HTKannada Exclusive: ಡಿಕೆಶಿ ಇಡಿ ಕೇಸ್‌ನ ಆರೋಪಿ ಸುನಿಲ್ ಶರ್ಮಾ ಕಾರ್ಯಕ್ರಮದಲ್ಲಿ ಸಚಿವ ದ್ವಯರು ಅತಿಥಿಗಳು!
Jan 05, 2023 02:54 PM IST
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಅವರ ED ಕೇಸ್‌ನ ಆರೋಪಿ ಸುನಿಲ್ ಶರ್ಮಾ ಜತೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಕರ್ನಾಟಕದ ಸಾರಿಗೆ ಸಚಿವ ಶ್ರೀರಾಮುಲು ವೇದಿಕೆಯಲ್ಲಿ ಕಾಣಿಸಿಕೊಂಡು ನಾಡಿನ ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ!
HTKannada Exclusive: ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಅವರ ED ಕೇಸ್‌ನ ಆರೋಪಿ ಸುನಿಲ್ ಶರ್ಮಾ ಜತೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಕರ್ನಾಟಕದ ಸಾರಿಗೆ ಸಚಿವ ಶ್ರೀರಾಮುಲು ವೇದಿಕೆಯಲ್ಲಿ ಕಾಣಿಸಿಕೊಂಡು ನಾಡಿನ ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ!
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಇಡಿ ಕೇಸ್‌ನಲ್ಲಿ ಆರೋಪಿಯಾಗಿರುವ ಸುನಿಲ್ ಶರ್ಮಾ ಅವರ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಕರ್ನಾಟಕದ ಸಾರಿಗೆ ಸಚಿವ ಶ್ರೀರಾಮುಲು ಕಾಣಿಸಿಕೊಂಡು ನಾಡಿನ ಜನರ ಅಚ್ಚರಿಗೆ ಕಾರಣವಾಗಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಅಧಿಕೃತ ಪ್ರವಾಸ ವಿವರ ಪ್ರಕಾರ, ಅವರು ನಿನ್ನೆ ಅಪರಾಹ್ನ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿನ ಎಚ್‌ಎಎಲ್ ಏರ್‌ಪೋರ್ಟ್‌ಗೆ ಆಗಮಿಸಿದರು. ಸಂಜೆ ಹೋಟೆಲ್ ಲಲಿತ್ ಅಶೋಕ್ ತಲುಪಿದ್ದಾರೆ. ಅಲ್ಲಿ ಶರ್ಮಾ ಟ್ರಾನ್ಸ್‌ಪೋರ್ಟ್‌ನ ಬಸ್ಸುಗಳ ಬಳಗಕ್ಕೆ ವೋಲ್ವೋ 9600 ಬಸ್ ಸೇರ್ಪಡೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಇದೇ ಕಾರ್ಯಕ್ರಮದಲ್ಲಿ ಕರ್ನಾಟಕದ ಸಾರಿಗೆ ಸಚಿವ ಶ್ರೀರಾಮುಲು ಕೂಡ ಅತಿಥಿಯಾಗಿದ್ದರು. ಅವರ ಪಕ್ಕದಲ್ಲೇ ಶರ್ಮಾ ಟ್ರಾನ್ಸ್‌ಪೋರ್ಟ್ ಮಾಲೀಕ ಸುನಿಲ್ ಶರ್ಮಾ ಕೂಡ ಕುಳಿತಿದ್ದರು.
ಡಿ.ಕೆ.ಶಿವಕುಮಾರ್ ಅವರ ED ಕೇಸ್ ಏನು?
ಡಿ.ಕೆ.ಶಿವಕುಮಾರ್ ಅವರ ವಿರುದ್ಧ 2018ರಲ್ಲಿ ದಾಖಲಾದ ಕೇಸ್ ಇದು. ಅವರು ಆಗ ಕರ್ನಾಟಕದ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. ಹವಾಲಾ ನೆಟ್‌ವರ್ಕ್ ಮೂಲಕ ಹಣಕಾಸು ವಹಿವಾಟು ನಡೆಸುತ್ತ ಎಐಸಿಸಿಯ ಹಣಕಾಸು ಅಗತ್ಯಗಳನ್ನು ಪೂರೈಸುತ್ತಿದ್ದರು ಎಂಬ ಆರೋಪವನ್ನು ಆದಾಯ ತೆರಿಗೆ ಇಲಾಖೆ ಅಂದು ಮಾಡಿತ್ತು. ಆದಾಯ ತೆರಿಗೆ ಇಲಾಖೆಯು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್‌ಗೆ ಸಲ್ಲಿಸಿದ ದೂರಿನಲ್ಲಿ ಇದು ವ್ಯಕ್ತವಾಗಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ 2018ರ ಜೂನ್ 21ರಂದು ವರದಿ ಮಾಡಿದೆ.
ಲೆಕ್ಕಪತ್ರವಿಲ್ಲದ ನಗದು ವಹಿವಾಟನ್ನು ಡಿ.ಕೆ.ಶಿವಕುಮಾರ್ ನಡೆಸಿದ್ದು, ಮುಳಗುಂದ್ ಎನ್ನುವವರ ಮೂಲಕ 5 ಕೋಟಿ, 3 ಕೋಟಿ, 2 ಕೋಟಿ ರೂಪಾಯಿ ನಗದು ಎಐಸಿಸಿಗೆ ವರ್ಗಾವಣೆ ಆಗಿರುವುದಾಗಿ ಇಲಾಖೆ ಆರೋಪಿಸಿತ್ತು.
ಈ ಅಕ್ರಮ ಹಣಕಾಸು ವಹಿವಾಟಿನಲ್ಲಿ ಡಿ.ಕೆ.ಶಿವಕುಮಾರ್ ಅವರು ಶರ್ಮಾ ಟ್ರಾನ್ಸ್‌ಪೋರ್ಟ್‌ನ ಸುನಿಲ್ ಕುಮಾರ್ ಶರ್ಮಾ, ಕರ್ನಾಟಕ ಭವನದ ಅಧಿಕಾರಿ ಆಂಜನೇಯ ಹನುಮಂತಯ್ಯ, ಶರ್ಮಾ ಟ್ರಾನ್ಸ್‌ಪೋರ್ಟ್ ಉದ್ಯೋಗಿ ರಾಜೇಂದ್ರ ಎನ್., ಬಿಜಿನೆಸ್ ಅಸೋಸಿಯೇಟ್ ಸಚಿನ್ ನಾರಾಯಣ ಮತ್ತು ಇತರರ ನೆರವು ಪಡೆದಿದ್ದರು ಎಂದು ಇಲಾಖೆ ಆರೋಪಿಸಿತ್ತು. ಅಲ್ಲದೆ ಇವರನ್ನು ಆರೋಪಿಗಳನ್ನಾಗಿ ಮಾಡಿತ್ತು.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 2017ರ ಆಗಸ್ಟ್ 2ರಂದು ದೆಹಲಿಯ ಸಫ್ದರ್‌ಜಂಗ್ ಎನ್‌ಕ್ಲೇವ್‌ನ ಫ್ಲ್ಯಾಟ್‌ನಲ್ಲಿ 6.68 ಕೋಟಿ ರೂಪಾಯಿಯನ್ನು ಮುಟ್ಟುಗೋಲು ಹಾಕಿದ್ದರು. ಆರೋಪಿಗಳ ಪೈಕಿ ಒಬ್ಬರಾಗಿದ್ದ ಆಂಜನೇಯ ಹನುಮಂತಯ್ಯ ಅವರು ವಿಚಾರಣೆ ಸಂದರ್ಭದಲ್ಲಿ ಆ ಫ್ಲ್ಯಾಟ್ ಶರ್ಮಾ ಟ್ರಾನ್ಸ್‌ಪೋರ್ಟ್‌ನ ಮಾಲೀಕ ದಿವಂಗತ ಸುರೇಶ್ ಕುಮಾರ್ ಅವರದ್ದು. ಹಲವು ವರ್ಷಗಳಿಂದ ಈ ಫ್ಲ್ಯಾಟ್‌ನಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸುನಿಲ್ ಕುಮಾರ್ ಶರ್ಮಾ ಹಣ ಸಂಗ್ರಹಿಸಿಡುತ್ತಿದ್ದರು. ಶಿವಕುಮಾರ್ ಅವರು ಲೆಕ್ಕಪತ್ರವಿಲ್ಲದ ಹಣ ಸಾಗಾಟಕ್ಕೆ ಟ್ರಾನ್ಸ್‌ಪೋರ್ಟ್ ಜಾಲವನ್ನು ಬಳಸುತ್ತಿದ್ದರು ಎಂದು ಹೇಳಿದ್ದರು. ಸುರೇಶ್ ಶರ್ಮಾ ಅವರ ಸಹೋದರ ಸುನಿಲ್ ಕುಮಾರ್ ಶರ್ಮಾ ಎಂದು ವರದಿ ಹೇಳಿದೆ.
ಇದೇ ಕಾರಣಕ್ಕೆ ಈಗ ಸಚಿವ ದ್ವಯರು ಶರ್ಮಾ ಟ್ರಾನ್ಸ್‌ಪೋರ್ಟ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿರುವುದು ಗಮನಸೆಳೆದಿದೆ.
ಗಮನಿಸಬಹುದಾದ ಸುದ್ದಿಗಳು
UGC updates: ಭಾರತದಲ್ಲಿ ಕ್ಯಾಂಪಸ್ ಸ್ಥಾಪನೆಗೆ ವಿದೇಶಿ ವಿವಿಗಳಿಗೂ ಬೇಕು ಯುಜಿಸಿ ಒಪ್ಪಿಗೆ; ಶುಲ್ಕ ಹಾಗೂ ಪ್ರವೇಶ ಪ್ರಕ್ರಿಯೆ ಹೇಗೆ?
UGC updates: ಭಾರತದಲ್ಲಿ ಕ್ಯಾಂಪಸ್ ಸ್ಥಾಪಿಸಬೇಕಾದರೆ ವಿದೇಶಿ ವಿಶ್ವವಿದ್ಯಾಲಯಗಳೂ ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಒಪ್ಪಿಗೆ ಪಡೆಯಬೇಕಾಗುತ್ತದೆ. ಆರಂಭಿಕ ಅನುಮೋದನೆ ಕೇವಲ 10 ವರ್ಷಕ್ಕೆ ಮಾತ್ರ ಸೀಮಿತವಾಗಿ ಇರಲಿದೆ ಎಂದು ಯುಜಿಸಿಯ ಮುಖ್ಯಸ್ಥ ಎಂ.ಜಗದೀಶ್ ಕುಮಾರ್ ಗುರುವಾರ ಹೇಳಿದರು. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ