logo
ಕನ್ನಡ ಸುದ್ದಿ  /  ಕರ್ನಾಟಕ  /  Hubli News: ಆಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಡಗರ: ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿ ಹೋರಾಟಗಾರರಿಗೆ ಬಂಧನ ಭೀತಿ

Hubli News: ಆಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಡಗರ: ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿ ಹೋರಾಟಗಾರರಿಗೆ ಬಂಧನ ಭೀತಿ

HT Kannada Desk HT Kannada

Jan 01, 2024 06:59 PM IST

google News

ಹುಬ್ಬಳ್ಳಿಯಲ್ಲಿ ಮೂರು ದಶಕದ ಹಿಂದೆ ರಾಜಜನ್ಮಭೂಮಿ ವಿಚಾರದಲ್ಲಿ ನಡೆದಿದ್ದ ಹಿಂಸಾಚಾರ

    • Hubli Riots ಹುಬ್ಬಳ್ಳಿಯಲ್ಲಿ ಮೂರು ದಶಕದ ಹಿಂದ ರಾಮಜನ್ಮಭೂಮಿ ವಿಚಾರದಲ್ಲಿ ನಡೆದ ಹೋರಾಟದಲ್ಲಿ ಭಾಗಿಯಾದವರ ಹುಡುಕಾಟವನ್ನು ಹುಬ್ಬಳ್ಳಿ ಪೊಲೀಸರು ಮಾಡುತ್ತಿದ್ದು, ಈಗಾಗಲೇ ಒಬ್ಬರನ್ನು ಬಂಧಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮೂರು ದಶಕದ ಹಿಂದೆ ರಾಜಜನ್ಮಭೂಮಿ ವಿಚಾರದಲ್ಲಿ ನಡೆದಿದ್ದ ಹಿಂಸಾಚಾರ
ಹುಬ್ಬಳ್ಳಿಯಲ್ಲಿ ಮೂರು ದಶಕದ ಹಿಂದೆ ರಾಜಜನ್ಮಭೂಮಿ ವಿಚಾರದಲ್ಲಿ ನಡೆದಿದ್ದ ಹಿಂಸಾಚಾರ

ಹುಬ್ಬಳ್ಳಿ: ಅತ್ತ ದೂರದ ಅಯೋಧ್ಯೆಯಲ್ಲಿ ಮೂರು ದಶಕದ ನಂತರ ರಾಮಮಂದಿರದ ಕನಸು ನನಸಾಗುವ ಕ್ಷಣವಿದ್ದರೆ ಆದರೆ ಇತ್ತ ಹುಬ್ಬಳ್ಳಿಯಲ್ಲಿ 31 ವರ್ಷದ ಬಳಿಕ ರಾಮಜನ್ಮಭೂಮಿ‌ ಹೋರಾಟದ ಪ್ರಕರಣಕ್ಕೆ‌ ಮರುಜೀವ ಕಂಡು ಹಲವಾರು ಕಾರ್ಯಕರ್ತರಿಗೆ ಬಂಧನಕ್ಕೆ ಒಳಗಾಗುವ ಭೀತಿ ಎದುರಾಗಿದೆ.

31 ವರ್ಷಗಳ ಹಳೇ ಪ್ರಕರಣಕ್ಕೆ ಜೀವ ಕೊಡಲು ಮುಂದಾದ ಹುಬ್ಬಳ್ಳಿ ಪೊಲೀಸರು ಈಗಾಗಲೇ ಒಬ್ಬರನ್ನು ಇದೇ ಪ್ರಕರಣದಲ್ಲಿ ಬಂಧಿಸಿದ್ದಾರೆ. ಇನ್ನೂ ಹಲವರ ಬಂಧನಕ್ಕೆ ತಪಾಸಣೆಯನ್ನೂ ಹುಬ್ಬಳ್ಳಿ ಪೊಲೀಸರು ಚುರುಕುಗೊಳಿಸಿದ್ದಾರೆ. ಇದರಿಂದ ರಾಮಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗಬೇಕಾಗಿದ್ದ ಹಲವಾರು ಕಾರ್ಯಕರ್ತರು ತಲೆ ಮರೆಸಿಕೊಂಡಿದ್ದಾರೆ.

ಮೂರು ದಶಕಗಳ ಹಿಂದೆ ರಾಮಜನ್ಮಭೂಮಿ ಹೋರಾಟದಲ್ಲಿ ಹುಬ್ಬಳ್ಳಿ, ಧಾರವಾಡ ಹಾಗೂ ಉತ್ತರ ಕರ್ನಾಟಕದ ಭಾಗದ ಹಲವಾರು ಕಾರ್ಯಕರ್ತರು ಭಾಗಿಯಾಗಿದ್ದರು.ಕರಸೇವೆಗೂ ಮುನ್ನ1992 ರ ಡಿಸೆಂಬರ್ 5ರಂದು ಹುಬ್ಬಳ್ಳಿ ನಗರದಲ್ಲಿ ಸಂಭವಿಸಿದ್ದ ಗಲಭೆ ಸಂಭವಿಸಿತ್ತು. ರಾಮಮಂದಿರ ಹೋರಾಟಕ್ಕಾಗಿ ಶುರುವಾಗಿದ್ದ ಹೋರಾಟಕ್ಕೆ ಹಿಂಸಾಚಾರಕ್ಕೆ ತಿರುಗಿ ಹಲವರು ಗಾಯಗೊಂಡು ಆಸ್ತಿಪಾಸ್ತಿ ಹಾನಿಯುಂಟಾಗಿತ್ತು.ಗಲಭೆಯಲ್ಲಿ ಒಂದು ಮಳಿಗೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 9 ಜನರ ವಿರುದ್ಧ ಮೊಕದ್ದಮೆ ಕೂಡ ದಾಖಲಾಗಿತ್ತು. ಕೆಲವರು ಆಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆದರೆ ಪ್ರಕರಣ ಮಾತ್ರ ಬಾಕಿ ಉಳಿದಿದ್ದವು.

ಹಲವರ ಹುಡುಕಾಟ

ಈ ಹಿಂದೆ ಹುಬ್ಬಳ್ಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ರಾಜು ಧರ್ಮದಾಸ್, ಶ್ರೀಕಾಂತ್ ಪೂಜಾರಿ, ಅಶೋಕ್ ಕಲಬುರಗಿ, ಷಣ್ಮುಖ ಕಾಟಗಾರ. ಗುರುನಾಥಸಾ ಕಾಟಿಗಾರ, ರಾಮಚಂದ್ರಸಾ ಕಲಬುರಗಿ ಹಾಗೂ ಅಮೃತ ಕಲಬುರಗಿ ಹುಡುಕಾಟಕ್ಕೆ‌ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಪ್ರಕರಣದ 3ನೇ ಆರೋಪಿ ಶ್ರೀಕಾಂತ್ ಪೂಜಾರಿ ಕಳೆದ ಶುಕ್ರವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಇತರರ ಹುಡುಕಾಟ ಮುಂದುವರಿದಿದೆ.

ವಿಎಚ್‌ಪಿ ಆರೋಪ

ಪ್ರಕರಣ ದಾಖಲಾದಾಗ ಆರೋಪಿತರು ವ್ಯಕ್ತಿಗಳು 30ರಿಂದ 35 ವರ್ಷದ ಒಳಗಿನ ಯುವಕರಾಗಿದ್ದರು. ಈಗ ಅವರಿಗೆಲ್ಲ 65-70 ವರ್ಷಗಳಾಗಿವೆ. ಈಗ ಪ್ರಕರಣಗಳಿಗೆ ಮರುಜೀವ ನೀಡಿ ತೊಂದರೆ ಕೊಡುವ ಕುರಿತು ಆಕ್ಷೇಪಗಳೂ ವ್ಯಕ್ತವಾಗಿವೆ.

ಕರ್ನಾಟಕದಲ್ಲಿರುವ ಕಾಂಗ್ರೆಸ್‌ ಸರ್ಕಾರದಿಂದ ಬಂದಿರುವ ಸೂಚನೆ ಆಧರಿಸಿಯೇ ಹುಬ್ಬಳ್ಳಿ ಧಾರವಾಡ ಪೊಲೀಸರು ಈಗ ಹಳೆಯ ಪ್ರಕರಣಗಳಿಗೆ ಮರುಜೀವ ನೀಡಿ ತೊಂದರೆ ನೀಡುತ್ತಿದ್ದಾರೆ. ಇದರ ವಿರುದ್ದ ಹೋರಾಟ ನಡೆಸುತ್ತೇವೆ ಎಂದು ವಿಶ್ವಹಿಂದೂಪರಿಷತ್‌ ಸಂಜು ಖಡಸ್ಕರ್‌ ಹೇಳಿದ್ದಾರೆ.

ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಹಲವಾರು ಗಣ್ಯರ ಹೆಸರನ್ನು ಕೈಬಿಡಲಾಗಿದೆ. ಕೆಲವರ ಪ್ರಕರಣಗಳು ಈಗಲೂ ಹಾಗೆಯೇ ಇವೆ. ಈಗಲೂ ಬಾಕಿ ಇರುವ ಪ್ರಕರಣಗಳನ್ನು ಹುಡುಕುವ ಕೆಲಸ ಪೊಲೀಸ್‌ ಇಲಾಖೆಯಿಂದ ನಡೆದಿದೆ ಎನ್ನುವುದು ಅವರ ಆರೋಪ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ