logo
ಕನ್ನಡ ಸುದ್ದಿ  /  ಕರ್ನಾಟಕ  /  India's First 3d Post Office : ಬೆಂಗಳೂರಿನಲ್ಲಿ ದೇಶದ ಮೊದಲ 3d ಅಂಚೆಕಚೇರಿ!

India's first 3D post office : ಬೆಂಗಳೂರಿನಲ್ಲಿ ದೇಶದ ಮೊದಲ 3D ಅಂಚೆಕಚೇರಿ!

HT Kannada Desk HT Kannada

Aug 26, 2022 08:34 PM IST

google News

3ಡಿ ಪ್ರಿಂಟ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿರುವ ಅಂಚೆ ಕಚೇರಿಗಳು ಸಾಮಾನ್ಯ ಅಂಚೆ ಕಚೇರಿಗಳಂತೆಯೇ ಕಾರ್ಯನಿರ್ವಹಿಸಲಿವೆ. (ಸಾಂದರ್ಭಿಕ ಚಿತ್ರ)

    • India's first 3D post office : ದೇಶದ ಮೊದಲ 3D ಪ್ರಿಂಟ್‌ ಟೆಕ್ನಾಲಜಿ ಆಧಾರಿತ ಅಂಚೆ ಕಚೇರಿ ಕಟ್ಟಡ ಬೆಂಗಳೂರಿನಲ್ಲಿ ತಲೆಎತ್ತಲಿದೆ. ಈ ಅಂಚೆ ಕಚೇರಿ ನಿರ್ಮಾಣಕ್ಕೆ 25 ಲಕ್ಷ ರೂಪಾಯಿ ವೆಚ್ಚ ಅಂದಾಜಿಸಲಾಗಿದೆ. 1,000 ಚದರ ಅಡಿ ಕಟ್ಟಡ ನಿರ್ಮಾಣವಾಗಲಿದ್ದು, ಅಂತಿಮ ವೆಚ್ಚದಲ್ಲಿ ಶೇಕಡ 25 ಕಡಿಮೆಯಾಗಲಿದೆ ಎಂಬ ನಿರೀಕ್ಷೆ ಇದೆ. 
3ಡಿ ಪ್ರಿಂಟ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿರುವ ಅಂಚೆ ಕಚೇರಿಗಳು ಸಾಮಾನ್ಯ ಅಂಚೆ ಕಚೇರಿಗಳಂತೆಯೇ ಕಾರ್ಯನಿರ್ವಹಿಸಲಿವೆ. (ಸಾಂದರ್ಭಿಕ ಚಿತ್ರ)
3ಡಿ ಪ್ರಿಂಟ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿರುವ ಅಂಚೆ ಕಚೇರಿಗಳು ಸಾಮಾನ್ಯ ಅಂಚೆ ಕಚೇರಿಗಳಂತೆಯೇ ಕಾರ್ಯನಿರ್ವಹಿಸಲಿವೆ. (ಸಾಂದರ್ಭಿಕ ಚಿತ್ರ) (HT)

ಬೆಂಗಳೂರು: ಒಂದು ನವೋನ್ವೇಷಣೆಯ ನಡೆಗೆ ಬೆಂಗಳೂರು ವೇದಿಕೆಯಾಗಲಿದೆ. ಶೀಘ್ರದಲ್ಲೇ 3D ಮುದ್ರಣ ತಂತ್ರಜ್ಞಾನದಿಂದ ನಿರ್ಮಿಸಲಾದ ಭಾರತದ ಮೊದಲ ಅಂಚೆ ಕಚೇರಿ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ. ಇದು ಕೇವಲ ಒಂದು ತಿಂಗಳಲ್ಲಿ ಸಿದ್ಧವಾಗಲಿದೆ ಎಂಬುದು ಇನ್ನೊಂದು ಗಮನಾರ್ಹ ವಿಚಾರ.

ಹಲಸೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿ ಅಂಚೆ ಇಲಾಖೆಗೆ ಸೇರಿದ ಜಾಗದಲ್ಲಿ ಈ 3D ಅಂಚೆ ಕಚೇರಿ ತಲೆ ಎತ್ತಲಿದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, 1,000 ಚದರ ಅಡಿ ಕಟ್ಟಡವನ್ನು ಸ್ಥಾಪಿಸಲು 25 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದು ಕಟ್ಟಡ ನಿರ್ಮಾಣದ ಅಂತಿಮ ವೆಚ್ಚವನ್ನು ಶೇಕಡ 25 ಕಡಿಮೆ ಮಾಡುತ್ತದೆ. 3ಡಿ ಪ್ರಿಂಟ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿರುವ ಅಂಚೆ ಕಚೇರಿಗಳು ಸಾಮಾನ್ಯ ಅಂಚೆ ಕಚೇರಿಗಳಂತೆಯೇ ಕಾರ್ಯನಿರ್ವಹಿಸಲಿವೆ.

ಐಐಟಿ-ಮದ್ರಾಸ್ ಜತೆಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಬಿಲ್ಡಿಂಗ್ ಮೆಟೀರಿಯಲ್ಸ್ ಮತ್ತು ಟೆಕ್ನಾಲಜಿ ಪ್ರಮೋಷನ್ ಕೌನ್ಸಿಲ್, ನೆಲದಿಂದ ಮೂರು ಮಹಡಿಗಳ ರನ್ನಿಂಗ್‌ ಸ್ಟ್ರಕ್ಚರ್‌ ಅಥವಾ ಚಲಿಸುವ ರಚನೆಗಳ 3D ಕಾಂಕ್ರೀಟ್ ಮುದ್ರಣಕ್ಕಾಗಿ ಲಾರ್ಸೆನ್ ಮತ್ತು ಟೂಬ್ರೊ ಲಿಮಿಟೆಡ್ (L&T) ಗೆ 'ತಂತ್ರಜ್ಞಾನ ಅನುಮೋದನೆ' (technology approval) ನೀಡಿದೆ. ಕಟ್ಟಡದ ವಿನ್ಯಾಸವನ್ನು ಅಂಚೆ ಇಲಾಖೆಗೆ ಸಲ್ಲಿಸಲಾಗಿದ್ದು, ಎಲ್ಲವೂ ಅಂದಾಜಿಸಿದಂತೆಯೇ ಪೂರ್ಣವಾದರೆ ದೇಶದಲ್ಲೇ ಮೊದಲ 3ಡಿ ಪ್ರಿಂಟೆಡ್ ಅಂಚೆ ಕಚೇರಿಯನ್ನು ಬೆಂಗಳೂರು ಶೀಘ್ರದಲ್ಲಿಯೇ ಕಾಣಲಿದೆ.

ಏತನ್ಮಧ್ಯೆ, ಅನೇಕ ಕಾರ್ಯವಿಧಾನಗಳನ್ನು ಒಳಗೊಂಡಿರುವ ಕಾರಣ ಒಂದು ತಿಂಗಳ ಕಾಲಮಿತಿಯು ಅಂಚೆ ಇಲಾಖೆಗೆ ದೊಡ್ಡ ಸವಾಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ನಿಯಮಗಳ ಪ್ರಕಾರ 2.5 ಲಕ್ಷ ರೂಪಾಯಿಗಿಂತ ಹೆಚ್ಚು ಬೆಲೆಯ ಒಪ್ಪಂದವನ್ನು ಸ್ಪರ್ಧಾತ್ಮಕ ಬಿಡ್ಡಿಂಗ್‌ಗೆ ಒಡ್ಡಬೇಕು. ಆದಾಗ್ಯೂ, ಇದು ಈ ವರ್ಗದಲ್ಲಿ ಅರ್ಹವಾದ ಏಕೈಕ ಕಾಳಜಿ. ಆದ್ದರಿಂದ, ನಾವು L&T ಅನ್ನು ನಾಮನಿರ್ದೇಶನ ಮಾಡಬಹುದು. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ. ಕೆಲಸದ ಆದೇಶವನ್ನು ಸುಮಾರು ಒಂದು ತಿಂಗಳ ಒಳಗೆಯೇ ಕಂಪನಿಗೆ ನೀಡಬಹುದು. ವಿನ್ಯಾಸವನ್ನು ಕಂಪನಿಯು ಈಗಾಗಲೇ ನಮಗೆ ಸಲ್ಲಿಸಿದೆ. ಮುಂದಿನ ತಿಂಗಳೊಳಗೆ ಕಟ್ಟಡ ಸಿದ್ಧವಾಗಲಿದೆ ಎಂದು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ