logo
ಕನ್ನಡ ಸುದ್ದಿ  /  ಕರ್ನಾಟಕ  /  Gruhalakshmi: ಗೃಹಲಕ್ಷ್ಮಿ ಯೋಜನೆ ಬಗ್ಗೆ ಜನರ ಪ್ರಶ್ನೆಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟ ಉತ್ತರಗಳಿವು; ನಿಮಗಿದು ಗೊತ್ತಿರಬೇಕು

Gruhalakshmi: ಗೃಹಲಕ್ಷ್ಮಿ ಯೋಜನೆ ಬಗ್ಗೆ ಜನರ ಪ್ರಶ್ನೆಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟ ಉತ್ತರಗಳಿವು; ನಿಮಗಿದು ಗೊತ್ತಿರಬೇಕು

Raghavendra M Y HT Kannada

Jul 20, 2023 08:33 AM IST

google News

ಗೃಹಲಕ್ಷ್ಮೀ ಯೋಜನೆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿವರ ಕೊಟ್ಟಿದ್ದಾರೆ

  • Gruhalakshmi scheme FAQs in Kannada: ಗೃಹಲಕ್ಷ್ಮಿ ಯೋಜನೆಗೆ ಬುಧವಾರದಿಂದ (ಜುಲೈ 19) ನೋಂದಣಿ ಆರಂಭವಾಗಿದೆ. ಈ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಯಾವಾಗ ಬರುತ್ತೆ? ಯಾರಿಗೆ ಬರುತ್ತೆ? ನೋಂದಣಿ ಹೇಗೆ ಮಾಡಿಸಬೇಕು ಎಂಬುದು ಸೇರಿದಂತೆ ಅಗತ್ಯ ಮಾಹಿತಿ ಇಲ್ಲಿದೆ. ಈ ಮಾಹಿತಿಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ್ದಾರೆ.

ಗೃಹಲಕ್ಷ್ಮೀ ಯೋಜನೆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿವರ ಕೊಟ್ಟಿದ್ದಾರೆ
ಗೃಹಲಕ್ಷ್ಮೀ ಯೋಜನೆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿವರ ಕೊಟ್ಟಿದ್ದಾರೆ

ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವು ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳ (Congress Guarantees) ಪೈಕಿ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ 4ನೇ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆಯನ್ನು (Gruhalakshmi Scheme) ಅಧಿಕಾರಕ್ಕೆ ಬಂದ ಎರಡನೇ ತಿಂಗಳಿಗೆ ಜಾರಿ ಮಾಡುತ್ತಿದೆ. ವಿಧಾನಸೌಧದಲ್ಲಿ ಜುಲೈ 19ರ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಅಧಿಕೃತವಾಗಿ ಚಾಲನೆ ನೀಡಿದರು.

‘ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿ ಯಾರಿಗೆ’ ಹೀಗೊಂದು ಪ್ರಶ್ನೆ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಗೃಹಲಕ್ಷ್ಮಿ ಯೋಜನೆಯ ಪ್ರಕಾರ ನೀಡುವ 2,000 ರೂಪಾಯಿ ಅತ್ತೆಗಾ ಅಥವಾ ಸೊಸೆಗಾ ಎಂಬುದೂ ಚರ್ಚೆಗೆ ಕಾರಣವಾಗಿತ್ತು. ಅದಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸ್ಪಷ್ಟನೆ ನೀಡಿದ್ದು, ಗೊಂದಲ ಬಗೆಹರಿಸಿದ್ದಾರೆ. ‘ಮನೆಯೊಡತಿಯೇ ಗೃಹಲಕ್ಷ್ಮಿ. ಅವರಿಗೇ 2,000 ರೂಪಾಯಿ ಎಂದು ಗೃಹಲಕ್ಷ್ಮಿ’ ಎಂದು ಕಾಂಗ್ರೆಸ್‌ ಸರ್ಕಾರ ಪ್ರಕಟಿಸಿತ್ತು. ‘ಮನೆಯೊಡತಿ ಯಾರು? ಅತ್ತೆಯಾ ಅಥವಾ ಸೊಸೆಯಾ’ ಎಂಬುದು ಗೊಂದಲಕ್ಕೆ ಕಾರಣವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ‘ಅತ್ತೆಯೇ ಮನೆಯೊಡತಿ. ಅವರಿಗೇ ಗೃಹಲಕ್ಷ್ಮೀ ಯೋಜನೆಯ ಹಣ ಸಿಗಲಿದೆ’ ಎಂದು ಸ್ಪಷ್ಟಪಡಿಸಿದ್ದರು.

ನಮ್ಮ ಸಂಪ್ರದಾಯದ ಪ್ರಕಾರ, ಅತ್ತೆಯೇ ಮನೆಯ ಒಡತಿ. ಹೀಗಾಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸರ್ಕಾರ ಅತ್ತೆಗೆ ನೀಡಲಿದೆ. ಆ ಹಣವನ್ನು ಅತ್ತೆ ಬೇಕಾದರೆ ಪ್ರೀತಿಯಿಂದ ಸೊಸೆಗೆ ನೀಡಿದರೆ ನಮ್ಮ ಅಭ್ಯಂತರ ಏನೂ ಇಲ್ಲ ಎಂದು ಸಚಿವರು ಹೇಳಿದ್ದರು. ‘ಮನೆ ಬಾಗಿಲಿಗೆ ಭೇಟಿ ಕೊಡುವ ಪ್ರಜಾಪ್ರತಿನಿಧಿಗಳ ಮೂಲಕ ಯೋಜನೆಗೆ ಸುಲಭವಾಗಿ ನೋಂದಣಿ ಮಾಡಿಸಿಕೊಳ್ಳಬಹುದು. ರೇಷನ್ ಕಾರ್ಡ್, ಅಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಫಲಾನುಭವಿಗಳು ಒದಗಿಸಬೇಕಾಗುತ್ತದೆ’ ಎಂದು ಸಚಿವರು ತಿಳಿಸಿದ್ದರು.

ನೋಂದಣಿ ಮಾಡಿಕೊಂಡ ಫಲಾನುಭವಿಗಳ ಖಾತೆಗೆ ಆಗಸ್ಟ್‌ನಿಂದ 2 ಸಾವಿರ ರೂಪಾಯಿ ಜಮೆಯಾಗಲಿದೆ. ರಾಜ್ಯದ ಮಹಿಳೆಯರು ಕಾತರದಿಂದ ಕಾಯುತ್ತಿರುವ ಈ ಮಹತ್ವಾಕಾಂಕ್ಷಿ ಈ ಯೋಜನೆಗೆ ನೋಂದಣಿ ಆರಂಭವಾಗುವುದಕ್ಕೂ ಮೊದಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಅತ್ಯಗತ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇವರ ವಿಸ್ತೃತ ಸಂದರ್ಶನವನ್ನು ‘ಇಂಡಿಯನ್ ಎಕ್ಸ್‌ಪ್ರೆಸ್’ ಜಾಲತಾಣ ಪ್ರಕಟಿಸಿದೆ.

ಕರ್ನಾಟಕದ ಮಹಿಳೆಯರನ್ನು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸದೃಢಗೊಳಿಸುವುದು ಕಾಂಗ್ರೆಸ್ ಸರ್ಕಾರದ ಉದ್ದೇಶದಿಂದಾಗಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸಚಿವರು ಈ ಸಂದರ್ಶನದಲ್ಲಿ ಹೇಳಿದ್ದಾರೆ. ಯೋಜನೆಗೆ ಸಂಬಂಧಿಸಿದಂತೆ ಸಚಿವರು ಇನ್ನೂ ಹಲವರು ಮಾಹಿತಿಯನ್ನು ಹಂಚಿಕೊಂಡಿದ್ದು, ಅದರ ಆಯ್ದ, ಪ್ರಮುಖ ಭಾಗವನ್ನು ಇಲ್ಲಿ ಕನ್ನಡದಲ್ಲಿ ನೀಡಲಾಗಿದೆ. ಕನ್ನಡದ ಓದುಗರಿಗೆ ಇದು ಅತ್ಯಗತ್ಯ ಮಾಹಿತಿ ಎನ್ನುವ ಕಾರಣಕ್ಕೆ ಈ ಸಂದರ್ಶನದ ಸಂಕ್ಷಿಪ್ತ ಅನುವಾದವನ್ನು ನಾವು ಪ್ರಕಟಿಸಿದ್ದೇವೆ. ಆಸಕ್ತರು ಸಂದರ್ಶನದ ಪೂರ್ಣ ಪಠ್ಯವನ್ನು ‘ಇಂಡಿಯನ್ ಎಕ್ಸ್‌ಪ್ರೆಸ್’ ಜಾಲತಾಣದಲ್ಲಿಯೇ ಓದಬೇಕು.

ಪ್ರಶ್ನೆ: ಗೃಹಲಕ್ಷ್ಮಿ ಯೋಜನೆಗೆ ಕರ್ನಾಟಕದಲ್ಲಿ ಎಷ್ಟು ಫಲಾನುಭವಿಗಳನ್ನು ಗುರುತಿಸಲಾಗಿದೆ? ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊರೆಯಾಗುತ್ತೆ?

ಉತ್ತರ: ಕರ್ನಾಟಕದಲ್ಲಿನ 1.28 ಕೋಟಿಗೂ ಹೆಚ್ಚು ಕುಟುಂಬಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ. ಗೃಹಲಕ್ಷ್ಮಿ ಯೋಜನೆಗಾಗಿ ನಮ್ಮ ಸರ್ಕಾರ ವರ್ಷಕ್ಕೆ 30,000 ಕೋಟಿ ರೂಪಾಯಿಗಿಂತ ಹೆಚ್ಚು ಖರ್ಚು ಮಾಡುತ್ತಿದೆ.

ಪ್ರಶ್ನೆ: ಯೋಜನೆಯ ಹಣ ಕುಟುಂಬದ ಯಜಮಾನಿಗೆ ಹೋಗುತ್ತೆ. ಮನೆಯಲ್ಲಿ ಕುಟುಂಬದ ಯಜಮಾನಿ ಯಾರೆಂದು ಸರ್ಕಾರ ಹೇಗೆ ನಿರ್ಧರಿಸುತ್ತೆ?

ಉತ್ತರ: ಇದು ತುಂಬಾ ಸರಳವಾಗಿದೆ. ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರು ಯಾರು ಎಂದು ನಮೂದಿಸಲಾಗಿದೆಯೇ ಅವರ ಖಾತೆಗೆ ಹಣ ಜಮೆಯಾಗುತ್ತದೆ.

ಪ್ರಶ್ನೆ: ಪಡಿತರ ಚೀಟಿಯಲ್ಲಿ ಪುರುಷರನ್ನು ಕುಟುಂಬದ ಮುಖ್ಯಸ್ಥ ಎಂದು ಗುರುತಿಸಲಾಗುತ್ತಿಲ್ಲವೇ?

ಉತ್ತರ: ರೇಷನ್ ಕಾರ್ಡ್‌ಗಳಲ್ಲಿ ಕುಟುಂಬದ ಮುಖ್ಯಸ್ಥರು ಎಂದು ಗುರುತಿಸಿರುವ ಕೆಲವು ಪುರುಷರು ಇದ್ದಾರೆ. ಆದರೆ ಇದು ಕೆಲವೇ ಕೆಲವು ಸಂಖ್ಯೆಯಲ್ಲಿದೆ. ಗೃಹ ಲಕ್ಷ್ಮಿ ಯೋಜನೆಯಿಂದ ಪ್ರಯೋಜನ ಪಡೆಯುವ ಪ್ರತಿಶತ ಕುಟುಂಬಗಳ ಪೈಕಿ ಶೇಕಡಾ 99.9 ರಷ್ಟು ಮಹಿಳೆಯರೇ ಇದ್ದಾರೆ.

(Gruhalakshmi scheme complete details in Kannada)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ