logo
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಮೈಸೂರು-ಬೆಂಗಳೂರು- ಮೈಲಾಡುತುರೈ ಎಕ್ಸ್ ಪ್ರೆಸ್ ರೈಲು ಕಡಲೂರು ಪೋರ್ಟ್ ವರೆಗೆ ವಿಸ್ತರಣೆ

Indian Railways: ಮೈಸೂರು-ಬೆಂಗಳೂರು- ಮೈಲಾಡುತುರೈ ಎಕ್ಸ್ ಪ್ರೆಸ್ ರೈಲು ಕಡಲೂರು ಪೋರ್ಟ್ ವರೆಗೆ ವಿಸ್ತರಣೆ

Umesha Bhatta P H HT Kannada

Jul 18, 2024 08:21 PM IST

google News

ಮೈಸೂರು ಮೈಲಾಡುತುರೈ ಎಕ್ಸ್ ಪ್ರೆಸ್ ರೈಲು ಕಡಲೂರು ಫೋರ್ಟ್‌ವರೆಗೂ ವಿಸ್ತರಣೆಯಾಗಿದೆ.

    • Train News ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಸಂಚರಿಸುವ ಮೈಲಾಡುತುರೈ(Mysore Bangalore Mayiladuthurai Express) ರೈಲು ಕಡಲೂರು ಪೋರ್ಟ್‌ವರೆಗೂ ನಿಲುಗಡೆಯಾಗಲಿದೆ.
ಮೈಸೂರು ಮೈಲಾಡುತುರೈ ಎಕ್ಸ್ ಪ್ರೆಸ್ ರೈಲು ಕಡಲೂರು ಫೋರ್ಟ್‌ವರೆಗೂ ವಿಸ್ತರಣೆಯಾಗಿದೆ.
ಮೈಸೂರು ಮೈಲಾಡುತುರೈ ಎಕ್ಸ್ ಪ್ರೆಸ್ ರೈಲು ಕಡಲೂರು ಫೋರ್ಟ್‌ವರೆಗೂ ವಿಸ್ತರಣೆಯಾಗಿದೆ.

ಬೆಂಗಳೂರು: ಕರ್ನಾಟಕ ಹಾಗೂ ತಮಿಳುನಾಡು ರಾಜ್ಯದ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲುಗಳಲ್ಲಿ ಮೈಸೂರು-ಬೆಂಗಳೂರು- ಮೈಲಾಡುತುರೈ ಎಕ್ಸ್ ಪ್ರೆಸ್(Mysore Bangalore Mayiladuthurai Express) ಕೂಡ ಒಂದು. ಮೈಸೂರಿನಿಂದ ಆರಂಭಿಸಿ ಮಂಡ್ಯ,ರಾಮನಗರ, ಬೆಂಗಳೂರು ಮಾರ್ಗವಾಗಿ ಈ ರೈಲು ಹಲವಾರು ವರ್ಷಗಳಿಂದ ಉಭಯ ರಾಜ್ಯಗಳ ನಡುವೆ ಸಂಚರಿಸುತ್ತಿದೆ. ಈಗ ಮಯಿಲಾಡುತುರೈ-ಮೈಸೂರು ನಿಲ್ದಾಣಗಳ ನಡುವೆ ಪ್ರತಿದಿನ ಚಲಿಸುವ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ಕಡಲೂರು ಪೋರ್ಟ್ವರೆಗೆ (Cuddalore Port)ವಿಸ್ತರಿಸಲು ದಕ್ಷಿಣ ರೈಲ್ವೆಯು ಸೂಚಿಸಿದೆ. ವಿಸ್ತೃತ ರೈಲು ಸೇವೆಯು ಎರಡೂ ಕಡೆಯಿಂದ 2024ರ ಜುಲೈ 19 ರಿಂದ ಅಂದರೆ ಶುಕ್ರವಾರದಿಂದಲೇ ಪ್ರಾರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಈಗಾಗಲೇ ಚಾಲ್ತಿಯಲ್ಲಿರುವ ಈ ರೈಲಿನ ಸಂಚಾರ ಸಮಯದಲ್ಲಿ ಕರ್ನಾಟಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮೈಸೂರು ಹಾಗೂ ಬೆಂಗಳೂರಿಗೆ ಆಗಮಿಸುವ ನಿರ್ಗಮಿಸುವ ಸಮಯಗಳು ಯಥಾರೀತಿಯಲ್ಲಿ ಇರಲಿವೆ ವಿಸ್ತರಣೆಗೊಂಡ ಭಾಗದ ರೈಲಿನ ನಿಲುಗಡೆ ಮತ್ತು ಸಮಯವನ್ನು ಈ ರೀತಿ ಇದೆ ಎಂದು ಅವರು ತಿಳಿಸಿದ್ದಾರೆ.

1. ರೈಲು ಸಂಖ್ಯೆ 16232 ಮೈಸೂರು-ಕಡಲೂರು ಪೋರ್ಟ್ ಡೈಲಿ ಎಕ್ಸ್ ಪ್ರೆಸ್:

• ಮಯಿಲಾಡುತುರೈಗೆ ಬೆಳಿಗ್ಗೆ 06:45 ಗಂಟೆಗೆ ಆಗಮಿಸಿ, 07:00 ಗಂಟೆಗೆ ನಿರ್ಗಮಿಸಲಿದೆ.

• ಸಿರ್ಕಾಝಿಗೆ ಬೆಳಿಗ್ಗೆ 07:23 ಗಂಟೆಗೆ ಆಗಮಿಸಿ, 07:24 ಗಂಟೆಗೆ ನಿರ್ಗಮಿಸಲಿದೆ.

• ಚಿದಂಬರಂಗೆ ಬೆಳಗ್ಗೆಇ 07:41 ಗಂಟೆಗೆ ಆಗಮಿಸಿ, 07:42 ಗಂಟೆಗೆ ನಿರ್ಗಮಿಸಲಿದೆ.

• ಕಡಲೂರು ಪೋರ್ಟ್ ಗೆ ಬೆಳಿಗ್ಗೆ 08:35 ಗಂಟೆಗೆ ಆಗಮಿಸಲಿದೆ.

2. ರೈಲು ಸಂಖ್ಯೆ 16231 ಕಡಲೂರು ಪೋರ್ಟ್-ಮೈಸೂರು ಡೈಲಿ ಎಕ್ಸ್ ಪ್ರೆಸ್ :

• ಕಡಲೂರು ಪೋರ್ಟ್ ನಿಲ್ದಾಣದಿಂದ ಮಧ್ಯಾಹ್ನ 3:40 ಗಂಟೆಗೆ ನಿರ್ಗಮಿಸಲಿದೆ.

• ಚಿದಂಬರಂಗೆ ಸಂಜೆ4 :07 ಗಂಟೆಗೆ ಆಗಮಿಸಿ, 4. 08 ಗಂಟೆಗೆ ನಿರ್ಗಮಿಸಲಿದೆ.

• ಸಿರ್ಕಾಝಿಗೆ ಸಂಜೆ 4:23 ಗಂಟೆಗೆ ಆಗಮಿಸಿ,4:24 ಗಂಟೆಗೆ ನಿರ್ಗಮಿಸಲಿದೆ.

• ಮಯಿಲಾಡುತುರೈಗೆ ಸಂಜೆ 5:30 ಗಂಟೆಗೆ ಆಗಮಿಸಿ,5:55 ಗಂಟೆಗೆ ನಿರ್ಗಮಿಸಲಿದೆ.

ಮೈಸೂರು-ಮೈಲಾಡುತುರೈ ನಿಲ್ದಾಣಗಳ ನಡುವಿನ ನಿಲುಗಡೆ ಮತ್ತು ವೇಳಾಪಟ್ಟಿಯಲ್ಲಿ ಬದಲಾವ ಣೆ ಇರುವುದಿಲ್ಲ ಎಂದು ಮಂಜುನಾಥ ಕನಮಡಿ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ