logo
ಕನ್ನಡ ಸುದ್ದಿ  /  ಕರ್ನಾಟಕ  /  Bandipur:ಅತಿ ಹೆಚ್ಚು ಹುಲಿ: ದೇಶದಲ್ಲೇ ಬಂಡೀಪುರಕ್ಕೆ ಎರಡನೇ ಸ್ಥಾನ, ಜಿಮ್‌ ಕಾರ್ಬೆಟ್‌ ಉದ್ಯಾನ ನಂತರ ಕರುನಾಡ ಹುಲಿಧಾಮಕ್ಕೆ ಗೌರವ

Bandipur:ಅತಿ ಹೆಚ್ಚು ಹುಲಿ: ದೇಶದಲ್ಲೇ ಬಂಡೀಪುರಕ್ಕೆ ಎರಡನೇ ಸ್ಥಾನ, ಜಿಮ್‌ ಕಾರ್ಬೆಟ್‌ ಉದ್ಯಾನ ನಂತರ ಕರುನಾಡ ಹುಲಿಧಾಮಕ್ಕೆ ಗೌರವ

HT Kannada Desk HT Kannada

Jul 30, 2023 01:13 PM IST

google News

ಕರ್ನಾಟಕದ ಬಂಡೀಪುರದಲ್ಲಿ ದೇಶದಲ್ಲೇ ಅತಿ ಹೆಚ್ಚು ಹುಲಿಗಳಿವೆ. ಚಿತ್ರ: ಚಿನ್ನಸ್ವಾಮಿ ವಡ್ಡಗೆರೆ

    • Tiger census ಭಾರತದಲ್ಲಿ ಹುಲಿ ಗಣತಿ ವರದಿ ಬಿಡುಗಡೆ ಮಾಡಲಾಗಿದ್ದು, ಮಧ್ಯಪ್ರದೇಶದ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಬಂಡೀಪುರ ಮೊದಲ, ನಾಗರಹೊಳೆ ಎರಡನೇ ಸ್ಥಾನದಲ್ಲಿವೆ. ದೇಶದಲ್ಲಿಯೇ ಬಂಡೀಪುರಕ್ಕೆ ಜಿಮ್‌ ಕಾರ್ಬೆಟ್‌ ಹುಲಿ ಧಾಮದ ನಂತರ ಎರಡನೇ ಸ್ಥಾನ. ಹುಲಿ ಗಣತಿ ವರದಿ ಪ್ರಕಾರ ಹುಲಿ ಪ್ರಮಾಣದ ವಿವರ ಇಲ್ಲಿದೆ.
ಕರ್ನಾಟಕದ ಬಂಡೀಪುರದಲ್ಲಿ  ದೇಶದಲ್ಲೇ ಅತಿ ಹೆಚ್ಚು ಹುಲಿಗಳಿವೆ. ಚಿತ್ರ: ಚಿನ್ನಸ್ವಾಮಿ ವಡ್ಡಗೆರೆ
ಕರ್ನಾಟಕದ ಬಂಡೀಪುರದಲ್ಲಿ ದೇಶದಲ್ಲೇ ಅತಿ ಹೆಚ್ಚು ಹುಲಿಗಳಿವೆ. ಚಿತ್ರ: ಚಿನ್ನಸ್ವಾಮಿ ವಡ್ಡಗೆರೆ

ಗುಂಡ್ಲುಪೇಟೆ: ದೇಶದ ಹುಲಿ ಗಣತಿಯ ವರದಿಯನ್ನು ಬಿಡುಗಡೆ ಮಾಡಲಾಗಿದ್ದು, ಅತಿ ಹಳೆಯ ಹುಲಿ ಯೋಜಿತ ಪ್ರದೇಶಗಳಲ್ಲಿ ಒಂದಾದ ಬಂಡೀಪುರ ಹುಲಿ ಸಂರಕ್ಷಿತ ಧಾಮಕ್ಕೆ (Bandipur Tiger Reserve) ಕರ್ನಾಟಕದಲ್ಲಿ ನಂಬರ್‌ ಒನ್‌ ಹಾಗೂ ದೇಶದಲ್ಲೇ ಎರಡನೇ ಸ್ಥಾನ ಲಭಿಸಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ( National Tiger Conservation Authority) ಬಿಡುಗಡೆ ಮಾಡಿರುವ ವರದಿ ಪ್ರಕಾರ ಉತ್ತರಾಖಂಡದ ಜಿಮ್‌ ಕಾರ್ಬೆಟ್‌ ಹುಲಿ ಉದ್ಯಾನದಲ್ಲಿ ದೇಶದಲ್ಲೇ ಅತ್ಯಧಿಕ 312 ಹುಲಿಗಳಿದ್ದರೆ ನಂತರ ಬಂಡೀಪುರದಲ್ಲಿ 191 ಹುಲಿಗಳಿವೆ. ಮೂರನೇ ಸ್ಥಾನದಲ್ಲಿ ಕರ್ನಾಟಕದ ಮತ್ತೊಂದು ಹುಲಿ ಧಾಮ ನಾಗರಹೊಳೆ 185 ಹುಲಿಗಳನ್ನು ಹೊಂದಿದೆ.

ದೇಶ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಹುಲಿಗಳ ಸಂಖ್ಯೆಯನ್ನು ಹೊಂದಿರುವ ರಾಜ್ಯಗಳ ಸ್ಥಿತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ದೇಶದ ಮಧ್ಯಪ್ರದೇಶ ರಾಜ್ಯವು 785 ಹುಲಿಗಳ ಸಂಖ್ಯೆಯನ್ನು ಹೊಂದಿರುವ ಮೂಲಕ ಮೊದಲನೇ ಸ್ಥಾನವನ್ನು ಅಲಂಕರಿಸಿದ್ದು, ಕಳೆದ ಬಾರಿ 524 ಹುಲಿಗಳನ್ನು ಹೊ೦ದಿರುವ ಮೂಲಕ ಕರ್ನಾಟಕ ಎರಡನೇ ಸ್ಥಾನ ಅಲಂಕರಿಸಿತ್ತು. ಅದರಂತೆ ಈ ಬಾರಿಯೂ 563 ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯವು ದೇಶದಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ ಅದರಂತೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವು ರಾಜ್ಯದಲ್ಲಿ ಅತಿ ಹೆಚ್ಚು ಹುಲಿಗಳ ಸಂಖ್ಯೆಯನ್ನು ಹೊಂದಿದ್ದು ಮೊದಲನೇ ಸ್ಥಾನವನ್ನು ಪಡೆದಿದೆ.

ಹುಲಿಗಳ ಗಣತಿ ನಡೆಸಿದ ಪ್ರಕಾರ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ. ಕರ್ನಾಟಕದಲ್ಲಿ ಬಂಡೀಪುರಕ್ಕೆ ಮೊದಲ ಸ್ಥಾನ ಬಂದಿದೆ. ಅದರಲ್ಲೂಬಂಡೀಪುರ ಕೋರ್‌ ಪ್ರದೇಶದಲ್ಲೇ 150 ಹುಲಿಗಳಿದ್ದರೆ, ಗಡಿ ಪ್ರದೇಶವೂ ಸೇರಿದರೆ ಒಟ್ಟು191 ಹುಲಿಗಳಿರುವ ಅಂದಾಜು ಮಾಡಲಾಗಿದೆ. ಸಂರಕ್ಷಣೆ ದೃಷ್ಟಿಯಿಂದಲೂ ಬಂಡೀಪುರ ಉತ್ತಮ ಸ್ಥಾನದಲ್ಲಿದ್ದು, ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು, ಸ್ವಯಂ ಸೇವಾ ಸಂಘಟನೆಗಳು, ಸ್ಥಳೀಯರ ಸಹಕಾರದಿಂದಲೂ ಇದು ಸಾಧ್ಯವಾಗಿದೆ ಎನ್ನುವುದು ಬಂಡೀಪುರ ಹುಲಿ ನಿರ್ದೇಶಕ ಡಾ.ಪಿ.ರಮೇಶ್‌ ಕುಮಾರ್‌ ಸಂತಸದ ನುಡಿ.

ಹುಲಿ ರಕ್ಷಣೆಗೆ ಸಹಕರಿಸಿ: ಯದುವೀರ್‌

ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಮುಖ್ಯ ಹೊಣೆಯಾಗಿದ್ದು ಪ್ರಜ್ಞಾವಂತ ಸಮಾಜದ ಪ್ರಜೆಗಳಾದ ನಾವು ಹುಲಿಗಳ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವುದಲ್ಲದೆ ನಮ್ಮ ಸುತ್ತಲಿನ ಸಮಾಜವನ್ನು ಎಚ್ಚರಿಸುತ್ತಾ ವನ್ಯಜೀವಿಗಳ ಉಳಿವಿಗಾಗಿ ಸಹಕರಿಸಬೇಕೆಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಅವರು ತಿಳಿಸಿದರು.

ಜಾಗತಿಕ ಹುಲಿ ದಿನಾಚರಣೆ 2023ರ ಪ್ರಯುಕ್ತ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿ, ಹುಲಿ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪಾಲ್ಗೊಂಡು ಮಾತನಾಡಿದರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಗಳಾದ ರಮೇಶ್ ಕುಮಾರ್ ಬಂಡಿಪುರ ಹುಲಿಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದು ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದ ಫಲವಾಗಿ ಹೆಚ್ಚಿನ ಹುಲಿ ಸಂತತಿ ಇರುವ ಅರಣ್ಯ ಪ್ರದೇಶವೆಂದು ಗುರುತಿಸಿಕೊಳ್ಳಲು ಸಾಧ್ಯವಾಗಿರುತ್ತದೆ. ಈ

ಸಂಬಂಧ ಸಾರ್ವಜನಿಕರಲ್ಲಿ ಹುಲಿ ಸಂರಕ್ಷಣೆಯ ಬಗೆ ಅರಿವು ಮೂಡಿಸಲು ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ವಿವಿಧ ಸ್ಪರ್ಧೆ

ಕಾರ್ಯಕ್ರಮದ ಅಂಗವಾಗಿ ಜುಲೈ 28 ಹಾಗೂ ಜು. 29ರಂದು ಗಿರಿಜನ ಮಕ್ಕಳು ಹಾಗೂ ವಿವಿಧ ವಲಯಗಳ ಶಾಲಾ ಮಕ್ಕಳಿಗಾಗಿ ಚಿತ್ರಕಲೆ ಪ್ರಬಂಧ ರಸಪ್ರಶ್ನೆ ಹಾಗೂ ಆಶುಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಸಹ ಕಾರ್ಯಕ್ರಮದ ಆಯೋಜಕರಿಂದ ಗಣ್ಯ ವ್ಯಕ್ತಿಗಳಿಂದ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಚಿತ್ರಿಸಲಾಗಿದ್ದ ಚಿತ್ರಕಲೆಗಳನ್ನು ಇರಿಸಲಾಗಿದೆ. ಅಂತಹ ವಸ್ತುಪ್ರದರ್ಶನದ ಕೊಠಡಿಯನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಟೇಪ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು. ವಿದ್ಯಾರ್ಥಿಗಳು ಚಿತ್ರಿಸಿದ ಚಿತ್ರಗಳ ಕಾರ್ಯಕ್ರಮದಲ್ಲಿ ಸಹಾಯಕ ಸಂರಕ್ಷಣಾಧಿಕಾರಿಗಳಾದ ಪರಮೇಶ್ ಪಿ, ನವೀನ್ ಕುಮಾರ್, ರವೀಂದ್ರ, ವಲಯ ಅಧಿಕಾರಿಗಳಾದ ನವೀನ್ ಕುಮಾರ್‌, ದೀಪಾ, ಮಂಜುನಾಥ್, ಸತೀಶ್‌, ಮಲ್ಲೇಶ್‌, ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಪೋಷಕರು ಇತರರು ಹಾಜರಿದ್ದರು.

(ವರದಿ: ಧಾತ್ರಿ ಭಾರದ್ವಾಜ್‌, ಮೈಸೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ