Indira Canteen menu: ಇಂದಿರಾ ಕ್ಯಾಂಟೀನ್ ಹೊಸ ಮೆನು; ಮಂಗಳೂರು ಬನ್ಸ್ ಮತ್ತೇನೇನಿವೆ ಫುಲ್ ಲಿಸ್ಟ್ ಚೆಕ್ ಮಾಡಿ
Jan 09, 2024 08:10 PM IST
ಇಂದಿರಾ ಕ್ಯಾಂಟೀನ್‌ನ ಹೊಸ ಮೆನು ಲಿಸ್ಟ್‌ನಲ್ಲಿ ಮಂಗಳೂರು ಬನ್ಸ್
Indira Canteen menu: ಇಂದಿರಾ ಕ್ಯಾಂಟೀನ್‌ನ ಹೊಸ ಮೆನು ಲಿಸ್ಟ್ ಸಿದ್ಧವಾಗಿದ್ದು, ಮಂಗಳೂರು ಬನ್ಸ್, ಬ್ರೆಡ್ ಜಾಮ್ ಸೇರ್ಪಡೆಯಾಗಿವೆ. ಇನ್ನೇನಿವೆ ಲಿಸ್ಟ್‌ನಲ್ಲಿ ಎಂಬ ವಿವರ ಇಲ್ಲಿದೆ.
ಇಂದಿರಾ ಕ್ಯಾಂಟೀನ್‌ಗಳಲ್ಲಿ ಇನ್ನು ಮಂಗಳೂರು ಬನ್ಸ್ ಸಿಗಲಿದೆ. ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಸಬ್ಸಿಡಿ ದರದಲ್ಲಿ ಆಹಾರವನ್ನು ಒದಗಿಸುವ ಇಂದಿರಾ ಕ್ಯಾಂಟೀನ್ ಮೆನುವಿನಲ್ಲಿ ಇನ್ನಷ್ಟು ಹೊಸ ಆಹಾರ ಪದಾರ್ಥಗಳ ಸೇರ್ಪಡೆಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮಳಿಗೆಗಳನ್ನು ಮರುಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ನಂತರ ಹೊಸ ಮೆನು ಸಿದ್ಧವಾಗಿದೆ. ಈ ಸರ್ಕಾರಿ ಕ್ಯಾಂಟೀನ್‌ಗಳ ಅಸ್ತಿತ್ವದಲ್ಲಿರುವ ಮೆನುವಿಗೆ ಬ್ರೆಡ್ ಜಾಮ್ ಮತ್ತು ಮಂಗಳೂರು ಬನ್ಸ್ ಸೇರ್ಪಡೆಯಾಗಿದೆ.
ಸಿದ್ದರಾಮಯ್ಯ ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಅಂದರೆ 2017ರಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗಿತ್ತು. ಕಳೆದ ಅವಧಿಯ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಈ ಕ್ಯಾಂಟೀನ್‌ಗಳು ನಿರ್ಲಕ್ಷಿಸಲ್ಪಟ್ಟಿದ್ದವು. ಈಗ ಮತ್ತೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ, ಕಳೆದ ವಾರ ಇಂದಿರಾ ಕ್ಯಾಂಟೀನ್‌ಗಳ ಪುನರುಜ್ಜೀವನಕ್ಕೆ ಪೌರಾಡಳಿತ ಸಂಸ್ಥೆಗೆ ಸೂಚನೆ ನೀಡಿದ್ದರು.
ಹೊಸ ಇಂದಿರಾ ಕ್ಯಾಂಟೀನ್ ಸ್ಥಾಪಿಸಬೇಕು ಎಂಬ ಆಲೋಚನೆ ಇದ್ದು, ಇದಕ್ಕಾಗಿ ಅವಶ್ಯಕತೆ ಇರುವ ಜಾಗಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಸದ್ಯ ದರ ಪರಿಷ್ಕರಣೆ ಇಲ್ಲ, ಮೆನುವಿನಲ್ಲಿ ಬದಲಾವಣೆ ಆಗಲಿದೆ. ಹೊಸ ಟೆಂಡರ್ ಕರೆದು, ಕ್ವಾಲಿಟಿ, ಕ್ವಾಂಟಿಟಿ, ಕ್ಲೀನ್ಲೀನೆಸ್ ಅನ್ನು ನಿರ್ವಹಿಸುವುದಕ್ಕೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದಿರಾ ಕ್ಯಾಂಟೀನ್‌ಗಳು ಜನರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಒದಗಿಸುತ್ತವೆ ಎಂದು ಘೋಷಿಸಿದರು. ಬೆಳಗಿನ ಉಪಾಹಾರಕ್ಕೆ 5 ರೂಪಾಯಿ. ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಕ್ಯಾಂಟೀನ್ ನಲ್ಲಿ 10 ರೂಪಾಯಿ ಇದೆ.
ಇಂದಿರಾ ಕ್ಯಾಂಟೀನ್‌ನ ಅಪ್ಡೇಟೆಡ್ ಮೆನು
- ಮಂಗಳೂರು ಬನ್ಸ್
- ಬ್ರೆಡ್ ಜಾಮ್
- ಇಡ್ಲಿ ಚಟ್ನಿ, ಸಾಂಬಾರ್
- ಪುಲಾವ್
- ಟೊಮ್ಯಾಟೋ ಬಾತ್
- ಖಾರಾ ಪೊಂಗಲ್
- ಬಿಸಿಬೇಳೆ ಬಾತ್
- ರಾಗಿ ಮುದ್ದೆ ಮತ್ತು ಸೊಪ್ಪುಸಾರು
- ಅನ್ನ ಸಾಂಬಾರ್
- ಚಪಾತಿ
- ಚಹಾ/ಕಾಫಿ
ಬೆಂಗಳೂರು ಮಹಾನಗರದಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಶೇಕಡ 50:50 ರ ಅನುಪಾತದಲ್ಲಿ ಅನುದಾನ ನೀಡಲಾಗುತ್ತದೆ. ಬೆಂಗಳೂರು ಮಹಾನಗರ ಬಿಟ್ಟು ಉಳಿದ ಕಡೆ ಅನುದಾನ ನೀಡಿಕೆ ಅನುಪಾತ ರಾಜ್ಯ ಸರ್ಕಾರ ಶೇಕಡ 70 ಮತ್ತು ಸ್ಥಳೀಯಾಡಳಿತ ಸಂಸ್ಥೆ ಶೇಕಡ 30 ಇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಸ್ಪಷ್ಟಪಡಿಸಿದರು.
ಗಮನಿಸಬಹುದಾದ ಸುದ್ದಿಗಳು
Indira Canteen: ಇಂದಿರಾ ಕ್ಯಾಂಟೀನ್ ಹೊಸ ಟೆಂಡರ್ಗೆ ಅಧಿಕಾರಿಗಳಿಗೆ ನಿರ್ದೇಶನ; ಸಿಎಂ ಮಹತ್ವದ ಸಭೆ
PUC Supplementary Result: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟ, ಶೇ. 32 ಫಲಿತಾಂಶ, ರಿಸಲ್ಟ್ ನೋಡಲು ಇಲ್ಲಿದೆ ನೇರ ಲಿಂಕ್
PUC Supplementary Result: ಇಂದು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ; ಜಾಲತಾಣದಲ್ಲಿ ಫಲಿತಾಂಶ ವೀಕ್ಷಣೆ ಸೇರಿ ಸಂಪೂರ್ಣ ಮಾಹಿತಿ
Odisha Train Accident: ಒಡಿಶಾ ರೈಲು ದುರಂತದಲ್ಲಿ ಹಲವರ ಮೇಲೆ ಸಿಬಿಐಗೆ ಅನುಮಾನ; ಯಾರು ಈ ಶಂಕಿತ ಜೆಇ ಆಮೀರ್ ಖಾನ್