logo
ಕನ್ನಡ ಸುದ್ದಿ  /  ಕರ್ನಾಟಕ  /  Gift Of Sleep: ವಿಶ್ವ ನಿದ್ರಾ ದಿನ ಇಂದು; ನಿದ್ರೆ ಅಗತ್ಯ ಇರುವಂಥವರು ರಜೆ ಹಾಕಿ ಎಂದ ಬೆಂಗಳೂರು ಕಂಪನಿ!

Gift of Sleep: ವಿಶ್ವ ನಿದ್ರಾ ದಿನ ಇಂದು; ನಿದ್ರೆ ಅಗತ್ಯ ಇರುವಂಥವರು ರಜೆ ಹಾಕಿ ಎಂದ ಬೆಂಗಳೂರು ಕಂಪನಿ!

HT Kannada Desk HT Kannada

Mar 17, 2023 09:59 AM IST

google News

ವಿಶ್ವ ನಿದ್ರಾ ದಿನಕ್ಕೆ ಅಚ್ಚರಿಯ ರಜೆ ಘೋಷಿಸಿದ ಬೆಂಗಳೂರು ಕಂಪನಿ

  • Gift of Sleep: ಇಂದು ವಿಶ್ವ ನಿದ್ರಾ ದಿನ. ನಿದ್ರಾ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶ. ಬೆಂಗಳೂರಿನ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಇಂದು ದಿಢೀರ್‌ ಐಚ್ಛಿಕ ರಜೆ ಘೋಷಿಸಿ ಅಚ್ಚರಿ ಮೂಡಿಸಿದೆ!

ವಿಶ್ವ ನಿದ್ರಾ ದಿನಕ್ಕೆ ಅಚ್ಚರಿಯ ರಜೆ ಘೋಷಿಸಿದ ಬೆಂಗಳೂರು ಕಂಪನಿ
ವಿಶ್ವ ನಿದ್ರಾ ದಿನಕ್ಕೆ ಅಚ್ಚರಿಯ ರಜೆ ಘೋಷಿಸಿದ ಬೆಂಗಳೂರು ಕಂಪನಿ (iStock)

ಉದ್ಯೋಗಿಗಳಲ್ಲಿ ಕ್ಷೇಮ ಅಭ್ಯಾಸಗಳನ್ನು ಉತ್ತೇಜಿಸುವ ಸಲುವಾಗಿ, ಬೆಂಗಳೂರು ಮೂಲದ ಕಂಪನಿ ಒಂದು ತನ್ನ ಉದ್ಯೋಗಿಗಳಿಗೆ ಇಂದು ಮಾರ್ಚ್ 17 ರಂದು ವಿಶ್ವ ನಿದ್ರಾ ದಿನದ ಆಚರಣೆ ನಿಮಿತ್ತ ಅಧಿಕೃತವಾಗಿ ಐಚ್ಛಿಕ ರಜೆಯನ್ನು ಘೋಷಿಸಿದೆ.

ಲಿಂಕ್ಡ್‌ಇನ್‌ನಲ್ಲಿ ಶೇರ್‌ ಮಾಡಲಾದ ಪೋಸ್ಟ್‌ ಒಂದರಲ್ಲಿ ವೇಕ್‌ಫಿಟ್ ಸೊಲ್ಯೂಷನ್ಸ್‌ನ ಇಮೇಲ್‌ ಸ್ಕ್ರೀನ್‌ ಶಾಟ್‌ ಲಗತ್ತಿಸಲಾಗಿದೆ. ಅದರಲ್ಲಿ ಈ ವಿಚಾರ ಬಹಿರಂಗವಾಗಿದೆ. ವೇಕ್‌ಫಿಟ್ ಸೊಲ್ಯೂಷನ್ಸ್‌ ಎಂಬುದು ಡಿ2ಸಿ ಹೋಮ್ ಅಂಡ್ ಸ್ಲೀಪ್ ಸೊಲ್ಯೂಷನ್ಸ್ ಸ್ಟಾರ್ಟ್-ಅಪ್ ಆಗಿದೆ. ಈ ಕಂಪನಿಯ ಆಡಳಿತ ಮಂಡಳಿ ತನ್ನ ಉದ್ಯೋಗಿಗಳಿಗೆ ಕಳುಹಿಸಿದ ಇಮೇಲ್‌ನ ಸ್ಕ್ರೀನ್‌ ಶಾಟ್‌ ಈಗ ಸದ್ದುಮಾಡಿದೆ.

"ಸರ್ಪ್ರೈಸ್ ಹಾಲಿಡೇ: ಅನೌನ್ಸಿಂಗ್ ದಿ ಗಿಫ್ಟ್ ಆಫ್ ಸ್ಲೀಪ್" ಎಂಬುದು ಉದ್ಯೋಗಿಗಳಿಗೆ ಕಳುಹಿಸಲಾದ ಇಮೇಲ್‌ನ ಶೀರ್ಷಿಕೆ. ಅಂತಾರಾಷ್ಟ್ರೀಯ ನಿದ್ರಾ ದಿನವನ್ನು ಆಚರಿಸುವುದಕ್ಕಾಗಿ ವೇಕ್‌ಫಿಟ್‌ನ ಎಲ್ಲ ಉದ್ಯೋಗಿಗಳಿಗೆ ಮಾರ್ಚ್‌ 17 ಐಚ್ಛಿಕ ರಜಾದಿನ ಎಂಬುದನ್ನು ನಾವು ರೋಮಾಂಚನದೊಂದಿಗೆ ಘೋಷಿಸುತ್ತಿದ್ದೇವೆ. ನಿದ್ರೆಯ ಉತ್ಸಾಹಿಗಳಾಗಿ, ಈ ಶುಕ್ರವಾರವನ್ನು ವಿಶೇಷವಾಗಿ ನಿದ್ರಾ ದಿನವನ್ನು ಹಬ್ಬ ಎಂದು ಪರಿಗಣಿಸುತ್ತೇವೆ!. ಎಚ್‌ಆರ್‌ ಪೋರ್ಟಲ್‌ ಮೂಲಕ ಈ ರಜೆಯನ್ನು ನೀವು ಮಂಜೂರು ಮಾಡಿಸಿಕೊಳ್ಳಬಹುದು ಎಂಬುದು ಇಮೇಲ್‌ನ ಸಾರಾಂಶ.

"ನಮ್ಮ ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್‌ನ 6 ನೇ ಆವೃತ್ತಿಯ ಪ್ರಕಾರ, 2022 ರಿಂದ ಕೆಲಸದ ಸಮಯದಲ್ಲಿ ನಿದ್ರೆಗೆ ಜಾರುವವರ ಪ್ರಮಾಣದಲ್ಲಿ ಶೇಕಡ 21 ಹೆಚ್ಚಳ ಮತ್ತು ಸುಸ್ತಾಗಿ ಏಳುವ ಜನರಲ್ಲಿ 11% ಹೆಚ್ಚಳವಾಗಿದೆ. ನಿದ್ರಾಹೀನತೆಯ ವ್ಯಾಪಕತೆಯನ್ನು ಪರಿಗಣಿಸಿ, ನಿದ್ರಾ ದಿನವನ್ನು ಆಚರಿಸಲು ಉತ್ತಮ ಮಾರ್ಗ ಯಾವುದು? ನಿದ್ರೆಯ ಉಡುಗೊರೆಯೇ ಸೂಕ್ತ ಅಲ್ಲವೇ? ಎಂದು ಕಂಪನಿಯು ತನ್ನ ಉದ್ಯೋಗಿಗಳಿಗೆ ಪತ್ರ ಬರೆದಿದೆ.

ಉದ್ಯೋಗಿಗಳಿಗೆ ನಿದ್ರೆಯ ಉಡುಗೊರೆ

ಕಳೆದ ವರ್ಷ, ಕಂಪನಿಯು ತನ್ನ ಉದ್ಯೋಗಿಗಳಿಗೆ "ರೈಟ್ ಟು ನ್ಯಾಪ್ ನೀತಿ" ಯನ್ನು ಘೋಷಿಸಿತ್ತು. ಅದರ ಮೂಲಕ ಎಲ್ಲ ಉದ್ಯೋಗಿಗಳಿಗೆ ತಮ್ಮ ಕೆಲಸದ ಸಮಯದಲ್ಲಿ 30 ನಿಮಿಷಗಳ ಕಿರು ನಿದ್ದೆ ಮಾಡಲು ಅವಕಾಶ ಮಾಡಿಕೊಟ್ಟಿತ್ತು.

“ಮಧ್ಯಾಹ್ನದ ಚಿಕ್ಕನಿದ್ರೆಯು ದೇಹವನ್ನು ರೀಚಾರ್ಜ್ ಮಾಡಲು ಮತ್ತು ಕೈಯಲ್ಲಿರುವ ಕಾರ್ಯದ ಮೇಲೆ ಪುನಃ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ, ಹೀಗಾಗಿ ಕಾರ್ಯಸ್ಥಳದ ಉತ್ಪಾದಕತೆ ಮತ್ತು ಪ್ರೇರಣೆಯನ್ನು ಸುಧಾರಿಸುತ್ತದೆ. ಮನೆಯಿಂದ ಕೆಲಸದ ಆಗಮನದೊಂದಿಗೆ ಮಧ್ಯಾಹ್ನದ ನಿದ್ರೆಯ ಸುತ್ತ ಸಂಭಾಷಣೆಗಳು ಪ್ರಧಾನವಾದವು ಮತ್ತು ಕಂಪನಿಗಳು ನಿಧಾನವಾಗಿ ಆದರೆ ಸ್ಥಿರವಾಗಿ ಅದರ ಪ್ರಾಮುಖ್ಯತೆಯನ್ನು ಅರಿತುಕೊಳ್ಳುತ್ತಿವೆ. ಈ ಉಪಕ್ರಮದ ಮೂಲಕ, ಕಂಪನಿಯು ನಿದ್ರಾ ಕ್ರಾಂತಿಯನ್ನು ಪ್ರಾರಂಭಿಸಲು ಆಶಿಸುತ್ತಿದೆ. ಅದೇ ರೀತಿ ಇತರ ಕಂಪನಿಗಳನ್ನು ಉಪಕ್ರಮವನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ ”ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ವೇಕ್‌ಫಿಟ್ ಸೊಲ್ಯೂಷನ್ಸ್ ತನ್ನ ಗೃಹೋಪಯೋಗಿ ಉತ್ಪನ್ನಗಳ ಕಾರಣದಿಂದಾಗಿ ಬಹಳ ಜನಪ್ರಿಯವಾಗಿದೆ.

ವಿಶ್ವ ನಿದ್ರಾ ದಿನವು ನಿದ್ರೆಯ ಪ್ರಾಮುಖ್ಯತೆ ಮತ್ತು ನಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ನಿದ್ರೆಯ ಅಸ್ವಸ್ಥತೆಗಳ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ನಿದ್ರಾಹೀನತೆಯು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯಾಗಿದೆ ಮತ್ತು ಅವರ ಜೀವನದ ಗುಣಮಟ್ಟದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ