logo
ಕನ್ನಡ ಸುದ್ದಿ  /  ಕರ್ನಾಟಕ  /  Higher Education News: ಉನ್ನತ ಶಿಕ್ಷಣಕ್ಕಾಗಿ ಬ್ರಿಟಿಷ್‌ ಕೌನ್ಸಿಲ್‌ ಜತೆಗೆ ಕರ್ನಾಟಕದ ಒಪ್ಪಂದ

Higher education News: ಉನ್ನತ ಶಿಕ್ಷಣಕ್ಕಾಗಿ ಬ್ರಿಟಿಷ್‌ ಕೌನ್ಸಿಲ್‌ ಜತೆಗೆ ಕರ್ನಾಟಕದ ಒಪ್ಪಂದ

HT Kannada Desk HT Kannada

Feb 15, 2023 11:04 AM IST

google News

ಉನ್ನತ ಶಿಕ್ಷಣದಲ್ಲಿ ಪ್ರಗತಿಪರ ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ಸಾಧಿಸುವ ಗುರಿಯೊಂದಿಗೆ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಮತ್ತು ಬ್ರಿಟಿಷ್ ಕೌನ್ಸಿಲ್ ಮಂಗಳವಾರ ಕಾರ್ಯಾಚರಣಾ ಮೈತ್ರಿ ಒಪ್ಪಂದಕ್ಕೆ ಸಹಿ ಹಾಕಿವೆ.

  • Higher education News: ಉನ್ನತ ಶಿಕ್ಷಣದಲ್ಲಿ ಪ್ರಗತಿಪರ ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ಸಾಧಿಸುವ ಗುರಿಯೊಂದಿಗೆ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಮತ್ತು ಬ್ರಿಟಿಷ್ ಕೌನ್ಸಿಲ್ ಮಂಗಳವಾರ ಕಾರ್ಯಾಚರಣಾ ಮೈತ್ರಿ ಒಪ್ಪಂದಕ್ಕೆ ಸಹಿ ಹಾಕಿವೆ. ಇದರ ಮೂಲಕ ಸಾಮರ್ಥ್ಯ ನಿರ್ಮಾಣ ಮತ್ತು ಅಧ್ಯಾಪಕರ ಅಭಿವೃದ್ಧಿಗೆ ಸೀಡ್‌ ಫಂಡ್‌ ಅನ್ನು ಕೌನ್ಸಿಲ್ ಒದಗಿಸುತ್ತದೆ.

ಉನ್ನತ ಶಿಕ್ಷಣದಲ್ಲಿ ಪ್ರಗತಿಪರ ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ಸಾಧಿಸುವ ಗುರಿಯೊಂದಿಗೆ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಮತ್ತು ಬ್ರಿಟಿಷ್ ಕೌನ್ಸಿಲ್ ಮಂಗಳವಾರ ಕಾರ್ಯಾಚರಣಾ ಮೈತ್ರಿ ಒಪ್ಪಂದಕ್ಕೆ ಸಹಿ ಹಾಕಿವೆ.
ಉನ್ನತ ಶಿಕ್ಷಣದಲ್ಲಿ ಪ್ರಗತಿಪರ ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ಸಾಧಿಸುವ ಗುರಿಯೊಂದಿಗೆ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಮತ್ತು ಬ್ರಿಟಿಷ್ ಕೌನ್ಸಿಲ್ ಮಂಗಳವಾರ ಕಾರ್ಯಾಚರಣಾ ಮೈತ್ರಿ ಒಪ್ಪಂದಕ್ಕೆ ಸಹಿ ಹಾಕಿವೆ.

ಬೆಂಗಳೂರು: ಉನ್ನತ ಶಿಕ್ಷಣದಲ್ಲಿ ಪ್ರಗತಿಪರ ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ಸಾಧಿಸುವ ಗುರಿಯೊಂದಿಗೆ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ( Karnataka State Higher Education Council -KSHEC) ಮತ್ತು ಬ್ರಿಟಿಷ್ ಕೌನ್ಸಿಲ್ (British Council) ಮಂಗಳವಾರ ಕಾರ್ಯಾಚರಣಾ ಮೈತ್ರಿ ಒಪ್ಪಂದ (Operational Alliance Agreement - OAA)ಕ್ಕೆ ಸಹಿ ಹಾಕಿವೆ.

ಈ ಒಪ್ಪಂದದ ಪ್ರಕಾರ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಜತೆಗೆ ಬ್ರಿಟಿಷ್ ಕೌನ್ಸಿಲ್ ಸಮಾಲೋಚಿಸಿ ಸಾಮರ್ಥ್ಯ ನಿರ್ಮಾಣ ಮತ್ತು ಅಧ್ಯಾಪಕರ ಅಭಿವೃದ್ಧಿಗೆ ಸೀಡ್‌ ಫಂಡ್‌ ಅನ್ನು ಒದಗಿಸುತ್ತದೆ.

ಕರ್ನಾಟಕ ಉನ್ನತ ಶಿಕ್ಷಣ ಸಚಿವ ಸಿಎನ್ ಅಶ್ವಥ್ ನಾರಾಯಣ್ ಅವರ ಸಮ್ಮುಖದಲ್ಲಿ ಕೆಎಸ್‌ಹೆಚ್‌ಇಸಿ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ ಮತ್ತು ಬ್ರಿಟಿಷ್ ಕೌನ್ಸಿಲ್‌ನ ದಕ್ಷಿಣ ಭಾರತದ ನಿರ್ದೇಶಕರಾದ ಜನಕ ಪುಷ್ಪನಾಥನ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಇದು 'ಉನ್ನತ ಶಿಕ್ಷಣ ಪಾಲುದಾರಿಕೆಗಳನ್ನು ಮುಂದುವರಿಸುವುದು - ಯುಕೆ ಮತ್ತು ಕರ್ನಾಟಕ' ಕಾರ್ಯಕ್ರಮದ ಪ್ರಾರಂಭವನ್ನು ಗುರುತಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಅಧ್ಯಾಪಕರ ಸಾಮರ್ಥ್ಯ ನಿರ್ಮಾಣದ ಅಡಿಯಲ್ಲಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೆಸಿ ವ್ಯಾಲಿ ಯೋಜನೆಯ ಪರಿಣಾಮ ಮತ್ತು ಆಂಟಿಮೈಕ್ರೊಬಿಯಲ್ ಬಯೋಮಾಲಿಕ್ಯೂಲ್ಸ್ ಕಾಂಪೋಸಿಟ್ ಲೋಡೆಡ್ ಎಲೆಕ್ಟ್ರೋ ವಿನ್ಯಾಸದ ಅಧ್ಯಯನ, ಡಯಾಬಿಟಿಕ್ ಸ್ಕಿನ್ ಅಲ್ಸರ್‌ಗೆ ಸ್ಪನ್ ಡ್ರೆಸ್ಸಿಂಗ್, ನೆಟ್ ಕಾರ್ಬನ್ ಝೀರೋ ಹಬ್ ವಿಷಯಗಳ ಕುರಿತು ಸಹಯೋಗದ ಸಂಶೋಧನಾ ಕಾರ್ಯಗಳು ನಡೆಯುತ್ತವೆ.

ಬ್ರಿಟಿಷ್ ಕೌನ್ಸಿಲ್‌ನ ಜನಕ ಪುಷ್ಪನಾಥನ್ ಅವರು ಉನ್ನತ ಶಿಕ್ಷಣ ಅಧ್ಯಾಪಕರು ಮತ್ತು ಸಿಬ್ಬಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಹೊಸ ಕೌಶಲ್ಯ, ಸಂಪನ್ಮೂಲಗಳು ಮತ್ತು ವಿಧಾನಗಳೊಂದಿಗೆ ಸಬಲೀಕರಣಗೊಳಿಸಲಾಗುವುದು ಎಂದು ಹೇಳಿದರು.

ಒಪ್ಪಂದದಡಿ ಕಾಯ್ದಿರಿಸಿದ ಒಟ್ಟು 90 ಲಕ್ಷ ರೂಪಾಯಿ ಪೈಕಿ ಬ್ರಿಟಿಷ್ ಕೌನ್ಸಿಲ್ 60 ಲಕ್ಷ ರೂಪಾಯಿ ಮತ್ತು ಪ್ರತಿ ವಿಶ್ವವಿದ್ಯಾಲಯವು 10 ಲಕ್ಷ ರೂಪಾಯಿ ನೀಡುತ್ತದೆ.

ಗಮನಿಸಬಹುದಾದ ಸುದ್ದಿಗಳು

ಮೀಸಲಾತಿ ಘೋಷಣೆ ಈ ಕಲಾಪದಲ್ಲೇ ಮಾಡಿ, ಇಲ್ಲ ಪರಿಣಾಮ ಎದುರಿಸಿ; ಸರ್ಕಾರಕ್ಕೆ ಪಂಚಮಸಾಲಿ ಸ್ವಾಮೀಜಿ ಎಚ್ಚರಿಕೆ

Panchamasali reservation: ಪಂಚಮಸಾಲಿ ಮೀಸಲಾತಿ ಹೋರಾಟದ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಮೀಸಲಾತಿ ಸೇರಿ ವಿವಿಧ ಬೇಡಿಕೆ ಈಡೇರಿಸದೇ ಇದ್ದರೆ ಬಿಜೆಪಿಗೆ ಈ ಸಲ ಚುನಾವಣೆಯಲ್ಲಿ 74 ಕ್ಷೇತ್ರಗಳ ಗೆಲುವಿಗೆ ತೊಂದರೆ ಆಗಲಿದೆ ಎಂದು ಎಚ್ಚರಿಸಿದರು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಜೆಡಿಎಸ್‌, ಕಾಂಗ್ರೆಸ್‌ ಭದ್ರಕೋಟೆ ಮೇಲೆ ಬಿಜೆಪಿ ಕಣ್ಣು; ಫೆ.20ಕ್ಕೆ ಮಂಡ್ಯದಲ್ಲಿ ಯುವ ಮೋರ್ಚಾ ಸಮಾವೇಶ

Karnataka Polls: ಕೇಂದ್ರ ಮತ್ತು ರಾಜ್ಯ ನಾಯಕರು ಹಳೆ ಮೈಸೂರು ಪ್ರದೇಶದ ಮೇಲೆ ಗಮನ ಕೇಂದ್ರೀಕರಿಸಲು ಮತ್ತು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಒತ್ತು ನೀಡಿದ್ದಾರೆ. ಹೀಗಾಗಿ ನಾವು ಯುವ ಮೋರ್ಚಾದ ಸಮಾವೇಶವನ್ನು ಮೊದಲು ಇಲ್ಲಿಂದಲೇ ಪ್ರಾರಂಭಿಸಲು ನಿರ್ಧರಿಸಿದ್ದೇವೆ. ಫೆ.20 ರಂದು ಮಂಡ್ಯದಲ್ಲಿ ಇಂತಹ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‍ನ 8ನೇ ತರಗತಿಗೆ ಪ್ರವೇಶ; ಬೆಂಗಳೂರಿನಲ್ಲಿ ಜೂ.3ಕ್ಕೆ ಪ್ರವೇಶ ಪರೀಕ್ಷೆ

RIMC Entrance Exam 2023: ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‍ನ 2024ನೇ ಸಾಲಿನ 8ನೇ ತರಗತಿಗೆ ಪ್ರವೇಶಕ್ಕಾಗಿ ಜೂನ್‌ 3ರಂದು ಬೆಂಗಳೂರಿನಲ್ಲಿ ಅರ್ಹತಾ ಪ್ರವೇಶ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಕೆಗೆ ಏ.15 ಕೊನೇ ದಿನ. ಬಾಕಿ ವಿವರಕ್ಕೆ ವರದಿ ಗಮನಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ