Karnataka police: ಪೊಲೀಸ್ ಪರಿಶೀಲನೆಗೆಂದೇ 30ಲಕ್ಷ ಜನ ಪೊಲೀಸ್ ಠಾಣೆ ಮೆಟ್ಟಿಲೇರ್ತಿದ್ದಾರೆ! ಇದನ್ನು ಕಡಿಮೆ ಮಾಡ್ತಾರಂತೆ ಪೊಲೀಸರು ಹೇಗೆ?
Oct 28, 2022 07:14 AM IST
ಪ್ರವೀಣ್ ಸೂದ್, ಡೈರೆಕ್ಟರ್ ಜನರಲ್ ಆಫ್ ಪೊಲೀಸ್
- Karnataka police: ಪೊಲೀಸ್ ಪರಿಶೀಲನೆಗೋಸ್ಕರ 30 ಲಕ್ಷ ಜನ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಇದನ್ನು ಶೀಘ್ರವೇ ಕಡಿಮೆ ಮಾಡುವ ಕೆಲಸಕ್ಕೆ ಕೈಹಾಕಿದ್ದೇವೆ ಎಂದು ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರವೀಣ್ ಸೂದ್ ಹೇಳಿದ್ದಾರೆ. ಪೊಲೀಸರ ಪೌರಸ್ನೇಹಿ ಕ್ರಮ ಏನು?
ಬೆಂಗಳೂರು: ಅಪರಾಧ ಮಾಡಿದವರಷ್ಟೇ ಅಥವಾ ದೂರು ನೀಡಿದವರಷ್ಟೇ ಅಲ್ಲ ಪೊಲೀಸ್ ಠಾಣೆ ಮೆಟ್ಟಿಲೇರುವುದು! ಪೊಲೀಸ್ ಪರಿಶೀಲನೆಗೂ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಗುತ್ತದೆ. 30 ಲಕ್ಷ ಜನ ದಾಖಲೆ ಪರಿಶೀಲನೆಗೋಸ್ಕರ ಪೊಲೀಸ್ ಠಾಣೆಗಳ ಮೆಟ್ಟಿಲೇರುತ್ತಿದ್ದಾರಂತೆ!
ಈ ವಿಚಾರವನ್ನು ಸ್ವತಃ ರಾಜ್ಯದ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಸೂದ್ ಬಹಿರಂಗಪಡಿಸಿದ್ದಾರೆ. ಅವರೊಂದು ಖುಷಿಯ ವಿಚಾರವನ್ನೂ ಟ್ವೀಟ್ ಮಾಡಿದ್ದಾರೆ. ಅದರ ಪ್ರಕಾರ, ಇನ್ನು ಮೇಲೆ ಪೊಲೀಸ್ ಠಾಣೆಗಳ ಮೆಟ್ಟಿಲೇರುವ ಪ್ರಮಾಣ ಕನಿಷ್ಠ 30 ಲಕ್ಷದಷ್ಟು ಕಡಿಮೆಯಾಗಲಿದೆ. ಅಂಥದ್ದೊಂದು ಪೌರ ಸ್ನೇಹಿ ಮತ್ತು ಪೌರ ಕೇಂದ್ರಿತ ಉಪಕ್ರಮವನ್ನು ಪೊಲೀಸರು ತಗೊಂಡಿದ್ದಾರಂತೆ.
ಡಿಜಿಪಿ ಪ್ರವೀಣ್ ಸೂದ್ ಅವರ ಟ್ವೀಟ್‌ನಲ್ಲೇನಿದೆ?
"ಕರ್ನಾಟಕ ರಾಜ್ಯ ಪೊಲೀಸ್‌ನ ಪೊಲೀಸ್ ಕಂಪ್ಯೂಟರ್ ವಿಂಗ್‌ನ ಅತ್ಯಂತ ಉಪಯುಕ್ತ ನಾಗರಿಕ-ಕೇಂದ್ರಿತ ಉಪಕ್ರಮದ ಮೂಲಕ ಪೊಲೀಸ್ ಠಾಣೆಗಳಿಗೆ ಆಗಮಿಸುವ ಕನಿಷ್ಠ 30 ಲಕ್ಷ ಜನರ ಬವಣೆಯನ್ನು ತಪ್ಪಿಸಲಾಗುತ್ತದೆ. ಅಂತಹ ಗುರಿಯನ್ನು ಉದ್ದೇಶವನ್ನು ನಾವು ಹೊಂದಿದ್ದೇವೆ ಎಂದು ಪ್ರವೀಣ್ ಸೂದ್ ಅವರು ಡಿಜಿಪಿ ಕರ್ನಾಟಕ ಟ್ವೀಟ್ ಖಾತೆಯ ಮೂಲಕ ತಿಳಿಸಿದ್ದಾರೆ.
ಅವರು ಪೊಲೀಸ್ ಠಾಣೆಗೆ ಭೇಟಿ ನೀಡದೆ ದಾಖಲೆಗಳನ್ನು ಪರಿಶೀಲಿಸುವ ಬಗ್ಗೆ ವಿವರವಾದ ವೀಡಿಯೊವನ್ನು ಹಂಚಿಕೊಂಡಿದ್ದಾರೆ - ಇದು ಎರಡೂ ಕಡೆಯ ಸಮಯ ಮತ್ತು ಹಣವನ್ನು ಉಳಿಸುತ್ತದೆ ಎಂಬ ಮಾಹಿತಿ ಶೇರ್ ಮಾಡಿದ್ದಾರೆ.
ದಾಖಲೆಗಳನ್ನು ಪರಿಶೀಲಿಸಲು ಪೊಲೀಸರು 21 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಸೂದ್ ಅವರು ಈ ಹಿಂದೆ ಹೇಳಿದ್ದರು.
"ನೀವು 21 ದಿನಗಳೊಳಗೆ ಉತ್ತರವನ್ನು ಸ್ವೀಕರಿಸದಿದ್ದರೆ ಎಸ್ಪಿ/ಸಿಪಿ ಅವರನ್ನು ಭೌತಿಕವಾಗಿ ಭೇಟಿ ಮಾಡುವ ಹಕ್ಕಿದೆ. ನಮ್ಮ ಪ್ರಕ್ರಿಯೆಗಳು 100% ಆನ್‌ಲೈನ್‌ನಲ್ಲಿವೆ..." ಎಂದು ಅವರು ಟ್ವೀಟ್ ಮಾಡಿದ್ದರು.
ದಾಖಲೆಗಳ ಪರಿಶೀಲನೆ ಮತ್ತು ಕಳೆದುಹೋದ ದಾಖಲೆಗಳ ವರದಿಗಳನ್ನು ಗಮನಿಸಿದ ನಂತರ ಕರ್ನಾಟಕದ ಪೊಲೀಸರು ಜುಲೈನಲ್ಲಿ ಈ ಸೇವೆಯನ್ನು ಪ್ರಾರಂಭಿಸಿದರು.
---------------------------------------------------------------------
ಗಮನಿಸಬಹುದಾದ ಸುದ್ದಿಗಳು
1) ಏನಿದು ಕೋಟಿ ಕಂಠ ಗಾಯನ?
Koti kanta gayana Explained : ಕನ್ನಡ ಹಬ್ಬ, ಕರುನಾಡ ರಾಜ್ಯೋತ್ಸವಕ್ಕೂ ಮುನ್ನ ಜಗತ್ತಿನಾದ್ಯಂತ ಆಗಸ, ನೆಲ, ಜಲಗಳಿಂದ ಕನ್ನಡ ʻಕೋಟಿʼ ಕಂಠ ಗಾಯನ ಅನುರಣಿಸಲಿದೆ. ನಾಳೆ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದ ತಯಾರಿ ಕುರಿತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿರುವುದೇನು? ಇಲ್ಲಿದೆ ವಿವರ.
2) 'ದೇಶದ ಎಲ್ಲ ರಾಜ್ಯಗಳಲ್ಲೂ 2024ರ ವೇಳೆಗೆ ಎನ್‌ಐಎ ಶಾಖೆ ಸ್ಥಾಪನೆ'
ಪ್ರಸ್ತುತ ದೆಹಲಿ, ಹೈದರಾಬಾದ್, ಗುವಾಹಟಿ, ಕೊಚ್ಚಿ, ಲಖನೌ, ಮುಂಬೈ, ಕೋಲ್ಕತ್ತಾ, ರಾಯಪುರ, ಜಮ್ಮು, ಚಂಡೀಗಢ, ರಾಂಚಿ, ಚೆನ್ನೈ, ಇಂಫಾಲ್, ಬೆಂಗಳೂರು ಮತ್ತು ಪಾಟ್ನಾದಲ್ಲಿ ಎನ್‌ಐಎ 15 ಶಾಖೆಗಳನ್ನು ಹೊಂದಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ
3) ಪ್ರಧಾನಿ ಮೋದಿ ನ.11ಕ್ಕೆ ಬೆಂಗಳೂರಿಗೆ
ಪ್ರಧಾನಿ ಮೋದಿ ಅವರು ನವೆಂಬರ್ 11 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ನಮೋ ಪಾಲ್ಗೊಳ್ಳಲಿರುವ ಕಾರ್ಯಕ್ರಮಗಳ ಸಿದ್ಧತೆ ಕುರಿತು ಸಿಎಂ ಬೊಮ್ಮಾಯಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ