logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಕಲಬುರಗಿ ಹಾಸ್ಟೆಲ್‌ನಲ್ಲಿ ಅಂಬೇಡ್ಕರ್ ಪೂಜೆಗೆ ಬಾರದ ವಿದ್ಯಾರ್ಥಿಗೆ ಥಳಿತ; ಅರೆಬೆತ್ತಲೆಗೊಳಿಸಿ ಮೆರವಣಿಗೆ

Kalaburagi News: ಕಲಬುರಗಿ ಹಾಸ್ಟೆಲ್‌ನಲ್ಲಿ ಅಂಬೇಡ್ಕರ್ ಪೂಜೆಗೆ ಬಾರದ ವಿದ್ಯಾರ್ಥಿಗೆ ಥಳಿತ; ಅರೆಬೆತ್ತಲೆಗೊಳಿಸಿ ಮೆರವಣಿಗೆ

Raghavendra M Y HT Kannada

Jan 27, 2024 08:36 PM IST

google News

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯನ್ನು ಹಲ್ಲೆ ಮಾಡಿದ ಸಂಬಂಧ ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

  • ಅಂಬೇಡ್ಕರ್ ಭಾವಚಿತ್ರದ ಪೂಜೆಗೆ ಬಾರದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ ನಂತರ ಅರೆಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯನ್ನು ಹಲ್ಲೆ ಮಾಡಿದ ಸಂಬಂಧ ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯನ್ನು ಹಲ್ಲೆ ಮಾಡಿದ ಸಂಬಂಧ ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಕಲಬುರಗಿ: ಅಂಬೇಡ್ಕರ್ ಭಾವಚಿತ್ರದ ಪೂಜೆಗೆ ಹೋಗಲು ನಿರಾಕರಿಸಿದಕ್ಕೆ ವಿದ್ಯಾರ್ಥಿಯನ್ನು ಥಳಿಸಿದ ಬಳಿಕ ಅರೆಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸಿರುವ ಅಮಾನವೀಯ ಘಟನೆ ಕಲಬುರಗಿ ನಗರದ ಹಾಸ್ಟೆಲ್‌ವೊಂದರಲ್ಲಿ ನಡೆದಿದೆ.

ಕೆಲಸದ ಕಾರಣದಿಂದ ಪೂಜೆಗೆ ಬರಲು ಆಗುವುದಿಲ್ಲ ಎಂದು ವಿದ್ಯಾರ್ಥಿ ಹೇಳಿದ್ದಾನೆ. ಇದರಿಂದ ಕೋಪಗೊಂಡ 15 ರಿಂದ 20 ವಿದ್ಯಾರ್ಥಿಗಳ ಗುಂಪು ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದೆ. ಅಷ್ಟೇ ಅಲ್ಲದೆ, ಆತನ ಶರ್ಟ್ ಬಿಚ್ಚಿಸಿ ಕೈಯಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಕೊಟ್ಟು ಮೆರವಣಿಗೆ ಮಾಡಿಸಿದ್ದಾರೆ. ಕೃತ್ಯದಲ್ಲಿ ಭಾಗವಹಿಸಿದ್ದವರು ಹಾಗೂ ಹಲ್ಲೆಗೊಳದ ವಿದ್ಯಾರ್ಥಿ ಎಲ್ಲರೂ ಅಪ್ರಾಪ್ತರಾಗಿದ್ದಾರೆ ಎಂದು ವರದಿಯಾಗಿದೆ. ಸಂತ್ರಸ್ತನನ್ನು ಕಮಲಾಪುರ ತಾಲೂಕಿನ ತಾಂಡಕ್ಕೆ ಸೇರಿದ 17 ವರ್ಷ ವಿದ್ಯಾರ್ಥಿಯಾಗಿದ್ದಾನೆ.

ಕೃತ್ಯದ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಅಶೋಕ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಐಪಿಸಿ ಸೆಕ್ಷನ್ 341, 323, 504, 505 (2), 505 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿದ್ಯಾರ್ಥಿ ನಿಲಯದಲ್ಲಿ ಕಳೆದ ಮೂರ್ನಾಲ್ಕು ವಾರಗಳಿಂದ ಪ್ರತಿ ಭಾನುವಾರ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಮಾಡಲಾಗುತ್ತಿದೆ. ಅದರಂತೆ ಕಳೆದ ಭಾನುವಾರವೂ ಪೂಜೆಗೆ ಎಲ್ಲರೂ ಬರಬೇಕೆಂದು ವಿದ್ಯಾರ್ಥಿಗಳ ಗುಂಪು ತಿಳಿಸಿದೆ. ಆದರೆ ಹಲ್ಲೆಗೊಳಗಾಗಿರುವ ವಿದ್ಯಾರ್ಥಿ ತನಗೆ ಕೆಲಸವಿದೆ ಪೂಜೆಗೆ ಬರಲು ಆಗುವುದಿಲ್ಲ ಎಂದು ಹೇಳಿದ್ದಾನೆ. ಆ ಬಳಿಕ ಈತನನ್ನು ಮಾನವೀಯ ನಡೆಸಿಕೊಳ್ಳಲಾಗಿದೆ. ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಅಶೋಕ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ. (This copy first appeared in Hindustan Times Kannada website. To read more like this please logon to kannada.hindustantime.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ