logo
ಕನ್ನಡ ಸುದ್ದಿ  /  ಕರ್ನಾಟಕ  /  Kalburgi News: ಅಫ್ಜಲ್‌ಪುರದಲ್ಲಿ ಲಾರಿ-ಜೀಪ್‌ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ 4 ಮಂದಿ ಸಾವು

Kalburgi News: ಅಫ್ಜಲ್‌ಪುರದಲ್ಲಿ ಲಾರಿ-ಜೀಪ್‌ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ 4 ಮಂದಿ ಸಾವು

HT Kannada Desk HT Kannada

Dec 21, 2023 12:14 PM IST

google News

ಕಲಬುರಗಿ ಅಪಘಾತದಲ್ಲಿ ನಾಲ್ವರು ಸಾವು

  • Kalburgi News: ಬುಧವಾರ ತಡರಾತ್ರಿ ಸಂಭವಿಸಿದ ಲಾರಿ ಹಾಗೂ ಜೀಪು ನಡುವೆ ನಡೆದ ಅಪಘಾತದಲ್ಲಿ ಒಂದು ಮಗು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಅಫ್ಜಲ್‌ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಕಲಬುರಗಿ ಅಪಘಾತದಲ್ಲಿ ನಾಲ್ವರು ಸಾವು
ಕಲಬುರಗಿ ಅಪಘಾತದಲ್ಲಿ ನಾಲ್ವರು ಸಾವು

Kalburgi News: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹೊರ ವಲಯದ ನೀರಾವರಿ ಕಚೇರಿ ಬಳಿ ಘಟನೆ ಭೀಕರ ಅಪಘಾತ ಸಂಭವಿಸಿದೆ. ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಮಾಡ್ಯಾಳ ಗ್ರಾಮದ 5 ವರ್ಷದ ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸಾವನಪ್ಪಿದವರನ್ನು ಸಂತೋಷ್ (40), ಶಂಕರ್ (55), ಸಿದ್ದಮ್ಮ (50), ಹುಚ್ಚಪ್ಪ (5) ಎಂದು ಗುರುತಿಸಿಲಾಗಿದೆ. ಮೃತರು ಅಫಜಲಪುರ ಮಾಡ್ಯಾಳ ಗ್ರಾಮದ ನಿವಾಸಿಗಳಾಗಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಪೂಜಾ ದೊಡ್ಡಮನಿ (30) ಪ್ರಾಣಾಪಾಯದಿಂದ ಪಾರಾಗಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ ಹಾಗೂ ಜೀಪ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಈ ದುರಂತ ಸಂಭವಿಸಿದೆ. ಅಫಜಲಪುರ ಕಡೆಯಿಂದ ಮಲ್ಲಾಬಾದ್ ಕಡೆ ಹೊರಟಿದ್ದ ಕಮಾಂಡೋ‌ ಜೀಪ್ ಕಲಬುರಗಿ ಕಡೆಯಿಂದ ಹೊರಟಿದ್ದ ಲಾರಿಗೆ ಡಿಕ್ಕಿ ಹೊಡೆದು ಜೀಪ್‌ ಸಂಪೂರ್ಣ ನಜ್ಜುಗುಜಾಗಿದೆ. ಪರಿಣಾಮ ಜೀಪ್​ನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಅಫಜಲಪುರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಧಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

3 ದಿನಗಳ ಹಿಂದೆ ಕಲಬುರಗಿಯಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ 2 ಸಾವು

3 ದಿನಗಳ ಹಿಂದಷ್ಟೇ ಕಲಬುರಗಿಯಲ್ಲಿ ಅಪಘಾತ ಪ್ರಕರಣ ವರದಿಯಾಗಿತ್ತು. ಇದೀಗ ಮತ್ತೊಂದು ಸುದ್ದಿ, ಜಿಲ್ಲೆಯ ಜನರಿಗೆ ಆಘಾತ ನೀಡಿದೆ. ಡಿ.19 ರಂದು ಹುಮನಾಬಾದ್ ರಸ್ತೆಯ ಆಲಗೂಡ್ ಕ್ರಾಸ್ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಶಹಾಬಾದ್‌ ಪಟ್ಟಣದ ಲಾಲ್ ಅಹ್ಮದ್ (52) ಎಂಬುವವರು ಮೃತಪಟ್ಟಿದ್ದರು. ಇವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅಬ್ದುಲ್ ರೌಫ್, ಬಸವರಾಜ, ಮಲ್ಲಿಕಾರ್ಜುನ ಮತ್ತು ಇನ್ನೊಂದು ಕಾರಿನಲ್ಲಿದ್ದ ಕೋಹಿನೂರ ಗ್ರಾಮದ ಸಂಜೀವಕುಮಾರ ತಂದೆ ಪಂಡಿತರಾವ್‌ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದರು.

ಅದೇ ದಿನ, ಸುಲ್ತಾನಪುರ ರಿಂಗ್‌ರೋಡ್‌ನಲ್ಲಿ ಲಾರಿಯೊಂದು ಹರಿದ ಪರಿಣಾಮ ಆಶ್ರಯ ಕಾಲೋನಿ ನಿವಾಸಿ ಅಂಬರೀಶ ಅಣವೀರಪ್ಪ ಪಡಶೆಟ್ಟಿ (43) ಎಂಬುವವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಅಂಬರೀಶ ಅಣವೀರಪ್ಪ ಕುಸನೂರ ರಸ್ತೆಯ ಗಾಂಧಿ ಬಜಾರ್‌ನಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ 11ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆ ಕಡೆ ಹೊರಟಿದ್ದಾಗ ಯಾವುದೋ ವಾಹನ ಡಿಕ್ಕಿ ಹೊಡೆದಿದೆ. ಆಯ ತಪ್ಪಿ ಕೆಳಗೆ ಬಿದ್ದ ಅವರ ಮೇಲೆ ಹಿಂದೆ ಬರುತ್ತಿದ್ದ ಲಾರಿಯೊಂದು ಹರಿದ ಹೋದ ಕಾರಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಪ್ರತ್ಯೇಕ ಪ್ರಕರಣಗಳ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ