logo
ಕನ್ನಡ ಸುದ್ದಿ  /  ಕರ್ನಾಟಕ  /  Gruhalakshmi Scheme: ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಆಗಲು ಪಡಿತರ ಚೀಟೀಲಿ ದೋಷವಿದ್ರೆ ಏನು ಮಾಡಬೇಕು; ಇಲ್ಲಿದೆ ಗಮನಿಸಬೇಕಾದ ಟಾಪ್‌ 5 ಅಂಶ

Gruhalakshmi Scheme: ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಆಗಲು ಪಡಿತರ ಚೀಟೀಲಿ ದೋಷವಿದ್ರೆ ಏನು ಮಾಡಬೇಕು; ಇಲ್ಲಿದೆ ಗಮನಿಸಬೇಕಾದ ಟಾಪ್‌ 5 ಅಂಶ

HT Kannada Desk HT Kannada

Jul 22, 2023 07:30 AM IST

google News

ಗೃಹಲಕ್ಷ್ಮಿ ಯೋಜನೆ (ಸಾಂಕೇತಿಕ ಚಿತ್ರ)

  • Grihalakshmi Yojana: ಕಾಂಗ್ರೆಸ್‌ ಪಕ್ಷ ಚುನಾವಣೆಗೆ ಮೊದಲು ಘೋಷಿಸಿದ 5 ಗ್ಯಾರೆಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆ ಕೂಡ ಶಕ್ತಿ ಯೋಜನೆಯಂತೆಯೇ ಬಹಳ ಜನಪ್ರಿಯವಾದುದು. ಗೃಹಲಕ್ಷ್ಮಿ ಫಲಾನುಭವಿ ಆಗಲು ಪಡಿತರ ಚೀಟೀಲಿ ದೋಷವಿದ್ರೆ ಏನು ಮಾಡಬೇಕು ಎಂಬ ಪ್ರಶ್ನೆ ಸಹಜ. ಇದಕ್ಕೆ ಉತ್ತರ ಇಲ್ಲಿದೆ. 

ಗೃಹಲಕ್ಷ್ಮಿ ಯೋಜನೆ (ಸಾಂಕೇತಿಕ ಚಿತ್ರ)
ಗೃಹಲಕ್ಷ್ಮಿ ಯೋಜನೆ (ಸಾಂಕೇತಿಕ ಚಿತ್ರ)

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ ಪಕ್ಷ ಘೋಷಿಸಿದ್ದ 5 ಗ್ಯಾರೆಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು. ಇದನ್ನು ಬಳಿಕ ಅದು ಪಕ್ಷದ ಪ್ರಣಾಳಿಕೆಯಲ್ಲೂ ಘೋಷಿಸಿತ್ತು. ಈ ಸಲದ ಬಜೆಟ್‌ನಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹಲಕ್ಷ್ಮಿ ಯೋಜನೆಯನ್ನ ಘೋಷಿಸಿದ್ದು, ಅನುದಾನವನ್ನೂ ಹಂಚಿಕೆ ಮಾಡಿದ್ದಾರೆ.

ಇದರಂತೆ, ಈಗ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಯೋಜನೆಯ ಫಲಾನುಭವಿಗಳು ತಮ್ಮ ನೋಂದಣಿಯ ವೇಳಾಪಟ್ಟಿಯನ್ನು ಪರಿಶೀಲಿಸಲು ಸಹಾಯವಾಣಿ ಸಂಖ್ಯೆ (8147500500 / 8277000555)ಗಳಿಗೆ ನಿಮ್ಮ 12 ಅಂಕೆಯ ಪಡಿತರ ಚೀಟಿಯ ಸಂಖ್ಯೆಯನ್ನು SMS ಮೂಲಕ ಕಳುಹಿಸಿ ವಿವರಗಳನ್ನು ಪಡೆಯಬಹುದು.

ಅದೇ ರೀತಿ, ಕೆಲವೊಂದು ಸಂದೇಹಗಳೂ ಕಾಡಬಹುದು. ಈ ನೋಂದಣಿ ಮಾಡುವಾಗ ಪಡಿತರ ಚೀಟಿಯಲ್ಲಿ ಮಹಿಳೆ ಕುಟುಂಬದ ಯಜಮಾನಿ ಆಗಿದ್ದು, ಹೆಸರು ಅಥವಾ ಇತರೆ ದೋಷಗಳು ಇದ್ದರೆ ಈ ಯೋಜನೆಯ ಫಲಾನುಭವಿ ಆಗಬಹುದಾ?, ಇದಕ್ಕೆ ಶುಲ್ಕ ಇದೆಯಾ ಎಂಬಿತ್ಯಾದಿ ಸಂದೇಹಗಳಿರಬಹುದು. ಅಂತಹ ಗೊಂದಲ, ಸಂದೇಹ ನಿವಾರಿಸುವ ಪ್ರಯತ್ನ ಇದು.

ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಆಗುವುದಕ್ಕೆ ಗಮನಿಸಬೇಕಾದ 5 ಅಂಶಗಳು

  1. ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ ಏನು ಮಾಡಲಾಗುವುದು? - ಪಾವತಿಸಿರುವ ಹಣವನ್ನು ಫಲಾನುಭವಿಗಳಿಂದ ವಸೂಲು ಮಾಡಲಾಗುವುದು ಮತ್ತು ಅಂಥವರ ವಿರುದ್ಧ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
  2. ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಮರು ಮಹಿಳೆಯಾಗಿದ್ದು, ಆಧಾರ್ ಕಾರ್ಡ್‌ನಲ್ಲಿ ಪುರುಷ/ತೃತೀಯ ಲಿಂಗಿಯಾಗಿರುವ ಪ್ರಕರಣಗಳನ್ನು ಪರಿಗಣಿಸಲಾಗುತ್ತದೆಯೇ? - ಉತ್ತರ: ನಿಮ್ಮ ಸಮೀಪದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ.
  3. ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆಯಾಗಿದ್ದು, ಪಡಿತರ ಚೀಟಿಯಲ್ಲಿ ಲಿಂಗ ಪುರುಷ ಎಂದು ನಮೂದಾಗಿದ್ದರೆ ಯೋಜನೆಗೆ ಪರಿಗಣಿಸಲಾಗುತ್ತದೆಯೇ? - ನಿಮ್ಮ ಸಮೀಪದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ.
  4. ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸುವಾಗ ಶುಲ್ಕ ಪಾವತಿಸಬೇಕೆ? - ಈ ಯೋಜನೆಯ ನೋಂದಣಿ ಸಂಪೂರ್ಣ ಉಚಿತ. (ಯಾವುದೇ ಕಾರಣಕ್ಕೂ, ಯಾರಿಗೂ ಹಣ ಕೊಡಬೇಡಿ).
  5. ಗಂಡ ಮತ್ತು ಹೆಂಡತಿ ಜಂಟಿ ಖಾತೆಯನ್ನು ಹೊಂದಿದ್ದರೆ, ಜಂಟಿ ಖಾತೆ ವಿವರಗಳನ್ನು ನೋಂದಾಯಿಸಲು ಒದಗಿಸಬಹುದೇ? - ಇಲ್ಲ. ಇಂಥ ಸಂದರ್ಭಗಳಲ್ಲಿ ಯೋಜನೆಯಡಿ ನೋಂದಾಯಿಸಿಕೊಳ್ಳುವವರು ಹೊಸ ಬ್ಯಾಂಕ್ ಖಾತೆಯನ್ನು ತೆರೆದು ಪಾಸ್ ಪುಸ್ತಕದ ಪ್ರತಿಯನ್ನು ಒದಗಿಸಬೇಕು.

ಅಂದಾಜು 9 ಲಕ್ಷ ಫಲಾನುಭವಿಗಳಿಂದ ಅರ್ಜಿ ಸಲ್ಲಿಕೆ

ಗೃಹ ಲಕ್ಷ್ಮಿ ಯೋಜನೆಗೆ ಮೊದಲ ದಿನ 60,222 ಮಹಿಳೆಯರಿಂದ ನೋಂದಣಿ ಆಗಿದ್ದು, ಈ ಪೈಕಿ ಮೊಬೈಲ್ ಆ್ಯಪ್ ಮೂಲಕ 15,276 ಮತ್ತು ವೆಬ್ ಅಪ್ಲಿಕೇಶನ್ ಮೂಲಕ 44,946 ಮಹಿಳೆಯರಿಂದ ನೋಂದಣಿ ಆಗಿದೆ. ಎರಡನೇ ದಿನ 7,77,423 ಮಹಿಳೆಯರಿಂದ ನೋಂದಣಿ ಆಗಿದ್ದು, ಒಟ್ಟಾರೆ ಇದುವರೆಗೂ 8,81,639 ಮಹಿಳೆಯರಿಂದ ಅರ್ಜಿ ಸಲ್ಲಿಕೆ ಆಗಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಈ ಯೋಜನೆಗೆ ಸಂಬಂಧಿಸಿ ಕರ್ನಾಟಕ ಸರ್ಕಾರವು ಪದೇಪದೆ ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ಒದಗಿಸಿದೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಬಗ್ಗೆ 1300 ಪದಗಳ ಸಮಗ್ರ ವಿವರ ಇದೆ. ತಪ್ಪು ಮಾಹಿತಿ ಕೊಟ್ರೆ ಏನು ಶಿಕ್ಷೆ? ನೋಂದಣಿಗೆ ಶುಲ್ಕವಿದೆಯೇ? ಎಂಬುದರ ವಿವರಣೆಯೂ ಇದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ