logo
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಮಿರಜ್ ಬೆಳಗಾವಿ ವಿಶೇಷ ರೈಲುಗಳ ಆಗಮನದ ವೇಳೆಯಲ್ಲಿ ಪರಿಷ್ಕರಣೆ, ನಾಳೆಯಿಂದಲೇ ಜಾರಿ

Indian Railways: ಮಿರಜ್ ಬೆಳಗಾವಿ ವಿಶೇಷ ರೈಲುಗಳ ಆಗಮನದ ವೇಳೆಯಲ್ಲಿ ಪರಿಷ್ಕರಣೆ, ನಾಳೆಯಿಂದಲೇ ಜಾರಿ

Umesha Bhatta P H HT Kannada

Published Jun 18, 2025 05:37 PM IST

google News

ಮೀರಜ್‌ ಬೆಳಗಾವಿ ನಡುವೆ ಸಂಚರಿಸುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

  • ಭಾರತೀಯ ರೈಲ್ವೆ ನೈಋತ್ಯ ರೈಲ್ವೆ ವಿಭಾಗವು ಬೆಳಗಾವಿ ಹಾಗೂ ಮೀರಜ್‌ ರೈಲು ನಡುವೆ ಸಂಚರಿಸುವ ಕೆಲವು ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಿದೆ. 
ಮೀರಜ್‌ ಬೆಳಗಾವಿ ನಡುವೆ ಸಂಚರಿಸುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಮೀರಜ್‌ ಬೆಳಗಾವಿ ನಡುವೆ ಸಂಚರಿಸುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಹುಬ್ಬಳ್ಳಿ: ನೈಋತ್ಯ ರೈಲ್ವೆಯು ರೈಲು ಸಂಖ್ಯೆ 07302 ಮಿರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ಮತ್ತು ರೈಲು ಸಂಖ್ಯೆ 07304 ಮಿರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ರೈಲುಗಳ ಬೆಳಗಾವಿ ನಿಲ್ದಾಣಕ್ಕೆ ಆಗಮನದ ಸಮಯವನ್ನು 2025ರ ಜೂನ್ 19 ರಿಂದ ಪರಿಷ್ಕರಿಸಿದೆ. ಅದರಂತೆ, ರೈಲು ಸಂಖ್ಯೆ 07302 ಮಿರಜ್ - ಬೆಳಗಾವಿ ಕಾಯ್ದಿರಿಸದ ವಿಶೇಷ ರೈಲು ಬೆಳಗಾವಿಗೆ ಆಗಮಿಸುವ ಸಮಯವನ್ನು ಈಗಿರುವ 12:50 ಗಂಟೆಗಳಿಂದ 13:00 ಗಂಟೆಗಳಿಗೆ ಪರಿಷ್ಕರಿಸಲಾಗಿದೆ. ಅದೇ ರೀತಿ, ರೈಲು ಸಂಖ್ಯೆ 07304 ಮಿರಜ್ - ಬೆಳಗಾವಿ ಕಾಯ್ದಿರಿಸದ ವಿಶೇಷ ರೈಲಿನ ಆಗಮನದ ಸಮಯವನ್ನು ಬೆಳಗಾವಿ ನಿಲ್ದಾಣದಲ್ಲಿ 20:35 ಗಂಟೆಗಳಿಂದ 21:00 ಗಂಟೆಗಳಿಗೆ ಪರಿಷ್ಕರಿಸಲಾಗಿದೆ.

ಈ ಎರಡೂ ರೈಲುಗಳ ಮಿರಜ್ ಮತ್ತು ಸಾಂಬ್ರೇ ನಿಲ್ದಾಣಗಳ ನಡುವಿನ ಸಮಯಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

II. ಬೆಲ್ಲಂಪಲ್ಲಿಯಲ್ಲಿ ರೈಲುಗಳ ನಿಲುಗಡೆ ರದ್ದು

ಸಿಕಂದರಾಬಾದ್ ವಿಭಾಗದ ಬಲ್ಹರ್ಷಾ-ಕಾಜಿಪೇಟೆ ವಿಭಾಗದಲ್ಲಿ ರೆಚ್ನಿ ರೋಡ್ ಮತ್ತು ಬೆಲ್ಲಂಪಲ್ಲಿ ನಿಲ್ದಾಣಗಳ ನಡುವಿನ ಹೊಸ ಮೂರನೇ ಮಾರ್ಗದ ಕಾರ್ಯಾರಂಭಕ್ಕೆ ಸಂಬಂಧಿಸಿದಂತೆ, ಬೆಲ್ಲಂಪಲ್ಲಿ ಯಾರ್ಡ್‌ನಲ್ಲಿ ಎಂಜಿನಿಯರಿಂಗ್ ಕೆಲಸಗಳ ಕಾರಣದಿಂದಾಗಿ ಎರಡು ರೈಲುಗಳಿಗೆ ಬೆಲ್ಲಂಪಲ್ಲಿಯಲ್ಲಿ ನಿಲುಗಡೆ ರದ್ದುಪಡಿಸುವುದಾಗಿ ದಕ್ಷಿಣ ಮಧ್ಯ ರೈಲ್ವೆಯು ತಿಳಿಸಿದೆ.

1. ಜೂನ್ 21, 2025 ರಂದು ಹುಬ್ಬಳ್ಳಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07323 ಎಸ್‌ಎಸ್‌ಎಸ್ ಹುಬ್ಬಳ್ಳಿ - ಬನಾರಸ್ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಬೆಲ್ಲಂಪಲ್ಲಿಯಲ್ಲಿ ನಿಲ್ಲುವುದಿಲ್ಲ. ಪರ್ಯಾಯವಾಗಿ, ಈ ರೈಲು ಸಿರ್‌ಪುರ್ ಕಾಗಜ್‌ನಗರದಲ್ಲಿ ನಿಲುಗಡೆಯನ್ನು ಒದಗಿಸಲಿದೆ.

2. ಜೂನ್ 21, 2025 ರಂದು ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12975 ಮೈಸೂರು - ಜೈಪುರ ದ್ವಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಬೆಲ್ಲಂಪಲ್ಲಿಯಲ್ಲಿ ನಿಗದಿತ ನಿಲುಗಡೆಯನ್ನು ಸಹ ಇರುವುದಿಲ್ಲ.

ರೈಲುಗಳ ಮಾರ್ಗ ಬದಲಾವಣೆ

ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ಪುನರಾಭಿವೃದ್ಧಿ ಕಾರ್ಯಗಳ ಭಾಗವಾಗಿ ಪಾದಚಾರಿ ಮೇಲ್ಸೇತುವೆ (FOB) ಸಂಖ್ಯೆ 03ರ ನಿರ್ಮಾಣ ಕಾಮಗಾರಿಗಳ ಹಿನ್ನೆಲೆಯಲ್ಲಿ, ಈ ಕೆಳಗಿನ ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ:

1. ರೈಲು ಸಂಖ್ಯೆ 06269 ಮೈಸೂರು – ಎಸ್.ಎಂ.ವಿ.ಟಿ ಬೆಂಗಳೂರು ದೈನಂದಿನ ಪ್ಯಾಸೆಂಜರ್ ವಿಶೇಷ ರೈಲು ಜೂನ್ 23, 25 ಮತ್ತು 26, 2025 ರಂದು ಹೊರಡುವ ಈ ರೈಲು ಕೆ.ಎಸ್.ಆರ್ ಬೆಂಗಳೂರು, ಯಶವಂತಪುರ, ಹೆಬ್ಬಾಳ, ಬಾಣಸವಾಡಿ, ಮತ್ತು ಎಸ್.ಎಂ.ವಿ.ಟಿ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದೆ. ಇದು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಲುಗಡೆಯಿರುವುದಿಲ್ಲ.

2. ರೈಲು ಸಂಖ್ಯೆ 16593 ಕೆಎಸ್ಆರ್ ಬೆಂಗಳೂರು – ನಾಂದೇಡ್ ದೈನಂದಿನ ಎಕ್ಸ್‌ಪ್ರೆಸ್ ಜೂನ್ 23, 25 ಮತ್ತು 26, 2025 ರಂದು ಪ್ರಾರಂಭವಾಗುವ ಈ ರೈಲು ಕೆ.ಎಸ್.ಆರ್ ಬೆಂಗಳೂರಿನಿಂದ 45 ನಿಮಿಷಗಳ ಕಾಲ ವಿಳಂಬವಾಗಿ ಹೊರಡಲಿದೆ. ಅಲ್ಲದೆ, ಇದು ಕೆ.ಎಸ್.ಆರ್ ಬೆಂಗಳೂರು, ಯಶವಂತಪುರ, ಯಲಹಂಕ, ಮತ್ತು ಧರ್ಮಾವರಂ ಮಾರ್ಗವಾಗಿ ಸಂಚರಿಸಲಿದೆ. ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ಈ ರೈಲಿಗೆ ನಿಲುಗಡೆ ಇರುವುದಿಲ್ಲ.

3. ರೈಲು ಸಂಖ್ಯೆ 16022 ಮೈಸೂರು – ಡಾ. ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ ದೈನಂದಿನ ಎಕ್ಸ್‌ಪ್ರೆಸ್ ಜೂನ್ 23, 25 ಮತ್ತು 26, 2025 ರಂದು ಪ್ರಾರಂಭವಾಗುವ ಈ ರೈಲು ಬೆಂಗಳೂರು, ಯಶವಂತಪುರ, ಹೆಬ್ಬಾಳ, ಬಾಣಸವಾಡಿ, ಬೈಯಪ್ಪನಹಳ್ಳಿ, ಮತ್ತು ಕೃಷ್ಣರಾಜಪುರಂ ಮಾರ್ಗವಾಗಿ ಸಂಚರಿಸಲಿದೆ. ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ಈ ರೈಲು ನಿಲುಗಡೆ ಮಾಡುವುದಿಲ್ಲ.

4. ರೈಲು ಸಂಖ್ಯೆ 06270 ಎಸ್.ಎಂ.ವಿ.ಟಿ ಬೆಂಗಳೂರು – ಮೈಸೂರು ದೈನಂದಿನ ಪ್ಯಾಸೆಂಜರ್ ವಿಶೇಷ ರೈಲು ಜೂನ್ 23, 25 ಮತ್ತು 26, 2025 ರಂದು ಪ್ರಾರಂಭವಾಗುವ ಈ ರೈಲು ಎಸ್.ಎಂ.ವಿ.ಟಿ ಬೆಂಗಳೂರು, ಬಾಣಸವಾಡಿ, ಯಶವಂತಪುರ, ಮತ್ತು ಕೆ.ಎಸ್.ಆರ್ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಸಹ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಲುಗಡೆ ಮಾಡುವುದಿಲ್ಲ

    ಹಂಚಿಕೊಳ್ಳಲು ಲೇಖನಗಳು