ಕರ್ನಾಟಕ ಹವಾಮಾನ: 6 ಜಿಲ್ಲೆಗಳಲ್ಲಿ ಮುಂದುವರೆದ ರೆಡ್ ಅಲರ್ಟ್; ಹಾಸನದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
Jul 17, 2024 07:26 AM IST
ಕರ್ನಾಟಕ ಹವಾಮಾನ: 6 ಜಿಲ್ಲೆಗಳಲ್ಲಿ ಮುಂದುವರೆದ ರೆಡ್ ಅಲರ್ಟ್; ಹಾಸನದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ಹಾಸನದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು ಕೆಲವೆಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಬೆಂಗಳೂರು: ಇಂದು ಬೆಳಗ್ಗೆ 06:02ಕ್ಕೆ ಸೂರ್ಯೋದಯವಾಗಿದ್ದು ಸಂಜೆ 6:50ಕ್ಕೆ ಸೂರ್ಯಾಸ್ತವಾಗಲಿದೆ. ಹವಾಮಾನ ಇಲಾಖೆ ವರದಿಯ ಪ್ರಕಾರ ಇಂದು ಸಿಲಿಕಾನ್ ಸಿಟಿ ಬೆಂಗಳೂರಿನ ವಾತಾವರಣ 20.4 ಡಿಗ್ರಿ ಸೆಲ್ಸಿಯಸ್ ಇರಲಿದೆ. ನಿನ್ನೆ ಕರ್ನಾಟಕದ ಯಾವ ಸ್ಥಳಗಳಲ್ಲಿ ಮಳೆ ಆಯ್ತು? ಇಂದು ಎಲ್ಲೆಲ್ಲಿ ಮಳೆ ಆಗಲಿದೆ? ಹವಾಮಾನ ಇಲಾಖೆ ಎಲ್ಲೆಲ್ಲಿ ಅಲರ್ಟ್ ಘೋಷಿಸಿದೆ? ಇಲ್ಲಿದೆ ವಿವರ.
ನಿನ್ನೆ ಎಲ್ಲೆಲ್ಲಿ, ಎಷ್ಟು ಮಳೆ ಆಯ್ತು?
ರಾಜ್ಯಾದ್ಯಂತ ನೈರುತ್ಯ ಮಾನ್ಸೂನ್ ಸಕ್ರಿಯವಾಗಿದ್ದು ಅನೇಕ ಕಡೆ ಭಾರೀ ಮಳೆ ಆಗಿದೆ. ಆಗುಂಬೆಯಲ್ಲಿ 33, ಅಂಕೋಲಾದಲ್ಲಿ 28, ಕಾರವಾರದಲ್ಲಿ 23, ಗೇರ್ಸೊಪ್ಪದಲ್ಲಿ 21 ಸೆಮೀನಷ್ಟು ಮಳೆ ಆಗಿದೆ. ಇದನ್ನು ಹೊರತುಪಡಿಸಿ ಗೋಕರ್ಣ, ಕುಂದಾಪುರ, ಮಂಕಿ, ಲಿಂಗನಮಕ್ಕಿ, ಸಿದ್ದಾಪುರದಲ್ಲಿ 19 ಸೆಮೀ, ಉಡುಪಿ, ಹೊನ್ನಾವರ, ಕೊಲ್ಲೂರು, ಕೊಟ್ಟಿಗೆಹಾರ, ಬಾಗಮಂಡಲ, ಕೊಪ್ಪ, ಶೃಂಗೇರಿಯಲ್ಲಿ 17 ಸೆಮೀ, ಕುಮಟಾ, ಸಿದ್ದಾಪುರ, ಕ್ಯಾಸಲ್ ರಾಕ್, ಕೋಟ, ಚಿಕ್ಕಮಗಳೂರು, ಕಮ್ಮರಡಿ, ಶಿರಾಲಿ, ಕದ್ರಾದಲ್ಲಿ ತಲಾ 12 ಸೆಮೀನಷ್ಟು ಮಳೆ ಆಗಿದೆ. ಇದನ್ನು ಹೊರತುಪಡಿಸಿ ಮಂಗಳೂರು ವಿಮಾನ ನಿಲ್ದಾಣಮ ಬೆಳ್ತಂಗಡಿ, ಪೊನ್ನಂಪೇಟೆ, ಜೊಯಿಡಾ, ಪಣಂಬೂರು, ಗಬ್ಬೂರು, ವಿರಾಜಪೇಟೆ, ಬೇಲೂರು, ಶಿವಮೊಗ್ಗ, ಕೊಣನೂರಿನಲ್ಲಿ ತಲಾ 5 ಸೆಮೀನಷ್ಟು ಮಳೆ ಆಗಿದೆ.
ಇಂದು ಎಲ್ಲಿ ಮಳೆ ಆಗಲಿದೆ?
ಉತ್ತರ ಕನ್ನಡ, ದಕ್ಷಿಣ ಕನ್ಡನ, ಉಡುಪಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆ ಆಗಲಿದೆ. ನಿರಂತರ ಗಾಳಿಯ ವೇಗ 30-40 ಕಿಮೀ ತಲುಪುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆ ಆಗಲಿದೆ. ನಿರಂತರ ಗಾಳಿ ವೇಗ 40/50 ಕಿಮೀ ತಲುಪುವ ಸಾಧ್ಯತೆ ಇದೆ. ಬೆಳಗಾವಿ, ಹಾಸನ ಜಿಲ್ಲೆಗಳ ಒಂದು ಅಥವಾ ಎರಡು ಕಡೆ ಮಳೆಯ ಸಾಧ್ಯತೆ ಇದೆ.
ಯಾವ ಸ್ಥಳದಲ್ಲಿ ಎಚ್ಚರಿಕೆ ಅಗತ್ಯ?
ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ಹಾಸನದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ತೀವ್ರ ಬಿರುಗಾಳಿ ಹಾಗೂ ಗಂಟೆಗೆ 35-45 ಕಿಮೀ ವೇಗದಲ್ಲಿ ಬೀಸುವ ಗಾಳಿಯು ಕರ್ನಾಟಕದ ಕರಾವಳಿ ಉದ್ದಕ್ಕೂ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಲ್ಕಿಯಿಂದ ಮಂಗಳೂರಿನವರೆಗೆ ಬೈಂದೂರಿನಿಂದ ಕಾಪುವರೆಗೆ, ಮಾಜಾಳಿಯಿಂದ ಭಟ್ಕಳದವರೆಗೆ ಅಲೆಗಳ ಎಚ್ಚರಿಕೆ ನೀಡಲಾಗಿದ್ದು ಮೀನುಗಾರಿಕೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರಿನ ವಾತಾವರಣ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವಣವಿದ್ದು ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗ ಗಂಟೆಗೆ 30-40 ವೇಗದಲ್ಲಿ ಬೀಸಲಿದೆ. ಗರಿಷ್ಠ ತಾಪಮಾನ ಕ್ರಮವಾಗಿ 25°ಹಾಗೂ ಕನಿಷ್ಠ ತಾಪಮಾನ 20°ಸೆ. ಇರಲಿದೆ. ಮುಂದಿನ 48 ಗಂಟೆಗಳಲ್ಲಿ ಕೂಡಾ ಇದೇ ವಾತಾವರಣ ಮುಂದುವರೆಯಲಿದೆ.
ಇಂದು ಪ್ರಮುಖ ನಗರಗಳ ವಾತಾವರಣ
ಭಾರತೀಯ ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು (ಜುಲೈ 17) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ಹವಾಮಾನ ವಿವರ.
ಬೆಂಗಳೂರು - 20.4°ಸೆ.
ಮಂಗಳೂರು- 26°ಸೆ.
ಚಿತ್ರದುರ್ಗ- 22.4°ಸೆ.
ಗದಗ- 22.8°ಸೆ.
ಹೊನ್ನಾವರ- 24.8°ಸೆ.
ಕಲಬುರ್ಗಿ- 23.2 ಸೆ.
ಬೆಳಗಾವಿ- 23°ಸೆ.
ಕಾರವಾರ- 26.8°ಸೆ.