Rahul Gandhi: ಮರಳಿ ಸಂಸದರಾದ ರಾಹುಲ್ ಗಾಂಧಿ; ಸದಸ್ಯತ್ವ ಅನರ್ಹತೆ ರದ್ದು ಪಡಿಸಿದ ಲೋಕಸಭೆ ಸಚಿವಾಲಯ
Aug 07, 2023 12:56 PM IST
ರಾಹುಲ್ ಗಾಂಧಿ ಪುನಃ ಸಂಸದ; ಸದಸ್ಯತ್ವ ಅನರ್ಹತೆ ರದ್ದು ಪಡಿಸಿದ ಲೋಕಸಭೆ ಸಚಿವಾಲಯ
- Rahul Gandhi Membership Disqualification Canceled: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಸಂಸತ್ತಿನ ಅನರ್ಹತೆ ಆದೇಶ ರದ್ದಾಗಿದ್ದು, ಮರಳಿ ಸದಸ್ಯತ್ವ ಪಡೆದಿದ್ದಾರೆ. ಈ ಸಂಬಂಧ ಇಂದು (ಆಗಸ್ಟ್ 7) ಲೋಕಸಭಾ ಸಚಿವಾಲಯ ಅಧಿಸೂಚನೆ ಬಿಡುಗಡೆಗೊಳಿಸಿದೆ.
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭೆ ಸದಸ್ಯತ್ವ ಅನರ್ಹತೆ ರದ್ದಾಗಿದ್ದು, ಸದಸ್ಯತ್ವ ಮರುಸ್ಥಾಪನೆಗೊಳಿಸಲಾಗಿದೆ.
ಈ ಕುರಿತು ಲೋಕಸಭಾ ಸ್ಪೀಕರ್ ಇಂದು (ಆಗಸ್ಟ್ 7) ಅಧಿಸೂಚನೆ ಬಿಡುಗಡೆ ಮಾಡಿದ್ದಾರೆ.
ಮೋದಿ ಉಪನಾಮ ಟೀಕೆ ಹಿನ್ನೆಲೆ ರಾಹುಲ್ ಗಾಂಧಿ ಅವರಿಗೆ ವಿಧಿಸಿದ್ದ ಎರಡು ವರ್ಷಗಳ ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ವಿಧಿಸಿತ್ತು. ಈ ಹಿನ್ನೆಲೆ ಇವರ ಲೋಕಸಭಾ ಸದಸ್ಯತ್ವ ಕೂಡ ಮರುಸ್ಥಾಪನೆಯಾಗಿದೆ. ಆ ಮೂಲಕ ಮತ್ತೆ ಸಂಸದರಾಗಿ ಲೋಕಸಭೆ ಪ್ರವೇಶಿಸಲಿದ್ದಾರೆ ರಾಗಾ.
ಸೂರತ್ ನ್ಯಾಯಾಲಯದ ಆದೇಶಿವನ್ನು ಪ್ರಶ್ನಿಸಿ ರಾಹುಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ಶುಕ್ರವಾರ (ಆಗಸ್ಟ್ 4) ವಿಚಾರಣೆ ನಡೆಸಿದ್ದ ಕೋರ್ಟ್ ಶಿಕ್ಷೆಗೆ ತಡೆಯಾಜ್ಞೆ ವಿಧಿಸಿತ್ತು.
ಶುಕ್ರವಾರ ತಡೆಯಾಜ್ಞೆ ಪ್ರತಿಯೊಂದಿಗೆ ಲೋಕಸಭಾ ಸ್ಪೀಕರ್ ಅವರನ್ನು ಭೇಟಿ ಮಾಡಿದ್ದ ಕಾಂಗ್ರೆಸ್ ಮುಖಂಡರು ಅನಾರ್ಹತೆ ರದ್ದು ಮಾಡುವಂತೆ ಮನವಿ ಮಾಡಿದ್ದರು.
ಇದನ್ನೂ ಓದಿ
Rahul Gandhi: ಜೈಲು ಶಿಕ್ಷೆಗೆ ಸುಪ್ರಿಂ ತಡೆಯಾಜ್ಞೆ, ಸಂಸತ್ತಿಗೆ ಮರಳಲಿದ್ದಾರಾ ರಾಹುಲ್‌ಗಾಂಧಿ; ಸ್ಪೀಕರ್ ನಿರ್ಧಾರದತ್ತ ಎಲ್ಲರ ಚಿತ್ತ
ಮೋದಿ ಉಪನಾಮ ಟೀಕೆ ಪ್ರಕರಣಕ್ಕೆ ಸಂಬಂಧಿಸಿ ಸೂರತ್ ನ್ಯಾಯಾಲಯವು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆ ಪ್ರಕರಣಕ್ಕೆ ಸುಪ್ರಿಂಕೋರ್ಟ್ ತಡೆಯಾಜ್ಞೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಮರಳಿ ಸಂಸತ್ತಿನಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನಲಾಗುತ್ತಿದ್ದು, ಈ ಕುರಿತು ಇಂದು ಸ್ಫೀಕರ್ ನಿರ್ಧಾರ ಕೈಗೊಳ್ಳಲಿದ್ದಾರೆ.
ಮೋದಿ ಉಪನಾಮ ಟೀಕೆ ಪ್ರಕರಣ ಹಿನ್ನೆಲೆ, ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಲಯವು ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಅವರ ಸಂಸದ ಸ್ಥಾನ ಅನರ್ಹತೆಯನ್ನು ತೆರವು ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಇಂದು ಸ್ಪೀಕರ್ ನಿರ್ಧಾರ ಕೈಗೊಳ್ಳಲಿದ್ದು, ಎಲ್ಲರ ದೃಷ್ಟಿ ಅವರ ಮೇಲೆ ನೆಟ್ಟಿದೆ.
ವಿಭಾಗ