Karnataka Budget 2023: ಕರ್ನಾಟಕ ಬಜೆಟ್ 2023; ಜನಸಾಮಾನ್ಯರ ಬದುಕಿನ ಮೇಲೆ ನೇರ ಪರಿಣಾಮ ಬೀರುವ 15 ಅಂಶಗಳು
Jul 07, 2023 04:12 PM IST
ಜನಸಾಮಾನ್ಯರ ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರುವ ಬಜೆಟ್‌ನ ಅಂಶಗಳು
Karnataka Budget 2023: ಕರ್ನಾಟಕ ಬಜೆಟ್ 2023-24 ಮಂಡನೆಯಾಗಿದ್ದು, ಕೆಲವು ಯೋಜನೆಗಳು, ಉಪಕ್ರಮಗಳು ನೇರವಾಗಿ ಜನಜೀವನದ ಮೇಲೆ ಪರಿಣಾಮ ಬೀರುವಂಥವು. ಅವುಗಳ ಪೈಕಿ ಆಯ್ದ 15 ಅಂಶಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಜನಸಾಮಾನ್ಯರ ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರುವ ಬಜೆಟ್‌ನ ಅಂಶಗಳು
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Karnataka CM Siddaramaiah) ಅವರು ದಾಖಲೆಯ 14ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಜನ ಸಮುದಾಯದ ವಿವಿಧ ಸ್ತರದ ಜನರ ಮೇಲೆ ನೇರವಾಗಿ ಪರಿಣಾಮ ಬೀರುವಂತಹ ಕೆಲವು ಯೋಜನೆಗಳು ಘೋಷಣೆ ಅಗಿವೆ.
ನಿರೀಕ್ಷೆಯಂತೆಯೇ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ ಐದು ಗ್ಯಾರೆಂಟಿ ಯೋಜನೆಗಳು ಕೂಡ ಇದರಲ್ಲಿವೆ. ಇದಲ್ಲದೆ, ಮಾಸಾಶನ ಹೆಚ್ಚಳ, ವಿಮೆ ಸೌಲಭ್ಯ ಮುಂತಾದವು ಕೂಡ ಸೇರಿಕೊಂಡಿವ. ಇಲ್ಲಿವೆ ಅಂಥ 15 ಅಂಶಗಳು.
ಜನ ಸಾಮಾನ್ಯರ ಬದುಕಿನ ಮೇಲೆ ಪರಿಣಾಮ ಬೀರುವ 15 ಉಪಕ್ರಮಗಳು
- ಐದು ಗ್ಯಾರೆಂಟಿ ಯೋಜನೆಗಳು ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆ, ಯುವನಿಧಿಗಳು
- ಪಡಿತರದಲ್ಲಿ ಐದು ಕಿಲೋ ಅಕ್ಕಿ ಜತೆಗೆ ಒಂದು ಕಿಲೋ ರಾಗಿ ಅಥವಾ ಜೋಳ, 4.34 ಕೋಟಿ ಫಲಾನುಭವಿಗಳಿಗೆ ಅನುಕೂಲ, 1,400 ಕೋಟಿ ರೂಪಾಯಿ ಹೆಚ್ಚುವರಿ ವೆಚ್ಚ
- ಅವಿವಾಹಿತ, ವಿಚ್ಛೇದಿತ ಮಹಿಳೆಯರಿಗೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡುತ್ತಿರುವ ಮಾಸಾಶನ ಮೊತ್ತ 600 ರೂಪಾಯಿ ಯಿಂದ 800 ರೂಪಾಯಿಗೆ ಏರಿಕೆ 1.32 ಲಕ್ಷ ಫಲಾನುಭವಿಗಳಿಗೆ ಅನುಕೂಲ
- ಆಸಿಡ್ ದಾಳಿ ಸಂತ್ರಸ್ತ ಮಹಿಳೆಯರಿಗೆ ಮಾಸಾಶನ ಮೊತ್ತ 10,000 ರೂಪಾಯಿಗೆ ಏರಿಕೆ
- 50 ವರ್ಷ ಮೇಲ್ಪಟ್ಟ ಸಂಕಷ್ಟದಲ್ಲಿರುವ ಕುಸ್ತಿಪಟುಗಳ ಮಾಸಾಶನ ಮೊತ್ತ 1,000 ರೂಪಾಯಿ ಏರಿಕೆ
- ರಾಜ್ಯದ 3 ಲಕ್ಷ ಹೆಣ್ಣುಮಕ್ಕಳಿಗೆ ಸ್ವಯಂ ರಕ್ಷಣೆ ತರಬೇತಿ
- ಯೆಲ್ಲೋ ಬೋರ್ಡ್ ಚಾಲಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾನಿಧಿ ಯೋಜನೆ, ಆರೋಗ್ಯ ಸೌಲಭ್ಯಕ್ಕೂ ವಿಶೇಷ ಯೋಜನೆ
- ಆಶಾ ಕಾರ್ಯಕರ್ತೆಯರಿಗೆ, ಗ್ರಾಮ ಸಹಾಯಕರಿಗೆ ಮತ್ತು ಬಿಸಿಯೂಟ ತಯಾರಕರಿಗೆ, ಸಹಾಯಕರಿಗೆ 1,000 ರೂಪಾಯಿ ಗೌರವಧನ ಹೆಚ್ಚಳ
- ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾನುಭವದ ಆಧಾರದಲ್ಲಿ 1,000 ರೂಪಾಯಿಯಿಂದ 1,500 ರೂಪಾಯಿ ಹೆಚ್ಚಳ
- ಪೌರಕಾರ್ಮಿಕರಿಗೆ ಮಾಸಿಕ 2,000 ರೂಪಾಯಿ ಸಂಕಷ್ಟ ಭತ್ಯೆ, ಪ್ರವಾಸಿಗೈಡ್‌ಗಳಿಗೆ ಮಾಸಿಕ 2,000 ರೂಪಾಯಿ ಪ್ರೋತ್ಸಾಹ ಧನ
- ಕುಸ್ತಿ ಕ್ರೀಡಾಪಟುಗಳ ಮಾಸಾಶನ 1,000 ರುಪಾಯಿ ಹೆಚ್ಚಳ
- ಗ್ರಾಮೀಣ ರೈತರಿಗೆ ಆರೋಗ್ಯ ಸೇವೆ ಒದಗಿಸುವ ಯಶಸ್ವಿನಿ ಯೋಜನೆ ಪರಿಷ್ಕೃತ ರೂಪದಲ್ಲಿ ಜಾರಿ, 300 ಕೋಟಿ ರೂಪಾಯಿ ಅನುದಾನ
- ಆಕಸ್ಮಿಕವಾಗಿ ಮರಣ ಹೊಂದುವ ಕುರಿ, ಮೇಕೆ ಸಾಕಣಿಕೆ ದಾರರು, ವಲಸೆ ಕುರಿಗಾರರ ಕುಟುಂಬಕ್ಕೆ 5 ಲಕ್ಷ ರೂಪಾಯಿ ವಿಮಾ ಸೌಲಭ್ಯ
- ಬಡ ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಮತ್ತು ಕನ್ನಡಕ ಸೌಲಭ್ಯ
- ರೈತರಿಗೆ ಶೂನ್ಯ ಬಡಿದರದ ಸಾಲ ಮಿತಿಯನ್ನ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ. ಮಧ್ಯಮಾವಧಿ, ದೀರ್ಘಾವಧಿ ಸಾಲ ಮಿತಿಯನ್ನ 10 ಲಕ್ಷದಿಂದ 15 ಲಕ್ಷಕ್ಕೆ ಏರಿಕೆ. ಗುಡ್ಡಗಾಡು ಪ್ರದೇಶದ ರೈತರಗೆ ಪಿಕ್ ವ್ಯಾನ್ ಖರೀದಿಗೆ 7 ಲಕ್ಷ ರೂಪಾಯಿ ತನಕ ಸಾಲ.