logo
ಕನ್ನಡ ಸುದ್ದಿ  /  ಕರ್ನಾಟಕ  /  Indian Railway: ಹುಬ್ಬಳ್ಳಿ ನೈರುತ್ಯ ವಲಯದಿಂದ ಬೇಸಿಗೆಯಲ್ಲಿ ವಿಶೇಷ ರೈಲು ಡಬಲ್‌, ಆದಾಯವೂ ಶೇ 134ಪಟ್ಟು ಏರಿಕೆ

Indian Railway: ಹುಬ್ಬಳ್ಳಿ ನೈರುತ್ಯ ವಲಯದಿಂದ ಬೇಸಿಗೆಯಲ್ಲಿ ವಿಶೇಷ ರೈಲು ಡಬಲ್‌, ಆದಾಯವೂ ಶೇ 134ಪಟ್ಟು ಏರಿಕೆ

Umesha Bhatta P H HT Kannada

May 16, 2024 07:15 PM IST

google News

ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಶೇಷ ರೈಲುಗಳನ್ನು ಬೇಸಿಗೆಗೆ ಓಡಿಸಿದೆ.

    • ಬೇಸಿಗೆಯಲ್ಲಿ ನೈರುತ್ಯ ರೈಲ್ವೆ ಪ್ರಯಾಣಿಕರಿಗೆ ಹೆಚ್ಚುವರಿ ರೈಲುಗಳನ್ನು ಒದಗಿಸಿ ಹೆಚ್ಚಿನ ಆದಾಯವನ್ನೂ ಪಡೆದುಕೊಂಡಿದೆ.
ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಶೇಷ ರೈಲುಗಳನ್ನು ಬೇಸಿಗೆಗೆ ಓಡಿಸಿದೆ.
ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಶೇಷ ರೈಲುಗಳನ್ನು ಬೇಸಿಗೆಗೆ ಓಡಿಸಿದೆ.

ಹುಬ್ಬಳ್ಳಿ: ಬೇಸಿಗೆಯಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹಿಂದಿನ ವರ್ಷಕ್ಕಿಂತ ಎರಡು ಪಟ್ಟು ವಿಶೇಷ ರೈಲುಗಳನ್ನು ಓಡಿಸುತ್ತಿರುವ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯವು ಶೇ. 134ರಷ್ಟು ಆದಾಯವನ್ನೂ ಹೆಚ್ಚಿಸಿಕೊಂಡಿದೆ. ಜನರಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. ಬೇಸಿಗೆ ರಜೆ ಋತುವಿನಲ್ಲಿ ನೈರುತ್ಯ ರೈಲ್ವೆ ದೇಶಾದ್ಯಂತ ಪ್ರಯಾಣಿಕರಿಗೆ ಸುಲಭ ಮತ್ತು ಆರಾಮದ ಪ್ರಯಾಣವನ್ನು ಕಲ್ಪಿಸುವ ಸಲುವಾಗಿ, ಪ್ರಮುಖ ನಗರಗಳು ಮತ್ತು ಪ್ರವಾಸಿ ಆಕರ್ಷಕ ಸ್ಥಳಗನ್ನು ಸಂಪರ್ಕಿಸುವ ಜನಪ್ರಿಯ ಮಾರ್ಗಗಳಲ್ಲಿ 53 ರೈಲುಗಳು ಒಟ್ಟು 338 ಟ್ರಿಪ್‌ಗಳನ್ನು ಓಡಿಸಿದೆ.

ಜನರು ತಮ್ಮ ಕುಟುಂಬದವರ ಜೊತೆ ರಜಾದಿನಗಳು, ತೀರ್ಥಯಾತ್ರೆಗಳು ಮತ್ತು ಪ್ರೀತಿಪಾತ್ರರನ್ನು ಭೇಟಿಯಾಗಲು ಪ್ರಾರಂಭಿಸುವುದರಿಂದ ಬೇಸಿಗೆ ಕಾಲವು ರೈಲು ಪ್ರಯಾಣಿಕರಲ್ಲಿ ದೊಡ್ಡ ಬೇಡಿಕೆಯನ್ನು ತರುತ್ತದೆ. ಈ ಋತುವಿನಾದ್ಯಂತ ನಿರಂತರ ಚಲನಶೀಲತೆಯನ್ನು ಒದಗಿಸುವ ಮಹತ್ವವನ್ನು ನೈರುತ್ಯ ರೈಲ್ವೆ ಅರ್ಥಮಾಡಿಕೊಂಡು ಮತ್ತು ತನ್ನ ಬೇಸಿಗೆ ವಿಶೇಷ ರೈಲುಗಳ ಮೂಲಕ ಸೇವೆ ಒದಗಿಸಿದೆ.

ಪ್ರಮುಖ ಪಟ್ಟಣಗಳು ಮತ್ತು ಪ್ರವಾಸಿ ಸ್ಥಳಗಳನ್ನು ಸಂಪರ್ಕಿಸುವ ಜನಪ್ರಿಯ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ, ನಿಯಮಿತ ಸೇವೆಗಳಲ್ಲಿ ಜನಸಂದಣಿಯನ್ನು ನಿವಾರಿಸಲು ಮತ್ತು ಪ್ರಯಾಣಿಕರಿಗೆ ಪ್ರಯಾಣದ ಅನುಕೂಲವನ್ನು ಹೆಚ್ಚಿಸಲು ನೈರುತ್ಯ ರೈಲ್ವೆ ಆಶಿಸಿದೆ.

ಆದಾಯ- ರೈಲು- ಪ್ರಯಾಣಿಕರ ಹೆಚ್ಚಳ

ನೈರುತ್ಯ ರೈಲ್ವೆಯು 2023ರ ಏಪ್ರಿಲ್ ತಿಂಗಳಲ್ಲಿ 28 ರೈಲುಗಳನ್ನು ಓಡಿಸಿದರೆ, ಈ ಬೇಸಿಗೆಯಲ್ಲಿ ಏಪ್ರಿಲ್ ತಿಂಗಳಲ್ಲಿ 53 ರೈಲುಗಳನ್ನು ಓಡಿಸಿದ್ದು,ಶೇ 89.28 ರಷ್ಟು ರೈಲುಗಳನ್ನು ಹೆಚ್ಚಿಸಲಾಗಿದೆ.

ಅದೂ ಬೇಸಿಗೆ ಋತುವಿನಲ್ಲಿ ದಾಖಲೆಯ 338 ಟ್ರಿಪ್ಗಳನ್ನು ನಿರ್ವಹಿಸಿದೆ" ಈ ಬೇಸಿಗೆ ವಿಶೇಷ ರೈಲುಗಳಿಂದ 22.89 ಕೋಟಿ ರೂ.ಗೆ ಆದಾಯವು ತಲುಪಿದ್ದು , ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 9.76 ಕೋಟಿ ರೂ. ಆದಾಯಯು ಆಗಿದೆ.

ಆದಾಯದಲ್ಲಿ ಗಣನೀಯ ಬೆಳವಣಿಗೆಯಾಗಿದ್ದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 134 ರಷ್ಟು ಹೆಚ್ಚಾಗಿದೆ. ಈ ಬೇಸಿಗೆಯಲ್ಲಿ ಒಟ್ಟು 2.71 ಲಕ್ಷ ಪ್ರಯಾಣಿಕರು ವಿವಿಧ ಸ್ಥಳಗಳಿಗೆ ಪ್ರಯಾಣ ಬೆಳೆಸಿದ್ದಾರೆ, ಕಳೆದ ವರ್ಷ ಇದೇ ಅವಧಿಯಲ್ಲಿ ದಾಖಲಾದ 1.70 ಲಕ್ಷ ಪ್ರಯಾಣಿಕರಿಗೆ ಹೋಲಿಸಿದರೆ, ಶೇ 59.92 ರಷ್ಟು ಪ್ರಯಾಣಿಕರ ಹೆಚ್ಚಳವಾಗಿದ್ದಾರೆ.

ನಾನಾ ರಾಜ್ಯಗಳಿಗೆ ಸೇವೆ

ನೈರುತ್ಯ ರೈಲ್ವೆಯ ವ್ಯಾಪ್ತಿಯಲ್ಲಿ ಕೆಎಸ್ಆರ್ ಬೆಂಗಳೂರು- ದಾನಾಪುರ್ ಮಾರ್ಗವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಬೇಸಿಗೆ ವಿಶೇಷ ರೈಲು ಮಾರ್ಗಗಳಲ್ಲಿ ಒಂದಾಗಿದ್ದು , ಆಕರ್ಷಕ ಆದಾಯ ಮತ್ತು ಬುಕಿಂಗ್ ದರಗಳೊಂದಿಗೆ 88.86 ಲಕ್ಷ ರೂ.ಗಳಿಸಿದೆ.

ಆಂಧ್ರಪ್ರದೇಶ, ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ತಮಿಳುನಾಡು, ರಾಜಸ್ಥಾನ, ತೆಲಂಗಾಣ, ಅಸ್ಸಾಂ ಹೀಗೆ ಪ್ರಮುಖ ರಾಜ್ಯಗಳಿಗೆ ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಿದೆ.ಈ ವಿಶೇಷ ರೈಲುಗಳು ರಜಾದಿನಗಳಿಗೆ ಮಾತ್ರವಲ್ಲದೆ ಬೇಸಿಗೆಯಲ್ಲಿ ತಮ್ಮ ಊರುಗಳಿಗೆ ಮರಳುವ ವಲಸೆ ಕಾರ್ಮಿಕರಿಗೂ ಉಪಯುಕ್ತವಾಗಿವೆ.

ನವೀನ ಸೌಲಭ್ಯಗಳೊಂದಿಗೆ ಸೌಕರ್ಯಕ್ಕೆ ಆದ್ಯತೆ

ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯ ಸಮರ್ಪಣೆಯು ಪ್ರಯಾಣದ ಆರಾಮ ಮತ್ತು ಸುಧಾರಿಸುವ ನವೀನ ಸೌಲಭ್ಯಗಳನ್ನು ಒದಗಿಸುವುದರ ಮೇಲೆ ಗಮನಹರಿಸಿದೆ. ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ತಂಪು ಕುಡಿಯುವ ನೀರಿನ ಸೌಲಭ್ಯಗಳು ಒದಗಿಸಿದೆ. ಇದಲ್ಲದೆ, ಸಾಮಾನ್ಯ ಕೋಚ್ ಪ್ರಯಾಣಿಕರಿಗೆ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಸೂಕ್ತ ಬೆಲೆಗಳೊಂದಿಗೆ "ಜನತಾ ಆಹಾರ " ವನ್ನು ಕ್ರಮವಾಗಿ 20 ಮತ್ತು 50 ರೂ.ಗಳಿಗೆ ನೀಡಲಾಗಿದೆ.

ನೈರುತ್ಯ ರೈಲ್ವೆಯ ವಿಶೇಷ ರೈಲು ಸೇವೆಗಳು ದೇಶಾದ್ಯಂತದ ಪ್ರಮುಖ ನಗರಗಳು ಮತ್ತು ಪ್ರವಾಸಿ ಸ್ಥಳಗಳನ್ನು ಸಂಪರ್ಕಿಸುತ್ತವೆ. ಬೇಸಿಗೆಯಲ್ಲಿ ಜನಸಂದಣಿಯನ್ನು ಕಡಿಮೆ ಮಾಡುವ ಮತ್ತು ಪ್ರಯಾಣದ ಅನುಕೂಲವನ್ನು ಸುಧಾರಿಸುವ ಗುರಿಯನ್ನು ಹೊಂದಿವೆ.

ನವೀನ ಸೌಲಭ್ಯಗಳು, ಸುಗಮ ಕಾರ್ಯಾಚರಣೆಗಳು ಮತ್ತು ಪ್ರಯಾಣಿಕರ ಅನುಕೂಲಕ್ಕೆ ದೃಢ ಸಮರ್ಪಣೆಯೊಂದಿಗೆ, ನೈರುತ್ಯ ರೈಲ್ವೆ ರೈಲು ಪ್ರಯಾಣದ ಮಿತಿಯನ್ನು ಹೆಚ್ಚಿಸುತ್ತಲೇ ಇದೆ. ಇದು ಹೀಗೆಯೇ ಮುಂದುವರಿಯಲಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ