆಗಳಿವೆ. ಇಲ್ಲಿ ಖಾಲಿ ಇರುವ ಮಿಕ್ಕುಳಿದ/ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ ವಿವಿಧ 654 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳು ಮತ್ತು ವಿದ್ಯಾರ್ಹತೆ

ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದಲ್ಲಿ ಉದ್ಯೋಗಾವಕಾಶ

ಈ ನಿಗಮದಲ್ಲಿ ಸಹಾಯಕ ವ್ಯವಸ್ಥಾಪಕರು, ಆಪ್ತ ಕಾರ್ಯದರ್ಶಿ ಹಾಗೂ ಹಿರಿಯ ಸಹಾಯಕರು/ಸಹಾಯಕರು ಸೇರಿ ಒಟ್ಟು 10 ಹುದ್ದೆಗಳು ಇವೆ. ತಾಂತ್ರಿಕ ವಿಭಾಗದಲ್ಲಿನ ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಎಂಜಿನಿಯರಿಂಗ್‌ ಪದವಿ ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ಪದವೀಧರರು ಅರ್ಜಿ ಸಲ್ಲಿಸಬಹುದು. ಐದು ವರ್ಷಗಳ ಸೇವಾನುಭವವನ್ನು ಈ ಹುದ್ದೆಗಳಿಗೆ ಬಯಸಲಾಗಿದೆ. ಆಪ್ತಕಾರ್ಯದರ್ಶಿ, ತಾಂತ್ರಿಕೇತರ ವಿಭಾಗದಲ್ಲಿನ ಹಿರಿಯ ಸಹಾಯಕರ ಹುದ್ದೆಗೆ ಪದವಿ ಹಾಗೂ ತಾಂತ್ರಿಕ ವಿಭಾಗದಲ್ಲಿನ ಹಿರಿಯ ಸಹಾಯಕರ ಹುದ್ದೆಗೆ ಎಂಜಿನಿಯರಿಂಗ್‌ ಪದವಿ ಓದಿರುವವರು ಅರ್ಜಿ ಸಲ್ಲಿಸಬಹುದು.

ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ನಲ್ಲಿ ನೇಮಕ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೂತನ ನೇಮಕಾತಿ ಪರೀಕ್ಷೆಯಲ್ಲಿ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ನಲ್ಲಿರುವ ವಿವಿಧ ಹುದ್ದೆಗಳನ್ನೂ ಭರ್ತಿ ಮಾಡಲಾಗುತ್ತದೆ. ಸಹಾಯಕ ವ್ಯವಸ್ಥಾಪಕರು ಮತ್ತು ಮೇಲ್ವಿಚಾರಕರು, ಗುಮಾಸ್ತರು ಮತ್ತು ಪ್ರೋಗ್ರಾಮರ್‌ ಹುದ್ದೆಗಳಿವೆ.

ವಿದ್ಯಾರ್ಹತೆ: ಎಂಬಿಎ, ಸಿಎ/ಸಿಡಬ್ಲ್ಯೂಎ/ಎಂಬಿಎ/ಎಂಎಸ್‌ಡಬ್ಲ್ಯೂ/ಎಂಎಸ್ಸಿ (ಕೆಮಿಸ್ಟ್ರಿ)/ಎಂಫಾರ್ಮ/ ಸ್ನಾತಕೋತ್ತರ/ ಎಂಜಿನಿಯರಿಂಗ್‌ ಪದವಿ, ಪದವಿ, ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ/ ಬಿಕಾಂ/ಬಿಬಿಎ -ಇವುಗಳಲ್ಲಿ ಯಾವುದೇ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಕೆಲವೊಂದು ಹುದ್ದೆಗಳಿಗೆ 2-5 ವರ್ಷ ಕೆಲಸದ ಅನುಭವ ಬಯಸಲಾಗಿದೆ.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಲ್ಲಿ ಅವಕಾಶ

ಕೆಇಎಯು ಈ ನೇಮಕಾತಿ ಪರೀಕ್ಷೆ ಮೂಲಕಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಲ್ಲಿರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಿದೆ. ಇಲ್ಲಿ ಸಹಾಯಕ ವ್ಯವಸ್ಥಾಪಕರು, ಗುಣಮಟ್ಟ ನಿರೀಕ್ಷಕರು, ಹಿರಿಯ ಸಹಾಯಕರು ಮತ್ತು ಕಿರಿಯ ಸಹಾಯಕರು ಹುದ್ದೆಗಳು ಖಾಲಿ ಇವೆ.

ಈ ಹುದ್ದೆಗಳಿಗೆ ತಕ್ಕಂತೆ ವಿವಿಧ ವಿದ್ಯಾರ್ಹತೆ ಬಯಸಲಾಗಿದೆ. ಸಹಾಯಕ ವ್ಯವಸ್ಥಾಪಕರು ಮತ್ತು ಹಿರಿಯ ಸಹಾಯಕರ ಹುದ್ದೆಗಳಿಗೆ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಲೆಕ್ಕ ವಿಭಾಗದ ಹಿರಿಯ ಸಹಾಯಕರ ಹುದ್ದೆಗೆ ಮಾತ್ರ ಬಿಕಾಂ ವಿದ್ಯಾರ್ಹತೆ ಕಡ್ಡಾಯ. ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಗುಣಮಟ್ಟ ನಿಯಂತ್ರಕರ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಕೃಷಿ ವಿಜ್ಞಾನ ಅಥವಾ ಕೃಷಿ ಮಾರುಕಟ್ಟೆ ವಿಷಯದಲ್ಲಿ ಪದವಿ ಪಡೆದಿರಬೇಕು ಎಂದು ಕೆಇಎ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ

ಪರೀಕ್ಷಾ ಪ್ರಾಧಿಕಾರದ ಈ ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಲ್ಲಿರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇಲ್ಲಿ : ಕಲ್ಯಾಣ ಅಧಿಕಾರಿ, ಪ್ರಥಮ ದರ್ಜೆ ಸಹಾಯಕರು, ಕ್ಷೇತ್ರ ನಿರೀಕ್ಷಕರು, ಆಪ್ತ ಸಹಾಯಕರು ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿವೆ. ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಬಯಸಲಾಗಿದೆ. ಉಳಿದ ಹುದ್ದೆಗಳಿಗೆ ಪದವೀಧರರು ಅರ್ಜಿ ಸಲ್ಲಿಸಬಹುದು. ಆದರೆ, ಆಪ್ತ ಸಹಾಯಕರ ಹುದ್ದೆಗೆ ಡಿಪ್ಲೊಮಾ ಇನ್‌ ಕಂಪ್ಯೂಟರ್‌ ಅಪ್ಲಿಕೇಶನ್‌ ಕೋರ್ಸ್‌ ಪೂರ್ಣಗೊಳಿಸಿರಬೇಕು. 18ರಿಂದ 35 ವರ್ಷದೊಳಗಿನವರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ಲಿಂಕ್‌: https://kea.kar.nic.in

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ