logo
ಕನ್ನಡ ಸುದ್ದಿ  /  ಕರ್ನಾಟಕ  /  Kalburagi News: ಕಲಬುರಗಿ-ಬೆಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭ; ಏ 5 ರಿಂದ ವಾರದಲ್ಲಿ 3 ದಿನ ಸಂಚಾರ

Kalburagi News: ಕಲಬುರಗಿ-ಬೆಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭ; ಏ 5 ರಿಂದ ವಾರದಲ್ಲಿ 3 ದಿನ ಸಂಚಾರ

Reshma HT Kannada

Mar 04, 2024 07:17 PM IST

google News

ಕಲಬುರಗಿ-ಬೆಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭ, ಹೊಸ ರೈಲಿಗೆ ಆಗ್ರಹಿಸಿ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ನವದೆಹಲಿಯಲ್ಲಿ ಮನವಿ ಸಲ್ಲಿಸಿದರು (ಬಲಚಿತ್ರ)

    • ಕಲಬುರಗಿ ಹಾಗೂ ಬೆಂಗಳೂರಿನ ನಡುವೆ ರೈಲು ಪ್ರಯಾಣ ಮಾಡುವವರಿಗೆ ಇಲ್ಲಿದೆ ಒಂದು ಗುಡ್‌ನ್ಯೂಸ್‌. ಇನ್ನು ಮುಂದೆ ಕಲಬುರಗಿ ಹಾಗೂ ಬೆಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್‌ ರೈಲು ಸಂಚಾರ ಮಾಡಲಿದೆ. ಸದ್ಯ ವಾರದಲ್ಲೇ ಒಂದೇ ದಿನ ಈ ರೈಲು ಇರಲಿದ್ದು, ಏಪ್ರಿಲ್‌ 5 ರಿಂದ ಮೂರು ದಿನಗಳ ಕಾಲ ಸಂಚಾರ ಮಾಡಲಿದೆ. 
ಕಲಬುರಗಿ-ಬೆಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭ, ಹೊಸ ರೈಲಿಗೆ ಆಗ್ರಹಿಸಿ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ನವದೆಹಲಿಯಲ್ಲಿ ಮನವಿ ಸಲ್ಲಿಸಿದರು (ಬಲಚಿತ್ರ)
ಕಲಬುರಗಿ-ಬೆಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭ, ಹೊಸ ರೈಲಿಗೆ ಆಗ್ರಹಿಸಿ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ನವದೆಹಲಿಯಲ್ಲಿ ಮನವಿ ಸಲ್ಲಿಸಿದರು (ಬಲಚಿತ್ರ)

ಕಲಬುರಗಿ: ಕಲಬುರಗಿ-ಬೆಂಗಳೂರು ಮಧ್ಯೆ ನೂತನ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಇಲಾಖೆ ಇಂದು (ಮಾ.4) ಒಪ್ಪಿಗೆ ಸೂಚಿಸಿದೆ. ಸದ್ಯ ವಾರದಲ್ಲಿ ಒಂದು ದಿನ ಮಾತ್ರ ಈ ಮಾರ್ಗದಲ್ಲಿ ಎಕ್ಸ್‌ಪ್ರೆಸ್‌ ರೈಲು ಸಂಚಾರ ಮಾಡಲಿದೆ. ಪ್ರತಿ ಶನಿವಾರ ಸಂಜೆ 5 ಗಂಟೆಗೆ ಕಲಬುರಗಿಯಿಂದ ಹೊರಟು ಮರುದಿನ ಬೆಳಗ್ಗೆ 4.15ಕ್ಕೆ ಬೆಂಗಳೂರಿನ ಬೈಯಪ್ಪನಹಳ್ಳಿ ಸರ್‌ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣ ತಲುಪಲಿದೆ.

ಮಾರ್ಚ್ 9ರಿಂದ ನೂತನ ರೈಲು ಸಂಚಾರ ಆರಂಭವಾಗಲಿದೆ. ಸಂಸದ ಡಾ. ಉಮೇಶ್ ಜಾಧವ್ ಕಲಬುರಗಿ ರೈಲು ನಿಲ್ದಾಣದಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.

ಏ.5ರಿಂದ ವಾರಕ್ಕೆ ಮೂರು ದಿನ ಸಂಚಾರ

ಈ ನೂತನ ರೈಲು ಏಪ್ರಿಲ್‌ 5ರಿಂದ ವಾರದಲ್ಲಿ ಮೂರು ದಿನ ಸಂಚರಿಸಲಿದೆ. ಈ ಕುರಿತು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಇಂದು (ಮಾರ್ಚ್ 4) ನವದೆಹಲಿಯಲ್ಲಿ ಮನವಿ ಸಲ್ಲಿಸಿದ್ದು, ಈ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಏಪ್ರಿಲ್‌ 5ರಿಂದ ವಾರದಲ್ಲಿ ಮೂರು ದಿನ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಈ ಸುದ್ದಿಗಳನ್ನೂ ಓದಿ

Kalburgi News: ಕಲಬುರಗಿ ಭಾಗದ ಜನರಿಗೆ ಖುಷಿ ಸುದ್ದಿ, ಕುಡಿಯಲು ನಾರಾಯಣಪುರ ಡ್ಯಾಂನಿಂದ 1000 ಕ್ಯುಸೆಕ್ ನೀರು ಬಿಡುಗಡೆ

ಈಗಾಗಲೇ ಬಿಸಿಲ ತಾಪದಿಂದ ಬಳಲುತ್ತಿರುವ ಕಲ್ಯಾಣ ಕರ್ನಾಟಕದ ಕಲಬುರಗಿ ನಗರದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭಾಗವಾಗಿ ನಾರಾಯಣಪುರ ಡ್ಯಾಂನಿಂದ 1000 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಗುರುವಾರವೇ ನೀರನ್ನು ನದಿ ಮೂಲಕ ಹರಿಸಲಾಗಿದೆ. ಇದರಿಂದ ಈ ಭಾಗದ ಜನ ಕುಡಿಯುವ ನೀರಿನ ಸಮಸ್ಯೆ ಸದ್ಯದ ಮಟ್ಟಿಗೆ ಬಗೆಹರಿದು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಈಗ ಹರಿಸಿರುವ ನೀರು ಮಾರ್ಚ್‌ ಅಂತ್ಯದವರೆಗೂ ಬಳಕೆ ಮಾಡಬಹುದು. ಮಾರ್ಗಮಧ್ಯೆ ನೀರು ಕದಿಯುವ ಯತ್ನಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳ ತಂಡ ರಚಿಸಿ ಹದ್ದುಗಣ್ಣು ಇರಿಸಲಾಗಿದೆ.

Womensday2024:ಅನಾಥ ಯುವತಿಯರ ಪಾಲಿನ ತವರು ಮನೆ ಕಲಬುರಗಿ ಸರಕಾರಿ ಮಹಿಳಾ ನಿಲಯ

ಕರ್ನಾಟಕದ ಹಲವಾರು ಮಹಿಳಾ ವಸತಿ ನಿಲಯಗಳು ಮಹಿಳೆಯರ ಪಾಲಿನ ಆಶಾಕಿರಣಗಳೇ ಆಗಿವೆ. ಕಲಬುರಗಿಯ ಮಹಿಳಾ ವಸತಿ ನಿಲಯವೂ ಏಳು ದಶಕದಲ್ಲಿ ಅದೆಷ್ಟೇ ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ