Kalaburagi News: ಕಲ್ಯಾಣ ಕರ್ನಾಟಕ ಪ್ರಣಾಳಿಕೆ ಜಾರಿಗೆ ಬದ್ದ, ಸಣ್ಣ ಕೈಗಾರಿಕೆ ಸ್ಥಾಪನೆ ಕುರಿತು ಸಭೆ; ಸಚಿವ ಶರಣಬಸಪ್ಪಗೌಡ ದರ್ಶನಾಪುರ
Jun 05, 2023 11:39 AM IST
ಸಚಿವ ಶರಣಬಸಪ್ಪ ಗೌಡ ದರ್ಶನಾಪುರ
- Sharanbasappa Gowda Darshanapura: ಕಲ್ಯಾಣ ಕರ್ನಾಟಕ ಪ್ರಣಾಳಿಕೆ ಜಾರಿಗೆ ಬದ್ದ. ಈ ಭಾಗದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ರೂಪಿಸಲಾದ ಪ್ರಣಾಳಿಕೆ ಜಾರಿಗೆ ಮಾಡುತ್ತೇವೆ ಎಂದು ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ತಿಳಿಸಿದ್ದಾರೆ.
ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಇರುವ ಅವಕಾಶಗಳು ಹಾಗೂ ಸೌಲಭ್ಯಗಳು ಕುರಿತಾಗಿ ನಾಲ್ಕೈದು ದಿನದೊಳಗೆ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿ ಪರಾಮರ್ಶಿಸಲಾಗುವುದು ಎಂದು ಸಣ್ಣ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಖಾತೆ ನೂತನ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ತಿಳಿಸಿದ್ದಾರೆ.
ಸಚಿವರಾದ ಬಳಿಕ ಕಲಬುರಗಿಗೆ ಮೊದಲ ಬಾರಿ ಆಗಮಿಸಿದ ಅವರು, ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಪ್ರಣಾಳಿಕೆ ಜಾರಿಗೆ ಬದ್ದ; ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ರೂಪಿಸಲಾದ ಪ್ರಣಾಳಿಕೆ ಜಾರಿಗೆ ಸರ್ಕಾರ ಬದ್ದವಿದೆ ಎಂದರು.
371 ಜೆ ಜಾರಿಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲಾಗುವುದು
ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ವಿಶೇಷ ಮೀಸಲಾತಿಗೆ ಜಾರಿಯಾಗಿರುವ 371 ಜೆ ಜಾರಿಯಲ್ಲಿನ ನ್ಯೂನತೆಗಳ ಸರಿಪಡಿಸಲಾಗುವುದು. ಈ ಭಾಗದ ಖಾಲಿ ಹುದ್ದೆಗಳ ಭರ್ತಿ, ಕಲ್ಯಾಣ ಕರ್ನಾಟಕದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಸಮಗ್ರ ಅಭಿವೃದ್ಧಿಗೆ ನೀಲ ನಕ್ಷೆ ರೂಪಿಸುವುದು ಸೇರಿದಂತೆ ಇತರ ಬೇಡಿಕೆಗಳ ಸಾಕಾರದ ಬದ್ದತೆ ಇದೆ ಎಂದು ಸ್ಪಷ್ಟಪಡಿಸಿದರು.
ಸಣ್ಣ ಖಾತೆ-ದೊಡ್ಡ ಖಾತೆ ಎಂಬುದಿಲ್ಲ
ಸಣ್ಣ ಖಾತೆ-ದೊಡ್ಡ ಖಾತೆ ಎಂಬುದು ಇಲ್ಲ. ಆಸಕ್ತಿಯಿಂದ ಸಣ್ಣ ಖಾತೆಯಲ್ಲೂ ದೊಡ್ಡ ಕೆಲಸ ಮಾಡಬಹುದು. ಈ ಹಿಂದೆ ಇಂಧನ ಖಾತೆ ಸಚಿವರಾಗಿ ಕೆಲಸ ಮಾಡಿರಬಹುದು. ಈಗ ಸಣ್ಣ ಕೈಗಾರಿಕಾ ಸಚಿವರಾಗಿದ್ದೇನೆ. ಆದರೆ ತನಗೆ ದೊಡ್ಡದು, ಸಣ್ಣದು ಎಂಬ ಭಾವನೆ ಇಲ್ಲ. ಕಂದಾಯ ಖಾತೆಯೇನು ದೊಡ್ಡದಾ? ಅದು ಸಹ ಎಲ್ಲ ಖಾತೆ ಇದ್ದಂತೆಯೇ ಇದೆ. ಯಾವ ಖಾತೆಯಾದರೇನು, ಕೆಲಸ ಮಾಡುವ ಮೂಲಕ ಹೆಸರು ತರಬೇಕೆಂದು ಮಾರ್ಮಿಕವಾಗಿ ನುಡಿದರು.
ನೂತನ ಕಾಂಗ್ರೆಸ್ ಸರ್ಕಾರ 200 ಯೂನಿಟ್ ವಿದ್ಯುತ್ ಬಿಲ್ ಉಚಿತ ಎಂದು ಘೋಷಿಸಿದೆ. ಇದರ ಬೆನ್ನಲ್ಲೇ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ವಸೂಲಿಗೆ ಜೆಸ್ಕಾಂ ಮುಂದಾಗಿದೆ. ಒಂದೆರಡು ತಿಂಗಳು ಬಿಲ್ ಪಾವತಿಸದೆ ಉಳಿಸಿಕೊಂಡಿದ್ದರೆ, ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಕೂಡ ಕಡಿತಗೊಳಿಸುತ್ತಿದ್ದಾರೆ. ಆದರೆ, ಗುಲಬರ್ಗಾ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಜೆಸ್ಕಾಂ) ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆ ಅಧಿಕಾರಿಗಳು ಹಲವಾರು ತಿಂಗಳು ವಿದ್ಯುತ್ ಕಟ್ಟಿಲ್ಲ. ಸರ್ಕಾರಿ ಬೊಕ್ಕಸಕ್ಕೆ ಕೊಕ್ಕೆ ಹಾಕಿದರೂ ಸಹ ಜೆಸ್ಕಾಂ ಮಾತ್ರ ಜಾಣ ಕುರುಡನಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ