logo
ಕನ್ನಡ ಸುದ್ದಿ  /  ಕರ್ನಾಟಕ  /  Bandipur Tiger Attack: ಬಂಡೀಪುರದಲ್ಲಿ ಮತ್ತೊಂದು ನರಭಕ್ಷಕ ಹುಲಿ: ರೈತನ ಮುಖ ಬಿಟ್ಟು ದೇಹ ತಿಂದ ವ್ಯಾಘ್ರ

Bandipur Tiger attack: ಬಂಡೀಪುರದಲ್ಲಿ ಮತ್ತೊಂದು ನರಭಕ್ಷಕ ಹುಲಿ: ರೈತನ ಮುಖ ಬಿಟ್ಟು ದೇಹ ತಿಂದ ವ್ಯಾಘ್ರ

HT Kannada Desk HT Kannada

Dec 12, 2023 03:13 PM IST

google News

ಬಂಡೀಪುರದಲ್ಲಿ ಹುಲಿ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ನಿರ್ದೇಶಕ ಡಾ.ರಮೇಶ್‌ ಕುಮಾರ್‌ ಪರಿಶೀಲಿಸಿದರು.

    • Bandipur Tiger attack ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಕುಂದಕೆರೆ ಹೋಬಳಿ ಪೋಡಿನ ವ್ಯಕ್ತಿಯೊಬ್ಬನನ್ನು ಹುಲಿ ಕೊಂದು ಹಾಕಿದೆ.
ಬಂಡೀಪುರದಲ್ಲಿ ಹುಲಿ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ನಿರ್ದೇಶಕ ಡಾ.ರಮೇಶ್‌ ಕುಮಾರ್‌ ಪರಿಶೀಲಿಸಿದರು.
ಬಂಡೀಪುರದಲ್ಲಿ ಹುಲಿ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ನಿರ್ದೇಶಕ ಡಾ.ರಮೇಶ್‌ ಕುಮಾರ್‌ ಪರಿಶೀಲಿಸಿದರು.

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿ ಮತ್ತೊಂದು ನರಭಕ್ಷಕ ಹುಲಿ ಪತ್ತೆಯಾಗಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹಾಡಿನ ಕಣಿವೆ ಪೋಡಿನ ಬಳಿ ಗಿರಿಜನ ವ್ಯಕ್ತಿಯೊಬ್ಬನ್ನು ಹುಲಿ ತಿಂದು ಹಾಕಿದೆ. ಕೆಲ ದಿನಗಳ ಹಿಂದೆಯಷ್ಟೇ ಬಂಡೀಪುರಕ್ಕೆ ಸೇರಿದ ನಂಜನಗೂಡು ತಾಲ್ಲೂಕು ಬಳ್ಳೂರು ಹುಂಡಿ ಬಳಿ ಹುಲಿ ರೈತ ಮಹಿಳೆ ತಿಂದು ಹಾಕಿತ್ತು. ತಿಂಗಳ ಅಂತರದಲ್ಲಿಯೇ ಬಂಡೀಪುರ ವ್ಯಾಪ್ತಿಯಲ್ಲಿ ಮೂವರನ್ನು ಹುಲಿ ಕೊಂದು ಹಾಕಿದೆ.

ಬಂಡೀಪುರ ವ್ಯಾಪ್ತಿಯ ಕುಂದಕೆರೆ ವನ್ಯಜೀವಿ ವಲಯದ ಹಾಡಿನ ಕಣಿವೆ ಪೋಡಿನ ಬಸವ(54 ) ಎಂಬಾತ ಭಾನುವಾರದಂದು ಉಪಉತ್ಪನ್ನಗಳನ್ನು ತರಲೆಂದು ಕಾಡಿಗೆ ತೆರಳಿದ್ದ. ಆದರೆ ಆತ ಭಾನುವಾರ ಮನೆಗೆ ಹಿಂದಿರುಗಿರಲಿಲ್ಲ. ಸೋಮವಾರವೂ ಬಾರದೇ ಇದ್ದಾಗ ಆತಂಕಗೊಂಡ ಕುಟುಂಬದವರು ಕಾಡಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರು. ಆದರೂ ಆತ ಪತ್ತೆಯಾಗಿರಲಿಲ್ಲ.

ಕೊನೆಗೆ ಮಂಗಳವಾರ ಅರಣ್ಯ ಇಲಾಖೆಯವರಿಗ ಮಾಹಿತಿ ನೀಡಿ ಹುಡುಕಾಟ ನಡೆಸಿದಾಗ ಅರಣ್ಯ ಪ್ರದೇಶದ ಭಾಗವಾಗಿರುವ ವೀರೇಶ್ವರ ಗುಡ್ಡದಲ್ಲಿ ಬರೀ ಮುಖ ಹಾಗೂ ದೇಹದ ಸ್ವಲ್ಪಭಾಗ ಇರುವ ಸ್ಥಿತಿಯಲ್ಲಿ ಬಸವನ ಮೃತ ದೇಹ ಸಿಕ್ಕಿತ್ತು. ಅಲ್ಲಿಯೇ ಕತ್ತಿ, ಹಗ್ಗ ಪತ್ತೆಯಾಗಿದ್ದವು. ಅದನ್ನು ಗಮನಿಸಿದರೆ ಹುಲಿ ದಾಳಿಯಿಂದಲೇ ಆಗಿರುವುದು ಖಚಿತವಾಗಿತ್ತು.

ಹುಲಿ ದಾಳಿಯಿಂದಲೇ ಬಸವ ಎಂಬಾತ ಮೃತಪಟ್ಟಿದ್ಧಾನೆ. ಆತನ ದೇಹದ ಬಹುತೇಕ ಭಾಗವನ್ನು ಹುಲಿ ತಿಂದು ಹಾಕಿದೆ. ಈ ಭಾಗದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಆಗಾಗ ಹುಲಿ ಕಾಣಿಸಿಕೊಂಡ ಬಗ್ಗೆಯೂ ಸ್ಥಳೀಯರಿಂದ ದೂರುಗಳು ಬರುತ್ತಿದ್ದವು. ಅರಣ್ಯ ಪ್ರದೇಶದ ಅಂಚಿನಲ್ಲಿರುವ ಗ್ರಾಮದವರು ಎಚ್ಚರಿಕೆಯಿಂದ ಇರುವಂತೆ ನಾವು ಆಗಾಗ ತಿಳಿಸುತ್ತಲೇ ಇದ್ದೆವು. ಇದರ ನಡುವೆ ಈ ಘಟನೆ ನಡೆದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಘಟನೆ ಕಾಡಿನ ಒಳಗೆ ಆಗಿರುವುದರಿಂದ ಪರಿಹಾರ ನೀಡಲು ಆಗದು. ಆದರೂ ಮೃತನ ಕುಟುಂಬಕ್ಕೆ ಪರಿಹಾರ ನೀಡುವ ಸಂಬಂಧ ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಹುಲಿ ಬಾಯಿಗೆ ಸಿಲುಕಿ ಮೃತಪಟ್ಟ ಬಸವನ ದೇಹ ಪತ್ತೆಯಾದ ಸ್ಥಳಕ್ಕೆ ಬಂಡೀಪುರ ಹುಲಿಧಾಮದ ನಿರ್ದೇಶಕ ಡಾ.ರಮೇಶ್‌ ಕುಮಾರ್‌ ಹಾಗೂ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ