Indian Railways: ಬೆಂಗಳೂರು-ಧರ್ಮಪುರಿ, ಹರಿಪ್ರಿಯಾ, ಮೈಸೂರು-ಕಾಚೀಗುಡ, ವಾಸ್ಕೋ ಸಹಿತ 7 ರೈಲುಗಳ ಸಂಚಾರ ಸಮಯ ಬದಲು
May 18, 2024 06:00 PM IST
ಕರ್ನಾಟಕದ ಕೆಲವು ರೈಲುಗಳಲ್ಲಿನ ಸಂಚಾರದ ಸಮಯ ಜೂನ್ ಮೊದಲ ವಾರದಿಂದ ಬದಲಾಗಲಿದೆ.
- ಕರ್ನಾಟಕದಲ್ಲಿ ಸಂಚರಿಸುವ ಕೆಲವು ರೈಲುಗಳ( Indian Railway) ಸಂಚಾರದ ಸಮಯದ ಬದಲಾಗಲಿದೆ. ಯಾವ ರೈಲು, ನಿಲ್ದಾಣ ಯಾವುದು ಇಲ್ಲಿದೆ ವಿವರ.
ಬೆಂಗಳೂರು:ಕರ್ನಾಟಕದ ಹಲವು ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಂಗಳೂರಿನಿಂದ ಹೊರಡುವ ಧರ್ಮಪುರಿ ಮೆಮು ರೈಲು, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗ, ಕೊಪ್ಪಳ, ಬಳ್ಳಾರಿ ಮಾರ್ಗಮಾಗಿ ಸಂಚರಿಸುವ ತಿರುಪತಿ ಹರಿಪ್ರಿಯಾ ರೈಲು, ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಹೊರಡುವ ಕಾಚೀಗುಡ ರೈಲು, ಗೋವಾದ ವಾಸ್ಕೋದಿಂದ ಕರ್ನಾಟಕ ಮಾರ್ಗವಾಗಿ ಸಂಚರಿಸುವ ನಾಲ್ಕು ರೈಲುಗಳ ಸಮಯದಲ್ಲಿ ಬದಲಾವಣೆಯಾಗಲಿದೆ. ಕಾರ್ಯಾಚರಣೆಯ ಕಾರಣಗಳಿಂದಾಗಿ ಕೆಲವು ರೈಲುಗಳ ಸಮಯವನ್ನು ಪರಿಷ್ಕರಿಸಲು ನಿರ್ಧರಿಸಲಾಗಿದ್ದು. ಬಹುತೇಕ ಎಲ್ಲಾ ರೈಲುಗಳಲ್ಲಿನ ಕೆಲವು ನಿಲ್ದಾಣಗಳಲ್ಲಿನ ಸಂಚಾರ ಸಮಯದ ಬದಲಾವಣೆ ಜೂನ್ ಮೊದಲ ವಾರದಿಂದ ಜಾರಿಗೆ ಬರಲಿದೆ ಎಂದು ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.
ರೈಲುಗಳ ಸಮಯ ಪರಿಷ್ಕರಣೆ
1. ರೈಲು ಸಂಖ್ಯೆ. 06277 ಕೆಎಆರ್ ಬೆಂಗಳೂರು-ಧರ್ಮಪುರಿ ಮೇಮು ವಿಶೇಷ, ಜೂನ್ 6, 2024 ರಿಂದ ಜಾರಿಗೆ ಬರುತ್ತದೆ.
ಈ ರೈಲು ಬೆಂಗಳೂರಿಂದ ಸಂಜೆ 6:20 ಅಂದರೆ ಹಿಂದಿನ ಸಮಯಕ್ಕಿಂತ 10 ನಿಮಿಷ ಮೊದಲು ಹೊರಡಲಿದೆ. ಧರ್ಮಪುರಿಯನ್ನೂ ರಾತ್ರಿ 9:35ಕ್ಕೆ ಅಂದರೆ 15 ನಿಮಿಷ ಮುಂಚೆ ತಲುಪಲಿದೆ.
2. ರೈಲು ಸಂಖ್ಯೆ 12786 ಮೈಸೂರು-ಕಾಚೀಗೂಡ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಜೂನ್ 6, 2024 ರಿಂದ ಜಾರಿಗೆ ಬರುತ್ತದೆ.
ಮೈಸೂರು ಹಾಗೂ ಕೆಂಗೇರಿ ನಿಲ್ದಾಣಗಳ ನಡುವೆ ಸಮಯದಲ್ಲಿ ಬದಲಾವಣೆ ಇಲ್ಲ. ಆದರೆ ಬೆಂಗಳೂರು ನಗರ ನಿಲ್ದಾಣದಿಂದ ಸಂಜೆ 6 ಕ್ಕೆ ಅಂದರೆ 20 ನಿಮಿಷ ಬೇಗ ಹೊರಡಲಿದೆ. ಬೆಂಗಳೂರು ಕಂಟೋನ್ಮೆಂಟ್, ಯಲಹಂಕ, ದೊಡ್ಡಬಳ್ಳಾಪುರ. ಗೌರಿಬಿದನೂರು ನಿಲ್ದಾಣದ ಸಮಯದಲ್ಲೂ ಬದಲಾವಣೆಯಾಗಿದೆ. ಕಾಚೇಗೂಡವನ್ನು ಮೊದಲಿದ್ದ ಸಮಯದಲ್ಲಿಯೇ ತಲುಪಲಿದೆ.
3. ರೈಲು ಸಂಖ್ಯೆ. 17321 ವಾಸ್ಕೋ ಡ ಗಾಮಾ-ಜಸಿದಿಹ್ ವೀಕ್ಲಿ ಎಕ್ಸ್‌ಪ್ರೆಸ್, ಜೂನ್ 7, 2024 ರಿಂದ ಜಾರಿಗೆ ಬರುತ್ತದೆ.
ಈ ರೈಲು ಕರ್ನಾಟಕದ ಧಾರವಾಡ, ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿಗೆ ಮೊದಲಿದ್ದ ಸಮಯಕ್ಕಿಂತ ಒಂದು ಗಂಟೆ ಬೇಗನೇ ಬರಲಿದೆ.
4. ರೈಲು ಸಂಖ್ಯೆ. 17322 ಜಸಿದಿಹ್-ವಾಸ್ಕೋ ಡ ಗಾಮಾ ಸಾಪ್ತಾಹಿಕ ಎಕ್ಸ್‌ಪ್ರೆಸ್, ಜೂನ್ 10, 2024 ರಿಂದ ಜಾರಿಗೆ ಬರುತ್ತದೆ. ಈ ರೈಲು ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಲೋಂಡಕ್ಕೆ ಕೆಲ ನಿಮಿಷಗಳ ಕಾಲ ತಡವಾಗಿ ಬರಲಿದೆ.
5. ರೈಲು ಸಂಖ್ಯೆ. 17309 ಯಶವಂತಪುರ-ವಾಸ್ಕೋ ಡ ಗಾಮಾ ಡೈಲಿ ಎಕ್ಸ್‌ಪ್ರೆಸ್, ಜೂನ್ 6, 2024 ರಿಂದ ಜಾರಿಗೆ ಬರುತ್ತದೆ. ವಾಸ್ಕೋ ದಿಂದ ಈ ರೈಲು 15 ನಿಮಿಷ ತಡವಾಗಿ ಹೊರಲಿದ್ದು. ಇತರೆಡೆ ನಿಲ್ದಾಣಗಳ ಸಮಯದಲ್ಲಿ ಬದಲಾವಣೆಯಿಲ್ಲ.
6. ರೈಲು ಸಂಖ್ಯೆ. 12742 ಪಾಟ್ನಾ-ವಾಸ್ಕೋ ಡ ಗಾಮಾ ಸಾಪ್ತಾಹಿಕ ಎಕ್ಸ್‌ಪ್ರೆಸ್, ಜೂನ್ 8, 2024 ರಿಂದ ಜಾರಿಗೆ ಬರುತ್ತದೆ.
ವಾಸ್ಕೋ ಕ್ಕೆ ಈ ರೈಲು 15 ನಿಮಿಷ ತಡವಾಗಿ ಬರಲಿದ್ದು. ಇತರೆಡೆ ನಿಲ್ದಾಣಗಳ ಸಮಯದಲ್ಲಿ ಬದಲಾವಣೆಯಿಲ್ಲ.
7. ರೈಲು ಸಂಖ್ಯೆ. 17415 ತಿರುಪತಿ-ಕೊಲ್ಹಾಪುರ ಹರಿಪ್ರಿಯಾ ಡೈಲಿ ಎಕ್ಸ್‌ಪ್ರೆಸ್, ಜೂನ್ 11, 2024 ರಿಂದ ಜಾರಿಗೆ ಬರುತ್ತದೆ.
ಈ ರೈಲಯ ಬಳ್ಳಾರಿಗೆ 10 ನಿಮಿಷ, ತೋರಣಗಲ್ಲಿಗೆ 8 ನಿಮಿಷ, ಹೊಸಪೇಟೆಗೆ 10 ನಿಮಿಷ, ಕೊಪ್ಪಳಕ್ಕೆ 6 ನಿಮಿಷ ತಡವಾಗ ಬರಲಿದೆ. ಆದರೆ ಹುಬ್ಬಳ್ಳಿಗೆ 10 ನಿಮಿಷ ಬೇಗನೇ ಬರಲಿದೆ. ಘಟಪ್ರಭಕ್ಕೆ ಒಂದು ನಿಮಿಷ ಬೇಗ, ಉಗರ್ ಖುರ್ದ್‌ಗೆ ಮೂರು ನಿಮಿಷ ತಡವಾಗಿ ಆಗಮಿಸಲಿದೆ.
ಈ ರೈಲುಗಳ ಸಂಚಾರ ಸಮಯ, ಬದಲಾವಣೆ, ನಿಲ್ದಾಣಗಳಲ್ಲಿನ ವಿವರಗಳನ್ನು https://swr.indianrailways.gov.in/view_detail.jsp?lang=0&dcd=7484&id=0,4,268 ಮೂಲಕ ಪಡೆಯಬಹುದಾಗಿದೆ.
ಅಲ್ಲದೇ ರೈಲುಗಳ ಸಂಬಂಧಿತ ಮಾಹಿತಿಗೆ 139 ಕ್ಕೆ ಕರೆ ಮಾಡಬಹುದು. ಇಲ್ಲವೇ www.enquiry.indianrail.gov.in. ಮೂಲಕ ವೂ ವಿವರ ಪಡೆಯಬಹುದಾಗಿ ಎಂದು ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.