Karnataka IFS Transfer: ಆರು ವರ್ಷದಿಂದ ಒಂದೇ ಹುದ್ದೆಯಲ್ಲಿದ್ದ ಐಎಫ್‌ಎಸ್ ಅಧಿಕಾರಿ ವರ್ಗಾವಣೆ; ವನ್ಯಜೀವಿ ಪಿಸಿಸಿಎಫ್ ಹುದ್ದೆಗೂ ನೇಮಕ
Jul 02, 2023 07:45 AM IST
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ವರ್ಗಾವಣೆಯಾಗಿದ್ದು, ಆರು ವರ್ಷದಿಂದ ಒಂದೇ ಹುದ್ದೆಯಲ್ಲಿದ್ದ ಜಗತ್‌ರಾಮ್ ಅವರನ್ನೂ ವರ್ಗಾಯಿಸಲಾಗಿದೆ.
- ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಒಂದೂವರೆ ತಿಂಗಳ ಹಿಂದೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಧಿಕಾರಿಗಳ ವರ್ಗಾವಣೆ ಪರ್ವ ಜೋರಾಗಿದೆ. ಮೊದಲ ಬಾರಿಗೆ ಹಿರಿಯ ಐಎಫ್‌ಎಸ್ ಅಧಿಕಾರಿಗಳನ್ನು ಶನಿವಾರ ರಾತ್ರಿ ವರ್ಗ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು: ಆರು ವರ್ಷದಿಂದ ಒಂದೇ ಹುದ್ದೆಯಲ್ಲಿದ್ದ ಐಎಫ್‌ಎಸ್ ಅಧಿಕಾರಿ ವರ್ಗಾವಣೆ, ಎರಡು ತಿಂಗಳ ನಂತರ ಪಿಸಿಸಿಎಫ್ ಹುದ್ದೆಗೆ ನೇಮಕ ಮಾಡಿದ ಕರ್ನಾಟಕ ರಾಜ್ಯ ಸರ್ಕಾರ.
ಒಂದೂವರೆ ತಿಂಗಳ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಧಿಕಾರಿಗಳ ವರ್ಗಾವಣೆ ಪರ್ವ ಜೋರಾಗಿದೆ. ಮೊದಲ ಬಾರಿಗೆ ಹಿರಿಯ ಐಎಫ್‌ಎಸ್ ಅಧಿಕಾರಿಗಳನ್ನು ಶನಿವಾರ ರಾತ್ರಿ ವರ್ಗ ಮಾಡಿ ಆದೇಶ ಹೊರಡಿಸಿದೆ.
ಕರ್ನಾಟಕ ಹುಲಿ ಯೋಜನೆ( Project Tiger) ನಿರ್ದೇಶಕರಾಗಿ ಆರು ವರ್ಷದಿಂದ ಒಂದೇ ಹುದ್ದೆಯಲ್ಲಿದ್ದ ಜಗತ್ ರಾಮ್ ಅವರನ್ನು ವರ್ಗಾಯಿಸಲಾಗಿದೆ. ಅವರನ್ನು ಬೆಂಗಳೂರಿನ ಕರ್ನಾಟಕ ಜೀವವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
ಕರ್ನಾಟಕದಲ್ಲಿ ಬಂಡೀಪುರ, ನಾಗರಹೊಳೆ, ಭದ್ರಾ, ಬಿಆರ್‌ಟಿ, ದಾಂಡೇಲಿ ಸಹಿತ ಐದು ಹುಲಿ ಯೋಜನೆಗಳಿದ್ದುಇದಕ್ಕೆ ಒಬ್ಬರೇ ಹುಲಿ ಯೋಜನೆ ನಿರ್ದೇಶಕರಿದ್ದು, ಮೈಸೂರಿನಲ್ಲಿ ಪ್ರಧಾನ ಕಚೇರಿಯಿದೆ. ಪಿಸಿಸಿಎಫ್ ಹುದ್ದೆಗೆ ಬಡ್ತಿ ನಂತರವೂ ಜಗತ್ ರಾಮ್ ಇದೇ ಹುದ್ದೆಯಲ್ಲಿ ಮುಂದುವರೆದಿದ್ದರು. ಈಗ ಅವರನ್ನು ಬದಲಾಯಿಸಲಾಗಿದೆ.
ಕರ್ನಾಟಕದಲ್ಲಿ ಹುಲಿ ಯೋಜನೆ ಆರಂಭಗೊಂಡಾಗಿನಿಂದ ಈವರೆಗೂ ಹುಲಿ ಯೋಜನೆ ನಿರ್ದೇಶಕರ ಹುದ್ದೆ ಇಷ್ಟು ಸುಧೀರ್ಘ ಅವಧಿಯಲ್ಲಿ ಒಬ್ಬ ಅಧಿಕಾರಿ ಕಾರ್ಯನಿರ್ವಹಿಸಿರಲಿಲ್ಲ.
ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(PCCF Wildlife) ಹುದ್ದೆಯೂ ಎರಡು ತಿಂಗಳಿನಿಂದ ಖಾಲಿಯಿತ್ತು. ಈಗ ಆ ಹುದ್ದೆಗೆ ಹಿರಿಯ ಐಎಫ್‌ಎಸ್ ಅಧಿಕಾರಿ ಸುಭಾಷ್ ಮಾಳ್ಕೇಡ್ ಅವರನ್ನು ನಿಯೋಜಿಸಲಾಗಿದೆ. ಹಿರಿತನವಿದ್ದರೂ ವನ್ಯಜೀವಿ ವಿಭಾಗದಲ್ಲಿ ಕಾರ್ಯನಿರ್ವಹಿಸಿಲ್ಲ ಎಂದು ಬಿಕೆ ದೀಕ್ಷಿತ್ ಅವರನ್ನು ಉನ್ನತ ಹುದ್ದೆಗೆ ಪರಿಗಣಿಸಿಲ್ಲ.
ಹಿರಿಯ ಐಎಫ್‌ಎಸ್ ಅಧಿಕಾರಿಗಳಾದ ಸೀಮಾ ಗರ್ಗ್, ಜಗನ್ ಮೋಹನ್ ಶರ್ಮ ಅವರಿಗೆ ಬಡ್ತಿ ನೀಡಿ ಈಗಿರುವ ಹುದ್ದೆಯಲ್ಲೇ ಮುಂದುವರೆಸಲಾಗಿದೆ.
ಹುದ್ದೆ ನಿರೀಕ್ಷೆಯಲ್ಲಿದ್ದ ಶ್ರೀನಿವಾಸುಲು ಅವರಿಗೆ ಬೆಂಗಳೂರಿನ ಅರಣ್ಯ ಸಂಶೋಧನೆ ವಿಭಾಗದ ಎಪಿಸಿಸಿಎಫ್ ಆಗಿ ನಿಯೋಜಿಸಲಾಗಿದೆ.
ಐಸಿಟಿ ವಿಭಾಗದ ಎಪಿಸಿಸಿಎಫ್ ಆಗಿದ್ದ ಬಿಸ್ವಜಿತ್ ಮಿಶ್ರ ಅವರನ್ನು ಅರಣ್ಯ ಕಾರ್ಯಯೋಜನೆ ಎಪಿಸಿಸಿಎಫ್ ಆಗಿ ವರ್ಗಾಯಿಸಲಾಗಿದೆ. ಐಸಿಟಿ ವಿಭಾಗದ ಹೆಚ್ಚುವರಿ ಹುದ್ದೆಯಲ್ಲೂ ಮಿಶ್ರ ಅವರು ಮುಂದುವರಿಯಲಿದ್ದಾರೆ.
ಕರ್ನಾಟಕ ಉಗ್ರಾಣ ನಿಗಮದ ಎಂಡಿಯಾಗಿದ್ದ ಉಪೇಂದ್ರ ಪ್ರತಾಪಸಿಂಗ್ ಅವರನ್ನು ಚಿಕ್ಕಮಗಳೂರು ವೃತ್ತ ಸಿಸಿಎಫ್ ಆಗಿ ನೇಮಿಸಲಾಗಿದೆ.
ಬನ್ನೇರಘಟ್ಟ ಉದ್ಯಾನವನದ ನಿರ್ದೇಶಕರಾಗಿದ್ದ ಡಾ.ಸುನೀಲ್ ಪೊನ್ವಾರ್ ಅವರನ್ನು ಕಲಬುರಗಿ ವೃತ್ತ ಸಿಸಿಎಫ್ ಆಗಿ ವರ್ಗಾಯಿಸಲಾಗಿದೆ. ಬನ್ನೇರಘಟ್ಟ ನಿರ್ದೇಶರನ್ನಾಗಿ ಯಾರನ್ನೂ ನಿಯೋಜಿಸಿಲ್ಲ. ಈವರೆಗೂ ಕಲಬುರಗಿ ಸಿಸಿಎಫ್ ಆಗಿದ್ದ ಡಾ.ಎಸ್.ವೆಂಕಟೇಶನ್‌ಗೆ ಹುದ್ದೆ ತೋರಿಸಿಲ್ಲ.
ದಾಂಡೇಲಿ ಹುಲಿ ಯೋಜನೆಯ ನಿರ್ದೇಶಕರಾಗಿದ್ದ ಮರಿಯಾ ಕ್ರಿಸ್ತು ರಾಜಾ ಅವರನ್ನು ಧಾರವಾಡದ ಗುಂಗರಗಟ್ಟಿಯ ಅರಣ್ಯ ತರಬೇತಿ ಅಕಾಡೆಮಿಗೆ ವರ್ಗಾಯಿಸಲಾಗಿದೆ. ಬಿಎಂಟಿಸಿ ತಂತ್ರಜ್ಞಾನ ನಿರ್ದೇಶಕರಾಗಿದ್ದ ಎ.ವಿ.ಸೂರ್ಯಸೇನ್ ಅವರನ್ನು ರಾಮನಗರ ಡಿಸಿಎಫ್ ಆಗಿ, ಗೋಕಾಕ್ ಡಿಸಿಎಫ್ ಆಗಿದ್ದ ಆಂತೋಣಿ ಮರಿಯಪ್ಪ ಅವರನ್ನು ಮಂಗಳೂರು ಡಿಸಿಎಫ್, ಮಂಗಳೂರು ಡಿಸಿಎಫ್ ಆಗಿದ್ದ ದಿನೇಶ್‌ಕುಮಾರ್ ಅವರನ್ನು ಬೆಂಗಳೂರು ನಗರ ಡಿಸಿಎಫ್, ಬಿಬಿಎಂಪಿ ಡಿಸಿಎಫ್ ಆಗಿದ್ದ ಸರೀನಾ ಸಿಕ್ಕಲಗಾರ ಅವರನ್ನು ಕಲಬುರಗಿ ಡಿಸಿಎಫ್ ಆಗಿ, ಚಿಕ್ಕಮಗಳೂರು ಕಾರ್ಯಯೋಜನೆ ಡಿಸಿಎಫ್ ಆಗಿದ್ದ ಎಂ.ವಿ.ಆಶಿಶ್ ರೆಡ್ಡಿ ಅವರನ್ನು ಭದ್ರಾವತಿ ಡಿಸಿಎಫ್ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ವಿಭಾಗ