logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Budget: ಜುಲೈ 7ರಂದು ರಾಜ್ಯ ಬಜೆಟ್‌, ಅಧಿವೇಶನದ ವಿವರ, ಗ್ಯಾರಂಟಿ ಯೋಜನೆಗಳಿಗಾಗಿ ಸಿದ್ದರಾಮಯ್ಯ ಸರಕಾರದ ಬಜೆಟ್‌ ಗಾತ್ರ ಹೆಚ್ಚಳ

Karnataka Budget: ಜುಲೈ 7ರಂದು ರಾಜ್ಯ ಬಜೆಟ್‌, ಅಧಿವೇಶನದ ವಿವರ, ಗ್ಯಾರಂಟಿ ಯೋಜನೆಗಳಿಗಾಗಿ ಸಿದ್ದರಾಮಯ್ಯ ಸರಕಾರದ ಬಜೆಟ್‌ ಗಾತ್ರ ಹೆಚ್ಚಳ

Praveen Chandra B HT Kannada

Jun 27, 2023 10:53 AM IST

google News

Karnataka Budget: ಜುಲೈ 7ರಂದು ರಾಜ್ಯ ಬಜೆಟ್‌

    • Karnataka Budget: ಕರ್ನಾಟಕ ರಾಜ್ಯ ಬಜೆಟ್‌ ಇದೇ ಜುಲೈ 7ರಂದು ಮಂಡನೆಯಾಗಲಿದೆ. ಬಜೆಟ್‌ ಗಾತ್ರ ಅಂದಾಜು 3.35 ಲಕ್ಷ ಕೋಟಿ ರೂಪಾಯಿ ತಲುಪುವ ಸೂಚನೆಯನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ನೀಡಿದ್ದಾರೆ.
Karnataka Budget: ಜುಲೈ 7ರಂದು ರಾಜ್ಯ ಬಜೆಟ್‌
Karnataka Budget: ಜುಲೈ 7ರಂದು ರಾಜ್ಯ ಬಜೆಟ್‌

ಬೆಂಗಳೂರು: ಕರ್ನಾಟಕದ ನೂತನ ಕಾಂಗ್ರೆಸ್‌ ಸರಕಾರದ ಚೊಚ್ಚಲ ಬಜೆಟ್‌ (Karnataka Budget) ಇದೇ ಜುಲೈ 7ರಂದು ಮಂಡನೆಯಾಗಲಿದೆ. ಈ ಬಜೆಟ್‌ ಗಾತ್ರ ಅಂದಾಜು 3.35 ಲಕ್ಷ ಕೋಟಿ ರೂಪಾಯಿ ಇರಬಹುದೆಂಬ ಸುಳಿವನ್ನು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೀಡಿದ್ದಾರೆ. ಕರ್ನಾಟಕವು ಕಳೆದ ಆರ್ಥಿಕ ವರ್ಷದಲ್ಲಿ 2,51,541 ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸಿತ್ತು. ಅದಕ್ಕೂ ಹಿಂದಿನ ವರ್ಷ ಅಂದರೆ 2021-22ರಲ್ಲಿ 2,38,600 ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸಲಾಗಿತ್ತು. ಆದರೆ, ಈ ಬಾರಿಯ ಬಜೆಟ್‌ ಗಾತ್ರ ಗಣನೀಯ ಪ್ರಮಾಣದಲ್ಲಿ ಅಂದರೆ, 3.35 ಲಕ್ಷ ಕೋಟಿ ರೂ.ವರೆಗೆ ತಲುಪುವ ಸೂಚನೆ ದೊರಕಿದೆ.

ಈ ವರ್ಷದ ಆರಂಭದಲ್ಲಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ ಗಾತ್ರ 3.09 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್‌ ಮಂಡಿಸಿದ್ದರು. ಸಿಎಂ ಸಿದ್ದರಾಮಯ್ಯನವರು ಇದೀಗ ಇದಕ್ಕಿಂತಲೂ ಹೆಚ್ಚು ಮೊತ್ತದ ಬಜೆಟ್‌ ಮಂಡಿಸುವ ಸೂಚನೆ ನೀಡಿದ್ದಾರೆ. ರಾಜ್ಯದ ಮೊದಲ ಬಜೆಟ್ ಕೇವಲ 21 ಕೋಟಿ 3 ಲಕ್ಷ ಇತ್ತು.

ಕಾಯಕ ಮತ್ತು ದಾಸೋಹಕ್ಕೆ ಆದ್ಯತೆ?

ಈಗಾಗಲೇ ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್‌ ಇತ್ಯಾದಿ ವಿಷಯಗಳ ಕುರಿತು ಆದ್ಯತೆ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕಾಯಕ ಮತ್ತು ದಾಸೋಹಕ್ಕೆ ಆದ್ಯತೆ ನೀಡುವ ಸೂಚನೆ ನೀಡಿದ್ದಾರೆ. 16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರುಗಳ ತರಬೇತಿ ಶಿಬಿರದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ. "12ನೇ ಶತಮಾನದಲ್ಲಿ ಕಾಯಕಯೋಗಿ ಬಸವಣ್ಣನವರು ಬಜೆಟ್ ಬಗ್ಗೆ ಹೇಳಿದ್ದಾರೆ. ಕಾಯಕ ಮತ್ತು ದಾಸೋಹ ಬಜೆಟ್ ನ ಪ್ರಮುಖ ಸಂಗತಿಗಳು. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ಹಂಚಿಕೆ. ಬಜೆಟ್ ಅಂದರೆ ಇಷ್ಟೆ, ಎಲ್ಲಿಂದ ಉತ್ಪಾದನೆ ಬರುತ್ತದೆ ಅದನ್ನು ಸಮಾಜದ ಯಾರಿಗೆ ಹಂಚುತ್ತೇವೆ ಎನ್ನುವುದೇ ಬಜೆಟ್ ನ ಮೌಲ್ಯ ಎಂದು ವಿವರಿಸಿದರು.

ಗ್ಯಾರಂಟಿ ಯೋಜನೆಗಳಿಗಾಗಿ ಬಜೆಟ್‌ ಗಾತ್ರ ಹೆಚ್ಚಳ

ಕಾಂಗ್ರೆಸ್‌ ಸರಕಾರ ನೀಡಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹ ಲಕ್ಷ್ಮಿ ಯೋಜನೆ ಅಡಿ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ, ಅನ್ನ ಭಾಗ್ಯ ಯೋಜನೆ, ಗೃಹಜ್ಯೋತಿ ಉಚಿತ ವಿದ್ಯುತ್‌ ಯೋಜನೆ ಸೇರಿದಂತೆ ಕಾಂಗ್ರೆಸ್‌ ಸರಕಾರದ ಯೋಜನೆಗಳಿಗಾಗಿ ಈ ಬಾರಿಯ ಬಜೆಟ್‌ ಗಾತ್ರ ಹೆಚ್ಚಳವಾಗಿರಲಿದೆ. "ಗ್ಯಾರಂಟಿ ಯೋಜನೆಗಳಿಗೆ ಹೆಚ್ಚುವರಿಯಾಗಿ 50 ಸಾವಿರ ಕೋಟಿ ರೂಪಾಯಿ ಬೇಕಿರುತ್ತದೆ. ಪೂರಕ ಬಜೆಟ್‌ ಗಾತ್ರ ಹೆಚ್ಚಿರಲಿದೆ" ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕ ಬಜೆಟ್‌ ಅಧಿವೇಶನ

ಕರ್ನಾಟಕ ಬಜೆಟ್‌ ಅಧಿವೇಶನ ಜುಲೈ 3,2023ರಂದು ನಡೆಯಲಿದೆ. ಅಂದು ಮಧ್ಯಾಹ್ನ 12 ಗಂಟೆಗೆ ಅರಂಭವಾಗಲಿದೆ. ಅಂದು ರಾಜ್ಯಪಾಲರು ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಅಧಿವೇಶನವು ಜುಲೈ 14ರವರೆಗೆ ಇರಲಿದೆ. ಅಧಿವೇಶನದ ಕಾರ್ಯಕಲಾಪಗಳಲ್ಲಿ ಶಾಸಕರಿಗೆ ರಾಜ್ಯದ ವಿಷಯಗಳನ್ನು ಕುರಿತು ಮತ್ತು ತಮ್ಮ ತಮ್ಮ ಕ್ಷೇತ್ರದ ಸಮಸ್ಯೆ ಮತ್ತು ಬೇಡಿಕೆಗಳನ್ನು ಪ್ರಸ್ತಾಪಿಸಲು ಅವಕಾಶವಿರುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ