SSLC Topper: ಶಿಕ್ಷಕರು ಹೇಳಿದ್ದು ಮಾಡ್ತಿದ್ದೆ; ರಾತ್ರಿ 2 ತಾಸು ಹೆಚ್ಚು ಓದುತ್ತಿದ್ದೆ; ರಾಜ್ಯಕ್ಕೆ ಪ್ರಥಮ ಬಂದ ಯಶಸ್ ಗೌಡ ಯಶಸ್ಸಿನ ಮಾತು
May 08, 2023 11:45 AM IST
ಎಸ್ಎಸ್ಎಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಚಿಕ್ಕಬಳ್ಳಾಪುರದ ಯಶಸ್ ಗೌಡ
- ನಾನು ಮೊಬೈಲ್‌ಗೆ ಅಡಿಕ್ಟ್ ಆಗಿಲ್ಲ. ಮೊಬೈಲ್ ಗೇಮ್ಸ್ ಎಲ್ಲ ನಾನು ಆಡಲ್ಲ. ಬರೀ ಮಾತಾಡೋಕೆ ಮಾತ್ರ ಮೊಬೈಲ್ ಬಳಸ್ತೇನೆ. ನಾನು ಸ್ಟಡಿ ಮೆಟಿರೀಯಲ್ಸ್ ಎಲ್ಲ ಬಳಸಿಲ್ಲ. ನಮ್ಮ ಟೀಚರ್ಸ್ ಹೇಳಿದ್ದಷ್ಟೇ ಮಾಡ್ತಿದೆ ಎಂದು 10ನೇ ತರಗತಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಯಶಸ್ ಗೌಡ (Karnataka SSLC Topper Yashas Gowda) ತನ್ನ ಯಶಸ್ಸಿನ ಕಥೆಯನ್ನು ಹೇಳಿದ್ದಾರೆ.
ಕರ್ನಾಟಕದ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯದ ನಾಲ್ವರು ವಿದ್ಯಾರ್ಥಿಗಳು ಶೇಕಡಾ 100ಕ್ಕೆ ನೂರು ಫಲಿತಾಂಶ ಪಡೆದಿದ್ದಾರೆ. ಅದರಲ್ಲಿ ಚಿಕ್ಕಬಳ್ಳಾಪುರದ ಬಾಲಗಂಗಾಧರನಾಥ ಪ್ರೌಢಶಾಲೆಯ ವಿದ್ಯಾರ್ಥಿ ಯಶಸ್ಗೌಡ (Karnataka SSLC Topper Yashas Gowda) ಕೂಡ ಒಬ್ಬರು. 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವ ಯಶಸ್ ಗೌಡ ತನ್ನ ಸಂತಸವನ್ನು ಹಂಚಿಕೊಂಡಿದ್ದಾರೆ.
ಯಶಸ್ಗೌಡ ಅವರ ಮಾತು ಹೀಗಿದೆ..
ನನಗೆ ಹೆಚ್ಚು ಅಂಕ ಬರಬಹುದು ಎಂಬ ನಿರೀಕ್ಷೆ ಇತ್ತು. ನನ್ನ ಹೆಡ್ ಮಾಸ್ಟರ್ ಸಹ ಮಾತನಾಡಿದರು. ಖುಷಿಯಾಯಿತು. ನಿರ್ಮಲಾನಂದ ನಾಥ ಸ್ವಾಮೀಜಿ ಆಶೀರ್ವಾದದಿಂದ ಈ ಸಾಧನೆ ಸಾಧ್ಯವಾಯಿತು. ಟೈಮ್ ಮ್ಯಾನೇಜ್‌ಮೆಂಟ್ ನಾನು ಸರಿಯಾಗಿ ಮಾಡಿದೆ. ಎಲ್ಲಿಯೂ ವ್ಯರ್ಥ ಮಾಡ್ತಾ ಇರ್ಲಿಲ್ಲ. ರಾತ್ರಿ ಹೊತ್ತು 2 ತಾಸು ಶ್ರದ್ಧೆಯಿಂದ ಓದ್ತಿದ್ದೆ. ಪರೀಕ್ಷೆ ಹತ್ತಿರವಿದ್ದಾಗ ಶಾಲೆಯಲ್ಲಿಯೇ ರಾತ್ರಿ 9ರವರೆಗೆ ಓದಿಸ್ತಾ ಇದ್ರು. ಮನೆಗೆ ಬಂದು ನಾನು ರಾತ್ರಿ 11ರವರೆಗೆ ಓದ್ತಾ ಇದ್ದೆ. ಬೆಳಿಗ್ಗೆ ಮತ್ತೆ 6.30ಕ್ಕೆ ಎದ್ದು ಓದ್ತಿದ್ದೆ.
ನಾನು ನೆನಪಿನ ಶಕ್ತಿಗೆ ಟ್ರಿಕ್ ಅನುಸರಿಸಿದೆ. ಕಾನ್ಸೆಪ್ಟ್ ಅರ್ಥ ಮಾಡಿಕೊಂಡರೆ, ಇದು ಸುಲಭ. ಕಾನ್ಸೆಪ್ಟ್‌ಗಳನ್ನು ಲಿಂಕ್ ಮಾಡಿದರೆ ಪರೀಕ್ಷೆಯಲ್ಲಿ ಸರಿಯಾಗಿ ನೆನಪಿಗೆ ಬರುತ್ವೆ. ಶಾಲೆಯಲ್ಲಿ ಐದಾರು ಪ್ರಿಪರೇಟರಿ ಪರೀಕ್ಷೆ ಬರೆಸಿದರು. ಅದು ಅನುಕೂಲವಾಯಿತು. ಅಂದಿನ ಪಾಠ ಅಂದೇ ಓದುವುದು ಬಹಳ ಮುಖ್ಯ. ನಾನು ಓದುವ ಮೊದಲು ಮೂರು ಸಲ ಓಂಕಾರ ಹೇಳುತ್ತಿದ್ದೆ. ಏಕಾಗ್ರತೆ ಹೆಚ್ಚಿಸಿಕೊಳ್ಳುತ್ತಿದೆ. ಅವಕಾಶ ಸಿಕ್ಕಾಗ ಆಟ ಆಡ್ತಿದೆ. ಫ್ರೆಂಡ್ಸ್ ಜೊತೆಗೆ ಮಾತಾಡ್ತಿದೆ. ಇದು ನನ್ನ ಮನಸ್ಸನ್ನು ಫ್ರೆಶ್ ಆಗಿಸ್ತಾ ಇತ್ತು.
ನಾನು ಮೊಬೈಲ್‌ಗೆ ಅಡಿಕ್ಟ್ ಆಗಿಲ್ಲ. ಮೊಬೈಲ್ ಗೇಮ್ಸ್ ಎಲ್ಲ ನಾನು ಆಡಲ್ಲ. ಬರೀ ಮಾತಾಡೋಕೆ ಮಾತ್ರ ಮೊಬೈಲ್ ಬಳಸ್ತೇನೆ. ನಾನು ಸ್ಟಡಿ ಮೆಟಿರೀಯಲ್ಸ್ ಎಲ್ಲ ಬಳಸಿಲ್ಲ. ನಮ್ಮ ಟೀಚರ್ಸ್ ಹೇಳಿದ್ದಷ್ಟೇ ಮಾಡ್ತಿದೆ. ಗಣಿತ ನನ್ನ ಇಷ್ಟದ ವಿಷಯ. ನನಗೆ ಇನ್‌ಸ್ಟಾಗ್ರಾಮ್ ಅಕೌಂಟ್ ಇದೆ. ಆದರೆ ನಾನು ಇಡೀ ಒಂದು ವರ್ಷ ನಾನು ಅದನ್ನು ಬಳಸಿಲ್ಲ. ನಮ್ಮ ಶಾಲೆಯ ವಾಟ್ಸಾಪ್ ಗ್ರೂಪ್ ರೆಗ್ಯುಲರ್ ಬಳಸ್ತಾ ಇದ್ದೆ. ನನ್ನ ಟೀಚರ್ಸ್ ಕಳಿಸ್ತಿದ್ದ ಲೆಕ್ಕಗಳನ್ನು ನೋಡಿ ಸಾಲ್ವ್ ಮಾಡೋಕೆ ಅದನ್ನು ಬಳಸ್ತಾ ಇದ್ದೆ. ನನಗೆ ಸ್ವಂತ ಏನಾದ್ರೂ ಉದ್ಯಮ ಮಾಡಬೇಕು ಅಂತ ಆಸೆಯಿದೆ. ಪಿಯುಸಿಯಲ್ಲಿ ಪಿಸಿಎಂಬಿ ತಗೊಳ್ತೀನಿ. ಆಮೇಲೆ ನೀಟ್, ಜೆಇಇ ಎಕ್ಸಾಂ ಬರೀತೀನಿ.
ಅಮ್ಮನೇ ನನಗೆ ಶಕ್ತಿ. ಅಪ್ಪ, ಅಕ್ಕ ಸಹ ಸಪೋರ್ಟ್ ಮಾಡ್ತಿದ್ರು. ಅಕ್ಕ ಈಗ ಎಂಜಿನಿಯರಿಂಗ್ ಮಾಡ್ತಿದ್ದಾರೆ. ನನಗೆ ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆಯಲ್ಲಿ 625ಕ್ಕೆ 624 ಬಂದಿತ್ತು. ಪರೀಕ್ಷೆಗಳನ್ನು ಹೇಗೆ ಬರೆಯಬೇಕು ಎನ್ನುವ ಬಗ್ಗೆಯೂ ಪ್ಲಾನ್ ಮಾಡಿಕೊಳ್ತಿದ್ದೆ. ಉತ್ತರ ಪತ್ರಿಕೆಗಳನ್ನು ನೀಟಾಗಿ ಇರಿಸಿಕೊಳ್ತಿದ್ದೆ. ಚಿತ್ತು-ಕಾಟು ಮಾಡ್ತಾ ಇರ್ಲಿಲ್ಲ. ನಾವು ಓದುವುದು ಎಷ್ಟು ಮುಖ್ಯವೋ ಪ್ರೆಸೆಂಟೇಶನ್ ಮಾಡುವುದೂ ಅಷ್ಟೇ ಮುಖ್ಯವಾಗುತ್ತೆ. ಹ್ಯಾಂಡ್ ರೈಟಿಂಗ್ ಕೂಡ ಮುಖ್ಯ. ಅದರ ಬಗ್ಗೆಯೂ ಗಮನ ಇರಬೇಕು. ಅಪ್ಪ-ಅಮ್ಮ ಏನೂ ಒತ್ತಡ ಹಾಕ್ತಾ ಇರ್ಲಿಲ್ಲ. ಅಪ್ಪ ಎಲ್‌ಐಸಿ ಡೆವಲಪ್‌ಮೆಂಟ್ ಆಫೀಸರ್ ಆಗಿ ರಿಟೈರ್ಡ್ ಆಗಿದ್ದಾರೆ.
ವಿಭಾಗ