logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಶೇ 81.15 ಉತ್ತೀರ್ಣ ಪ್ರಮಾಣ, ಬಾಲಕಿಯರದ್ದೇ ಮೇಲುಗೈ, ಅಗ್ರಸ್ಥಾನದಲ್ಲಿ ದಕ್ಷಿಣಕನ್ನಡ, ಉಡುಪಿ

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಶೇ 81.15 ಉತ್ತೀರ್ಣ ಪ್ರಮಾಣ, ಬಾಲಕಿಯರದ್ದೇ ಮೇಲುಗೈ, ಅಗ್ರಸ್ಥಾನದಲ್ಲಿ ದಕ್ಷಿಣಕನ್ನಡ, ಉಡುಪಿ

Umesh Kumar S HT Kannada

Apr 10, 2024 11:38 AM IST

google News

2nd PUC Results 2024- ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

  • ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. 2024ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶದ (Karnataka 2nd PUC Results 2024 ) ವಿವರಗಳನ್ನು  ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅಧ್ಯಕ್ಷೆ ಎನ್‌ ಮಂಜುಶ್ರೀ ಪ್ರಕಟಿಸಿದ್ದು, ಪೂರ್ಣ ವರದಿ ಇಲ್ಲಿದೆ.

2nd PUC Results 2024- ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
2nd PUC Results 2024- ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2024 (Karnataka 2nd PUC Results 2024 ) ಪ್ರಕಟವಾಗಿದೆ. 5,52,690 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಉತ್ತೀರ್ಣ ಪ್ರಮಾಣ ಶೇಕಡ 81.15 ದಾಖಲಾಗಿದೆ. ಕಳೆದ ವರ್ಷ (ಶೇ 74.67) ಕ್ಕಿಂತ ಶೇ 6.48ರಷ್ಟು ಹೆಚ್ಚಿದೆ. ಜಿಲ್ಲಾವಾರು ಉತ್ತೀರ್ಣ ಪ್ರಮಾಣದಲ್ಲಿ ದಕ್ಷಿಣ ಕನ್ನಡ, ಉಡುಪಿ, ವಿಜಯಪುರ ಜಿಲ್ಲೆಗಳು ಮೊದಲ ಮೂರು ಸ್ಥಾನಗಳಲ್ಲಿವೆ.

ವಿಜ್ಞಾನ ವಿಭಾಗದಲ್ಲಿ 598 ಅಂಕ ಪಡೆದ ವಿದ್ಯಾಲಕ್ಷ್ಮಿ, ಕಲಾ ವಿಭಾಗದಲ್ಲಿ ಬೆಂಗಳೂರಿನ ಮೇಧಾ.ಡಿ. ರಾಜ್ಯಕ್ಕೆ ಟಾಪರ್‌ಗಳು. ಇನ್ನು, ನಗರ ಪ್ರದೇಶದ ಫಲಿತಾಂಶ ಪ್ರಮಾಣ ಶೇ81.10, ಗ್ರಾಮಾಂತರದ ಫಲಿತಾಂಶ ಪ್ರಮಾಣ ಶೇ 81.31 ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಎನ್‌.ಮಂಜುಶ್ರೀ ತಿಳಿಸಿದರು.

ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಕಚೇರಿಯಲ್ಲಿ ಮಂಡಳಿ ಅಧ್ಯಕ್ಷೆ ಎನ್‌.ಮಂಜುಶ್ರೀ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ.

ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಒಟ್ಟು 70 ಮೌಲ್ಯಮಾಪನ ಕೇಂದ್ರಗಳಲ್ಲಿ ಮಾರ್ಚ್ 25ರಿಂದ ಏಪ್ರಿಲ್ 3ರ ತನಕ ನಡೆಸಲಾಯಿತು. 27,650 ಮೌಲ್ಯಮಾಪಕರು ಇದರಲ್ಲಿ ಭಾಗವಹಿಸಿದ್ದರು. ಒಟ್ಟು 6,98,378 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಎಲ್ಲ ಪರೀಕ್ಷೆಗಳಿಗೆ ಗೈರುಹಾಜರಾದವರು 17,299. ಇನ್ನುಳಿದಂತೆ, ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 6,81,079. ಉತ್ತೀರ್ಣರಾದ ವಿದ್ಯಾರ್ಥಿಗಳು 5,52,690 ಎಂದು ಅವರು ಹೇಳಿದರು.

6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ, 3.3 ಲಕ್ಷ ಬಾಲಕರು, 3.6 ಲಕ್ಷ ಬಾಲಕಿಯರು ತೇರ್ಗಡೆಯಾಗಿದ್ದಾರೆ. ಈ ವರ್ಷವೂ ಬಾಲಕಿಯರದೇ ಮೇಲುಗೈ ಕಂಡುಬಂದಿದೆ. ಇನ್ನು, ಕಲಾ ವಿಭಾಗದಲ್ಲಿ ಶೇಕಡ 68.36, ವಿಜ್ಞಾನ ವಿಭಾಗದಲ್ಲಿ 89.96, ವಾಣಿಜ್ಯ ವಿಭಾಗದಲ್ಲಿ ಶೇಕಡ 80.94 ಉತ್ತೀರ್ಣ ಪ್ರಮಾಣವಿದೆ.

ಇನ್ನು, 2024ರ ದ್ವಿತೀಯ ಪಿಯುಸಿ ಪರೀಕ್ಷೆ-2 ಅನ್ನು ಏಪ್ರಿಲ್ 29 ರಿಂದ ಮೇ16 ರವರೆಗೆ ನಡೆಸುವುದಾಗಿ ಮಂಡಳಿ ಘೋ‍ಷಿಸಿದೆ.

ಗಮನಸೆಳೆದ ಅಂಶಗಳು

ಒಟ್ಟಾರೆ ಶೇ 81.15 ಉತ್ತೀರ್ಣ ಪ್ರಮಾಣ

ಕಲಾ ವಿಭಾಗ: 1,28,448 ಉತ್ತೀರ್ಣರಾದವರು

ವಾಣಿಜ್ಯದಲ್ಲಿ 1.74,315 ಉತ್ತೀರ್ಣರಾದವರು

ವಿಜ್ಞಾನ ವಿಭಾಗ: 2,49,927 ಉತ್ತೀರ್ಣರಾದವರು

ಜಿಲ್ಲಾವಾರು ಉತ್ತೀರ್ಣ ಪ್ರಮಾಣ

1) ದಕ್ಷಿಣ ಕನ್ನಡ - 97.33

2) ಉಡುಪಿ - 96.8

3) ವಿಜಯಪುರ -94.89

4) ಉತ್ತರ ಕನ್ನಡ - 92.51

5) ಕೊಡಗು - 92.13

6) ಬೆಂಗಳೂರು ದಕ್ಷಿಣ - 89.57

7) ಬೆಂಗಳೂರು ಉತ್ತರ - 88.67

8) ಶಿವಮೊಗ್ಗ - 88.58

9) ಚಿಕ್ಕಮಗಳೂರು - 88.20

10) ಬೆಂಗಳೂರು ಗ್ರಾಮಾಂತರ - 87.55

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2024ರ ಪ್ರಮುಖ ವಿವರಗಳು

ಪಿಯುಸಿ ಫಲಿತಾಂಶ ಪ್ರಕಟವಾಗುವ ದಿನಾಂಕ ಮತ್ತು ಸಮಯ

ಏಪ್ರಿಲ್ 10, 10 ಗಂಟೆಗೆ.

ಅಂಕಪಟ್ಟಿ/ಅಂಕಗಳ ಹಾಳೆ ಬಿಡುಗಡೆ ಸಮಯ

11 ಗಂಟೆಗೆ

ಫಲಿತಾಂಶ ಪ್ರಕಟವಾಗುವ ವೆಬ್‌ಸೈಟ್

karresults.nic.in

ಮಂಡಳಿಯ ವೆಬ್‌ಸೈಟ್

kseab.karnataka.gov.in

ಫಲಿತಾಂಶವನ್ನು ಡೌನ್‌ಲೋಡ್ ಮಾಡಲು ಅಗತ್ಯ ಬೇಕಾಗಿರುವ ಲಾಗಿನ್ ವಿವರಗಳು - ನೋಂದಣಿ ಸಂಖ್ಯೆ, ವಿಷಯ ಸಂಯೋಜನೆ (ಸ್ಟ್ರೀಮ್ ಹೆಸರು)

ಕರ್ನಾಟಕದ ವಿವಿಧೆಡೆಯಲ್ಲಿರುವ 1,124 ಕೇಂದ್ರಗಳಲ್ಲಿ ಮಾರ್ಚ್‌ 01 ರಿಂದ 23ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಷಯದ ಪರೀಕ್ಷೆಗಳನ್ನು ಅಂದಾಜು 7 ಲಕ್ಷ ವಿದ್ಯಾರ್ಥಿಗಳು ಎದುರಿಸಿದ್ದರು. ಈ ಬಾರಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು ಒಟ್ಟು ಸಂಖ್ಯೆ 7 ಲಕ್ಷ ಎಂದು ಮಂಡಳಿ ತಿಳಿಸಿತ್ತು. ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯು ಮಾರ್ಚ್‌ 25ರಿಂದ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನೂ ಆರಂಭಿಸಿತ್ತು. ಹತ್ತು ದಿನದಲ್ಲಿಯೇ ಉತ್ತರ ಪತ್ರಿಕೆಗಳ ಮೌಲ್ಯಮಾಪನವೂ ಮುಗಿದಿದೆ. ಈ ಬಾರಿ ಬಹುಬೇಗ ಫಲಿತಾಂಶವನ್ನು ಮಂಡಳಿ ಪ್ರಕಟಿಸುತ್ತಿದೆ.

ಕಳೆದ ವರ್ಷ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿತ್ತು. ಟಾಪ್ 10 ಜಿಲ್ಲೆಗಳ ಫಲಿತಾಂಶದಲ್ಲಿ ಉತ್ತೀರ್ಣ ಪ್ರಮಾಣ ಹೀಗಿತ್ತು - ದಕ್ಷಿಣ ಕನ್ನಡ - ಶೇ 95.33, ಉಡುಪಿ ಶೇಕಡ 95.24, ಕೊಡಗು -ಶೇ 90.55, ಉತ್ತರ ಕನ್ನಡ ಶೇಕಡ 89.74, ವಿಜಯಪುರ ಶೇ 84.69, ಚಿಕ್ಕಮಗಳೂರು ಶೇ 83.14, ಶಿವಮೊಗ್ಗ ಶೇ 83.13, ಬೆಂಗಳೂರು ಗ್ರಾಮಾಂತರ ಶೇಕಡ 83.04, ಬೆಂಗಳೂರು ದಕ್ಷಿಣ ಶೇಕಡ 82.3.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ