logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka 2nd Puc Result 2023: ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟ; ರಿಸಲ್ಟ್‌ ನೋಡಲು ಡೈರೆಕ್ಟ್‌ ಲಿಂಕ್‌ ಇಲ್ಲಿದೆ

Karnataka 2nd PUC Result 2023: ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟ; ರಿಸಲ್ಟ್‌ ನೋಡಲು ಡೈರೆಕ್ಟ್‌ ಲಿಂಕ್‌ ಇಲ್ಲಿದೆ

Umesh Kumar S HT Kannada

Jan 05, 2024 05:50 AM IST

google News

ದ್ವಿತೀಯ ಪಿಯುಸಿ ಫಲಿತಾಂಶ 2023 (ಸಾಂಕೇತಿಕ ಚಿತ್ರ)

  • Karnataka 2nd PUC Result 2023: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಇಂದು (ಏ.21) ಬೆಳಿಗ್ಗೆ 11 ಗಂಟೆಯ ಬಳಿಕ ಅಧಿಕೃತ ವೆಬ್‌ಸೈಟ್ www.karresults.nic.in ನಲ್ಲಿ ಪಡೆಯಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ತಿಳಿಸಿದೆ. ಫಲಿತಾಂಶ ನೋಡುವುದು ಹೇಗೆ - ಇಲ್ಲಿದೆ ನೇರ ಲಿಂಕ್‌ ಮತ್ತು ಅದರ ವಿವರ.

ದ್ವಿತೀಯ ಪಿಯುಸಿ ಫಲಿತಾಂಶ 2023 (ಸಾಂಕೇತಿಕ ಚಿತ್ರ)
ದ್ವಿತೀಯ ಪಿಯುಸಿ ಫಲಿತಾಂಶ 2023 (ಸಾಂಕೇತಿಕ ಚಿತ್ರ) (HT_PRINT / Manish/HT)

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ (Karnataka 2nd PUC Result 2023) ಇಂದು ಬೆಳಗ್ಗೆ 10 ಗಂಟೆಗೆ ಪ್ರಕಟವಾಲಿದೆ. ಇದಾಗಿ ಒಂದು ಗಂಟೆಯ ಬಳಿಕ ವೆಬ್‌ಸೈಟ್‌ನಲ್ಲಿ ದ್ವಿತೀಯ ಪಿಯುಸಿ ರಿಸಲ್ಟ್‌ (2nd puc results) ಅಪ್‌ಡೇಟ್ ಆಗಲಿದೆ. ಫಲಿತಾಂಶ ಪ್ರಕಟವಾದ ಬಳಿಕ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದು ಎಂದು ಮಂಡಲಿಯ ಪ್ರಕಟಣೆ ತಿಳಿಸಿದೆ.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾರ್ಚ್‌ 9 ರಿಂದ ಮಾರ್ಚ್‌ 29 ರ ತನಕ ನಡೆಯಿತು. ಎಲ್ಲ ವಿಷಯಗಳ ಉತ್ತರ ಪತ್ರಿಕೆಯ ಮೌಲ್ಯಮಾಪನ ಕಾರ್ಯವು ಮುಕ್ತಯವಾಗಿದೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ (ಏ.21) ಬೆಳಿಗ್ಗೆ 11 ಗಂಟೆಯ ಬಳಿಕ ಅಧಿಕೃತ ವೆಬ್‌ಸೈಟ್ www.karresults.nic.in ನಲ್ಲಿ ಪಡೆಯಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ತಿಳಿಸಿದೆ.

ಸೆಕೆಂಡ್‌ ಪಿಯುಸಿ ರಿಸಲ್ಟ್‌ ಚೆಕ್ ಮಾಡುವ ವಿಧಾನ

  1. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಅಧಿಕೃತ ವೆಬ್‌ಸೈಟ್‌ www.karresults.nic.in ಅಥವಾ https://kseab.karnataka.gov.in/ ಗೆ ಭೇಟಿ ನೀಡಬೇಕು.
  2. ಹೋಮ್‌ ಪೇಜ್‌ ಓಪನ್‌ ಆದ ಬಳಿಕ ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಸಂಬಂಧಿಸಿದ ಲಿಂಕ್‌ ಮೇಲೆ ಕ್ಲಿಕ್‌ ಮಾಡಬೇಕು
  3. ಆಗ ಹೊಸ ಪೇಜ್‌ ಓಪನ್‌ ಆಗುತ್ತದೆ. ಅದರಲ್ಲಿ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್‌ ನಂಬರ್‌ ಟೈಪ್‌ ಮಾಡಿ.
  4. ಇಷ್ಟಾದ ಬಳಿಕ 'Submit' ಎಂಬ ಐಕಾನ್‌ ಅನ್ನು ಕ್ಲಿಕ್ ಮಾಡಿ. ಆಗ ನಿಮ್ಮ ಫಲಿತಾಂಶ ಪರದೆ ಮೇಲೆ ಗೋಚರಿಸುತ್ತದೆ.
  5. ಅದನ್ನು ಡೌನ್‌ಲೋಡ್‌ ಮಾಡಿಕೊಂಡು, ಪ್ರಿಂಟ್‌ ತೆಗೆದು ಇಟ್ಟುಕೊಳ್ಳಬೇಕು. ಅದು ಭವಿಷ್ಯದ ಅಗತ್ಯಗಳಿಗೆ ಬೇಕಾಗಬಹುದು.

ಈ ಸಲ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ರಾಜ್ಯದ 5,716 ಪಿಯು ಕಾಲೇಜುಗಳ ಒಟ್ಟು 7.26 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 3,63,698 ಬಾಲಕರು ಮತ್ತು 3,62.497 ಬಾಲಕಿಯರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ