logo
ಕನ್ನಡ ಸುದ್ದಿ  /  ಕರ್ನಾಟಕ  /  Rahul Gandhi: ಕರ್ನಾಟಕ ಚುನಾವಣೆ: ಬೇರೆಯವರನ್ನ ಪ್ರಶ್ನೆ ಮಾಡುವುದು ಬಹಳ ಸುಲಭ, ಆದರೆ ತಮ್ಮನ್ನ ತಾವು ಪ್ರಶ್ನೆ ಮಾಡಿಕೊಳ್ಳುವುದು ಕಷ್ಟ: ರಾಗಾ

Rahul Gandhi: ಕರ್ನಾಟಕ ಚುನಾವಣೆ: ಬೇರೆಯವರನ್ನ ಪ್ರಶ್ನೆ ಮಾಡುವುದು ಬಹಳ ಸುಲಭ, ಆದರೆ ತಮ್ಮನ್ನ ತಾವು ಪ್ರಶ್ನೆ ಮಾಡಿಕೊಳ್ಳುವುದು ಕಷ್ಟ: ರಾಗಾ

Raghavendra M Y HT Kannada

Apr 23, 2023 05:42 PM IST

google News

ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಾಲನೆ ನೀಡಿ ಮಾತನಾಡಿದರು.

  • ಸಮಾಜದಲ್ಲಿನ ಜಾತಿ ತಾರತಮ್ಯ, ಶೋಷಣೆ, ದಬ್ಬಾಳಿಕೆ, ಕಂದಾಚಾರಗಳನ್ನು ಕಂಡ ಬಸವಣ್ಣನವರು ಇದರ ಬಗ್ಗೆ ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಂಡು. ಯಾರಿಗೂ ಹೆದರದೇ ತಮ್ಮ ಮನಸ್ಸಿನಲ್ಲಿ ಬಂದ ಸತ್ಯವನ್ನು ಸಮಾಜಕ್ಕೆ ತಿಳಿಸಿದರು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

 ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಾಲನೆ ನೀಡಿ ಮಾತನಾಡಿದರು.
ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಾಲನೆ ನೀಡಿ ಮಾತನಾಡಿದರು.

ಕೂಡಲ ಸಂಗಮ(ಬಾಗಲಕೋಟೆ ): ಬೇರೆಯವರನ್ನು ಪ್ರಶ್ನೆ ಮಾಡುವುದು ಬಹಳ ಸುಲಭ, ಆದರೆ ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳುವುದು ಕಠಿಣ ಹಾಗೂ ಬಹಳ ದೊಡ್ಡ ವಿಚಾರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ (Kudalasangama) ಬಸವ ಜಯಂತಿ (Basava Jayanthi) ಅಂಗವಾಗಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅನೇಕರು ಪ್ರಶ್ನೆ ಕೇಳುತ್ತಾರೆ, ಸತ್ಯವನ್ನು ಅರಿಯುತ್ತಾರೆ. ಆದರೆ, ತಾವು ಅರಿತ ಸತ್ಯವನ್ನು ಸಮಾಜದಲ್ಲಿ ಹೇಳಲು ಹಿಂಜರಿಯುತ್ತಾರೆ ಎಂದಿದ್ದಾರೆ.

ಅನೇಕರಿಗೆ ಸತ್ಯ ಗೊತ್ತಿರುತ್ತದೆ, ಆದರೂ ಅವರು ಆ ಸತ್ಯದ ಬಗ್ಗೆ ಧ್ವನಿ ಎತ್ತುವುದಿಲ್ಲ. ಕಾರಣ ಅವರು ಹೆದರುತ್ತಾರೆ. ಆದರೆ ಬಸವಣ್ಣನವರು ಹೆದರಲಿಲ್ಲ, ತಮಗೆ ಅರಿವಾದ ಸತ್ಯವನ್ನು ಸಮಾಜದ ಮುಂದೆ ಇಟ್ಟರು. ಇದೇ ಕಾರಣಕ್ಕೆ ಅವರು ಇತರರಿಗಿಂತ ಬೇರೆಯದಾಗಿ ನಿಂತರು. ಇಂದು ನಾವು ಅವರು ಪ್ರತಿಮೆ ಮುಂದೆ ಫುಷ್ಪ ಅರ್ಪಣೆ ಮಾಡಲು ಇದೇ ಕಾರಣ ಎಂದು ವಿವರಿಸಿದ್ದಾರೆ.

ಯಾವುದೇ ರಾಜಕೀಯ ಹಾಗೂ ಯಾರ ಹೆಸರನ್ನು ಪ್ರಸ್ತಾಪ ಮಾಡದೆ ಮಾತನಾಡಿರುವ ರಾಹುಲ್ ಗಾಂಧಿ, ಸಮಾಜದ ಮುಂದೆ ಸತ್ಯ ನುಡಿಯುವುದು ಸುಲಭದ ವಿಚಾರವಲ್ಲ. ಇಂದು ನಾವು ಬಸವಣ್ಣನವರ ಮುಂದೆ ಹೂ ಇಡುತ್ತಿದ್ದೇವೆ. ಆದರೆ ಇವರು ಜೀವಂತವಾಗಿದ್ದಾಗ ಸತ್ಯ ನುಡಿದಿದ್ದರೆ ಅವರ ಮೇಲೆ ದಾಳಿ ಮಾಡಲಾಗುತ್ತಿತ್ತು. ಅವರಿಗೆ ಹೆದರಿಸುವ ಪ್ರಯತ್ನ ನಡೆಯುತ್ತಿತ್ತು, ಆದರೆ ಅವರು ಹೆದರಲಿಲ್ಲ, ಸತ್ಯದ ಮಾರ್ಗವನ್ನು ಬಿಡಲಿಲ್ಲ. ಇದೇ ಕಾರಣಕ್ಕೆ ನಾವಿಂದು ಅವರ ಮುಂದೆ ಹೂ ಇಟ್ಟು ಗೌರವಿಸುತ್ತಿದ್ದೇವೆ ಎಂದಿದ್ದಾರೆ.

ಸಮಾಜದಲ್ಲಿನ ಜಾತಿ ತಾರತಮ್ಯ, ಶೋಷಣೆ, ದಬ್ಬಾಳಿಕೆ, ಕಂದಾಚಾರಗಳನ್ನು ಕಂಡ ಬಸವಣ್ಣನವರು ಇದರ ಬಗ್ಗೆ ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಂಡು. ಯಾರಿಗೂ ಹೆದರದೇ ತಮ್ಮ ಮನಸ್ಸಿನಲ್ಲಿ ಬಂದ ಸತ್ಯವನ್ನು ಸಮಾಜಕ್ಕೆ ತಿಳಿಸಿದರು. ಅದೇ ಸತ್ಯದ ಮಾರ್ಗದಲ್ಲಿ ನಡೆಯುವ ಮೂಲಕ ಬಸವಣ್ಣನವರು ಇಡೀ ದೇಶ ಹಾಗೂ ಸಮಾಜಕ್ಕೆ ಬೆಳಕಾಗಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಬಸವಣ್ಣನ ಗುಣಗಾನ ಮಾಡಿದ್ದಾರೆ.

ಬಸವಣ್ಣನವರ ಲೋಕತಂತ್ರದ ದಾರಿ ನಾಶಪಡಿಸಲು ಸಾಧ್ಯವಿಲ್ಲ

ಬಸವಣ್ಣನವರು ಲೋಕತಂತ್ರದ ದಾರಿಯನ್ನು ಭಾರತ ಹಾಗೂ ಪ್ರಪಂಚಕ್ಕೆ ಪರಿಚಯಿಸಿದರು. ಇದು ಸತ್ಯವಾಗಿದ್ದು, ಇದನ್ನು ನಾಶಪಡಿಸಲು ಸಾಧ್ಯವಿಲ್ಲ. ನಂತರ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂದಿದ್ದು, ಸಂಸತ್ತು, ಅಧಿಕಾರ ಬಂದಿದೆ.

ಬಸವಣ್ಣನವರ ಆದರ್ಶಗಳು ಈ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಡಗಿದೆ. ನಿಮ್ಮಲ್ಲಿ ಕತ್ತಲು ಆವರಿಸಿದರೆ, ಎಲ್ಲೋ ಒಂದು ಕಡೆಯಿಂದ ಬೆಳಕು ಗೋಚರಿಸುತ್ತದೆ. ಅದೇ ರೀತಿ ಸಮಾಜದಲ್ಲಿ ಸಮಾಜದಲ್ಲಿ ಕತ್ತಲು ಆವರಿಸಿದಾಗ ಬಸವಣ್ಣನವರು ಬೆಳಕಾಗಿ ಮೂಡಿದರು. ವ್ಯಕ್ತಿಗಳು ಸುಕಾಸುಮ್ಮನೆ ಬೆಳಕು ನೀಡುವುದಿಲ್ಲ ಎಂದು ಹೇಳಿದ್ದಾರೆ.

ಸಮಾಜದಲ್ಲಿನ ತಪ್ಪುಗಳ ವಿಚಾರವಾಗಿ ಸತ್ಯ ಮಾತನಾಡದಿದ್ದರೆ, ಅವರಿಗೆ ಇಂತಹ ಗೌರವಗಳು ಸಿಗುವುದಿಲ್ಲ. ಹೆದರಿದರೆ, ಸತ್ಯದಿಂದ ದೂರ ಹೋದರೆ ನಮ್ಮ ಮುಂದೆ ಹೂವ ಇಡುವುದಿಲ್ಲ. ಇಂದು ಇಲ್ಲಿಗೆ ಬಂದು ನನಗೆ ಸಂತೋಷವಾಗಿದೆ. ನನಗೆ ಇಂದು ಕಲಿಯಲು ಸಾಕಷ್ಟು ವಿಚಾರ ಸಿಕ್ಕಿತು. ನಾನು ಈ ಹಿಂದೆ ಬಸವಣ್ಣನವರ ಬಗ್ಗೆ ಓದಿ, ಕೇಳಿ ತಿಳಿದಿದ್ದೇನೆ. ಬಸವಣ್ಣನವರು ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ.

ಬಸವಣ್ಣನವರು ನಮಗೆ ಯಾವತ್ತೂ ಹೆದರಬೇಡಿ, ಸತ್ಯದ ಮಾರ್ಗದಲ್ಲಿ ಸಾಗಿ, ಎಲ್ಲರನ್ನು ಗೌರವಿಸಿ ಎಂದು ಮಾರ್ಗದರ್ಶನ ನೀಡಿದ್ದಾರೆ. ಈ ವಿಚಾರವಾಗಿ ಅನೇಕರು ಮಾತನಾಡುತ್ತಾರೆ. ಆದರೆ ಕೆಲವರು ಮಾತ್ರ ಅದನ್ನು ಪಾಲಿಸುತ್ತಾರೆ. ಈ ಕೆಲವರಲ್ಲಿ ಬಸವಣ್ಣನವರೂ ಒಬ್ಬರು. ಇದೇ ಕಾರಣಕ್ಕೆ ನಮಗೆ ನಮ್ಮ ದೇಶಕ್ಕೆ ಬೆಳಕಾಗಿದ್ದಾರೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ